22-09-2024, 11:17 AM
ಕೆಂಜಾರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಬೊಂದೇಲ್, ಎ.ಜೆ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಕೇಂದ್ರ ಇದರ ಸಹಯೋಗದೊಂದಿಗೆ ದಿನಾಂಕ 22-09-2024 ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಮ್ಮ ಕ್ಲಿನಿಕ್ ಮಳವೂರು – ಕರಂಬಾರು ಇಲ್ಲಿ ಬೃಹತ್ ಆರೋಗ್ಯ ಶಿಬಿರ ನಡೆಯಿತು. ಎ.ಜೆ ಸಂಸ್ಥೆಯ ವೈದ್ಯಕೀಯ ತಂಡ ಸುಮಾರು 10 […]
Read More
22-09-2024, 4:24 AM
ಸುರತ್ಕಲ್ : ಯುವವಾಹಿನಿ (ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 170ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 22-09-2024ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರ ವರೆಗೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕಾಟಿಪಳ್ಳದಲ್ಲಿ ನಡೆಯಿತು. ಬೆಳಿಗ್ಗೆ 8.30 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಂದಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಜನಾ ಸ್ಪರ್ಧೆಯನ್ನು ಪ್ರಾರಂಭ ಮಾಡಲಾಯಿತು. ತೀರ್ಪುಗಾರರಾಗಿ ಶ್ರೀ ದೀನ್ ರಾಜ್ ಪೆರ್ಮುದೆ ಮತ್ತು ಕುಮಾರಿ ವೈಶಾಲಿ ಡಿ ಬಂಗೇರ ಉಡುಪಿ […]
Read More
21-09-2024, 4:27 AM
ಪಡುಬಿದ್ರೆ : ಬಿಲ್ಲವ ಸಮಾಜ ಸೇವಾ ಸಂಘ (ರಿ) ಪಡುಬಿದ್ರೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕ ಇದರ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 21 ಶನಿವಾರ ಬ್ರಹ್ಮಶ್ರೀ ನಾರಾಯಣಗುರುಗಳ 96ನೇ ಪುಣ್ಯ ತಿಥಿಯಂದು ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಗ್ರಹದಲ್ಲಿ ತುಳುವೆರೆ ಬದ್ಕ್ (ಕೂಡುಕಟ್ -ಕಟ್ ಪಾಡ್) ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು. ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್.ಕೆ.ಪೂಜಾರಿ ಉದ್ಘಾಟಿಸಿದರು. ಪಡುಬಿದ್ರೆ ಬಿಲ್ಲವ ಸಮಾಜ ಸೇವಾ […]
Read More
19-09-2024, 4:35 PM
ಬಂಟ್ವಾಳ : ನಾರಾಯಣ ಗುರುಗಳು ಸಾರಿದ ಸಾರ್ವಕಾಲಿಕ ಮೌಲ್ಯಗಳು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬರಲೇಬೇಕಾದ ತುರ್ತು ಇಂದಿನ ಸಮಾಜಕ್ಕಿದೆ, ಶಿಕ್ಷಣದಿಂದ ಮಾತ್ರ ಮೌಡ್ಯದಿಂದ ಹೊರಬರಲು ಸಾಧ್ಯ ಎಂದು ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು. ಇವರು ದಿನಾಂಕ 19.09.2024 ನೇ ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾದ ದೀಕ್ಷಿತಾ ಕಲ್ಲಗುಡ್ಡೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 12 ನೇ ಮಾಲಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ […]
Read More
16-09-2024, 1:03 PM
ಮಂಗಳೂರು : ಶ್ರೀ ನಾರಾಯಣ ಗುರುಗಳ ಸಂದೇಶಗಳು ಇಂದಿನ ಕಾಲಘಟ್ಟಕ್ಕೆ ಪೂರಕವಾಗಿದ್ದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಇಂದಿನ ಜನತೆ ಮುಂದಾಗಬೇಕು. ನಾವು ಕಷ್ಟದಲ್ಲಿರುವಾಗ ನಮಗೆ ಯಾರೂ ಸಹಾಯ ಮಾಡಲಾರರು ಎನ್ನುವುದನ್ನು ಅರಿತು ಸ್ವಾವಲಂಬಿಯಾಗಿ ಬದುಕಬೇಕು ಎಂದು ಚಲನಚಿತ್ರ ನಿರ್ದೇಶಕ, ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸ್ಮಿತೇಶ್ ಎಸ್.ಬಾರ್ಯ ತಿಳಿಸಿದರು. ಅವರು 16-09-2024 ರವಿವಾರದಂದು ಯುವವಾಹಿನಿ (ರಿ) ಕಂಕನಾಡಿ ಘಟಕ ಆಯೋಜಿಸಿದ್ದ ಗುರು ಸ್ಮರಣೆ – ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು. […]
