06-07-2019, 2:47 PM
ಮೂಲ್ಕಿ : ಯುವವಾಹಿನಿ (ರಿ ) ಮೂಲ್ಕಿ ಘಟಕದ ವನಮಹೋತ್ಸವ ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಾನಂಪಾಡಿಯಲ್ಲಿ 6/7/2019ರಂದು ಜರಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಸತೀಶ್ ಕಿಲ್ಪಾಡಿ ವಹಿಸಿದ್ದರು, ಫ್ರೆಂಡ್ಸ್ ಕ್ಲಬ್ ಮಾನಂಪಾಡಿ ಇದರ ಗೌರವಾಧ್ಯಕ್ಷ ಕೃಷ್ಣಪ್ಪ ಸನಿಲ್ ಉದ್ಘಾಟಿಸಿದರು, ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸತೀಶ್ ಕೋಟ್ಯಾನ್, ಘಟಕದ ಕಾರ್ಯದರ್ಶಿ ಭರತೇಶ್ ಮಟ್ಟು, ಸಮಾಜ ಸೇವಾ ನಿರ್ದೇಶಕ ವಿಜೇತ್ ಸುವರ್ಣ ವೇದಿಕೆಯಲ್ಲಿ […]
Read More
30-06-2019, 3:21 PM
ಮೂಲ್ಕಿ : ಬಿರುವೆರ್ ಕುಡ್ಲ (ರಿ) ಮೂಲ್ಕಿ ಘಟಕ , ಯುವವಾಹಿನಿ (ರಿ) ಮೂಲ್ಕಿ ಘಟಕ ಮತ್ತು ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕೆ,ಎಸ್ ರಾವ್ ನಗರ ಹಾಗೂ ಗ್ರಾಮೀಣ ಅರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಡೀಮ್ಡ್ ಟು ಬಿ ಯುನಿವೆರ್ಸಿಟಿ ಮತ್ತು ಸಮುದಾಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಬ್ರಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರವು ದಿನಾಂಕ 30/6/2019 ಆದಿತ್ಯವಾರದಂದು ಕೆ ಎಸ್ […]
Read More
30-06-2019, 8:25 AM
ವೇಣೂರು: ಯುವವಾಹಿನಿ ಘಟಕ ವೇಣೂರು ಇದರ ಆಶ್ರಯದಲ್ಲಿ ಗ್ರಾ.ಪಂ. ವೇಣೂರು, ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ಬಜಿರೆ, ಅರಣ್ಯ ಇಲಾಖೆ ವೇಣೂರು ಇದರ ಸಹಕಾರದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮವು ರವಿವಾರ ಬಜಿರೆ ಹಿಂದೂರುದ್ರಭೂಮಿ ಮೋಕ್ಷ ಧ್ವಾರ ಇಲ್ಲಿ ಜರಗಿತು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ […]
Read More
29-06-2019, 2:19 PM
ಉಪ್ಪಿನಂಗಡಿ : ಬೃಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಂತೆ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುದರ ಜೊತೆಗೆ ಬಿಲ್ಲವ ಯುವಕರು ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಮೂಲ್ಕಿ- ಮೂಡಬಿದಿರೆಯ ಶಾಸಕರಾದ ಉಮನಾಥ ಕೋಟ್ಯಾನ್ ಇವರು ತಿಳಿಸಿದರು. ಅವರು ದಿನಾಂಕ 29.06.2019 ರಂದು ಉಪ್ಪಿನಂಗಡಿಯ ಸಂಘಮ ಕೃಪಾದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಉಪ್ಪಿನಂಗಡಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ […]
Read More
23-06-2019, 3:59 PM
ವೇಣೂರು: ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ವೇಣೂರು ಯುವವಾಹಿನಿ ಘಟಕದ ಕಾರ್ಯವೈಖರಿಯೇ ವಿಶಿಷ್ಟ. ಯುವ ಮನಸ್ಸುಗಳಿಂದ ನಿಶ್ವಾರ್ಥವಾಗಿ ನಡೆಯುವ ಇಂತಹ ಸೇವೆಯಿಂದ ಸಂಘಟನೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಇಂತಹ ಸಮಾಜಸೇವೆಯ ಪರಿಕಲ್ಪನೆ ಎಲ್ಲೆಡೆ ಫಸರಿಸಲಿ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಯುವವಾಹಿನಿ ವೇಣೂರು ಘಟಕದ ವತಿಯಿಂದ ರವಿವಾರ ವೇಣೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಸರೆ ಎಂಬ […]
Read More
23-06-2019, 2:42 PM
