ಘಟಕಗಳು

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳ ಉಳಿವಿಗೆ ಯುವಜನರ ಶ್ರಮ ಅಗತ್ಯ : ವಾಸುದೇವ.ಆರ್.ಕೋಟ್ಯಾನ್

  ಹೆಜಮಾಡಿ : ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅನೇಕ ಸಾಂಪ್ರದಾಯಿಕ ಆಚರಣೆಗಳಿದ್ದು, ಇಂದಿನ ಆಧುನಿಕ ಯುಗದಲ್ಲಿ ಅನೇಕ ಆಚರಣೆಗಳು ಕಡಿಮೆಯಾಗುತ್ತುದ್ದು, ಅವುಗಳ ಉಳಿವಿಗೆ ಯುವಜನರು ಮತ್ತು ಯುವ ಸಂಘಟನೆಗಳು ಶ್ರಮವಹಿಸಿ, ಸಾಮೂಹಿಕ ಆಚರಣೆಗಳ ಮೂಲಕ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಬಹುದೆಂದು ಭಾರತ್ ಕೋ.ಆಪರೇಟಿವ್ ಬ್ಯಾಂಕ್, ಮುಂಬಯಿಯ ಮಾಜಿ ಅಧ್ಯಕ್ಷ, ಹೆಜಮಾಡಿ ಬಿಲ್ಲವ ಸಂಘದ ನವೀಕರಣದ ರೂವಾರಿ ವಾಸುದೇವ ಆರ್.ಕೋಟ್ಯಾನ್ ತಿಳಿಸಿದರು. ಅವರು ದಿನಾಂಕ 20.11.2018 ರಂದು ಹೆಜಮಾಡಿ ಬಿಲ್ಲವ ಸಂಘದಲ್ಲಿ ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ […]

Read More

ಅಂತರ್ಜಲ ಮಟ್ಟ ಏರಿಕೆಗೆ ಕಿಂಡಿ ಅಣೆಕಟ್ಟು ಮುಚ್ಚುವ ಕಾರ್ಯ

ಅಡ್ವೆ: ಯುವವಾಹಿನಿ (ರಿ) ಅಡ್ವೆ ಘಟಕದಿಂದ ಅಂತರ್ಜಲ ಮಟ್ಟ ಏರಿಕೆಗೆ ಕಿಂಡಿ ಅಣೆಕಟ್ಟು ಮುಚ್ಚುವ ಕಾರ್ಯಕ್ರಮ ದಿನಾಂಕ 18-11-2018 ಹಾಗೂ 25-11-2018 ರಂದು ಘಟಕದ ಸಂಘಟನಾ ಕಾರ್ಯದರ್ಶಿ ಅರುಣಾನಂದ ಕಿಶೋರ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಘಟಕದ ಅಧ್ಯಕ್ಷರಾದ ಜಿತೇಶ್ ಜೆ. ಕರ್ಕೇರ, ಉಪಾಧ್ಯಕ್ಷರಾದ ಶ್ರೀಧರ್ ಟಿ. ಪೂಜಾರಿ, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿದಂತೆ ಘಟಕದ ಮಾಜಿ ಅಧ್ಯಕ್ಷರುಗಳು, ಹೆಚ್ಚಿನ ಸದಸ್ಯರುಗಳು ಭಾಗವಹಿಸಿದ್ದರು. ಈ ಅಣೆಕಟ್ಟನ್ನು ಮುಚ್ಚಿದ ಪರಿಣಾಮ ಪರಿಸರದ ಸುಮಾರು 60 ಮನೆಗಳ ಬಾವಿಗಳ […]

Read More

ನಾರಾಯಣಗುರುಗಳ ತತ್ವಸಂದೇಶ ಸಾರ್ವಕಾಲಿಕ ಹಾಗೂ ಅಜರಾಮರ : ಜಯಂತ್ ನಡುಬೈಲು.

