15-09-2024, 5:05 AM
ಕುಳಾಯಿ : ಯುವವಾಹಿನಿ (ರಿ.) ಪಣಂಬೂರು-ಕುಳಾಯಿ ಘಟಕದ ವತಿಯಿಂದ ಮಾಧವ ಕೀರ್ತನೋತ್ಸವ – 2024 ಭಜನಾ ಕಾರ್ಯಕ್ರಮವು 15-09-2024 ರಂದು ಭಾನುವಾರ ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು. ಭಜನಾ ಕ್ಷೇತ್ರದ ಹಿರಿಯರು ಮಾಧವ ಅಂಚನ್ ಇಡ್ಯಾರವರು ದೀಪ ಬೆಳಗಿಸುವುದರ ಮೂಲಕ ಭಜನಾ ಸಂಕೀರ್ತನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಜನಾ ಸಂಕೀರ್ತನೆಯಲ್ಲಿ ಸ್ಥಳೀಯ ಭಜನಾ ತಂಡದ ಭಜಕರು ಭಾಗವಹಿಸಿದ್ದರು. ಭಜನಾ ಮಂಗಲೋತ್ಸವದ ನಂತರ ಭಜನಾ ಕ್ಷೇತ್ರದ ಸಾಧಕರನ್ನು ಗೌರವಿಸುವ ಕಾರ್ಯಕ್ರಮವು ಜರಗಿತು. ಅಧ್ಯಕ್ಷತೆಯನ್ನು ಯುವವಾಹಿನಿ(ರಿ.) […]
Read More
15-09-2024, 4:44 AM
ಮೂಡುಬಿದಿರೆ: ದಿನೇ ದಿನೇ ಬಲಿಷ್ಠ ಸಂಘಟನೆಯಾಗಿ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಯುವವಾಹಿನಿಯ ಸದಸ್ಯರ ಸಿದ್ದತೆ ಮತ್ತು ಬದ್ದತೆ ಇತರರಿಗೆ ಮಾದರಿಯಾಗಿದೆ ಎಂದು ಉದ್ಯಮಿ ನಾರಾಯಣ ಪಿ.ಎಂ ತಿಳಿಸಿದರು. ಅವರು ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 15-09-2024 ರಂದು ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆದ ಬಹುಮಾನ, ವಿದ್ಯಾರ್ಥಿ ವೇತನ ಹಾಗೂ ಸದಸ್ಯರ ಐಡಿ ಕಾರ್ಡ್ ವಿತರಣಾ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ […]
Read More
14-09-2024, 4:33 PM
ಮುಲ್ಕಿ : ದಿನಾಂಕ 14 -09-2024 ರಂದು ಶನಿವಾರ ಸಂಜೆ 5:30ಕ್ಕೆ ಮುಲ್ಕಿಯ ಬ್ರಹ್ಮಶ್ರೀ ನಾರಾಯಣ ಗುರು ವರ್ಯರ ಸಾನಿಧ್ಯದಲ್ಲಿ ಮಂದಿರದ ಅರ್ಚಕರಾದ ಕೃಷ್ಣನ್ ಶಾಂತಿಯವರ ನೇತೃತ್ವದಲ್ಲಿ ಶ್ರೀಗುರುವರ್ಯರಿಗೆ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿ, ಘಟಕದ ಅಧ್ಯಕ್ಷರಾದ ರಿತೇಶ್ ಅಂಚನ್ ಇವರ ಮನೆಯಲ್ಲಿ ಭಜನಾ ಸಂಕೀರ್ತನೆ ಜರಗಿತು. ಘಟಕದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಪಾಲ್ಗೊಂಡರು. ಈ ಕಾರ್ಯಕ್ರಮದ ನೆನಪಿಗಾಗಿ ಬ್ರಹ್ಮಶ್ರೀ ಗುರುವರ್ಯರ ಚರಿತ್ರೆಯ ಪುಸ್ತಕವನ್ನು ಘಟಕದ ವತಿಯಿಂದ ನೀಡಲಾಯಿತು.
