05-12-2018, 4:29 PM
ಕೊಲ್ಯ: ವಿಶುಕುಮಾರ್ ಈ ನಾಡು ಕಂಡ ಮತ್ತು ನಮ್ಮ ಸಮಾಜದಲ್ಲಿ ಹುಟ್ಟಿಬೆಳೆದ ಓರ್ವ ಶ್ರೇಷ್ಠ ಕಾದಂಬರಿಕಾರ, ನಟ ,ನಿರ್ಮಾಪಕ ,ನಿರ್ದೇಶಕ ,ಪತ್ರಕರ್ತ ಮತ್ತು ಉತ್ತಮ ನಾಟಕಕಾರರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನೇರ ನಡೆ – ನುಡಿ ,ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡಿದ್ದ ಇವರು ,ಭ್ರಷ್ಟಾಚಾರದಿಂದ ಬೇಸತ್ತು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹುದ್ದೆಯನ್ನು ಅರ್ಧದಲ್ಲೇ ತೊರೆದು, ಅನ್ಯಾಯದ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಓರ್ವ ಅಸಾಮನ್ಯ ವ್ಯಕ್ತಿ,ಇಂದು ಸತ್ತ ನಂತರವೂ ನಮ್ಮೆದುರು ಜೀವಂತವಿರುವ ‘ಮಹಾನ್ ಆತ್ಮ’ […]
Read More
04-12-2018, 2:57 AM
ವೇಣೂರು : ಯುವವಾಹಿನಿ(ರಿ.) ವೇಣೂರು ಘಟಕದ ಸೇವಾಯೋಜನೆ ‘ಆಸರೆ’ಯ 4ನೇ ಕಂತನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪೆರಾಡಿ ಗ್ರಾಮದ ಜಯ ಪೂಜಾರಿಯವರಿಗೆ ಘಟಕದ ಅಧ್ಯಕ್ಷರಾದ ನಿತೀಶ್. ಎಚ್ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ಉಪಾಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿಗಳಾದ ಸತೀಶ್ ಪಿ.ಎನ್, ಪದಾಧಿಕಾರಿಗಲಾದ ಕರುಣಾಕರ ಪೂಜಾರಿ ಮರೋಡಿ, ಸದಾನಂದ ಪೂಜಾರಿ, ಹರೀಶ್ ಪಿ.ಎಸ್, ಶಿವಪ್ರಕಾಶ್ ಅಂಬಲ, ಸುದೀಪ್ ಕಾಶಿಪಟ್ಣ ಉಪಸ್ಥಿತರಿದ್ದರು
Read More
03-12-2018, 4:34 PM
ಪಣಂಬೂರು ಕುಳಾಯಿ : ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಯುವವಾಹಿಯಂತಹ ಸಂಘಟನೆಗಳು ಬಿಲ್ಲವರ ಸ್ವಾಭಿಮಾನ, ಆತ್ಮಸ್ಥೈರ್ಯಗಳಿಗಾಗಿ ಕೋಟಿ ಚೆನ್ನಯ ಕಾಂತಾಬಾರೆ ಬೂದಾಬಾರೆಯಂತಹ ವೀರ ಪುರುಷರ ಸಾಧನೆಯನ್ನು , ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು, ಸಾಹುಕಾರ್ ಕೊರಗಪ್ಪ, ದಾಮೋದರ ಮಾಸ್ತರ್ ರಂತಹ ಸಾಮಾಜಿಕ ಸೇವೆಯನ್ನು, ಬಂಗಾರಪ್ಪ, ದಾಮೋದರ ಮುಲ್ಕಿ ಹಾಗೇ ನಮ್ಮ ನಡುವೆಯೇ ಇರುವ ಜನಾರ್ದನ ಪೂಜಾರಿಯಂತಹ ರಾಜಕೀಯ ಕ್ಷೇತ್ರದ ಸಾಧನೆಯನ್ನು ಆದರ್ಶವಾಗಿ ತೆಗೆದುಕೊಳ್ಳುತ್ತೇವೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ ದಿ.ವಿಶುಕುಮಾರ್ […]
Read More
02-12-2018, 3:30 PM
ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಅಥಿತ್ಯದಲ್ಲಿ ತಾ: 02-12-2018 ರಂದು ಸ್ಪರ್ಶ ಟ್ರಸ್ಟ್ ನ ನಿಸರ್ಗ ಗ್ರಾಮದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಟ್ರಸ್ಟಿನ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿಯವರು ವಹಿಸಿಕೊಂಡಿದ್ದರು, ಸ್ಪರ್ಶ ಟ್ರಸ್ಟ್ ನ ಅಡ್ಮಿನ್ ಉಸ್ತುವಾರಿ ಆಗಿರುವ ರಾಜು ಹಾಗೂ ಶಶಧರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಸದಸ್ಯರಾದ ಕಿಶನ್ […]
Read More
01-12-2018, 4:41 PM
ಪಡುಬಿದ್ರಿ : ಯುವವಾಹಿನಿ (ರಿ) ಪಡುಬಿದ್ರಿ ಘಟಕದ ವತಿಯಿಂದ 01.12.2018 ರಂದು ಮಾನಸಿಕ ಅಸಮರ್ಥತೆಯಿಂದ ಬಳಲುವ ಮಕ್ಕಳನ್ನು ಹೊಂದಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಜಮಾಡಿ ಬಳಿಯ ನಿವಾಸಿ ಜಯಂತಿಯವರಿಗೆ ಘಟಕದಿಂದ ರೂ 6,000 (ಆರುಸಾವಿರ) ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಉಪಾಧ್ಯಕ್ಷರಾದ ಯೋಗೀಶ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಸುಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್, ದಯಾನಂದ ,ಪ್ರಕಾಶ್ ಉಪಸ್ಥಿತರಿದ್ದರು.
Read More
01-12-2018, 3:05 AM
ಮಾಣಿ : ವ್ಯಕ್ತಿ ತನ್ನ ನಡತೆ ಮತ್ತು ಕಾರ್ಯಗಳಿಂದ ಬದುಕಿರುವಾಗಲೆ ಸಾಯಬಾರದು ಬದಲಾಗಿ ನಮ್ಮ ವ್ಯಕ್ತಿತ್ವ ನಮ್ಮ ಸಾವಿನ ಬಳಿಕವೂ ನಮ್ಮನ್ನು ಜೀವಂತವಾಗಿರಿಸಬೇಕು, ನಮ್ಮ ನಡುವೆ ಇಲ್ಲದೇ ಇದ್ದರೂ ಅವರ ವ್ಯಕ್ತಿತ್ವದಿಂದ ನಮ್ಮ ನಡುವೆ ಇಂದಿಗೂ ಜೀವಂತವಾಗಿರುವವರು ವಿಶುಕುಮಾರ್ ಅವರ ಜೀವನ ಕ್ರಮ ಅನುಕರಣೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.), ಮಾಣಿ […]
Read More
27-11-2018, 3:21 PM
ಮಂಗಳೂರು : ಸಾಹಿತ್ಯ ಕೃಷಿ ಕ್ಷೇತ್ರದಲ್ಲಿ ಯಾವ ಸಾಹಿತಿಯೂ ಮಾಡದ ಸಾಹಿತ್ಯ ಕೃಷಿಯನ್ನು ತನ್ನ ಅಲ್ಪಾವಧಿಯ ಜೀವನದಲ್ಲಿ ಮಾಡಿದ ಮೇದಾವಿ ಸಾಹಿತಿ ವಿಶು ಕುಮಾರ್, ಬಿಲ್ಲವ ಸಮಾಜದಲ್ಲಿ ಜನಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಯಾಗಿ, ಪತ್ರಿಕಾ ರಂಗದಲ್ಲಿ ಪತ್ರಿಕೆಗೆ ಅಂಕಣಗಾರನಾಗಿ ನಾಟಕ ಹಾಗು ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ ಹೆಸರು ಪಡೆದ ದೀಮಂತ ಸಾಹಿತಿ ವಿಶುಕುಮರ್ ಸಾಹಿತ್ಯ ಲೋಕದ ವಿನುಗು ತಾರೆಯಾಗಿ ಮಿಂಚಿದವರು ಎಂದು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ವಿಶುಕುಮರ್ ಪ್ರಸಸ್ತಿ ಪ್ರಧಾನ ಸಮಿತಿಯ ಮಾಜಿ […]