Read More
15-09-2024, 2:57 PM
ಅಡ್ವೆ : ಯುವವಾಹಿನಿ (ರಿ) ಅಡ್ವೇ ಘಟಕದ ಉಪಾಧ್ಯಕ್ಷರಾದ ವರುಣ್ ಕುಮಾರ್ ಇವರ ಸಂಬಂಧಿಕರಾದ ಸಂತೋಷ್ ಕುಮಾರ್ ಅಡ್ವೇ ಇವರು, ಕಾರ್ಕಳ ತಾಲೂಕಿನ ಕುಕ್ಕುಂದೂರಿನ ನೆಲ್ಲಿ ಗುಡ್ಡೆಯ ನಿವಾಸಿಯಾದ ದಿ. ಪ್ರೇಮಾನಂದ ರವರ ಪುತ್ರನಾದ ಪಂಚಮ್ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂತೋಷ್ ಕುಮಾರ್ ಇವರು ನಮ್ಮ ಘಟಕದಿಂದ ಸಹಾಯ ಹಸ್ತವನ್ನು ಕೇಳಿಕೊಂಡಿದ್ದಾರೆ. ಇವರ ಮೊರೆಯನ್ನು ಸ್ವೀಕರಿಸಿ ನಮ್ಮ ಘಟಕದ, ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಾಗೂ […]
Read More
15-09-2024, 2:28 PM
ಬೆಳ್ತಂಗಡಿ : ಯುವವಾಹಿನಿ (ರಿ) ಬೆಳ್ತಂಗಡಿ ಘಟಕ, ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ “ಮನಸ್ಸು ಅಂತರಾಳದ ಅವಲೋಕನ” ಕಾರ್ಯಕ್ರಮ 15-09-2024 ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನ ಬೆಳ್ತಂಗಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಯಾಟಕರು ಉದ್ಯಮಿಗಳು ಅನ್ನಪೂರ್ಣ ಮೆಟಲ್ ಬೆಳ್ತಂಗಡಿ ರಕ್ಷಾ ರಾಫ್ಲೇಶ್ ರವರು ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯ ಇದೆ. ಯುವವಾಹಿನಿ ಇಂತಹ ಹಲವಾರು ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಇನ್ನಷ್ಟು ಸಮಾಜಕ್ಕೆ, ಯುವ […]
Read More
15-09-2024, 6:26 AM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ 15-09-2024 ರಂದು ಉಡುಪಿಯಲ್ಲಿ ಜರುಗಿತು. ಮುಖ್ಯ ಅತಿಥಿ ಶಿಕ್ಷಣ ತಜ್ಞ ರವೀಂದ್ರ ಪೂಜಾರಿ ಅಡ್ವೆಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಹಾಗೂ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಘಟಕದ ಉಪಾಧ್ಯಕ್ಷರು ದಯಾನಂದ ಉಗ್ಗೆಲ್ಬೆಟ್ಟು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಡ್ವೆ ರವೀಂದ್ರ ಪೂಜಾರಿಯವರು “ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಪಾಠ ಬೋಧನೆಯ ಜೊತೆಗೆ ಜೀವನ ಸಂಗತಿಗಳನ್ನು […]
Read More
15-09-2024, 6:23 AM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸಂಗೀತ ಇವರ ಸಂಚಾಲಕತ್ವದಲ್ಲಿ ದಿನಾಂಕ 15-09-2024 ಆದಿತ್ಯವಾರದಂದು ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಸ್ವ ಉದ್ಯೋಗ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ವಿದ್ಯಾ ರಾಕೇಶ್ ಆಗಮಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಸಾಲ […]
Read More
15-09-2024, 5:52 AM
ಪಾಪುದಡಿ : ಸುಂದರ ಹಚ್ಚ ಹಸಿರ ತೋಟಗಳ ನಡುವೆ ಯುವವಾಹಿನಿ (ರಿ) ಕೊಲ್ಯ ಘಟಕದ ಕೋಶಾಧಿಕಾರಿ ಯುವ ರೈತ ಲತೀಶ್ ಪಾಪುದಡಿ ಇವರ ಕೊಳಕೆ ಗದ್ದೆಯಲ್ಲಿ ದಿನಾಂಕ 15/09/2024 ರಂದು ಯುವವಾಹಿನಿ ಕೊಲ್ಯ ಘಟಕದ ಸದಸ್ಯರಿಂದ ಭತ್ತ ನಾಟಿ ಕೆಲಸ ನಡೆಯಿತು. ಹಿರಿಯ ಮಹಿಳೆಯರು ಓ ಬೇಲೆ ಬೇಲೆ ಹಾಡುತ್ತಾ ಘಟಕದ ಸದಸ್ಯರಿಗೆ ಸ್ಫೂರ್ತಿ ನೀಡುತ್ತಾ ನಾಟಿ ಮಾಡುವ ಕ್ರಮವನ್ನು ವಿವರಿಸಿದರು. ಅದರಂತೆ ಎಲ್ಲರೂ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡುತ್ತಾ ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. […]
Read More