18-02-2024, 4:23 PM
ಕೆಂಜಾರು-ಕರಂಬಾರು: ಧಾರ್ಮಿಕತೆ ಎಂಬುವುದು ಜನಜೀವನದ ಭಾಗ. ವಸ್ತುವಿನಲ್ಲಿ ವಿವಿಧ ನೆಲೆಯ ಗುಣಮಟ್ಟ ಇರುವಂತೆ ಧಾರ್ಮಿಕತೆಯಲ್ಲಿಯೂ ಉತ್ತಮ,ಉನ್ನತ ಹಾಗೂ ದುರ್ಬಲ ಎಂಬ ಮೂರು ಗುಣಮಟ್ಟವಿದೆ. ಉತ್ತಮ ಹಾಗೂ ಉನ್ನತ ಧಾರ್ಮಿಕತೆಯ ಪಾಲಕರು ಫಲಾನುಭವಿಗಳಾಗಬೇಕು. ದುರ್ಬಲ ಧಾರ್ಮಿಕತೆಯಿಂದ ಯುವಜನತೆಯನ್ನು ಪಾರುಗೊಳಿಸುವ ಹೊಣೆ ಯುವವಾಹಿನಿಗಿರಲಿ. ಒಂದು ವರ್ಷದ ಅವಧಿಯಲ್ಲಿ ಅಲ್ಪಾವಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಚಿಂತನೆ ಸಹಜವಾಗಿ ನೂತನ ಪದಾಧಿಕಾರಿಗಳಿಗಿರುತ್ತದೆ. ಅಲ್ಪಾವಧಿಯೊಂದಿಗೆ ದೂರದೃಷ್ಟಿಯ ಕಾರ್ಯಕ್ರಮಗಳಿಗೂ ಆದ್ಯತೆ ಇರಲಿ. ಸಂಘಟನೆ ಸ್ವರೂಪ ಮತ್ತು ಕಾರ್ಯಕ್ರಮದ ವೈವಿಧ್ಯಕ್ಕೆ ಯುವವಾಹಿನಿ ನಾಡಿಗೆ ಮಾದರಿ ಎಂದು ಮೂಡುಬಿದಿರೆ ಆಳ್ವಾಸ್ […]
Read More
18-02-2024, 12:05 PM
ವಿಟ್ಲ: ಯುವವಾಹಿನಿ (ರಿ.) ವಿಟ್ಲ ಘಟಕ ಇದರ ನೇತೃತ್ವದಲ್ಲಿ ಶ್ರೀ ಮಲರಾಯ -ಮೂವರ್ ದೈವಂಗಳ ದೈವಸ್ಥಾನ ಮಾಡತಡ್ಕ ಇದರ ಕಾಲಾವದಿ ನೇಮೋತ್ಸವದ ಪ್ರಯುಕ್ತ ದಿನಾಂಕ 18-02-2024 ಆದಿತ್ಯವಾರ ಬೆಳಿಗ್ಗೆ 8 ರಿಂದ ಮದ್ಯಾಹ್ನ 1ರ ವರೆಗೆ ವಿಟ್ಲ ಘಟಕದ ಸದಸ್ಯರಿಂದ ಶ್ರಮದಾನ ನಡೆಯಿತು.ಈ ಸಂದರ್ಭದಲ್ಲಿ ಯುವವಾಹಿನಿ ವಿಟ್ಲ ಘಟಕದ ಕಾರ್ಯದರ್ಶಿ ಶೋಭಾ, ಕೋಶಾಧಿಕಾರಿ ನಿರ್ಮಲ, ಪ್ರಚಾರ ನಿರ್ದೇಶಕರಾದ ಶ್ರೇಯಸ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದರು.