ಪಣಂಬೂರು:- ಹಿಂದುಳಿದ ವರ್ಗಗಳಿಗೆ ದೈರ್ಯ ತುಂಬಿ ಅವರ ಬದುಕಿನಲ್ಲಿ ಭರವಸೆ ಬೆಳಕು ಕಾಣಲು ಕಾರಣರಾಗಿದ್ದ ಬ್ರಹ್ಮಶ್ರೀನಾರಾಯಣಗುರುಗಳ ತತ್ವ ಸಂದೇಶ ಸಾರ್ವಕಾಲಿಕ ಮತ್ತು ಅಜರಾಮರವಾಗಿದ್ದು, ಇಂದಿನ ದಿನಗಳಲ್ಲಿ ತತ್ವ ಸಂದೇಶಗಳನ್ನು ಮನೆ ಮನೆಗೆ ತಲುಪಿಸಿ, ಯುವಕರಲ್ಲಿ ಜಾಗ್ರತಿಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ತತ್ವ ಸಂದೇಶಗಳನ್ನು ತಿಳಿಸಿ ಹೇಳುವ ಕಾರ್ಯಕ್ರಮಗಳನ್ನು ಸಂಯೋಜಿಸಿದ ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಹೇಳಿದರು. ದಿನಾಂಕ 18.11.2018ನೇ ರವಿವಾರದಂದು ಯುವವಾಹಿನಿ (ರಿ) […]

Read More

ಸಂಘಟನೆಯಲ್ಲಿ ಯುವವಾಹಿನಿ ಪಾತ್ರ ಮಹತ್ತರ’

ಕಾಪು : ಸಮಾಜದ ಯುವಕರನ್ನು ಸಂಘಟಿಸುವಲ್ಲಿ ಯುವವಾಹಿನಿಯ ಪಾತ್ರ ಮಹತ್ವದ್ದಾಗಿದೆ ಸಮಾಜದ  ಯುವಕರೊಳಗಿನ ಒಗ್ಗಟ್ಟು ಎಲ್ಲಾ  ಸಮಯಗಳಲ್ಲೂ ಮುಂದುವರಿಯ ಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕಾಪುವಿನಲ್ಲಿ 18.11.2018 ರಂದು ಯುವವಾಹಿನಿ (ರಿ) ಘಟಕದ ಕಾಪು ಘಟಕದ ವತಿಯಿಂದ ಬಿಲ್ಲವ ಸಮಾಜದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಿಲ್ಲವ ಯುವಕ ಯುವತಿಯರಿಗಾಗಿ ಆಯೋಜಿಸಲಾಗಿದ್ದ ಕ್ರೀಡಾ ಸ್ನೇಹ ಸಮ್ಮಿಲನ – ಬ್ರಹ್ಮಶ್ರೀ ನಾರಾಯಣಗುರು ಕ್ರೀಡೋತ್ಸವ-2018 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ […]

