25-10-2024, 7:54 AM
ಬಂಟ್ವಾಳ : ಕೇರಳದ ಅರವೀಪುರದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ಜನರಿಗೆ ಮೌನ ಕ್ರಾಂತಿಯ ಮೂಲಕ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಯುವವಾಹಿನಿ ಬಂಟ್ಟಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು. ಅವರು ದಿನಾಂಕ 25.10.2024 ರಂದು ಬಂಟ್ವಾಳದ ಯಶೋಧರ ಪೂಜಾರಿ ಕಡಂಬಲ್ಕೆ ಇವರ ಮನೆಯಲ್ಲಿ ನಡೆದ ಗುರುತತ್ವ ವಾಹಿನಿ ಮಾಲಿಕೆ 17 ರಲ್ಲಿ ಗುರುಸಂದೇಶ ನೀಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ […]
Read More
20-10-2024, 10:10 AM
ಉಡುಪಿ: ಯುವವಾಹಿನಿ (ರಿ) ಉಡುಪಿ ಘಟಕವು ಸ್ಥಳೀಯ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ದಿನಾಂಕ 20-10-2024 ರಂದು ಆದಿತ್ಯವಾರ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಬೈಲೂರು ಶ್ರೀ ವಾಸುದೇವ ಕೃಪಾ ವಿದ್ಯಾ ಮಂದಿರ ಶಾಲೆಯಲ್ಲಿ ಆಯೋಜಿಸಿತ್ತು. ಉಡುಪಿಯ ಖ್ಯಾತ ವಕೀಲರಾದ ಮಟ್ಟಾರ್ ರತ್ನಾಕರ್ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ […]
Read More
20-10-2024, 8:47 AM
ಪೆರ್ಮಂಕಿ : ಯುವವಾಹಿನಿಯ 35 ನೇ ಘಟಕವಾಗಿ ಪೆರ್ಮಂಕಿ ಘಟಕವನ್ನು ನಾರಾಯಣಗುರು ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟೀ ಹಾಗೂ ಉದ್ಯಮಿ ಶೈಲೇಂದ್ರ ವೈ ಸುವರ್ಣ ಉದ್ಘಾಟಿಸಿದರು. ವಿದ್ಯೆಯಿಂದ ಸ್ವಾವಲಂಬಿ ಬದುಕು ಸಾಧ್ಯ, ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಯುವವಾಹಿನಿಯ ಕೊಡುಗೆ ಅಪಾರ ಎಂದರು. ಅವರು ದಿನಾಂಕ 20-10-2024 ರಂದು ವಿಶಾಲ್ ಗಾರ್ಡನ್, ಕೊಂಬೆಲ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತಾನಾಡಿದರು. 340 ಸದಸ್ಯರ ಬಲಿಷ್ಠ ಪೆರ್ಮಂಕಿ ತಂಡದ ಪ್ರಥಮ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದನೆ ನನ್ನ ಸೌಭಾಗ್ಯ […]
Read More
08-10-2024, 10:02 AM
ಉಪ್ಪಿನಂಗಡಿ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿತ ಕುದ್ರೋಳಿ ಗೋಕರ್ಣನಾಥ- ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವದ ಸುಸಂದರ್ಭದಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಪ್ರಯುಕ್ತ ಉಪ್ಪಿನಂಗಡಿ ಯುವವಾಹಿನಿ ಘಟಕದ ವತಿಯಿಂದ ಎಂಡೋ ಪೀಡಿತ, ಅಶಕ್ತ ಮಕ್ಕಳ ಮನೆಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಗ್ರೀಷ್ಮ ಬೆದ್ರೋಡಿ, ಪ್ರಜ್ಞಾ ವಳಾಲು, ರೂಪೇಶ್ ಮಣ್ಣಂಗಳ- ವಳಾಲು, ಸುರೇಶ್ ಕಾಂಚನ ಕ್ರಾಸ್ ಬಳಿ ಮತ್ತು ಪ್ರತೀಕ್ ಶಿವಾರು […]
Read More
06-10-2024, 4:59 PM
ಬೆಂಗಳೂರು : ಘಟಕದ ಒಂದು ದಿನದ ಪ್ರವಾಸ ಕಾರ್ಯ ಯೋಜನೆಯು ದಿನಾಂಕ ಅಕ್ಟೋಬರ್ 6 ಆದಿತ್ಯವಾರದಂದು ಯಶಸ್ವಿಯಾಗಿ ನಡೆಯಿತು. ಈ ಪ್ರವಾಸದಲ್ಲಿ ಘಟಕದ ಸದಸ್ಯರು ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಮಠಾಧೀಶರಾದ ರಾಮನಗರ ಜಿಲ್ಲೆಯ ಸೋಲೂರು ಮಠ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ಮತ್ತು ಎಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿಕೊಟ್ಟು ಶ್ರೀದೇವರ ದರ್ಶನವನ್ನು ಮಾಡಿದರು. ಬೆಳಿಗ್ಗೆ 9:00ಗೆ ಬೆಂಗಳೂರಿನ ಜೆಪಿ ನಗರದಿಂದ ಬಸ್ ಮೂಲಕ ಬಾಂಧವ್ಯದ ಪಯಣ ಆರಂಭಗೊಂಡಿತು. ಸದಸ್ಯರು, ಪದಾಧಿಕಾರಿಗಳು ಸೇರಿ ಒಟ್ಟು […]
Read More
04-10-2024, 2:28 PM
ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ದಿನಾಂಕ 04-10-2024 ಶುಕ್ರವಾರದಂದು ಕೋಶಾಧಿಕಾರಿ ನಿರ್ಮಲರವರ ಮನೆಯಲ್ಲಿ ದುರ್ಗಾ ಪೂಜೆ ಪ್ರಯುಕ್ತ ಭಜನಾ ಸೇವೆ ಯುವವಾಹಿನಿ ಸದಸ್ಯರಿಂದ ಜರುಗಿತು. ಭಕ್ತಿ ಪ್ರಧಾನವಾದ ಈ ಕಾರ್ಯಕ್ರಮದಲ್ಲಿ ದುರ್ಗಾಪೂಜೆ, ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಘಟಕದ ಹೆಚ್ಚಿನ ಸದಸ್ಯರು, ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Read More
04-10-2024, 9:58 AM
ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ದಿನಾಂಕ 04-10-2024 ಶುಕ್ರವಾರದಂದು ಕೋಶಾಧಿಕಾರಿ ನಿರ್ಮಲರವರ ಮನೆಯಲ್ಲಿ ದುರ್ಗಾ ಪೂಜೆ ಪ್ರಯುಕ್ತ ಭಜನಾ ಸೇವೆ ಯುವವಾಹಿನಿ ಸದಸ್ಯರಿಂದ ಜರುಗಿತು. ಭಜನಾ ಸೇವೆಯಲ್ಲಿ ಘಟಕದ ಸದಸ್ಯರು, ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಪಾಲ್ಗೊಂಡರು. ಭಜನೆಯ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು.
Read More
02-10-2024, 5:21 PM
ಕುಳಾಯಿ : ಮಹಿಳಾ ಮಂಡಲ (ರಿ) ಕುಳಾಯಿ ಮತ್ತು ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ಡಾಕ್ ಚೌಪಾಲ್-ಅಂಚೆ ಜನ ಸಂಪರ್ಕ ಅಭಿಯಾನ ಮೂಲಕ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ಅಪಘಾತ ವಿಮಾ ಹಾಗೂ ಅಂಚೆ ಉಳಿತಾಯ ಯೋಜನೆಯ ಶಿಬಿರವು ಮಹಿಳಾ ಮಂಡಲ ಕುಳಾಯಿ ಸಭಾಂಗಣದಲ್ಲಿ 02-10-2024ರಂದು ಬುಧವಾರ ಜರಗಿತು. […]
Read More
02-10-2024, 3:01 PM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ 28ನೇ ಸ್ವಚ್ಛತಾ ಅಭಿಯಾನವು ಗಾಂಧಿ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪರಪಾದೆ ಆಕಾಶಭವನ ಇಲ್ಲಿ ದಿನಾಂಕ 02-10-2024 ಬುಧವಾರದಂದು ಬೆಳಿಗ್ಗೆ 8.30ಕ್ಕೆ ಸರಿಯಾಗಿ ಪ್ರಾರಂಭಗೊಂಡಿತು. ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ ಎಸ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪ್ರಥಮ ಉಪಾಧ್ಯಕ್ಷರಾದ ಲತೀಶ್ ಪೂಜಾರಿ, ಕಾರ್ಯದರ್ಶಿ […]
Read More
30-09-2024, 2:43 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಕಾನೂನು, ರಾಜಕೀಯ, ಮನಶಾಸ್ತ್ರ, ವಿಚಾರವಾದ ಕುರಿತಾದ ಯುವ ಮನಸುಗಳ ಸಂವಾದ ಕಾರ್ಯಕ್ರಮ ದಿನಾಂಕ 30-09-2024 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಜಿಲ್ಲಾಧಿಕಾರಿ ಶ್ರೀ ಮುಲೈ ಮುಹಿಲನ್ ಎಂ.ಪಿ ನೆರವೇರಿಸಿ, ವಿದ್ಯಾರ್ಥಿಗಳು ಇತಿಹಾಸವನ್ನು ಅರಿತುಕೊಳ್ಳಬೇಕು ಮತ್ತು ಇತಿಹಾಸ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಸತ್ಯ ಮತ್ತು ಸುಳ್ಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ನುಡಿದರು. ರಾಜಕೀಯ ಮನೆಯಿಂದಲೇ ಆರಂಭವಾಗುತ್ತದೆ. ಪ್ರತಿಯೊಂದು ಅವಕಾಶವು ರಾಜಕೀಯ, ವಿಚಾರವಾದ, […]
Read More