
37ನೇ ವಾರ್ಷಿಕ ಸಮಾವೇಶ
19-12-2024, 3:25 PM
ದಿನಾಂಕ : 29-12-2024 ಸಮಯ : ಬೆಳಿಗ್ಗೆ ಗಂಟೆ 9:30ರಿಂದ ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ.
19-12-2024, 3:25 PM
ದಿನಾಂಕ : 29-12-2024 ಸಮಯ : ಬೆಳಿಗ್ಗೆ ಗಂಟೆ 9:30ರಿಂದ ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ.
14-12-2024, 2:58 AM
ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಪುತ್ತೂರು ಘಟಕದ 2024-25 ನೇ ಸಾಲಿನ ಪದಗ್ರಹಣ ಸಮಾರಂಭ ಕಾರ್ಯಕ್ರಮವು ದಿನಾಂಕ 14-12-2024 ನೇ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನ ಬಪ್ಪಳಿಗೆ, ಪುತ್ತೂರು ಇಲ್ಲಿ ನಡೆಯಿತು. ಕಾರ್ಯಕ್ರಮವು ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಾಗತವನ್ನು ಘಟಕದ ಉಪಾಧ್ಯಕ್ಷರಾದ ಅಣ್ಣಿ ಪೂಜಾರಿರವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಡೆಂಜಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜಯರಾಮ.ಬಿ.ಎನ್ ವಹಿಸಿದ್ದರು. ಮುಖ್ಯ […]
11-12-2024, 2:41 PM
ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ಪದಗ್ರಹಣ ಸಮಾರಂಭವು 11-12-2024ರಂದು ಬ್ರಹ್ಮಶ್ರೀ ಸಭಾಭವನ ಪೊನ್ನುಟ್ಟು ವಿಟ್ಲದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ವಿಟ್ಲ ವಹಿಸಿದರು. ಮಾಧವ ಪೂಜಾರಿ ಪಟ್ಲ ಉದ್ಘಾಟಿಸಿದರು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಯಶವಂತ ಇವರು ಪ್ರಕಟಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿಯವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಮರುವಳ ಹಾಗೂ ತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಾಣಿಲ ಕುಕ್ಕಾಜೆ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ […]
08-12-2024, 9:17 AM
ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕೆಡೆಂಜಿ ದಿನಾಂಕ 08-12-2024 ರಂದು ಅವಿಭಜಿತ ಪುತ್ತೂರು ತಾಲೂಕಿನ ಸಮಾಜ ಬಾಂಧವರಿಗಾಗಿ ನಡೆದ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ಹಲವಾರು ವರ್ಷಗಳ ಬಳಿಕ ಯುವವಾಹಿನಿ ಪುತ್ತೂರು ಘಟಕವು ದೊಡ್ಡ ಮಟ್ಟದಲ್ಲಿ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಮುಖ್ಯವಲ್ಲ. ಬಿಲ್ಲವ ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಎಂದರು. […]
29-11-2024, 2:58 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ಪದಗ್ರಹಣ ಸಮಾರಂಭವು 24-11-2024 ರಂದು ಘಟಕದ ಸಭಾಂಗಣದಲ್ಲಿ ನೆರವೇರಿತು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಆದ ಶ್ರೀ ಮಹಾಬಲ ಅಮೀನ್ವಾಚಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿಯವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ದಯಾನಂದ ಕರ್ಕೇರಾ ಹಾಗೂತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಹೆಚ್ ಹೊಳೆಯಪ್ಪ. ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು, ಉಡುಪಿ, ಇವರು ಶುಭ ಹಾರೈಸಿದರು. ಬಿಲ್ಲವ ಸೇವಾ […]
28-11-2024, 9:51 AM
