28-04-2019, 3:47 PM
ಮಾಣಿ : ಅದು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳಗದ್ದೆ . ಯುವವಾಹಿನಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ಒಂದು ಯಶಸ್ಸಿನ ಚಟುವಟಿಕೆಯ ಸಾಕ್ಷಾತ್ಕಾರಕ್ಕೆ ಆ ಕಂಬಳ ಗದ್ದೆ ಸಾಕ್ಷಿಯಾಗಿತ್ತು. 2018 ರ ಡಿಸೆಂಬರ್ ತಿಂಗಳ 23 ರಂದು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಹಾಗೂ ಮಾಣಿ ಘಟಕದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಗುರು ಸೇವಾ ಸಂಘ(ರಿ) ಮಾಣಿ ಇದರ ಸಹಕಾರದೊಂದಿಗೆ ಅಂತರ್ ಘಟಕ ಒಡಗೂಡುವಿಕೆಯ ಕೋಟಿ ಚೆನ್ನಯ ಕೆಸರುಗದ್ದೆ […]
Read More
27-04-2019, 4:23 PM
ಮುಲ್ಕಿ: ಯುವವಾಹಿನಿ (ರಿ,) ಮುಲ್ಕಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 27-04-2019 ರಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗ್ರಹದಲ್ಲಿ ನಡೆಯಿತು . ಘಟಾಕಾಧ್ಯಕ್ಷೆ ಕುಶಲ .ಎಸ್ . ಕುಕ್ಯಾನ್ ಎಲ್ಲರನ್ನೂ ಸ್ವಾಗತಿಸಿದರು . ಮಾಜಿ ಅಧ್ಕ್ಯಕ್ಷರಾದ ಮೋಹನ್ ಸುವರ್ಣರವರು ಘಟಕ ನಡೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು, ನಿರ್ಗಮನ ಅಧ್ಯಕ್ಷ ರಾದ ಕುಶಲ .ಎಸ್. ಕುಕ್ಯಾನ್ ರವರು ತನ್ನ […]
Read More
25-04-2019, 5:03 PM
ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ 2019-20 ನೇ ಸಾಲಿನ ಅಧ್ಯಕ್ಷರಾಗಿ ಗೀತಾ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ನಿತೇಶ್ ಪೂಜಾರಿ ಆಯ್ಕೆಯಾಗಿದ್ದಾರೆ
Read More
25-04-2019, 4:41 PM
ಯಡ್ತಾಡಿ : ಯುವವಾಹಿನಿ(ರಿ) ಯಡ್ತಾಡಿ ಘಟಕದ ಆಶ್ರಯದಲ್ಲಿ ಐದು ದಿನಗಳ ಕಾಲ ನಡೆಸಿದ ಬೇಸಿಗೆ ಶಿಬಿರ, ವಿಕಸನ 2019 (ಅರಿವಿನ ತಂಗಾಳಿ) ರ ಅಂಗವಾಗಿ, ವಿದ್ಯಾರ್ಥಿಗಳಿಗೆ ಸ್ಥಳೀಯ ಸಾಧಕರ ಪರಿಚಯ ಮಾಡಿಸಿ ಸನ್ಮಾನಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಫಲತೆಯೊಂದೇ ಸಾಧನೆಯ ಮಾನದಂಡವಾಗಿ ರೂಪುಗೊಳ್ಳುತ್ತಿದ್ದು, ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಳವಳಕಾರಿಯಾದ ಅಂಶವಾಗಿದೆ. ಶೈಕ್ಷಣಿಕ ಸಾಧನೆಗೆ ಹೊರತಾಗಿಯೂ ಶ್ರಮವಹಿಸಿ ದುಡಿದರೆ ಸಮಾಜದಲ್ಲಿ ಶ್ರೇಷ್ಠ ಸಾಧನೆ ಮಾಡಬಹುದೆಂಬ ವಿಷಯ ಮನವರಿಕೆ ಮಾಡಲು ಪ್ರತಿ […]
Read More
25-04-2019, 4:33 PM
ಯಡ್ತಾಡಿ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮಾತ್ರ ಅವರ ಜೀವನಕ್ಕೆ ನಿಜವಾದ ಅಡಿಪಾಯ ಸಿಗುತ್ತದೆ. ಯುವವಾಹಿನಿ (ರಿ) ಯಡ್ತಾಡಿ ಘಟಕ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಮಕ್ಕಳ ಬೌದ್ಧಿಕ ಚಿಂತನೆ ಹೆಚ್ಚಿಸುವ ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಯೋಜಿಸಿರುವುದು ಶ್ಲಾಘನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲು ತಿಳಿಸಿದರು. ಅವರು 25.04.2019 ರಂದು ಸಂಜೆ ೬:೦೦ ಘಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡ್ತಾಡಿಯಲ್ಲಿ ಜರುಗಿದ […]
Read More
25-04-2019, 6:49 AM
