24-11-2019, 7:02 AM
ಯುವವಾಹಿನಿ (ರಿ.) ಯಡ್ತಾಡಿ ಘಟಕದ ವತಿಯಿಂದ ಪ್ರತಿ ವರ್ಷವೂ ಊರಿನ ಪರಿಸರದಲ್ಲಿ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲು ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ವಿನೂತನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಊರಿನ ಸ್ವಚ್ಛತೆಗೆ ಆದ್ಯತೆ ನೀಡುತ್ತ ಬಂದಿರುತ್ತಾರೆ. ಜೊತೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ವನ್ನಾಗಿಸಲು ಕೂಡ ಶ್ರಮಿಸುತ್ತಿದ್ದಾರೆ. 24.11.2019 ರಂದು ಯಡ್ತಾಡಿ ಚಿತ್ತೇರಿ ದೇವಸ್ಥಾನದ ದೀಪೋತ್ಸವದ ಪೂರ್ವ ತಯಾರಿಯಾಗಿ ಚಿತ್ತೇರಿ ದೇವಸ್ಥಾನದ ಇಕ್ಕೆಲಗಳಲ್ಲಿ ಬೆಳೆದಿರುವ ಪೊದೆ, ಹಾಗು ಕಸ ಕಡ್ಡಿ ಹಾಗು ಪ್ಲಾಸ್ಟಿಕ್ ಗಳನ್ನು ಶ್ರಮದಾನದ ಮೂಲಕ […]
Read More
23-11-2019, 2:53 PM
ದಿನಾಂಕ 20/11/2019ರಂದು ಶ್ರೀ ಗೋಕರ್ಣ ನಾಥ ಪಿ ಯು ಕಾಲೇಜಿನಲ್ಲಿ ಮಕ್ಕಳಿಗೆ IAS, KA S ಮಾಹಿತಿ ಶಿಬಿರವನ್ನು ಸರ್ವಜ್ಞ IAS KAS ಅಕಾಡಮಿಯ ನಿರ್ದೇಶಕರಾದ ಸುರೇಶ್ ಇವರು ನಡೆಸಿಕೊಟ್ಟರು.
Read More
20-11-2019, 3:21 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ಸ್ನೇಹ ಸಮ್ಮಿಲನ 2019 ಕಾರ್ಯಕ್ರಮವು ದಿನಾಂಕ 17.11.19 ರಂದು ಬಡ್ಡ ಕುದುರು ಮರಕಡ ಇಲ್ಲಿ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಸದಸ್ಯರ ತಂಡ ಮರವೂರು ತಲುಪಿ, ಅಲ್ಲಿಂದ ದೋಣಿಯ ಮೂಲಕ ಕುದುರು ತಲುಪಿದೆವು. 10 ಗಂಟೆಗೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಲ್ಲಿನ ಸ್ಥಳೀಯರಾದ ಸದಾಶಿವ ಪೂಜಾರಿ ಹಾಗೂ ಭುಜಂಗ ರವರು ಇದ್ದರು. ಕಾರ್ಯಕ್ರಮದಲ್ಲಿ […]
Read More
20-11-2019, 3:00 PM
ಯುವವಾಹಿನಿ (ರಿ) ಮಂಗಳೂರು ಘಟಕದ ವಾರ್ಷಿಕ ಕ್ರೀಡಾಕೂಟ – 2019 ದಿನಾಂಕ 17.11.2019ರ ಭಾನುವಾರದಂದು ಪ್ರಪ್ರಥಮ ಬಾರಿಗೆ ಯುವವಾಹಿನಿ (ರಿ) ಮಂಗಳೂರು ಘಟಕದ ವಾರ್ಷಿಕ ಕ್ರೀಡಾಕೂಟ – 2019 ನಗರದ ಹೊರವಲಯದಲ್ಲಿರುವ ಪದವು ಮೈದಾನ ದಲ್ಲಿ ನಡೆಯಿತು. ಕ್ರೀಡಾಕೂಟವು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಯುವ ಉದ್ಯಮಿ, ಗೆಜ್ಜೆಗಿರಿ ನಂದನ ಬಿತ್ತಿಲ್ ನ ಪ್ರದಾನ ಕೋಶಾಧಿಕಾರಿಯವರಾದ ಶ್ರೀಯುತ ದೀಪಕ್ ಕೋಟ್ಯಾನ್ ರವರು ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ, ವಾಲಿಬಾಲ್ ಮತ್ತು ಕ್ರೀಕೆಟ್ ಆಡುವ ಮೂಲಕ ಕ್ರೀಡಾ […]
Read More
20-11-2019, 2:44 PM
ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ, ಮಹಿಳಾ ಸಂಚಾಲನ ಸಮಿತಿ ನೇತೃತ್ವದಲ್ಲಿ ಸ್ತ್ರೀ ಶಕ್ತಿಯನ್ನು ಪ್ರಬಲಪಡಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಮುನ್ನೋಟ – ಮುಂದಿನ ಹೆಜ್ಜೆಯತ್ತ ಕಾರ್ಯಕ್ರಮವನ್ನು ನವೆಂಬರ್17 ರಂದು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ನಡೆಸಲಾಯಿತು. ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುರಿತ ಸವಿವರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ನಾಗವೇಣಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ನಾರಾವಿಯ ವೈದ್ಯಾಧಿಕಾರಿಗಳಾದ ಡಾ ದೀಕ್ಷಿತಾ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ […]