ಕೊಣಾಜೆ : ಯುವವಾಹಿನಿ (ರಿ) ಗ್ರಾಮಚಾವಡಿ ಕೊಣಾಜೆ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಗ್ರಾಮಚಾವಡಿ ಕೊಣಾಜೆ ಇಲ್ಲಿಯ ಸಮುದಾಯ ಭವನದಲ್ಲಿ ಮುದ್ದು ಮಕ್ಕಳೊಂದಿಗೆ ಒಂದು ಸಂಜೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಯೆನಪೋಯಾ ವೈದ್ಯಕೀಯ ಕಾಲೇಜು M.B.B.S ವಿದ್ಯಾರ್ಥಿನಿ ಕು! ಶ್ರಾವ್ಯಶ್ರೀ ಕೊಣಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೂರ್ಯಕಾಂತಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ […]
26-11-2024, 6:42 AM
ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕದ ಆಶ್ರಯದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದ ಸಹಯೋಗದಲ್ಲಿ ಮಕ್ಕಳ ದಿನಾಚರಣೆ, ಆನ್ಲೈನ್ ಶ್ಲೋಕ ಪಠಣಾ ಸ್ಫರ್ಧೆ, ಆಟೋಟ ವಿನೋದಾವಳಿ, ಬಹುಮಾನ ವಿತರಣೆ. ಮಕ್ಕಳ ಮನಸ್ಸು ಹೂವಿನಂತೆ. ಬಾಲ್ಯದಲ್ಲಿನ ಮಕ್ಕಳ ಮುಗ್ಧತೆ, ಸರಳತೆ ನಮ್ಮನ್ನು ಸೆಳೆಯುತ್ತದೆ. ನಾವು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಕಲೆತು ಮುಗ್ಧ ಮನಸ್ಸಿನೊಳಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯ ಬೀಜವನ್ನು ಬಿತ್ತಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದ ಮುಖ್ಯ ಧರ್ಮ […]
26-11-2024, 6:32 AM
ಕೂಳೂರು: ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ 17-11-2024ರ ಆದಿತ್ಯವಾರದಂದು ಬೆಳಗ್ಗೆ 5.30 ಗಂಟೆಗೆ ಸರಿಯಾಗಿ ಕುಟುಂಬ ಸಂಪರ್ಕ ನಿರ್ದೇಶಕರಾದ ಶ್ರೀಮತಿ ಸುಮಾ ಶಿವು ಇವರ ಸಂಚಾಲಕತ್ವದಲ್ಲಿ ನಿಗದಿ ಪಡಿಸಿದ ಬಸ್ಸಿನ ಮುಂದೆ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಮೂಲಕ ಕ್ಷೇತ್ರ ದರ್ಶನಕ್ಕೆ ಚಾಲನೆ ನೀಡಿದರು. ಸುಮಾರು 87 ಜನರನ್ನು ಒಳಗೊಂಡ 2 ಬಸ್ ಬೆಳಗ್ಗಿನ ಜಾವ 5.30 ಗಂಟೆಗೆ ಸರಿಯಾಗಿ ಕುಳೂರಿನಿಂದ ಹೊರಟು 6.15 ಕ್ಕೆ ತಲಪಾಡಿ ತಲುಪಿತು. ಅಲ್ಲಿ ನಿಗದಿ […]
23-11-2024, 5:44 AM
ಉಡುಪಿ: ಯುವವಾಹಿನಿ (ರಿ) ಉಡುಪಿ ಘಟಕದ ಅತ್ಯಂತ ಪ್ರಶಂಸನೀಯ ಯೋಜನೆಗಳಲ್ಲಿ ಒಂದಾದ ತಲೆಗೊಂದು ಸೂರು ಯೋಜನೆಯಡಿ ನಿರ್ಮಾಣಗೊಂಡ ಅಂದಾಜು ಹತ್ತು ಲಕ್ಷ ವೆಚ್ಚದ ಮನೆಯನ್ನು ದಿನಾಂಕ 23-11-2024 ರಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್.ಕೆ.ಪೂಜಾರಿಯವರ ಗೌರವ ಉಪಸ್ಥಿತಿಯಲ್ಲಿ ಫಲಾಕಾಂಕ್ಷಿಗೆ ಹಸ್ತಾಂತರಿಸಲಾಯಿತು. ಉದ್ಯಾವರ ಸಂಪಿಗೆ ನಗರದ ನಿವಾಸಿ, ಇಬ್ಬರು ಹೆಣ್ಣು ಮಕ್ಕಳ ತಾಯಿ ಶ್ರೀಮತಿ ಲತಾ ಸುರೇಶ್ ಈ ಬಾರಿಯ ಫಲಾಕಾಂಕ್ಷಿ. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರವೀಣ್.ಎಂ.ಪೂಜಾರಿಯವರು ಗಣ್ಯಾತಿ ಗಣ್ಯರ, ದಾನಿಗಳ, ಯುವವಾಹಿನಿ ಕೇಂದ್ರ […]
17-11-2024, 6:17 PM
ಪಡುಬಿದ್ರಿ : ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಪಡುಬಿದ್ರಿ ಘಟಕದ ವತಿಯಿಂದ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 17-11-2024 ರಂದು ಮಕ್ಕಳ ಹಬ್ಬ 2024 ಕಾರ್ಯಕ್ರಮ ನೆರವೇರಿತು. ಶಾಲೆಯ ವಿದ್ಯಾರ್ಥಿ ನಾಯಕಲಕ್ಷಿಣ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೋಕೇಶ್ ಅಮೀನ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಕೊಂಡು ಬರುತ್ತಿರುವ ಯುವವಾಹಿನಿ (ರಿ) ಪಡುಬಿದ್ರಿ ಘಟಕದ ಕಾರ್ಯ ನಿಜವಾಗಿಯೂ ಶ್ಲಾಘನೀಯ […]