Read More
18-02-2024, 9:31 AM
ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಿಂದ ಲೋಕ ಕಲ್ಯಾಣನಾರ್ಥ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಲಾಯಿತು. ದಿನಾಂಕ 18.02.2024ರ ಬೆಳಗ್ಗೆ 5.00 ಗಂಟೆಗೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ, ಕಾರ್ಯದರ್ಶಿ ನಿಕೇಶ್ ಕೋಟ್ಯಾನ್, ಕಾರ್ಯಕ್ರಮ ಸಂಚಾಲಕರಾದ ಕಿರಣ್‌ರಾಜ್ ಪೂಂಜರೆಕೋಡಿ, ಮಾಜಿ ಅಧ್ಯಕ್ಷರು, ಸೇರಿ ಒಟ್ಟು 48 ಸದಸ್ಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
Read More
16-02-2024, 3:47 PM
ಬಂಟ್ವಾಳ : ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಇಂದು ನಡೆದ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ವತಿಯಿಂದ ಹೊರೆಕಾಣಿಕೆ ನೀಡಿ, ಘಟಕದ ಸದಸ್ಯರು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ಇವರು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ ಇವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
Read More
15-02-2024, 4:07 AM
ಮೂಡಬಿದಿರೆ: ಶ್ರೀ ಕ್ಷೇತ್ರ ಕಲ್ಲಬೆಟ್ಟು , ಶ್ರೀ ಮಹಮ್ಮಾಯಿ ದೇವಸ್ಥಾನ ಮೂಡಬಿದಿರೆ, ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದ ಪ್ರಯುಕ್ತ ದಿನಾಂಕ 15-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕ ದ ಸುಮಾರು 15 ಸದಸ್ಯರು, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ (ರಿ.) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
14-02-2024, 7:01 PM
ಮಂಗಳೂರು :ಉರ್ವ ಮಾರಿಗುಡಿ ಕ್ಷೇತ್ರ ಇದರ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಸಂದರ್ಭ ದಿನಾಂಕ 14/02/2024 ಬುಧವಾರದಂದು ಮಧ್ಯಾಹ್ನ 12.00 ರಿಂದ 3.00 ಗಂಟೆಯವರೆಗೆ ಯುವವಾಹಿನಿ (ರಿ.) ಕೂಳೂರು ಘಟಕದ ಸದಸ್ಯರು ಅನ್ನದಾನ ಸೇವೆಯಲ್ಲಿ ಭಾಗಿಯಾದರು. ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು ಮತ್ತು ಸುಮಾರು 30 ಸದಸ್ಯರು ಅನ್ನ […]
Read More
14-02-2024, 5:38 PM
