09-03-2019, 2:27 AM
ಕೂಳೂರು : ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಯುವವಾಹಿನಿ(ರಿ) ಕೂಳೂರು ಘಟಕದ ಆತಿಥ್ಯದಲ್ಲಿ ಯುವ ವಾಹಿನಿ ವಿದ್ಯಾನಿಧಿಯ ಬಲವರ್ಧನೆಗಾಗಿ ಯುವವಾಹಿನಿ ಪ್ರೀಮಿಯರ್ ಲೀಗ್ (YPL-201) ಮಾರ್ಚ್ 9 ಹಾಗೂ 10 ರಂದು ಎನ್.ಎಂ.ಪಿ.ಟಿ ಮೈದಾನ ಪಣಂಬೂರು ಇಲ್ಲಿ ನಡೆಯಿತು .ಬೆಳಗ್ಗೆ 7 ಗಂಟೆಗೆ ಸರಿಯಾಗಿ ನಾರಾಯಣ ಗುರುಗಳ ಆಶೀರ್ವಾದ ಪಡೆದು ದೀಪ ಬೆಳಗಿಸಿ ಕ್ರಿಕೆಟ್ ಪಂದ್ಯಾಟವನ್ನು ಪ್ರಾರಂಭಿಸಲಾಯಿತು .ಎರಡು ಪಂದ್ಯಗಳ ನಂತರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ಜರಗಿತು .ಉದ್ಘಾಟನಾ ಸಮಾರಂಭದ ಅಧ್ಯಕ್ಷ […]
Read More
08-03-2019, 4:03 PM
ಬೆಳ್ತಂಗಡಿ :ತಳ ಮಟ್ಟದಲ್ಲಿ ಇರುವ ಯುವ ಸಮುದಾಯವನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಸಲಹೆಗಾರರು ರಮಾನಂದ ಸಾಲಿಯನ್ ಮೂಂಡುರು ಹೇಳಿದರು. ಅವರು ಮಾ.08 ರಂದು ಸುವರ್ಣ ಆರ್ಕೇಡ್ ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ನಡೆದ ಸ್ಪೂರ್ತಿ…. ಇದು ಯುವವಾಹಿನಿಯ ಮಾರ್ಗದರ್ಶಿಯೆಡೆಗೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಘಟಕವು ಬೆಳ್ತಂಗಡಿಯಲ್ಲಿ ನೋಂದವರ ಪರವಾಗಿ ಹಾಗೂ ಅಶಕ್ತರಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿದ್ದು ಹೋರಾಟದ ಮೂಲಕ ಕಳೆದ 5 […]
Read More
03-03-2019, 3:32 PM
ಮಾಣಿ : ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಅನುಭವ ವಿಸ್ತಾರ ಹಾಗೂ ಯುವವಾಹಿನಿ ಕುಟುಂಬದ ಸದಸ್ಯರೊಳಗಿನ ಸ್ನೇಹ, ವಾತ್ಸಲ್ಯದ ಗಟ್ಟಿತನಕ್ಕಾಗಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡ ಸುಂದರ ಕಾರ್ಯಕ್ರಮವೇ “ಸ್ನೇಹ ಸಿಂಚನ- ಯುವವಾಹಿನಿ ಕುಟುಂಬದ ವಾತ್ಸಲ್ಯ ಪಯಣ” ಸ್ನೇಹ ಸಿಂಚನ ಪಯಣ ಸಾಗಿದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ.ದಿನಾಂಕ 03-03-19 ಅದಿತ್ಯವಾರದಂದು ಬೆಳಿಗ್ಗೆ 63ಮಂದಿ ಯುವವಾಹಿನಿ ಸದಸ್ಯರೊಂದಿಗೆ ತಂಡವು ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಇವರ ನೇತೃತ್ವದೊಂದಿಗೆ […]
Read More
03-03-2019, 3:11 PM
ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 03-03-2019 ಆದಿತ್ಯವಾರ ಗಾಯತ್ರಿ ಮಿನಿ ಹಾಲ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅತ್ಯಮೂಲ್ಯವಾದ ಯೋಜನೆ ಯುವವಾಹಿನಿ ಸೇವಾ ಸಂಜೀವಿನಿ ಯ ಲೋಕಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಅವರು ವಹಿಸಿದ್ದರು. ಪ್ರೀತಿ ಎಂಬ ಎಣ್ಣೆಯನ್ನು ಸುರಿದು,ನಂಬಿಕೆ ಎನ್ನುವ ಬತ್ತಿಯನ್ನು ಇಟ್ಟು,ಆತ್ಮವಿಶ್ವಾಸ ಎನ್ನುವ ದೀಪದಡಿಯಲ್ಲಿ ಅಶಕ್ತರ ಪಾಲಿಗೆ ಬೆಳಕಾಗಾಗಬೇಕೆಂಬ ಅಭಿಲಾಷೆಯೊಂದಿಗೆ, ಯುವವಾಹಿನಿ ಸೇವಾ ಸಂಜೀವಿನಿ’ ಯುವವಾಹಿನಿ ಬೆಂಗಳೂರು ಘಟಕದ ಬಹುದಿನಗಳ ಕನಸಿನ ಯೋಜನೆಯನ್ನು ಬೆಂಗಳೂರು […]
Read More
25-02-2019, 3:12 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಜರಗಿದ ಬೃಹತ್ ಹೊರೆಕಾಣಿಕೆ ಮೆರವಣಿಗೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯು ತನ್ನ ವಿವಿಧ ಘಟಕಗಳನ್ನು ಸಂಘಟಿಸಿ ಒಟ್ಟು 23 ಘಟಕಗಳ ಹೊರೆಕಾಣಿಕೆ ಸೇವೆಯ ಜೊತೆ ಆಕರ್ಷಕ ನಾರಾಯಣ ಗುರುಗಳ ಟ್ಯಾಬ್ಲೋ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿತು. ಮೆರವಣಿಗೆಯು ಶಿಸ್ತುಬದ್ಧವಾಗಿ ಯಶಸ್ವಿಯಾಗಿ ಮೂಡಿ ಬರಲು ಯುವವಾಹಿನಿಯ ನೂರಾರು ಕಾರ್ಯಕರ್ತರು ಸಮಾಜ ಭಾಂಧವರ ಜೊತೆ ಸೇರಿಕೊಂಡು ಐತಿಹಾಸಿಕ ಮೆರವಣಿಗೆಯ ಯಶಸ್ವಿ ಗೆ ಕಾರಣಕರ್ತರಾದರು. ಈ ಸಂದರ್ಭದಲ್ಲಿ ಯುವವಾಹಿನಿಯ ಸದಸ್ಯರಲ್ಲಿ ಶ್ರೀ […]
Read More
24-02-2019, 3:22 PM
ಬೆಳ್ತಂಗಡಿ : ಸಂಘಟನೆಯ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುವುದರೊಂದಿಗೆ ಸಮಾಜ ಸೇವೆ ಮಾಡಬೇಕು ಎಂದು ಮಾಜಿ ಶಾಸಕ, ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಗೌರಾವಾಧ್ಯಕ್ಷ ಕೆ.ವಸಂತ ಬಂಗೇರ ಹೇಳಿದರು. ಅವರು ಫೆ.24 ರಂದು ಸುವರ್ಣ ಆರ್ಕೇಡ್‌ನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.)ಬೆಳ್ತಂಗಡಿ ಘಟಕದ ನೂತನ ಪದಾದಿಕಾರಿಗಳ ಪದಪ್ರಧಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಬಿಲ್ಲವ ಸಂಘಟನೆ ತಾಲೂಕಿನಲ್ಲಿ 55 ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದು, ಯುವ ವಾಹಿನಿ ಕಳೆದ 5 ವರ್ಷಗಳಿಂದ ಉತ್ತಮ […]
Read More
23-02-2019, 3:28 PM
ಬಜ್ಪೆ: ಯುವವಾಹಿನಿ(ರಿ.) ಬಜ್ಪೆ ಘಟಕದ 5ನೇ ವರ್ಷದ ಸಮಾಜಮುಖಿ ಕಾರ್ಯಕ್ರಮಗಳ ಅಂಗವಾಗಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ಅಂಬಿಕಾರೋಡ್ ತೊಕೊಟ್ಟು ಇವರ ಸಹಕಾರದಲ್ಲಿ ದಿನಾಂಕ 23/02/2019ರಂದು ಶನಿವಾರ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ, ಬಜ್ಪೆ ಇಲ್ಲಿ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಅಶಕ್ತರಿಗೆ ಶ್ರವಣ ಸಾಧನ ವಿತರಣೆಯು ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ ಬಜ್ಪೆ ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ವಿನೋಧರ ಪೂಜಾರಿ, ನೋಟರಿ ಮತ್ತು ವಕೀಲರು ನೆರವೇರಿಸಿ, ತನ್ನ ಉದ್ಘಾಟನಾ ಭಾಷಣದಲ್ಲಿ ಯುವವಾಹಿನಿ ಬಜ್ಪೆ ಘಟಕದ […]
Read More
20-02-2019, 2:53 PM
ಕೊಲ್ಯ: ಯುವವಾಹಿನಿ (ರಿ) ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಗೆ ತೃತೀಯ ಹಂತದ ಚಾಲನಾ ಕಾರ್ಯಕ್ರಮವು ದಿನಾಂಕ 20-02-2019 ನೇ ಬುಧವಾರದಂದು ಬ್ರಹ್ಮ ಶ್ರೀ ನಾರಾಯಣಗುರು ಮಂದಿರ ಕೊಲ್ಯದಲ್ಲಿ ಜರಗಿತು. ಬ್ರಹ್ಮ ಶ್ರೀ ನಾರಾಯಣಗುರುವರ್ಯರಿಗೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರ ಅಟ್ಟಹಾಸಕ್ಕೆ ಮಡಿದ ಭಾರತೀಯ ವೀರ ಯೋಧರಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಯುವವಾಹಿನಿ (ರಿ)ಕೊಲ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶಶಿಕಾಂತ್ ಪರ್ಯತ್ತೂರು ರವರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮವು ಪ್ರಾರಂಭವಾಯಿತು. ಮುಖ್ಯ […]
Read More
17-02-2019, 4:13 PM
ಮಂಗಳೂರು : ಹಿರಿಯ ಸಾಹಿತಿ, ನಟ, ನಿರ್ದೇಶಕ ದಿ.ವಿಶುಕುಮಾರ್ ಅವರ 16 ಕಾದಂಬರಿಗಳು ಹಾಗೂ 12 ನಾಟಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜನಮಾನಸದಿಂದ ದೂರವಾಗುತ್ತಿರುವ ಅವುಗಳನ್ನು ಮತ್ತೆ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ ಸಂಸ್ಥೆಯು ಮೊದಲ ಹಂತದಲ್ಲಿ 4 ಕಾದಂಬರಿಗಳನ್ನು ಮರುಮುದ್ರಣ ಗೊಳಿಸಿ ದಿನಾಂಕ17.02.2019 ರಂದು ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಳಿಸಿದೆ. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ […]
Read More
17-02-2019, 3:49 PM
ಮಂಗಳೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಫೆಬ್ರವರಿ ತಿಂಗಳ ಸಂಚಿಕೆಯನ್ನು ದಿನಾಂಕ 17.02.2019 ರಂದು ಮಂಗಳೂರು ಪುರಭವನದಲ್ಲಿ ನಡೆದ ವಿಶುಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್ ಕೆ, ವಕೀಲರಾದ ವಿಜಯಲಕ್ಷ್ಮಿ ವಿಶುಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಂ ಪೂಜಾರಿ, ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್, […]
Read More