Read More
12-09-2024, 3:33 PM
ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುಗಳು 1908 ರಲ್ಲಿ ತಲಶ್ಶೇರಿಯಲ್ಲಿ ನಿರ್ಮಾಣವಾದ ಶ್ರೀ ಜಗನ್ನಾಥ ದೇವಾಲಯದ ವಿಚಾರದಲ್ಲಿ ನಡೆಸಿದ ಹೋರಾಟದಂತೆ, ಅಂದು ನಡೆಸಿದ ಮೌನ ಕ್ರಾಂತಿಯ ಹೋರಾಟವು ಮನುಕುಲದ ಬದುಕಿನಲ್ಲಿ ಮೂಡಿದ ಆಶಾಕಿರಣವು ಪ್ರಸ್ತುತ ಕಾಲಘಟ್ಟದಲ್ಲಿಯೂ ಸಕಾಲಿಕವಾಗಿದೆ ಎಂದು ಪ್ರಶಾಂತ್ ತಿಳಿಸಿದರು. ಅವರು ದಿನಾಂಕ 12-09-2024 ನೇ ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಶಿವಾನಂದ ಎಂ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 11 ನೇ ಮಾಲಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ […]
Read More
12-09-2024, 12:56 PM
ಕಂಕನಾಡಿ: ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ದಿನಾಂಕ 12-09-2024 ರಂದು ಘಟಕದ ಕಛೇರಿಯಲ್ಲಿ ಸಂಜೆ ಗಂಟೆ 6:30ಕ್ಕೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನ ಕಾರ್ಯಕ್ರಮ ಆಚರಿಸಲಾಯಿತು. ಅಧ್ಯಕ್ಷರಾದ ರಾಹುಲ್ ಸನಿಲ್ ಇವರು ಸಭೆಗೆ ಬಂದ ಎಲ್ಲಾ ಸದಸ್ಯರನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಿದರು. ಘಟಕದ ಮತ್ತು ಪರಿಸರದ 3 ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗುರುವಂದನೆಯನ್ನು ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶ್ರೀಮತಿ ಶೀಲಾ ಟೀಚರ್ ರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಪಡಿಸಿದರು. ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ […]
Read More
11-09-2024, 5:16 AM
ಮೂಡುಬಿದಿರೆ : ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯ ಉದ್ದೇಶವನ್ನು ಇಟ್ಟುಕೊಂಡ ಯುವವಾಹಿನಿ (ರಿ.) ಮೂಡುಬಿದರೆ ಘಟಕವು ಪ್ರಾರಂಭಿಸಿದ ಮದ್ಯ ಮುಕ್ತ ಮೆಹಂದಿ ಕಾರ್ಯಕ್ರಮದ ಅಡಿಯಲ್ಲಿ ಯುವವಾಹಿನಿಯ 34 ನೇ ಘಟಕ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಇವರ ಧರ್ಮಪತ್ನಿಯ ತಮ್ಮನಾದ ಪಾಲಡ್ಕದ ಪೂಜಾರಿಬೆಟ್ಟು ನಿವಾಸಿ ಗ್ರಾಮಚಾವಡಿ ಘಟಕದ ಸದಸ್ಯ ಸುಕೇಶ್ ಪೂಜಾರಿ ಇವರು ತನ್ನ ಮದುವೆಯ ಮೆಹಂದಿ ಕಾರ್ಯಕ್ರಮವನ್ನು ತನ್ನ ಹುಟ್ಟೂರಾದ ಪಾಲಡ್ಕದ (ಮೂಡುಬಿದಿರೆ) ಮನೆಯಲ್ಲಿ ಬಹಳ ಸಾಂಪ್ರದಾಯಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾಜಿ […]
Read More
08-09-2024, 2:07 PM