Read More

ಮಕ್ಕಳ ಹಬ್ಬದ ದಶಮಾನೋತ್ಸವ ಕಾರ್ಯಕ್ರಮ : ಕಲಾಶ್ರೀ, ಕಲಾರತ್ನ ಪ್ರಶಸ್ತಿ ಪ್ರದಾನ

ಪಡುಬಿದ್ರಿ : ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ವಿಶೇಷ ಕಾರ್ಯಕ್ರಮ ಮಕ್ಕಳ ಹಬ್ಬ. ದಿನಾಂಕ 18-11-2018 ರಂದು ಸ.ಮಾ.ಹಿ.ಪ್ರಾ. ಶಾಲೆ ಎರ್ಮಾಳು ತೆಂಕ ಹಾಗೂ ಸ.ಹಿ.ಪ್ರಾ.ಶಾಲೆ ಎರ್ಮಾಳು ಸೌತ್ ಇಲ್ಲಿನ ವಿದ್ಯಾರ್ಥಿಗಳಿಗೆ ಮಕ್ಕಳ ಹಬ್ಬದ ದಶಮಾನೋತ್ಸವ ಕಾರ್ಯಕ್ರಮವು ಸ.ಮಾ.ಹಿ.ಪ್ರಾ.ಶಾಲೆ ಎರ್ಮಾಳು ತೆಂಕ ಇಲ್ಲಿ ಜರಗಿತು. ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ ಇವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ಯುವ ಉದ್ಯಮಿಯಾಗಿರುವ ಗಣೇಶ್ ಎಸ್. ಗುಜರನ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಯುವವಾಹಿನಿ(ರಿ.) ಪಡುಬಿದ್ರಿ ಘಟಕವು […]

Read More

ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಶಿರಡಿ ಪ್ರವಾಸ

ಕೂಳೂರು: ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಶಿರಡಿ ಪ್ರವಾಸ ದಿನಾಂಕ 18/11/2018 ರಿಂದ ದಿನಾಂಕ 22/11/2018ರ ತನಕ ಏರ್ಪಡಿಸಲಾಗಿದ್ದು 45 ಮಂದಿ ಸದಸ್ಯರನ್ನೊಳಗೊಂಡ ತಂಡಕ್ಕೆ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ಚಾಲನೆ ನೀಡಿದರು. ದಿನಾಂಕ 18/11/2018 ರವಿವಾರ ರಾತ್ರಿ 9.45 ಕ್ಕೆ ಮಂಗಳೂರಿನಿಂದ ಹೊರಟು 19/11/18 ಸೋಮವಾರ ಸಂಜೆ 6 ಗಂಟೆಗೆ ಸರಿಯಾಗಿ ನಾಸಿಕ್ ತಲುಪಿದೆವು. ಅದೇ ದಿನ ರಾತ್ರಿ ಮೊದಲನೆಯದಾಗಿ ಬಿಲ್ಲವರ ಗುರುವಾದ ಗಿರ್ನಾರ್‍ದಲ್ಲಿರುವ ನಾರಾಯಣಗುರು ಸ್ವಾಮಿಯವರ ಮಂದಿರಕ್ಕೆ ಭೇಟಿ ನೀಡಿದೆವು. […]

Read More

ಯುವವಾಹಿನಿ (ರಿ) ಕಂಕನಾಡಿ ಘಟಕದಿಂದ ಶೈಕ್ಷಣಿಕ ನೆರವು

ಕಂಕನಾಡಿ : ಯುವವಾಹಿನಿ (ರಿ) ಕಂಕನಾಡಿ ಘಟಕವು ಮಕ್ಕಳ ದಿನಾಚರಣೆ ಪ್ರಯುಕ್ತ ದಿನಾಂಕ 16-11-2018ರಂದು ಮಂಗಳೂರಿನ ಗೋರಿಗುಡ್ಡ ಕಿಟ್ಟೆಲ್ ಮೆಮೋರಿಯಲ್ ಶಾಲಾ ಬಡ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ಕಂಕನಾಡಿ ಘಟಕದ ಸದಸ್ಯರು ಹಾಗೂ ಅದೇ ಶಾಲೆಯ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಹತ್ತು ಸಾವಿರ ರೂಪಾಯಿ ಶೈಕ್ಷಣಿಕ ನೆರವು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್, ಕಾರ್ಯದರ್ಶಿ ಸುಮಾ ವಸಂತ್, ಸದಸ್ಯೆ ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

