19-11-2022, 3:06 PM
ಉಪ್ಪಿನಂಗಡಿ :- ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಬೆಳಕಿನಡಿಯಲ್ಲಿ ಕಳೆದ 35 ವರ್ಷಗಳಿಂದ ಸಮಾಜಮುಖಿ ಚಿಂತನೆಗಳೊಂದಿಗೆ ಸಾಗುತ್ತಿರುವ ಯುವವಾಹಿನಿಯ ಯುವಸಮುದಾಯಕ್ಕೆ ಗುರುಗಳ ಪ್ರೇರಣೆಯೇ ದಾರಿದೀಪ ಎಂದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ ತಿಳಿಸಿದರು. ಅವರು ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ಇವರ ಮನೆಯಲ್ಲಿ ದಿನಾಂಕ 19 ನವೆಂಬರ್2022 ರಂದು ಜರಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಘಟಕವನ್ನು ತಮ್ಮ […]
Read More
19-11-2022, 2:42 PM
ಕಡಬ :- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಕಡಬ ಘಟಕದ 2022-23ನೇ ಸಾಲಿನ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದಿನಾಂಕ 19 ನವೆಂಬರ್ 2022 ನೇ ಶನಿವಾರದಂದು ಶ್ರೀ ದುರ್ಗಂಬಿಕಾ ಅಮ್ಮನವರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ. ಟಿ ಮಹೇಶ್ಚಂದ್ರ ಸಾಲ್ಯಾನ್ ಇವರು ಈ ವರ್ಷದ ಕೆಲಸ ಕಾರ್ಯಗಳನ್ನು ಗಮನಿಸಿ ಅಭಿನಂದಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ […]
Read More
14-11-2022, 6:03 PM
ಕಂಕನಾಡಿ :- ದಿನಾಂಕ 14 ನವೆಂಬರ್ 2022ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಘಟಕದ ವತಿಯಿಂದ ನೆಕ್ಕರೆಮಾರ್ ಅಂಗನವಾಡಿಯಲ್ಲಿ ಚಿಣ್ಣರೊಂದಿಗೆ ಸುಸಮಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪೃಥ್ವಿರಾಜ್ ವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಪುಷ್ಪರವರು ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿಯ ನೂತನ ಶಿಕ್ಷಕಿ ಕುಮಾರಿ ಪ್ರತೀಕ್ಷಾರವರು ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಘಟಕದ […]
Read More
14-11-2022, 2:48 PM
ಕೂಳೂರು :- ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಮಂಜೊಟ್ಟಿ ಅಂಗನವಾಡಿ ಕೇಂದ್ರ ಪಂಜಿಮೋಗರು ನಲ್ಲಿ ದಿನಾಂಕ 14 ನವೆಂಬರ್ 2022ರ ಸೋಮವಾರದಂದು ಬೆಳಗ್ಗೆ ಶಾಲಾ ಶಿಕ್ಷಕಿಯಾದ ಪ್ರಮೀಳರವರು ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಯಂತ್ ಸುವರ್ಣರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜವಹಾರ ಲಾಲ್ ನೆಹರು ರವರ ಜನ್ಮ ದಿನದ ಅಂಗವಾಗಿ ನೆಹರೂರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಅಂಗನವಾಡಿ […]
Read More
13-11-2022, 5:48 PM
ಕುಪ್ಪೆಪದವು :- ಯುವವಾಹಿನಿಯ ಶಿಸ್ತು ಬದ್ಧ ಕಾರ್ಯಕ್ರಮ, ಪಾರದರ್ಶಕತೆ, ಎಲ್ಲವನ್ನು ಗಮನಿಸಿ ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಈ ಸಂಸ್ಥೆಯು ಬೇರೆ ಸಂಘಟನೆಗಿಂತ ವಿಭಿನ್ನವಾಗಿದೆ. ಸೇವಾ ಮನೋಭಾವ ಹೊಂದಿರುವ ಸಂಸ್ಥೆಯ ಕಾರ್ಯಕ್ರಮಕ್ಕೆ ಬೇರೆ ಯಾವ ಕಾರ್ಯಕ್ರಮದ ಒತ್ತಡವಿದ್ದರೂ ಕೂಡ ಪಾಲ್ಗೊಳ್ಳುವ ಅವಕಾಶ ಬಿಟ್ಟುಕೊಡಲಾರೆ. ಯುವವಾಹಿನಿ ಸಂಸ್ಥೆಗೆ ಯಾವುದೇ ರೀತಿಯ ಸಹಕಾರ ನೀಡಲು ಸದಾ ಸಿದ್ಧ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಮತ್ತು ತತ್ವಾದರ್ಶಗಳು ಸರ್ವರಿಗೂ ಅನ್ವಯವಾಗುವಂತಿವೆ […]
Read More
13-11-2022, 5:26 PM