Read More
18-11-2019, 4:08 PM
ಶ್ರೀ ವಿಠೋಬ ಭಜನಾ ಮಂದಿರ ಬಾಳೆಹಿತ್ಲು ಮುಲ್ಕಿ ಇಲ್ಲಿನ ಭಜನಾ ಮಂಗಲೋತ್ಸವ ಕಾರ್ಯ ಕ್ರಮ ದಲ್ಲಿ ಯುವವಾಹಿನಿ (ರಿ,) ಮುಲ್ಕಿ ಘಟಕದ ಸದಸ್ಯ ರಿಂದ ಭಜನಾ ಕಾರ್ಯಕ್ರಮ ನಡೆಯಿತು ,
Read More
18-11-2019, 3:42 PM
ಮಕ್ಕಳ ದಿನಾಚರಣೆಯ ಅಂಗವಾಗಿ ಕೊಂಡಾಟದ ಬಾಲೆ – 2019 ಫೋಟೊ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ದಿನಾಂಕ 14.11.2019 ರಂದು ಸಂಜೆ 6.00 ಕ್ಕೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಕೊಲ್ಯ ಸೋಮೇಶ್ವರದಲ್ಲಿ ನೆರವೇರಿಸಲಾಯಿತು. ಈ ಸ್ಪರ್ಧೆಯಲ್ಲಿ ಒಟ್ಟು 70 ಮುದ್ದು ಕಂದಮ್ಮಗಳು ಸ್ಪರ್ಧಿಸಿದ್ದರು. ಕಾರ್ಯ ಕ್ರಮದ ಮೊದಲಿಗೆ ಘಟಕದ ವಿದ್ಯಾನಿಧಿ ನಿರ್ದೇಶಕರಾದ ಶಶಿಕಾಂತ್ ಅವರ ಮಕ್ಕಳಾದ ಯಶಿಕಾ ಮತ್ತು ಉನ್ನತಿ ಯವರು ಪ್ರಾರ್ಥನೆಯನ್ನು ನೆರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ […]
Read More
18-11-2019, 2:22 PM
ದಿನಾಂಕ 17/11/2019 ರಂದು ಯುವವಾಹಿನಿ(ರಿ) ಎಕ್ಕಾರು-ಪೆರ್ಮುದೆ ಘಟಕದ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು-ಪೆರ್ಮುದೆ ಇದರ ವಠಾರದ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಅಧ್ಯಕ್ಷರಾದ ಸಂದೇಶ್ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಹಾಸ ಪೂಜಾರಿ, ಹಿರಿಯರಾದ ಪ್ರದೀಪ್ ಕುಮಾರ್ ಸುವರ್ಣ, ವಿನೋದ್ ಸಾಲ್ಯಾನ್ ಸೇರಿದಂತೆ ಒಟ್ಟು 12 ಸದಸ್ಯರು ಹಾಜರಿದ್ದರು.
Read More
18-11-2019, 2:19 PM
ಮಾಣಿ ಘಟಕದ “ಕೆಸರ್ಡ್ ಒಂಜಿ ದಿನ” ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನ ಮಣ್ಣು ಅಂದರೆ ಅದಕ್ಕೆ ಅದರದೇ ಆದ ಗುಣವಿದೆ. ರೋಗರುಜಿನ ಗುಣ ಮಾಡುವ ಶಕ್ತಿ ಇದೆ. ಅದರಲ್ಲೂ ಕೆಸರುಗದ್ದೆಯ ಮಣ್ಣು ಅಂದರೆ ಇನ್ನೂ ಶ್ರೇಷ್ಠವಾದದ್ದು ಅಂಥ ನಮ್ಮ ಹಿರಿಯರ ಮಾತು. ಇದರ ಜೊತೆಗೆ ನಮ್ಮ ಗ್ರಾಮೀಣ ಕ್ರೀಡೆಯನ್ನು ನೆನಪಿಸುವ ದೃಷ್ಠಿಯಿಂದ ಇಂದು ಘಟಕದ ಸದಸ್ಯರಿಗೆ ಕುಟುಂಬ ಸಮ್ಮಿಲನ ರೀತಿಯಲ್ಲಿ ಸುತ್ತಲಿನ ಹತ್ತು ಗ್ರಾಮದ ಬಿಲ್ಲವ ಬಾಂಧವರ ಜೊತೆಗೂಡಿ ಯುವವಾಹಿನಿ ಮಾಣಿ ಘಟಕದ ಆತಿಥ್ಯದಲ್ಲಿ ಅನಂತಾಡಿಯ […]
Read More
18-11-2019, 2:14 PM
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮ ಪುಟಾಣಿ ಮಕ್ಕಳಿಗಾಗಿ “ಮಕ್ಕಳ ಹಬ್ಬ” ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಚಿನಡ್ಕ ಇಲ್ಲಿ ದಿನಾಂಕ 17/11/2019 ರ ಭಾನುವಾರ ಮುಂಜಾನೆ ಉದ್ಘಾಟನೆಯೊಂದಿಗೆ ಆರಂಭಗೊಂಡು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳ ನಂತರ ಅಪರಾಹ್ನ ಸಮಾರೋಪ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಮುಂಜಾನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಇವರು ವಹಿಸಿಕೊಂಡಿದ್ದರು, ಸಮಾರಂಭದ ಉದ್ಘಾಟಕರಾಗಿ ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಸಾದಿಯ ಬಾನು, […]
Read More