12-02-2024, 12:59 PM
ಬಂಟ್ವಾಳ: ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿ ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದಿನಾಂಕ 11.02.2024 ರಂದು ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಿಂದ ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಕಾರ್ಯದರ್ಶಿ ನಿಕೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
Read More
12-02-2024, 12:31 PM
ಮೂಡಬಿದಿರೆ: ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಇದರ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ ದಿನಾಂಕ 12-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 10 ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ(ರಿ.) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
11-02-2024, 3:33 PM
ಯುವವಾಹಿನಿ (ರಿ.) ಕೂಳೂರು ಘಟಕದ ಮೂರು ಧ್ಯೇಯಗಳಲ್ಲಿ ಒಂದಾದ ಸಂಪರ್ಕ ಇದರ ನೆಲೆಯಲ್ಲಿ ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿನಾಂಕ 11-02-2024 ಆದಿತ್ಯವಾರದಂದು ಸ್ನೇಹ ಸಮ್ಮಿಲನ 2024 ಕಾರ್ಯಕ್ರಮವನ್ನು Relax leisure park ಬ್ರಹ್ಮಾವರದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7.45 ಗಂಟೆಗೆ ಸರಿಯಾಗಿ ನಮ್ಮ ಬಸ್ಸಿನ ಸಾರಥಿ ನಮ್ಮನ್ನೆಲ್ಲ ಕೂರಿಸಿಕೊಂಡು ಕೂಳೂರಿನಿಂದ ಹೊರಟು 9.30 ಗೆ ರೆಸಾರ್ಟ್ ತಲುಪಿದೆವು. ಅಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಅಲ್ಲಿಂದ ಬೋಟ್ ಮೂಲಕ island ತಲುಪಿದೆವು. ಬೋಟ್ ನಲ್ಲಿ […]
Read More
11-02-2024, 11:38 AM
ಕುಪ್ಪೆಪದವು : ಯುವವಾಹಿನಿ (ರಿ.) ಕುಪ್ಪೆಪದವು ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಕುಪ್ಪೆಪದವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 11-02-2024 ರ ರವಿವಾರ ನಡೆಯಿತು. ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪದಪ್ರದಾನಗೈದು, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಬಿಲ್ಲವ […]
Read More
10-02-2024, 3:43 AM
ಮೂಡಬಿದಿರೆ: ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನ, ಸ್ವರಾಜ್ಯ ಮೈದಾನ ಮೂಡಬಿದಿರೆ, ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದ ಪ್ರಯುಕ್ತ ದಿನಾಂಕ 10-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕ ದ ಸುಮಾರು 10 ಸದಸ್ಯರು, ಕ್ಯಾಶ್ ಕೌಂಟರ್ ನಲ್ಲಿ ಹಾಗೂ ದಿನಾಂಕ 11-02-2024 ರಂದು ಸುಮಾರು 20 ಸದಸ್ಯರು, ಅನ್ನ ಧಾನ ವಿಭಾಗ ದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ (ರಿ.) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
08-02-2024, 12:36 PM
