17-02-2019, 3:24 PM
ಮಂಗಳೂರು : ಸಾಯೋದಕ್ಕಿಂತ ಸತ್ತು ಬದುಕಬೇನ್ನುವ ಮಾತಿದೆ. ಇದಕ್ಕೊಪ್ಪುವಂತೆ ನಮ್ಮನಗಲಿದ ವಿಶ್ವನಾಥ್ ಯಾನೆ ವಿಶುಕುಮಾರರು ಸತ್ತು ಬದುಕಿದವರು. ಅದೆಷ್ಟೋ ಸಾಧನೆಗಳನ್ನು ನೋಡಿದ್ದೇವೆ. ಕೇವಲ ಪ್ರಶಸ್ತಿ ಪತ್ರ, ಸ್ಮರಣಿಕೆ, ಪಾರಿತೋಷಕಗಳಿಂದ ಕೆಲವರನ್ನು ಗುರುತಿಸಬಹುದು. ಆದರೆ ಬದುಕಿದ ದಾರಿ, ಸವೆಸಿದ ಸಮಯ, ತೋರಿದ ತಾಳ್ಮೆ ಇನ್ನೊರ್ವರಿಗೆ ಆದರ್ಶವಾಗುತ್ತೆ ಎಂದಾದರೆ ಆ ಬದುಕು, ಆದರ್ಶ, ದೇವರಿಗೆ ಸಮ ಅನ್ನೋದು ಸತ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ಸಮರ್ಥವಾಗಿ ತನ್ನನ್ನು ತೊಡಗಿಸಿಕೊಂಡು, ಸರಳತೆ, ತಾಳ್ಮೆ, ಸಹನೆ, ಶಿಸ್ತು, ಸಮಯಕ್ಕೆ ಉದಾಹರಣೆಯಾಗಿ ಸತ್ತು ಬದುಕಿದ ವಿಶುಕುಮಾರ್‌ರವರದ್ದು ಆದರ್ಶನೀಯ […]
Read More
17-02-2019, 3:23 PM
ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಿಸಿ : ಖಾದರ್ ಮಾಲ್ ಸಂಸ್ಕೃತಿ, ಆಧುನಿಕ ಆಟಗಳಲ್ಲಿ ತೊಡಗುವ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲು ಪೋಷಕರು ಪ್ರೇರಕರಾಗಬೇಕು, ಮಕ್ಕಳನ್ನು ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರದರ್ಶನಗಳಿಗೂ ಕರೆದೊಯ್ಯಬೇಕು […]
Read More
17-02-2019, 3:00 PM
ಮಂಗಳೂರು : ವೇದಿಕೆಯ ಮೇಲೆ ಮಾತು ಆರಂಭಿಸುತ್ತಿದ್ದಂತೆ ಸ್ವಲ್ಪ ಸಮಯದ ಕೂಡಲೇ ವಿಶುಕುಮಾರ್ ಬದುಕಿನ ಚಿತ್ರಣ ರೂಪುಗೊಳ್ಳುವಂತಿತ್ತು. ತಮ್ಮ ಕಾವ್ಯದ ಪದಗಳ ಜೋಡಣೆಯೊಡನೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಾಹಿತಿಯ ಜೀವನದ ಕಥೆಗೆ ಸಾಕ್ಷಿಯಾಗಿದ್ದರು..ಜೊತೆಗೆ ಮೇಳೈಸುವ ರಾಗಲಾಪದೊಡನೆ ಅಲ್ಲೇ ಬದಿಯಲ್ಲಿ ಶರವೇಗದಿ ಸಾಗುತ್ತಿದ್ದ ಚಿತ್ರ ಪಟಲ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು. ಹೌದು,,ಇದು 2019 ಫೆಬ್ರವರಿ 17ರಂದು ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯ […]
Read More
17-02-2019, 2:29 PM