Read More

ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು : ಹರಿಶ್ಚಂದ್ರ ಪಿ. ಸಾಲ್ಯಾನ್

ಮುಲ್ಕಿ : ಓದಿನಲ್ಲಿ ಸಿಗುವ ಆನಂದ ಅನುಭವ, ಒಳ್ಳೆಯ ವಿಚಾರ ಬೇರೆ ಯಾವ ತಂತ್ರಾಂಶದಿಂದ ಸಿಗಲು ಸಾಧ್ಯವಿಲ್ಲ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು, ಈ ನಿಟ್ಟಿನಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆಯ ಸಾಧನೆ ಗಮನಾರ್ಹವಾದುದು ಎಂದು ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ 14.11.2018 ರಂದು ಮುಲ್ಕಿ ಸಿ. ಎಸ್. ಐ ಬಾಲಿಕಾಶ್ರಮದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ […]

Read More

ಮಕ್ಕಳಿಗೆ ಸ್ವಾವಲಂಬನೆಯ ಬದುಕು, ವಾಸ್ತವದ ಅರಿವು ತಿಳಿಸುವುದು ಸೂಕ್ತ : ಜಯಂತ ನಡುಬೈಲು

ಮುಲ್ಕಿ: ಮಕ್ಕಳಿಗೆ ವಾಸ್ತವದ ಅರಿವನ್ನು ಮಾಡಿ ಸುತ್ತಾ, ಸ್ವಾವಲಂಬನೆಯ ಬದುಕನ್ನು ಕಲಿಸುವುದು ಒಳಿತು, ಅಂದಾಗ ಮಾತ್ರ ಒಂದು ಮಗು ಮುಂದಿನ ಸಮಾಜದ ಒಳ್ಳೆಯ ಪ್ರಜೆಯಾಗಲು ಸಾಧ್ಯ.ಬಾಲ್ಯವೆಂದರೆ ಹಾಗೆ ಏನೂ ತಿಳಿಯದ ಮುಗ್ಧ ಸ್ಥಿತಿ. ನೆನಪುಗಳು ಅತಿ ಸುಂದರ, ಬೆಳೆದಂತೆ ನಮ್ಮ ಬುದ್ಧಿ ವಿಕಸನ ಹೊಂದಿ ನೆನಪುಗಳ ವ್ಯೂಹದಲ್ಲಿ ಅದು ಅವಿಸ್ಮರಣೀಯ ಇತಿಹಾಸವಾಗಿ ಉಳಿದುಬಿಡುತ್ತದೆ. ಹೋದ ಹೋದಂತೆ ಅದು ಮಸುಕಾದರೂ ನಮ್ಮ ಅರಿವಿನ ಸಂಕೋಲೆಗಳಿಂದ ದೂರ ನಡೆಯುವುದಿಲ್ಲ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬ ಮಾತಿದೆ.  […]

Read More

ಯುವವಾಹಿನಿ ಬಂಟ್ವಾಳದ ಸಾಧನೆ ಶ್ಲಾಘನೀಯ : ನಡುಬೈಲು

ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಸಾಧನೆ ಶ್ಲಾಘನೀಯ ವಾದುದು. ಕಳೆದ 30 ವರ್ಷಗಳಿಂದ ಬಂಟ್ವಾಳ ತಾಲೂಕಿನಲ್ಲಿ ನಿರಂತರ ಸಮಾಜಮುಖಿ ಕಾರ್ಯಗಳ ಮೂಲಕ ಮನೆಮಾತಾಗಿವೆ. ಬಡವರಿಗೆ ಸೂರು, ವಿದ್ಯಾರ್ಥಿ ವೇತನ, ಅನ್ವೇಷಣಾ ಶಿಬಿರ ಹೀಗೆ ಹತ್ತು ಹಲವು ಯೋಜನೆಗಳು ಘಟಕದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ರಜತ ಸಂಭ್ರಮ, ಯುವ ಬಿಲ್ಲವ ಸಮಾವೇಶವು ಯುವವಾಹಿನಿಯ ಇತಿಹಾಸದ ದಾಖಲೆಯ ಪುಟ ಸೇರಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ತಿಳಿಸಿದರು. ಅವರು ದಿನಾಂಕ 04.11.2018 ರಂದು ಬಿ.ಸಿ.ರೋಡ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!