ತುಂಬೆ : ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಶುಭ ಸಂಧರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರು ದಿನಾಂಕ 08.02.2024 ರಂದು ದೇವಸ್ಥಾನದ ಆವರಣದಲ್ಲಿ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಟ್ರಸ್ಟೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಇವರು ಘಟಕದ ಅಧ್ಯಕ್ಷರನ್ನು ಗೌರವಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ, ಕಾರ್ಯದರ್ಶಿ ನಿಕೇಶ್ ಕೋಟ್ಯಾನ್ ಕಲ್ಲಡ್ಕ, ಸಲಹೆಗಾರರಾದ ಟಿ. ಶಂಕರ ಸುವರ್ಣ, ಮಾಜಿ ಅಧ್ಯಕ್ಷರು, ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿ […]
Read More
04-02-2024, 6:53 AM
ಮೂಡಬಿದರೆ: ಸಮಾಜಮುಖಿ ಕೆಲಸ ಮಾಡುವ ಯುವವಾಹಿನಿಯು ಸ್ವಚ್ಛ ಪರಿಕಲ್ಪನೆಯುಲ್ಲಿ ತನ್ನನ್ನು ತೊಡಗಿಸಿಕೊಂಡದ್ದು ಅನುಕರಣೀಯ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು 04/02/2024 ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನ, ಮಾರಿಗುಡಿ ದೇವಸ್ಥಾನ ಹಾಗೂ ರಿಂಗ್ ರೋಡ್ ಬಳಿ ನಡೆದಾಗ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಶಂಕರ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ತೋಡಾರು […]
Read More
30-01-2024, 4:11 AM
ಮಂಗಳೂರು: ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಮಾಜಮುಖಿ ಕಾರ್ಯಕ್ಕೆ ಸಮಾಜದ ಸರ್ವರ ಬೆಂಬಲ ಅತ್ಯಂತ ಸಂತಸ ತಂದಿದೆ, ಆರ್ಥಿಕ ಕ್ರೋಡೀಕರಣಕ್ಕಾಗಿ ನಡೆದ ನಾಟಕ ಪ್ರದರ್ಶನದಲ್ಲಿ ಮಂಗಳೂರು ಪುರಭವನ ಜನಸ್ತೋಮದಿಂದ ತುಂಬಿರುವುದು ಮಹಿಳಾ ಘಟಕದ ಶ್ರಮಕ್ಕೆ ಸಂದ ಪ್ರತಿಫಲ ಎಂದು ಅಸಿಸ್ಟೆಂಟ್ ಕಮಿಷನರ್ ಅಫ್ ಪೋಲಿಸ್ ಮಹೇಶ್ ಕುಮಾರ್ ತಿಳಿಸಿದರು. ಅವರು ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಘಟಕದ ಆರ್ಥಿಕ ಬಲವರ್ಧನೆಗಾಗಿ ದಿನಾಂಕ 30-01-2024 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಕಥೆ ಎಡ್ಡೆಂಡು ನಾಟಕ ಪ್ರದರ್ಶನದಲ್ಲಿ ಜರುಗಿದ ಸಭಾ […]
Read More
28-01-2024, 3:30 PM
ಮುಲ್ಕಿ: ನಿರಂತರ ಅಭ್ಯಾಸ, ಆತ್ಮವಿಶ್ವಾಸ, ಏಕಾಗ್ರತೆಯ ಮೂಲಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ ಎಂದು ತರಬೇತುದಾರರಾದ ಜಯಶ್ರೀ ತಿಳಿಸಿದರು. ಅವರು ಯುವವಾಹಿನಿ(ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 28-01-2024 ರಂದು ಮುಲ್ಕಿ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಜರುಗಿದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕರಾದ ಹರಿಂದ್ರ ಸುವರ್ಣರವರು ದೀಪ ಬೆಳಗಿಸಿ ಕಾರ್ಯಾಗಾರ ಉದ್ಘಾಟಿಸಿದರು. […]
Read More
27-01-2024, 2:30 PM
ಮುಲ್ಕಿ: ಯುವವಾಹಿನಿ ಸದಸ್ಯರೊಳಗೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮವು ದಿನಾಂಕ 27-01-2024 ಶನಿವಾರ ಸಂಜೆ 6 ರಿಂದ 7 ರ ವರೆಗೆ ಮುಲ್ಕಿ ಘಟಕದ ಮಾಜಿ ಅಧ್ಯಕ್ಷರಾದ ಜಯ ಕುಮಾರ್ ಕುಬೇವೂರುರವರ ಮನೆಯಲ್ಲಿ ಭಜನಾ ಸಂಕೀರ್ತನೆ ನಡೆಯಿತು.ಈ ಕಾರ್ಯಕ್ರಮದ ನೆನಪಿಗಾಗಿ ಘಟಕದ ವತಿಯಿಂದ ಶ್ರೀ ನಾರಾಯಣ ಗುರು ಚರಿತ್ರೆ ಪುಸ್ತಕವನ್ನು ನೀಡಲಾಯಿತು. ಭಜನಾ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸ್ಥಳೀಯರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
Read More