ಮುಲ್ಕಿ : ಯುವವಾಹಿನಿ (ರಿ) ಮುಲ್ಕಿ ಘಟಕದ 2019-20 ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ ಕಿಲ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಭರತೇಶ್ ಅಮೀನ್ ಆಯ್ಕೆಯಾಗಿದ್ದಾರೆ
Read More
22-04-2019, 3:24 AM
ಕೂಳೂರು : ದಿನಾಂಕ 22/04/2019 ಸೋಮವಾರ ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ(ರಿ) ಮೂಡಬಿದ್ರಿ ಘಟಕದ ಸದಸ್ಯರಾದ ಅಶ್ವಿನಿ ಇವರ ಪತಿ ರಾಜೇಶ್ ಪೂಜಾರಿ ಇವರ 2 ಕಿಡ್ನಿಗಳು ವಿಫಲವಾಗಿ ಚಿಕಿತ್ಸೆಗಾಗಿ ನೆರವು ಕೋರಿದ್ದ ಸಲುವಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಸದಸ್ಯರು ವೈಯಕ್ತಿವಾಗಿ 15 ಸಾವಿರ ರೂಪಾಯಿ ಮೊತ್ತ ಹಾಗೂ ಕೂಳೂರು ನಾರಾಯಣ ಗುರು ಮoದಿರದ ಸದಸ್ಯರೆಲ್ಲರು ಸೇರಿ ಒಟ್ಟಾಗಿ 40 ಸಾವಿರ ರೂಪಾಯಿಯನ್ನು ಅವರ ತಾಯಿ ಉಮಾವತಿ ಇವರಿಗೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಕೂಳೂರು ಘಟಕದ […]
Read More
21-04-2019, 4:58 PM
ಮೂಡುಬಿದಿರೆ : ಸಾಧನೆ ಮತ್ತು ತೃಪ್ತ ಜೀವನಕ್ಕೆ ರಾಜಕೀಯವೊಂದೆ ದಾರಿಯಲ್ಲ. ಶಿಕ್ಷಣ, ಉದ್ಯಮ, ಕಲೆ, ಕ್ರೀಡೆ, ಕೃಷಿ ಮೊದಲಾದ ನೂರು ದಾರಿಗಳಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೀದಿಯಲ್ಲಿ ಹಾಲು-ಜೇನು ಹರಿಯುವುದು ಸಾಧ್ಯವಿಲ್ಲ. ರಾಜಕೀಯದಿಂದಲೆ ಉದ್ಧಾರ ಎಂಬುದು ಭ್ರಮೆ ಬೇಡ’’ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ನುಡಿದರು. ಅವರು ಮೂಡುಬಿದಿರೆಯ ಯುವವಾಹಿನಿ ಘಟಕದ ಪದಗ್ರಹಣ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಸಮಾಜಕ್ಕೆ ಘೋರ ಸಿಟ್ಟಿಗಿಂತ ಸಾತ್ವಿಕ ಸಿಟ್ಟಿನ ಅಗತ್ಯವಿದೆ. ಬದಲಾವಣೆಗಿಂತ […]
Read More
21-04-2019, 3:49 PM
ಮಾಣಿ : ಹೆಣ್ಣು ಜಗದ ಕಣ್ಣು,ಮಹಿಳೆ ತನ್ನ ಮೌಲ್ಯಯುತ ಸಮಯವನ್ನು ತನ್ನ ಮನೆಗಾಗಿ ಮಾತ್ರ ಮೀಸಲಿರಿಸಿದೆ ಹೊರಜಗತ್ತಿಗೆ ತೆರೆದುಕೊಳ್ಳಬೇಕು.ತನ್ನವರ ಒಳಿತಿನೊಂದಿಗೆ ಸಂಸ್ಕಾರಯುತ ಜೀವನದ ಮಾದರಿಯಾಗಿ ಇತರರ ಬದುಕಿಗೂ ದಾರಿದೀಪವಾಗಬೇಕೆಂದು ವಿಶ್ವ ಮಹಿಳಾ ದಿನಾಚರಣೆಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಮಾಣಿ ಇದರ ಮಹಿಳಾ ಸಮಿತಿಯ ಅಧ್ಯಕ್ಷರಾದ ತ್ರಿವೇಣಿ ರಮೇಶ್ ಮುಜಲ ತಿಳಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ನಿರ್ದೇಶಕರಾದ ಪಾರ್ವತಿ ಅಮಿನ್ ಅವರು ಯುವವಾಹಿನಿ ಸಮಾಜಿಕ ಕಳಕಳಿ ಬಗ್ಗೆ ಪ್ರಾಸ್ತಾವಿಕ […]
Read More
21-04-2019, 3:41 PM
ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ ಸಾರಥ್ಯದಲ್ಲಿ ವಿದ್ಯಾರ್ಥಿಗಳಿಗಾಗಿ ಸತತವಾಗಿ 7ನೇ ವರ್ಷದ ಐದು ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರ, ವಿಕಸನ – 2019, ಅರಿವಿನ ತಂಗಾಳಿ ಕಾರ್ಯಕ್ರಮ ದಿನಾಂಕ 21-04-2019 ರಿಂದ 25-04-2019 ರವರೆಗೆ ಅತ್ಯಂತ ಯಶಸ್ವಿಯಾಗಿ ಜರಗಿತು. ನರೇಂದ್ರ ಕುಮಾರ್ ಕೋಟಾ ನಿರ್ದೇಶನದಲ್ಲಿ ನಡೆದ ಈ ಶಿಬಿರದಲ್ಲಿ ಏಳು ಜನ ಸಂಪನ್ಮೂಲ ವ್ಯಕ್ತಿಗಳು 83 ಜನ ವಿದ್ಯಾರ್ಥಿಗಳನ್ನು ವಿವಿಧ ರೀತಿಯ ಚಟುವಟಿಕೆಗಳಿಂದ ರಂಜಿಸುವ ಜೊತೆ ಅವರ ವ್ಯಕ್ತಿತ್ವ ವಿಕಸನದಲ್ಲಿ ಪರಿಣಾಮಕಾರಿಯಾದ […]
Read More