Read More
26-11-2018, 4:23 PM
ಕಟಪಾಡಿ : ಯುವವಾಹಿನಿ(ರಿ) ಕಟಪಾಡಿ ಘಟಕ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 26.11.2018ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಜೀವನೋತ್ಸಾಹ ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗ ಮಾಹಿತಿ ತರಬೇತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸುಧಾಕರ್ ಕಾರ್ಕಳ ಕಾರ್ಯಾಗಾರ ನಡೆಸಿಕೊಟ್ಟರು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಗೌ| ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್ ಕಾರ್ಯಾಗಾರ ಉದ್ಘಾಟಿಸಿದರು. ಯುವವಾಹಿನಿ(ರಿ) ಕಟಪಾಡಿ ಘಟಕದ ಅಧ್ಯಕ್ಷ ರಿತೇಶ್ ಬಿ.ಕೋಟ್ಯಾನ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ […]
Read More
25-11-2018, 5:31 PM
ಬಂಟ್ವಾಳ: ಸಾಮಾಜಿಕ ಹಾಗೂ ದೈಹಿಕ ಆರೋಗ್ಯ ಇವೆರಡೂ ಕೂಡ ಬಹಳ ಪ್ರಾಮುಖ್ಯವಾದುದು. ಈ ನಿಟ್ಟಿನಲ್ಲಿ ಯುವ ಸಂಘಟನೆಗಳು ಹೆಚ್ಚು ಕ್ರೀಯಾಶೀಲರಾಗಿ ಕಾರ್ಯಕ್ರಮ ರೂಪಿಸಬೇಕು. ಯುವವಾಹಿನಿ(ರಿ) ನಂತಹ ಸಂಘಟನೆಗಳು ಈ ಕುರಿತು ಹೆಚ್ಚು ಸಕಾರಾತ್ಮಕವಾಗಿ ಆಲೋಚಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಮಾಜಿ ಸಚಿವರಾದ ಬಿ. ರಾಮನಾಥ ರೈ ತಿಳಿಸಿದರು. ಅವರು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ. ರೋಡಿ ನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 25-11-2018 ರಂದು ಜರುಗಿದ ರಕ್ತದಾನ ಮತ್ತು ಉಚಿತ ಆರೋಗ್ಯ […]
Read More
25-11-2018, 5:16 PM
ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ,ಚುಟುಕು ಸಾಹಿತ್ಯ ಪರಿಷತ್ತುಮಂಗಳೂರು,ರೋಟರಿ ಸಮುದಾಯ ದಳ ಕೊಲ್ಯ ,ಸೋಮೇಶ್ವರ ಇದರ ಜಂಟಿ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರೀಟೇಬಲ್ ಟ್ರಸ್ಟ್ (ರಿ) ಕೊಲ್ಯ ಇದರ ಸಹಯೋಗದೊಂದಿಗೆ “ಮುಂಜಾನೆಯ ಕವಿ ಕಲರವ” ಕನ್ನಡ ,ತುಳು,ಕೊಂಕಣಿ ಭಾಷೆಗಳ “ಕವಿಗೋಷ್ಠಿ ಕಾರ್ಯಕ್ರಮ” ವು ದಿನಾಂಕ 25/11/2018ನೇ ರವಿವಾರದಂದು ಶ್ರೀ ಕ್ಷೇತ್ರ ಕೊಲ್ಯ ಮಠದಲ್ಲಿ ಜರಗಿತು ಶ್ರೀ ಕ್ಷೇತ್ರ ಕೊಲ್ಯ ಮಠದ ಅಧ್ಯಕ್ಷರಾದ ಮಹಾಬಲ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು […]
Read More