22-01-2017, 9:18 AM
ದಿನಾಂಕ 22-1-2017 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಮಂಗಳೂರು, ದಿ ಕ್ರಿಶ್ಚಿಯನ್ ಎಜ್ಯುಕೇಶನ್ ಸೊಸೈಟಿ (ರಿ) ಮಂಗಳೂರು, ರೋಟರಿ ಕ್ಲಬ್ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ ಮತ್ತು I.A.S. ಮಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ UPSC/KAS/IBPS ಉಚಿತ ಪ್ರೇರಣಾ ಶಿಬಿರವು ಜರಗಿತು. ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಎಸ್‌ಪಿ ಭೂಷಣ್ ಗುಲಾಬ್ ರಾವ್ ಬೋರಸೆ IPS ಉದ್ಘಾಟಿಸಿ, ಮಾತನಾಡುತ್ತಾ ಸೇವಾ ಮನೋಭಾವ ಇರುವವರು ಕಠಿಣ ಅಭ್ಯಾಸ, ತರಬೇತು ಪಡೆದು ಜನ ಸೇವೆ ಮಾಡುವ ಮನೋಭಾವವಿದ್ದರೆ ಮಾತ್ರ ಐ.ಎ.ಎಸ್, ಕೆ.ಎ.ಎಸ್‌ನಂತಹ […]
Read More
14-01-2017, 12:41 PM
ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 14-1-2017 ರಂದು ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಸುವರ್ಣ ಆರೋಗ್ಯಕ್ಕೆ ಸುರಕ್ಷಾ ಯೋಜನೆಗಳು ಎಂಬ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಂಯೋಜಕರಾದ ಜಗನ್ನಾಥ್ ಶಿರ್ಲಾಲ್‌ರವರು ಆರೋಗ್ಯ ಸುರಕ್ಷಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸರಕಾರದಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸುರಕ್ಷಾ ಯೋಜನೆಗಳಿದ್ದು, ಆಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಜನರು […]
Read More
14-01-2017, 11:21 AM
ಯುವವಾಹಿನಿ (ರಿ) ಉಡುಪಿ ಘಟಕದ ನೇತೃತ್ವದಲ್ಲಿ ತಾ. 14-01-2017 ರಂದು ಉದ್ಯಾವರದ ಈಂದ್ ಬೈಲಿನ ಶ್ರೀಮತಿ ಗಿರಿಜಾ ಇವರಿಗೆ, ಯುವವಾಹಿನಿಯ ಮಹತ್ವಾಕಾಂಕ್ಷೆಯ ತಲೆಗೊಂದು ಸೂರು ಕಾರ್ಯಕ್ರಮದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಮಾನ್ಯ ಶಾಸಕರುಗಳಾದ ವಿನಯ ಕುಮಾರ್ ಸೊರಕೆ ಹಾಗೂ ಕೋಟ ಶ್ರೀನಿವಾಸ್ ಪೂಜಾರಿಯವರು ಶಿಲಾನ್ಯಾಸದ ಕಾರ್ಯವನ್ನು ನೆರವೇರಿಸಿದರು. ಯುವವಾಹಿನಿಯ ಸದಸ್ಯರು, ಊರ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸಾಂಗವಾಗಿ ನೆರೆವೇರಿತು. ಸುಮಾರು 3 ರಿಂದ 5 ಲಕ್ಷದ ಖರ್ಚಿನಲ್ಲಿ ಈ ಮನೆಯ ನಿರ್ಮಾಣ ಮಾಡಲಾಗುವುದು ಎಂದು ಉಡುಪಿ ಘಟಕದ ಅಧ್ಯಕ್ಷ […]
Read More
31-12-2016, 11:34 AM
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕಿಗೊಂದು ಅರ್ಥ ಬರಲು ಸಾಧ್ಯ ಮತ್ತು ನಾವು ಸಮುದಾಯ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಯ ಕಡೆಗೂ ದೃಷ್ಟ ಹಾಯಿಸಬೇಕು ಎಂದು ಪುತ್ತೂರು ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಜಯಂತ ನಡುಬೈಲು ತಿಳಿಸಿದರು. ಉಪ್ಪಿನಂಗಡಿ ಸ.ಮಾ.ಹಿ.ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಜರಗಿದ ಉಪ್ಪಿನಂಗಡಿ ಯುವವಾಹಿನಿಯ 2016-17 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಸಮಾನ […]
Read More
29-12-2016, 11:43 AM
ದಿನಾಂಕ 29-12-2016 ರಂದು ಕಂಕನಾಡಿ ಘಟಕದ ವತಿಯಿಂದ ಶ್ರೀ ಮಹಾಂಕಾಳಿ ದೈವಸ್ಥಾನದಲ್ಲಿ ವಾರದ ಪೂಜೆ ಹಾಗೂ ಭಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಅಲ್ಲದೆ ದೈವಸ್ಥಾನಕ್ಕೆ 50 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಸಲಹೆಗಾರರಾದ ಜಿ. ಪರಮೇಶ್ವರ ಪೂಜಾರಿ, ಘಟಕದ ಅಧ್ಯಕ್ಷ ಹರೀಶ್ ಕೆ. ಸನಿಲ್, ಶ್ರೀ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಘಟಕದ ಕಾರ್ಯದರ್ಶಿ ಭವಿತ್‌ರಾಜ್ ಹಾಗೂ ನಿಕಟಪೂರ್ವ ಅಧ್ಯಕ್ಷ ಶೇಖರ್ ಅಮೀನ್ ಉಪಸ್ಥಿತರಿದ್ದರು.
Read More
25-12-2016, 11:45 AM
ಶಿಕ್ಷಣವು ಇಂದಿನ ಮೊದಲ ಅವಶ್ಯಕತೆಯಾಗಬೇಕು. ಪಠ್ಯ ಕೇಂದ್ರಿತ ಶಿಕ್ಷಣದ ಜೊತೆಗೆ ಕೌಶಲ ಅಭಿವೃದ್ಧಿಗೊಳಿಸುವ ತರಬೇತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಸ್ಪರ್ಧಾತ್ಮಕವಾದ ಯುಗವು ಬದುಕಿನ ಎಲ್ಲಾ ರಂಗಗಳಲ್ಲೂ ಸವಾಲನ್ನು ಎದುರು ಹಾಕುತ್ತದೆ. ಸವಾಲುಗಳನ್ನು ