ಘಟಕಗಳು

ಕೂಳೂರು: ನಮ್ಮ ಮನೆ ಹಬ್ಬ ದೀಪಾವಳಿ

ದಿನಾಂಕ 30-10-2106 ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ನಮ್ಮ ಮನೆ ಹಬ್ಬ ದೀಪಾವಳಿ ಎಂಬ ವಿನೂತನ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವು ಘಟಕದ ಸದಸ್ಯ ಭಾಸ್ಕರ್ ಕೋಟ್ಯಾನ್‌ರವರ ಸಂಚಾಲಕತ್ವದಲ್ಲಿ ಅವರ ಮನೆಯಲ್ಲಿ ಘಟಕದ ಅಧ್ಯಕ್ಷ ಐ. ಸುಜಿತ್‌ರಾಜ್ ಹಾಗೂ ಸರ್ವಸದಸ್ಯರ ಉಪಸ್ಥಿತಿಯೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಭಾಸ್ಕರ್ ಕೋಟ್ಯಾನ್‌ರವರ ಹೆತ್ತವರಾದ ಸದಾಶಿವ ಅಮೀನ್ ಮತ್ತು ಶ್ರೀಮತಿ ಜಾನಕಿ ಇವರ ಉಪಸ್ಥಿತಿಯಲ್ಲಿ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿತೇಶ್ ಎಕ್ಕಾರ್ ಇವರು ದೀಪಾವಳಿ ಹಬ್ಬದ […]

Read More

ಸಾರ್ವಜನಿಕ ಸಂವಹನ ತರಬೇತಿ ಶಿಬಿರ

ದಿನಾಂಕ 23-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಘಟಕದ ಸದಸ್ಯರಿಗಾಗಿ ಒಂದು ದಿನದ ಸಾರ್ವಜನಿಕ ಸಂವಹನ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ 2.30 ರ ತನಕ ಜರಗಿದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜೇಸೀ ಅಂತಾರಾಷ್ಟ್ರೀಯ ತರಬೇತುದಾರ ರಾಮಚಂದ್ರ ರಾವ್‌ರವರು ಸದಸ್ಯರು ಸಭೆಯಲ್ಲಿ ಮಾತನಾಡುವಾಗ ಯಾವ ರೀತಿ ಪೂರ್ವ ತಯಾರಿ ಮಾಡಬೇಕು, ಯಾವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬ ವಿಷಯವನ್ನು ತಿಳಿಸಿದರು. ನಂತರ ೨೫ ಮಂದಿಯ ಗುಂಪನ್ನು ಎರಡು ತಂಡಗಳಾಗಿ ವಿಂಗಡಿಸಿ […]

Read More

ಕತ್ತಲಿನಿಂದ ಬೆಳಕಿಗೆ ಕೂಳೂರು ಘಟಕದ ವಿನೂತನ ಕಾರ್ಯಕ್ರಮ

ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು. ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು, ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀಗುರು ವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇದ್ದಾವೆ. ಅಂಥವರನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲಾ ಸಾಮಾಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]

Read More

ಕಂಕನಾಡಿ ಯುವವಾಹಿನಿಯಿಂದ ಸಹಾಯ ಹಸ್ತ

ದಿನಾಂಕ 22-10-2016 ರಂದು ಕಂಕನಾಡಿ ಘಟಕದ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಗು ರಿಶಿತ್ ಕುಮಾರ್ ಅವರಿಗೆ ಧಾನಿಗಳ ಸಹಕಾರದಿಂದ ಒಟ್ಟು ಮಾಡಿದ ರೂ. 17,000/-ದ ಚೆಕ್‌ನ್ನು ಘಟಕಾಧ್ಯಕ್ಷರು ವಿತರಿಸುತ್ತಿರುವುದು.

Read More

ಆರೋಗ್ಯ ಮಾಹಿತಿ ಶಿಬಿರ

ದಿನಾಂಕ 5-10-2016 ರಂದು ಕೂಳೂರು ಘಟಕದ ವತಿಯಿಂದ ಕೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಸಭಾಂಗಣದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಶಿಬಿರ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞರಾದ ಡಾ. ಸದಾನಂದ ಪೂಜಾರಿಯವರು ಭಾಗವಹಿಸಿ ಮೂತ್ರರೋಗಗಳ ಬಗ್ಗೆ, ಕಿಡ್ನಿ ವಿಫಲತೆಯ ಕಾರಣಗಳು ಹಾಗೂ ಮೂತ್ರರೋಗವನ್ನು ಯಾವ ರೀತಿಯಲ್ಲಿ ತಡೆಗಟ್ಟಬಹುದು ಎಂಬ ಸಂಪೂರ್ಣ ಅರಿವನ್ನು ಸಭೆಗೆ ನೀಡಿದರು. ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಸಂಜೀವ ಪೂಜಾರಿಯವರನ್ನು ಸಭೆಯಲ್ಲಿ ವಂದಿಸಲಾಯಿತು. ಆರೋಗ್ಯ […]