ಬೆಳ್ತಂಗಡಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಪರಿಕಲ್ಪನೆಯೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಯುವವಾಹಿನಿ ಬೆಳ್ತಂಗಡಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ, ಸಾಧಕರಿಗೆ ಸನ್ಮಾನ ಸಾಂತ್ವನನಿಧಿ ಹಸ್ತಾಂತರ ಕಾರ್ಯಕ್ರಮ ನ.13 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿ೦ಜ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು , ಬೆಳ್ತಂಗಡಿ ಘಟಕ ಅಧ್ಯಕ್ಷೆ ಸುಜಾತ […]
Read More
13-11-2022, 3:03 PM
ಉಡುಪಿ :- ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಯ ಜೊತೆಗೆ ಸಂಸ್ಕಾರಯುತ ಬದುಕನ್ನು ರೂಢಿಸಿಕೊಳ್ಳಬೇಕು. ಗುರು ಹಿರಿಯರ ಆದರ್ಶದಲ್ಲಿ ಸಮಾಜಮುಖಿಯಾಗಿ ಬೆಳೆಯಬೇಕು. ವಿಶೇಷವಾಗಿ ನಮ್ಮ ಸಮಾಜದ ಹೆಮ್ಮೆಯ ಸಂಸ್ಥೆಯಾದ ಯುವವಾಹಿನಿಯ ವಿದ್ಯೆ, ಉದ್ಯೋಗ, ಸಂಪರ್ಕ ತತ್ವಗಳಿಗೆ ಬದ್ದವಾಗಿದ್ದರೆ ಖಂಡಿತಾ ಒಳಿತು ಸಾಧ್ಯ ಎಂದು ಪರ್ಕಳ ಶೆಟ್ಟಿಬೆಟ್ಟು ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕರಾದ ಅಮೃತ್‌ರಾಜ್ ತಿಳಿಸಿದರು. ಅವರು ದಿನಾಂಕ 13 ನವೆಂಬರ್ 2022ರಂದು ಯುವವಾಹಿನಿ ಉಡುಪಿ ಘಟಕದ ವತಿಯಿಂದ ಜರಗಿದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಬ್ರಹ್ಮಶ್ರೀ […]
Read More
06-11-2022, 6:07 PM
ಪಣಂಬೂರು ಕುಳಾಯಿ :- ದಿನಾಂಕ 06 ನವೆಂಬರ್ 2022 ರವಿವಾರದಂದು ಘಟಕದ ವತಿಯಿಂದ ಯುವವಾಹಿನಿಯ ಮುಖ್ಯ ಧ್ಯೇಯಗಳಲ್ಲಿ ಒಂದಾದ “ಸಂಪರ್ಕ” ಎಂಬ ಪದಕ್ಕೆ ಅರ್ಥ ಬರುವಂತೆ ಘಟಕದ ಸದಸ್ಯರು ಸೇರಿ ಒಂದು ದಿನದ ಯಾತ್ರೆಯ ಕಾರ್ಯಕ್ರಮವನ್ನು ಘಟಕದ ಪ್ರಚಾರ ನಿರ್ದೇಶಕರಾದ ನಿತಿನ್ ರವರ ನೇತೃತ್ವದಲ್ಲಿ ವಿವಿಧ ದೇವಸ್ಥಾನಗಳ ಯಾತ್ರೆಯನ್ನು ಕೈ ಗೊಳ್ಳಲಾಯಿತು. ಗೆಜ್ಜೆಗಿರಿ-ನಂದನ ಬಿತ್ತಲ್, ಹನುಮ ಗಿರಿ, ಪಂಚ ಮುಖಿ ಹನುಮಂತ ದರ್ಶನ, ಸೌತಡ್ಕ ಶಿಶಿಲ ಶಿಶಿಲೇಶ್ವರ ದೇವಸ್ಥಾನ (ಮತ್ಸ್ಯ ತೀರ್ಥ), ಕನ್ಯಾಡಿ ರಾಮ ಮಂದಿರ, ಸೂರ್ಯ […]
Read More
06-11-2022, 4:50 PM
ಮಂಗಳೂರು:- ಸ್ವಾತಂತ್ರ್ಯ ಅಮೃತ ಮಹೋತ್ಸವ 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮಂಗಳೂರು ಘಟಕವು, ಘಟಕದ ಸದಸ್ಯರಿಗೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ದಿನಾಂಕ 06 ನವೆಂಬರ್ 2022ರ ಭಾನುವಾರದಂದು ಯುವವಾಹಿನಿ ಸಭಾಂಗಣದಲ್ಲಿ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸಂಗೀತ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ಹರೀಶ್ ಕೆ. ಪೂಜಾರಿಯವರು ಮಾತನಾಡುತ್ತಾ ಸದಸ್ಯರಲ್ಲಿರುವ ಸೂಕ್ತ ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ಮಾದರಿ ಎಂದು ಅಭಿಪ್ರಾಯಪಟ್ಟರು. ಸಂಗೀತ ಸ್ಪರ್ಧೆಯಲ್ಲಿ 9 […]
Read More
06-11-2022, 4:40 PM
ಮಾಣಿ :- ಯುವವಾಹಿನಿ(ರಿ.) ಮಾಣಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 06ನವೆಂಬರ್ 2022 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನ,ಮಾಣಿ ಇಲ್ಲಿ ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ ರವರು ಉದ್ಘಾಟಿಸಿದರು. ತದನಂತರ ಅವರು ನೂತನ ತಂಡಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ರೇಣುಕಾ ಕಣಿಯೂರುರವರು ವಾರ್ಷಿಕ ವರದಿಯನ್ನು ದೃಶ್ಯ – ಶ್ರವ್ಯ ಪರದೆಯ ಮೂಲಕ […]
Read More