ಪಡುಬಿದ್ರಿ : ಅವಿಭಜಿತ ಜಿಲ್ಲೆಯಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕದ ತತ್ವದಲ್ಲಿ ಆದರ್ಶತೆ ಮೆರೆದ ಸಂಸ್ಥೆ ಯುವವಾಹಿನಿ. ಈ ಸಂಘಟನೆ ತೆರೆಮರೆಯಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಿದೆ. ಯುವಕರು ಸಮಾಜದಲ್ಲಿ ತಪ್ಪು ದಾರಿಗೆ ಹೋಗದೆ ಸರಿ ದಾರಿಯಲ್ಲಿ ಸಾಗುವ ಪಥ ತೋರಿಸುವ ಸಂಸ್ಥೆಯಾಗಿದೆ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ವೈ. ಸುಧೀರ್ ಕುಮಾರ್ ನುಡಿದರು. ಯುವವಾಹಿನಿ (ರಿ) ಪಡುಬಿದ್ರಿ ಘಟಕದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು 08-09-2024 ರಂದು ಪಡುಬಿದ್ರಿ ಬಿಲ್ಲವ […]
Read More
08-09-2024, 5:07 AM
ಮಂಗಳೂರು : ಯುವವಾಹಿನಿ (ರಿ) ಕಂಕನಾಡಿ ಘಟಕದ ಸಹಯೋಗದಲ್ಲಿ ದಿನಾಂಕ 08-09-2024 ಗರೋಡಿ ಸಮೃದ್ಧಿ ಸಭಾಭವನದಲ್ಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಲೋಕೇಶ್ ಪೂಜಾರಿ, ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಕಂಕನಾಡಿ ಘಟಕವು ಹಮ್ಮಿಕೊಂಡಿರುವ ಸಮಾಜಮುಖಿ ಹತ್ತು ಹಲವು ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು, ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದು ನುಡಿದರು. ಯುವವಾಹಿನಿ (ರಿ) ಕಂಕನಾಡಿ ಘಟಕ ಅಧ್ಯಕ್ಷ ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿ, […]
Read More
05-09-2024, 1:56 PM
ಕೊಣಾಜೆ : ಪ್ರಸ್ತುತ ಕಾಲದಲ್ಲಿ ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರು ಆಗಬೇಕೆಂದು ಬಯಸುವವರೇ ಹೆಚ್ಚು. ಆದರೆ ಶಿಕ್ಷಕರಾಗಬೇಕೆನ್ನುವವರು ಬಹಳ ಕಡಿಮೆ. ಎಲ್ಲಾ ವೃತ್ತಿಯ ಮೂಲ ಬೇರು ಆಗಿರುವ ಶಿಕ್ಷಕ ವೃತ್ತಿಯೇ ಅತ್ಯಂತ ಶ್ರೇಷ್ಠವಾದುದು. ಇಂತಹ ಶ್ರೇಷ್ಠ ವೃತ್ತಿಯ ಬಗ್ಗೆಯೂ ಹೆಚ್ಚು ಒಲವು ಅಗತ್ಯ ಎಂದು ನಿವೃತ್ತ ಶಿಕ್ಷಕರಾದ ಗಂಗಾಧರ ಪೂಜಾರಿ ಅವರು ಹೇಳಿದರು. ಅವರು ಕೊಣಾಜೆ ಗ್ರಾಮ ಚಾವಡಿಯ ಯುವವಾಹಿನಿ (ರಿ) ಘಟಕದ ವತಿಯಿಂದ ಗುರುವಾರ 05-09-2024 ರಂದು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆದ […]
Read More
05-09-2024, 5:23 AM
ಉಪ್ಪಿನಂಗಡಿ : ಯುವವಾಹಿನಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸುವ ಗುರು ವಂದನಾ ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರಾದ ಸೋಮಸುಂದರ್ ರವರ ಅಧ್ಯಕ್ಷತೆಯಲ್ಲಿ, ದಿನಾಂಕ 05-09-2024ರಂದು ಅಪರಾಹ್ನ ನಡೆಸಲಾಯಿತು. ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಪೀಲ್ಯ ಮನೆ ಅಣ್ಣು ಪೂಜಾರಿಯವರನ್ನು ಅವರ ಪೀಲ್ಯ ಮನೆಯಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಅವಿಭಜಿತ ಪುತ್ತೂರು ತಾಲೂಕಿನ ಆಲಂತಾಯ ಗ್ರಾಮದ ಬಟ್ಲಡ್ಕ ಮನೆಯಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಾದ ಸಂಜೀವ […]
Read More