ಕೊಲ್ಯ: ಶಿಸ್ತಿಗೆ ಹೆಸರಾದ ಕೊಲ್ಯ ಘಟಕವು ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತಿದೆ. ಕೊಲ್ಯ ಘಟಕವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ವಿದ್ಯೆ, ಉದ್ಯೋಗ, ಸಂಪರ್ಕ ನಿಟ್ಟಿನಲ್ಲಿ ಹಮ್ಮಿಕೊಂಡ ವಿವಿಧ ಯೋಜನೆಗಳು ಜನರಿಗೆ ತಲುಪುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ತಿಳಿಸಿದರು. ಫೆಬ್ರವರಿ 25 ರಂದು ನಡೆಯುವ ಉಳ್ಳಾಲ ವಲಯದ ಬಿಲ್ಲವ ಸಮಾವೇಶದ ಸಿದ್ಧತೆಯಲ್ಲಿ ಕೊಲ್ಯ ಯುವವಾಹಿನಿ ಸದಸ್ಯರು ತಮ್ಮನ್ನು ತೊಡಗಿಸಿದುರ ಬಗ್ಗೆ ಮಾಹಿತಿ ಪಡೆದು ಸಮ್ಮೇಳನದ ಯಶಸ್ವಿಗೆ ಶುಭ ಹಾರೈಸಿದರು. […]
Read More
13-02-2024, 4:50 PM
ಬೆಳ್ತಂಗಡಿ: ಯುವವಾಹಿನಿ(ರಿ.) ಬೆಳ್ತಂಗಡಿ ಘಟಕದ ವತಿಯಿಂದ ದಿನಾಂಕ 13/02/2024 ಮಂಗಳವಾರದಂದು ಯುವವಾಹಿನಿಯ ಪದಾಧಿಕಾರಿಗಳಿಗೆ ಹಾಗೂ ಸಂಘಟನೆ ಕಾರ್ಯದರ್ಶಿಗಳಿಗೆ ಮುನ್ನುಡಿ ಮುಂದಿನ ಪಯಣಕ್ಕಾಗಿ ಎಂಬ ಶೀರ್ಷಿಕೆಯಡಿಯ ಕಾರ್ಯಕ್ರಮವು ಬೆಳ್ತಂಗಡಿಯ ಗುರು ನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು. ತರಬೇತಿಯನ್ನು ಸ್ಥಾಪಕ ಅಧ್ಯಕ್ಷರಾದ ರಾಕೇಶ್ ಮೂಡುಕೋಡಿ, ಮಾಜಿ ಅಧ್ಯಕ್ಷರಾದ ಪ್ರಸಾದ್ ಎಮ್. ಕೆ, ನಿಕಟ ಪೂರ್ವ ಅಧ್ಯಕ್ಷರಾದ ಅಶ್ವತ್ ಕುಮಾರ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸದಾಶಿವ ಇವರು ವಹಿಸಿದ್ದರು. ತರಬೇತಿಯಲ್ಲಿ ಮಾಜಿ ಅಧ್ಯಕ್ಷರು, ಸಲಹೆಗಾರರು, ನಿರ್ದೇಶಕರು, […]
Read More
13-02-2024, 4:49 PM
ಮಂಗಳೂರು: ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಸಹಯೋಗದಲ್ಲಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಉಚಿತ ತರಬೇತಿ ಕಾರ್ಯಾಗಾರವು 13/2/2024 ರಿಂದ 22/2/2024 ರವರೆಗೆ ಜರುಗಿತು. ಉದ್ಯಮಶೀಲತಾ ತರಬೇತಿಯ ಕಾರ್ಯಾಗಾರವನ್ನು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜ ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕ ಅಧ್ಯಕ್ಷರು […]
Read More
13-02-2024, 4:01 AM
ಪುತ್ತೂರು: ಯುವವಾಹಿನಿ(ರಿ.) ಪುತ್ತೂರು ಘಟಕದ ಆಶ್ರಯದಲ್ಲಿ ನೈತಾಡಿ ಅಂಗನವಾಡಿ ಕೇಂದ್ರಕ್ಕೆ ಮತ್ತು ಪರ್ಪುoಜ ಅಂಗನವಾಡಿ ಕೇಂದ್ರಕ್ಕೆ ಡಿಜಿಟಲ್ ಸ್ಕೇಲನ್ನು ದಿನಾಂಕ 13/02/2024 ರಂದು ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ(ರಿ.) ಪುತ್ತೂರು ಘಟಕದ ಅಧ್ಯಕ್ಷರಾದ ಜಯರಾಮ್ ಬಿ ಏನ್, ಕಾರ್ಯದರ್ಶಿ ಸಮಿತ್ ಪಿ ಹಾಗೂ ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾದ ದೀಕ್ಷಿತ್, ನೈತಾಡಿ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ರೇಷ್ಮಾ, ಸಹಾಯಕಿ ಶೃತಿ ಹಾಗೂ ಪರ್ಪುoಜ ಅಂಗನವಾಡಿ ಕಾರ್ಯಕರ್ತೆ ಯಮುನಾ ಮತ್ತು ಸಹಾಯಕಿ ರೇಖಾ ಹಾಗೂ ಅಂಗನವಾಡಿ ಮಕ್ಕಳು […]
Read More