ನಟ, ನಿರ್ದೇಶಕ, ಪತ್ರಕರ್ತ, ಸಾಹಿತಿ ದಿ.ವಿಶುಕುಮಾರ್ ಅವರ ನೆನಪಿನಲ್ಲಿ ಯುವವಾಹಿನಿ ಸಂಸ್ಥೆಯು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಮೂಲಕ ಕೊಡಮಾಡುವ 2018 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ರಂಗನಟ, ನಿರ್ದೇಶಕ, ಸಾಹಿತಿ ವಸಂತ ವಿ.ಅಮೀನ್ ಅಯ್ಕೆಯಾಗಿದ್ದಾರೆ. ಯುವವಾಹಿನಿ ಸಂಸ್ಥೆಯು ಕಳೆದ 16 ವರುಷದಿಂದ ಈ ಪ್ರಸಸ್ತಿಯನ್ನು ನೀಡುತ್ತಾ ಬಂದಿದ್ದು ವಿಶುಕುಮಾರ್ ಅವರು ಸೇವೆ ಸಲ್ಲಿಸಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಆಯ್ಕೆ ಮಾಡಿ ಈ ಪ್ರಶಸ್ತಿ ನೀಡುತ್ತಿದೆ. 2018 ನೇ ಸಾಲಿಗೆ ರಂಗಭೂಮಿ ಕ್ಷೇತ್ರವನ್ನು ಆಯ್ಕೆ […]
Read More
17-02-2019, 2:09 PM
“ನಾನು ಅದೆಷ್ಟೋ ವರ್ಷಗಳ ಕಾಲ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕೆಲಸ ಮಾಡಿರುತ್ತೇನೆ. ಹಲವಾರು ಕಾನ್ಫೆರನ್ಸಗಳಲ್ಲಿ ಪ್ರಬಂಧ ಮಂಡಿಸಿ, ಹಲವಾರು ಕೃತಿಗಳನ್ನು ಬರೆದು ಸಾಹಿತ್ಯಾತ್ಮಕವಾಗಿ ಒಂದಷ್ಟು ಕೆಲಸ ಮಾಡಿದ್ದೇನೆ. ಆದರೂ…. ದೇಶದಲ್ಲಾಗಲಿ ವಿದೇಶದಲ್ಲಾಗಲೀ ನನ್ನನ್ನು ಕಂಡಾಗ ಗುರುತಿಸುವುದು ಎಕ್ಕಸಕ್ಕ ಬರೆತಿನಾರ್ ಮೇರ್ (ಎಕ್ಕಸಕ್ಕ ಬರೆದವರು ಇವರು) ಎಂದು. “೪೦ ದಶಕಗಳ ಹಿಂದೆ ಬರೆದ ಆ ಹಾಡು ನನ್ನನ್ನು ಇವತ್ತಿಗೂ ಸಾಹಿತ್ಯಲೋಕದಲ್ಲಿ ಜೀವಂತವಾಗಿರಿಸಿದೆ. ಇಂತಹ ಜನಪ್ರಿಯತೆಯನ್ನು ಪಡೆಯಲು ಕಾರಣ ಅಂದು ನನಗೆ ಅವಕಾಶ ನೀಡಿದ ವಿಶುಕುಮಾರ್‌ರವರು. ಈ ಎಲ್ಲಾ ಕೀರ್ತಿಸಲ್ಲಬೇಕಾದುದು ವಿಶುಕುಮಾರ್ […]
Read More
17-02-2019, 2:06 PM
ಮಂಗಳೂರು : ನಮ್ಮಿಂದ ಮರೆಯಾದ ವ್ಯಕ್ತಿ ಎಲ್ಲಿಯವರೆಗೆ ಜನರ ಮನಸಲ್ಲಿ ಜೀವಂತವಾಗಿರುತ್ತಾರೋ ಅಲ್ಲಿಯವರೆಗೆ ಅವರು ಬದುಕಿರುವ ಚೇತನ, ಅಂತಹ ಮಹಾನ್ ವ್ಯಕ್ತಿ, ತನ್ನ ಸಾವಿನ 33 ವರುಷದ ಬಳಿಕವೂ ಜೀವಂತವಾಗಿರುವವರು. ವಿಶುಕುಮಾರ್ ಅವರ ಸಾಧನೆ ಅವರನ್ನು ಜೀವಂತವಾಗಿರಿಸಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ ವಿವೇಕ್ ರೈ ತಿಳಿಸಿದರು. ಅವರು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ […]
Read More
17-02-2019, 1:35 PM
ಮಂಗಳೂರು : ಯುವವಾಹಿನಿ ಸಂಸ್ಥೆಯು ಉದಯೋನ್ಮುಖ ಯುವ ಸಾಹಿತಿಗಳಿಗಾಗಿ ಕೊಡಮಾಡುವ 2018 ನೇ ಸಾಲಿನ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಯನ್ನು ತುಳುನಾಡ ಸ್ವರ ಮಾಣಿಕ್ಯ, ಕಂಚಿನ ಕಂಠದ ನಿರೂಪಕ, ತುಳು ಭಾಷಾ ಪರಿಪಕ್ವ ಬರಹಗಾರ, ಯುವ ಸಾಹಿತಿ ದಿನೇಶ್ ಸುವರ್ಣ ರಾಯಿ ಇವರಿಗೆ ಪ್ರದಾನ ಮಾಡಲಾಯಿತು. ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ಜರುಗಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ […]
Read More
16-02-2019, 4:24 PM
ಕೆಂಜಾರು ಕರಂಬಾರು : ಪುಲ್ವಾಮ ದ ಘಟನೆಯಲ್ಲಿ ವೀರ ಸ್ವರ್ಗ ಸೇರಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ಆಶ್ರಯದಲ್ಲಿ ದಿನಾಂಕ . 16.02.2019 ರಂದು ಕೆಂಜಾರು ಕರಂಬಾರು ಶ್ರೀದೇವಿ ಭಜನಾ ಮಂದಿರದಲ್ಲಿ ಕ್ಯಾಂಡಲ್ ಬೆಳಕಿನ ಮೂಲಕ ಪುಲ್ವಾಮ ಘಟನೆಯಲ್ಲಿ ವೀರ ಮರ ಹೊಂದಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ದೇಶಕ್ಕಾಗಿ ವೀರ ಸ್ವರ್ಗ ಸೇರಿದ ಸೈನಿಕರ ಬಗ್ಗೆ ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಸಂಧರ್ಬೋಚಿತವಾಗಿ […]
Read More
15-02-2019, 4:02 PM
ಮಂಗಳೂರು : ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಆಶ್ರಯದಲ್ಲಿ ಮತ್ತು ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ ರಾಜ್ಯ ಮಟ್ಚದ ಭಾಷಣ ಸ್ಪರ್ಧೆಯು ಯುವವಾಹಿನಿ ಸಭಾ಼ಂಗಣದಲ್ಲಿ ದಿನಾ಼ಂಕ 15.02.2019ರಂದುಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಮಣ ಸಾಲ್ಯನ್ ರವರು ದೀಪ ಬೆಳಗಿಸುದರೊ಼ಂದಿಗೆ ಉದ್ಘಾಟಿಸಿದರು .ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ವಿಶುಕುಮಾರ್ ಬಾಷಣ ಸ್ಪರ್ಧೆಯಲ್ಲಿ ಭಾಗವಾಹಿಸಿದರು. ಅನುಷಾ ಪ್ರಥಮ, ನಿಶಾ ದ್ವಿತೀಯ, ಪ್ರತೀಕ್ಷಾ ತೃತೀಯ ಬಹುಮಾನ ಪಡೆದರು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ […]
Read More
14-02-2019, 1:54 PM
ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿ ಮತ್ತು ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ದಿನಾಂಕ 14. 2.2019 ರಂದು ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜೀವನ […]
Read More