ಪುತ್ತೂರು : ಯುವವಾಹಿನಿ ಪುತ್ತೂರು ಘಟಕ ಹಾಗೂ ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರಿ ನಾರಾಯಣ ಗುರು ಸಭಾಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ವ್ಯಾಪ್ತಿಯಲ್ಲಿ ಬರುವ ಯುವವಾಹಿನಿ ಘಟಕಗಳ ಸದಸ್ಯರಿಗೆ ಜೂ.23 ರಂದು ಅಪರಾಹ್ನ ಹಮ್ಮಿಕೊಂಡ ಯುವ ಮನಸ್ಸುಗಳ ಸಮ್ಮಿಲನ ‘ಬಾಂಧವ್ಯ’ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಮೊಬೈಲ್, ಫೇಸ್‌ಬುಕ್‌ನಲ್ಲಿ ಸದಾ ಚಾಟಿಂಗ್ ಮಾಡುತ್ತಾ ಮಗ್ನರಾಗುವ ಇಂದಿನ ಆಧುನಿಕ ಯುಗದ ಯುವ ಸಮೂಹಕ್ಕೆ ತಮ್ಮ ಭವಿಷ್ಯದ ಸುಂದರ ಬದುಕು ಯಾವ ತೆರನಾಗಿರಬೇಕು ಎಂಬ ವಿಚಾರವಾಗಿ […]
Read More
23-06-2019, 1:58 PM
ಕೂಳೂರು : ಒಳ್ಳೆಯ ಆರಂಭ, ಒಳ್ಳೆಯ ಅಂತ್ಯ, ನಡುವೆ ಹೂರಣ ಅದೇ ಭಾಷಣ. ಎಂದು ಅಂತರರಾಷ್ಟ್ರೀಯ ಮಟ್ಟದ ಜೆಸಿಎ ತರಬೇತುದಾರರಾದ ಸುಧಾಕರ್ ಕಾರ್ಕಳ ತಿಳಿಸಿದರು. ಅವರು ದಿನಾಂಕ 23.06.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ ನಡೆದ ಯುವಚೈತನ್ಯ- 2019-20 ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಬಿಲ್ಲವ ಸಮುದಾಯದ ಉದ್ಧಾರಕ್ಕಾಗಿ ತಾನು ಇಂತಹ ತರಬೇತಿ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದಾಗಿಯೂ, ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದವರೂ ಉತ್ತಮ ತರಬೇತುದಾರರಾಗಬೇಕು ಎಂದು ಆಶಿಸಿದರು. ಇವರ ಜೊತೆ ಇನ್ನೋರ್ವ ಜೆಸಿಎ ತರಬೇತುದಾರರಾದ […]
Read More
23-06-2019, 8:31 AM
ಬೆಳ್ತಂಗಡಿ : ಯುವವಾಹಿನ (ರಿ) ಬೆಳ್ತಂಗಡಿ ಘಟಕದ ಮಹಿಳಾ ಸದಸ್ಯರಿಗೆ ಮತ್ತು ಘಟಕದ ಕಾರ್ಯಕರ್ತರಿಗಾಗಿ ಪ್ರೇರಣಾ ನಮ್ಮಿಂದ ನಮಗಾಗಿ ಎಂಬ ಕಾರ್ಯಕ್ರಮವನ್ನು ದಿನಾಂಕ:23/06/2019 ರಂದು ಮಧ್ಯಾಹ್ನ ಗಂಟೆ 2.30 ಕ್ಕೆ ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ ನಡೆಯಿತು.ಮಹಿಳಾ ಸಮಿತಿಯ ಪ್ರಧಾನ ಸಂಚಾಲಕರು ಸುಜತಾ ಅಣ್ಣಿ ಪೂಜಾರಿ ಅವರ ಸ್ವಾಗತ ಭಾಷಣದೊಂದಿಗೆ ಪ್ರೇರಣೆಯ ಉದ್ಘಾಟನೆಯನ್ನು ಶ್ರೀಮತಿ ಸೇವಂತಿ (ಸಮೂಹ ಸಂಪನ್ಮೂಲ ವ್ಯಕ್ತಿ C R P ಪರೊಡಿತ್ತಾಯ ಕಟ್ಟೆ ಬಜಿರೆ )ಇವರು ದೀಪ ಬೆಳಗಿಸಿ ಹೆಣ್ಣು ಸಮಾಜದ ಪ್ರೇರಣಾ ಶಕ್ತಿಯಾಗಿ […]
Read More
21-06-2019, 5:19 PM
ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರವು ದಿನಾಂಕ . 14.06.2019ರ ಶುಕ್ರವಾರ ಮೊರಾರ್ಜಿ ದೇಸಾಯಿ ಶಾಲೆ ಮಿಯ್ಯಾರು ಇಲ್ಲಿ ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ಮಿಯ್ಯಾರು ಬಿಲ್ಲವ ಸಂಘದ ಗ್ರಾಮ ಸಮಿತಿ ಅಧ್ಯಕ್ಷರಾದ ಗಣೇಶ ಪೂಜಾರಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಘಟಕದ ಉಪಾಧ್ಯಕ್ಷರಾದ ತಾರಾನಾಥ ಕೋಟ್ಯಾನ್‍ರವರು ವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಹಾಗೂ ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ಸುಧಾಕರ್ ಕಾರ್ಕಳ ತರಬೇತಿಯನ್ನು ನಡೆಸಿಕೊಟ್ಟರು. ಮೊರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್‍ರವರು ಮುಖ್ಯ […]
Read More
21-06-2019, 4:33 PM
ಬಜಪೆ : ಯುವವಾಹಿನಿ ಬಜಪೆ ಘಟಕದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಚರಿಸಲಾಯಿತು. ಪತಂಜಲಿ ಯೋಗ ಶಿಕ್ಷಣ ಸಮಿತಿಯು ಒಂದು ಘಂಟೆಗಳ ಕಾಲ ಯೋಗ ತರಗತಿಯನ್ನು ನಡೆಸಿಕೊಟ್ಟಿತ್ತು. ಈ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕರ್ನಾಟಕ ನೇತ್ರಾವತಿ ವಲಯ ಇದರ ಜಿಲ್ಲಾ ಸಹಸಂಚಾಲಕರಾದ ಅಶೋಕ್ ಹಾಗೂ ಕರ್ನಾಟಕ ನೇತ್ರಾವತಿ ವಲಯ ಇದರ ಮಹಾಲಿಂಗೇಶ್ವರ ವಲಯದ ಸಂಚಾಲಕರಾದ ದಾಮೋದರ ಇವರು ಯೋಗದ […]
Read More