20-01-2019, 1:41 PM
ವೇಣೂರು :ಯುವವಾಹಿನಿ(ರಿ) ವೇಣೂರು ಘಟಕದ ಆಶ್ರಯದಲ್ಲಿ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ದಿನಾಂಕ 20/1/2019ನೇ ಆದಿತ್ಯವಾರ ವೇಣೂರಿನ ಪಲ್ಗುಣಿ ನದಿಗೆ ಪಾರಂಪರಿಕ ಕಟ್ಟ ಹಾಕುವ ಮೂಲಕ ನದಿ ಮಟ್ಟ ಏರಿಕೆಗೆ ಶ್ರಮದಾನ ಮತ್ತು ಜಲ ಸಾಕ್ಷರತೆ ಅರಿವು ಕಾರ್ಯಕ್ರಮವು ವೇಣೂರಿನ ಕೈತೇರಿ ಎಂಬಲ್ಲಿ ನಡೆಯಿತು . ಉಪವಿಭಾಗಾಧಿಕಾರಿ ಡಾ.ಹೆಚ್.ಕೆ.ಕೃಷ್ಣ ಮೂರ್ತಿಯವರು ಚಾಲನೆ ನೀಡುವುದರೊಂದಿಗೆ ದಿನವಿಡೀ ನಡೆದ ಶ್ರಮದಾನದಲ್ಲಿ ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷರಾದ ನಿತೀಶ್ ಹೆಚ್. ಜಿಲ್ಲಾ ಪಂ.ಸದಸ್ಯರಾದ ಧರಣೇಂದ್ರ ಕುಮಾರ್,ಶೇಖರ್ ಕುಕ್ಕೇಡಿ,ಪತ್ರಕರ್ತ ಪದ್ಮನಾಭ ಕುಲಾಲ್, ಯುವವಾಹಿನಿ […]
Read More
17-01-2019, 3:15 PM
ವೇಣೂರು : ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆದ 9ನೇ ವರ್ಷದ ಕೋಟಿ- ಚೆನ್ನಯ ಕ್ರೀಡಾಕೂಟದ ಪುರುಷರ ಮತ್ತು ಮಹಿಳೆಯರ ವಿಭಾಗ ದಲ್ಲಿ ಯುವವಾಹಿನಿ ವೇಣೂರು ಘಟಕವು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ. ಮಹಿಳೆಯರ ವಿಭಾಗದ ಕಬಡ್ಡಿ ಮತ್ತು ಹಗ್ಗಜಗ್ಗಾಟದಲ್ಲಿ ಪ್ರಥಮ, ತ್ರೋಬಾಲ್‌ನಲ್ಲಿ ದ್ವಿತೀಯ, ಪುರುಷರ ವಿಭಾಗದಲ್ಲಿ ಕಬಡ್ಡಿ ಮತ್ತು ಹಗ್ಗಜಗ್ಗಾಟದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ರೂ. 13,000 ನಗದು, ಪ್ರಶಸ್ತಿ ಪಡೆದು […]
Read More
17-01-2019, 3:41 AM
ಬೆಳ್ತಂಗಡಿ: ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಮುಖ ಘಟ್ಟ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾಡುವ ಗೊಂದಲ, ಭಯವನ್ನು ನಿವಾರಿಸುವ ನೆಲೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಮನಃಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸ್ಮಿತೇಶ್ ಎಸ್.ಬಾರ್ಯ ಅವರು ಬರೆದಿರುವ ‘ದೀವಿಗೆ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಗುರುವಾಯನಕೆರೆ ಶಾರದಾ ಮಂಟಪದಲ್ಲಿ ನೆರವೇರಿತು. ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾಗಿರುವ ಜಯಂತ್ ನಡುಬೈಲು ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬೆಳ್ತಂಗಡಿ ಘಟಕದ […]
Read More
14-01-2019, 3:31 PM