Read More

ಪಡುಬಿದ್ರಿ ಘಟಕದ ವತಿಯಿಂದ ವಿಚಾರಗೋಷ್ಠಿ ಕಾರ್ಯಕ್ರಮ

ತುಳುನಾಡಿನ ಪರಂಪರೆ, ದೈವಾರಾಧನೆಯ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 88 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ ಘಟಕವು ಜಂಟಿಯಾಗಿ ನಡೆಸಿದ ಕೊಡಿಯಡಿತ ಸತ್ಯೊಲು ಎಂಬ ವಿಚಾರಗೋಷ್ಟಿಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ ಪುರಾತನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಮಹಿಳೆಯರೇ ದೈವಗಳಿಗೆ ದೀಪವಿಡುವ ಪರಿಕ್ರಮವಿದ್ದು ಕಾಲಾನಂತರ ಮಹಿಳೆಯರನ್ನು […]

Read More

ಗುರುಜಯಂತಿ ಆಚರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ದಿನಾಂಕ 25-9-2016 ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ಉಜ್ಜೋಡಿಯ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162 ನೇ ಜಯಂತಿ ಆಚರಣೆ ಹಾಗೂ ಗುರುಗಳ ಬಗ್ಗೆ ಶಾಲಾ ಮಕ್ಕಳಿಗೆ ಏರ್ಪಡಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಿತು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಸಿಂಚನ ಲೈಟಿಂಗ್ ಕಂಟ್ರೋಲ್‌ನ CEO ರತ್ನಾಕರ ಸುವರ್ಣ, ಮಾಜಿ […]

Read More

ಸುರತ್ಕಲ್ ಘಟಕದ ವತಿಯಿಂದ ಶ್ರೀ ಗುರುಸ್ಮರಣೆ ಕಾರ್ಯಕ್ರಮ

ದಿ. 18-09-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ಗುರುಜಯಂತಿ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮ ಜರಗಿತು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸುರತ್ಕಲ್ ಪರಿಸರದ ಆಮಂತ್ರಿತ ಭಕ್ತಿಗೀತೆ ಸಂಗೀತ ಬಳಗದವರಿಂದ ಭಕ್ತಿಗೀತೆ ಹಾಡುಗಾರಿಕೆ ಸಮೂಹ ಸ್ಪರ್ಧೆಯನ್ನು ಘಟಕದ ಮಾಜಿ ಅಧ್ಯಕ್ಷ ವಿಜಯ ಎಸ್. ಕುಕ್ಯಾನ್‌ರವರ ಸಂಚಾಲಕತ್ವದಲ್ಲಿ ಆಯೋಜಿಸಲಾಗಿತ್ತು. ಭಕ್ತಿಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಸುರತ್ಕಲ್ ಅಕ್ಷಯ ಡೆವಲಪರ್‍ಸ್‌ನ ಮಾಲಕ ಅಕ್ಷಯ ಎನ್. ಬಂಗೇರರವರು ಉದ್ಘಾಟಿಸಿದರು. ಈ ಸ್ಪರ್ಧಾ […]

Read More

ಮಂಗಳೂರು ಮಹಿಳಾ ಘಟಕದ ವಿವಿಧ ಕಾರ್ಯಕ್ರಮಗಳು

ತಾ. 3-9-2016 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಸದಸ್ಯರಿಗೆ ಫಿನಾಯಿಲ್ ಹಾಗೂ ಲಿಕ್ವಿಡ್ ಸೋಪ್ ತಯಾರಿಸುವುದರ ಬಗ್ಗೆ ಜರಗಿದ ಮಾಹಿತಿ ಶಿಬಿರ. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ಲೇಡಿಹಿಲ್ ವೃತ್ತದಿಂದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದವರೆಗೆ ಜರಗಿದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ವೆನ್‌ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೆ (ಮನೆಯವರಿಗೆ) ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕದಿಂದ ಏರ್ಪಡಿಸಲಾಗಿತ್ತು. […]

Read More

ಬೆಳುವಾಯಿ ಘಟಕದ ಪದಗ್ರಹಣ ಕಾರ್ಯಕ್ರಮ

ಬೆಳುವಾಯಿ ಘಟಕದ 2016-17 ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ತಾ. 18-9-2016 ರಂದು ಬೆಳುವಾಯಿಯ ಷಣ್ಮುಖಾನಂದ ಸಭಾಗೃಹದಲ್ಲಿ ಜರಗಿತು. ಕಾರ್ಯಕ್ರಮವನ್ನು ಮೂಡಬಿದ್ರೆಯ ಮಹಾವೀರ ಕಾಲೇಜಿನ ಉಪನ್ಯಾಸಕ ಹರೀಶ್ ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಸಮಾಜ ಸೇವಾ ಸಂಘ ಬೆಳುವಾಯಿ ಇದರ ಅಧ್ಯಕ್ಷ ರಾಜೇಶ್ ಸುವರ್ಣ ಬೆಳುವಾಯಿ ಇವರು ಭಾಗವಹಿಸಿದ್ದರು. ಘಟಕದ ಅಧ್ಯಕ್ಷ ವಿಠಲ್ ಎಂ. ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಾಧು ಪೂಜಾರಿಯವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!