ಕಟಪಾಡಿ : ಯುವವಾಹಿನಿ(ರಿ) ಕಟಪಾಡಿ ಘಟಕ, ಜೇಸಿಐ ಕಟಪಾಡಿ, ವಜ್ರ ಜಿಮ್ ಕಟಪಾಡಿ ಮತ್ತು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಇವರ ಸಹಯೋಗದಲ್ಲಿ ದಿನಾಂಕ ಜ.13ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಬೃಹತ್ ರಕ್ತದಾನ ಶಿಬಿರವು ಜರಗಿತು. ಶ್ರೀ ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಸ್ಪತ್ರೆಯ ರಕ್ತದಾನ ವಿಭಾಗದ ಮುಖ್ಯಸ್ಥೆ ವೀಣಾ ಕುಮಾರಿ, ಯುವವಾಹಿನಿ ಕೇಂದ್ರ ಸಮಿತಿಯ ರಮೇಶ್ ಕೋಟ್ಯಾನ್, ಶ್ರೀ […]
Read More
13-01-2019, 4:07 PM
ಬಜ್ಪೆ : ಯುವ ಜನರಲ್ಲಿ ಸ್ವಸ್ಥ ಸಮಾಜದ ಬಗೆಗಿನ ಕಾಳಜಿ, ಸಂಸ್ಕೃತಿ, ಒಳ್ಳೆಯ ಆಚಾರ ವಿಚಾರಗಳು ಹಿರಿಯರಾದ ನಾವು ಅವರಲ್ಲಿ ಸದಾ ಮೇಳೈಸುವಂತೆ ಮಾಡಬೇಕು. ವಿರುದ್ಧ ದಿಕ್ಕಿಗೆ ಮುಖ ಮಾಡಿರುವ ಮನಸ್ಸುಗಳನ್ನು ಮುಖ್ಯವಾಹಿನಿಯತ್ತ ತಿರುಗಿಸಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಸಮಾಜದ ಯುವಕರ ಪಾತ್ರ ಇನ್ನಷ್ಟು ಹಿರಿದಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿಯಂತಹ ಘಟಕಗಳು ಮುಖ್ಯ ಪಾತ್ರವಹಿಸುತ್ತಿರುವುದು ಶ್ಲಾಘನೀಯ, ಇಂತಹ ಸ್ತುತ್ಯರ್ಹ ಕಾರ್ಯಗಳು ಇನ್ನೂ ಪರಿನಾಮಕಾರಿಯಾಗಲಿ ಎಂದು ನಳಿನಾದೇವಿ ಎಂ. ಆರ್. ಇವರು ದಿನಾಂಕ 13.01.2019ರಂದು ಬಜ್ಪೆ ಬ್ರಹ್ಮಶ್ರೀ […]
Read More
13-01-2019, 4:06 PM
ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 13-01-2019 ರಂದು ವಿದ್ಯಾನಿಧಿಯ ಬಲವರ್ಧನೆಗಾಗಿ ಶಾರದಾ ಕಲಾ ಆರ್ಟ್ಸ್ ಕಲಾವಿದೆರ್(ರಿ) ಮಂಜೇಶ್ವರ ಇವರ ಬತ್ತಿಯಿಂದ ‘ ನಿತ್ಯೆ ಬನ್ನಗ ‘ ಎಂಬ ನಾಟಕವನ್ನು ಆಯೋಜಿಸಲಾಗಿತ್ತು .ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ -ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ,ನವೀನ್ ಚಂದ್ರ ಬಿ ಪೂಜಾರಿ – ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ ಹಿಂದುಳಿದ […]
Read More
12-01-2019, 4:40 AM
ಮಾಣಿ : ಯುವವಾಹಿನಿಯು ವಿದ್ಯೆ,ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯ ವಾಕ್ಯದೊಂದಿಗೆ ಚಿರಪರಿಚಿತವಾಗಿದೆ. ಈ ನೆಲೆಯಲ್ಲಿ ಆಸಕ್ತರಿಗೆ ಸಹಾಯ ಮಾಡಲು ಯುವವಾಹಿನಿ(ರಿ) ಮಾಣಿ ಘಟಕದ ವತಿಯಿಂದ ಕಳೆದ ಬಾರಿ ರೂಪುಗೊಂಡ ಯೋಜನೆಯೇ ಸ್ಪಂದನ. ಬರಿಮಾರು ಗ್ರಾಮದ ಮುಳ್ಳಿಬೈಲು ಬೆಟ್ಟು ಮನೆಯಲ್ಲಿ ವಾಸವಾಗಿರುವ ಗಣೇಶ ಮತ್ತು ರೂಪ ದಂಪತಿಗಳ ಒಂದೂವರೆ ವರ್ಷದ ಮಾಸ್ಟರ್ ಜೀವಿತ್ ಎಂಬ ಮಗುವಿಗೆ ಮಾತನಾಡಲು ಆಗದೆ,ತಲೆ ಎತ್ತಲು ಆಗದೆ,ನಡೆದಾಡಲು ಆಗದೆ, ದ್ರಷ್ಟಿ ಮಂದ ವಾದ ಕಾರಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮಗುವಿನ ಮೆದುಳಿಗೆ […]
Read More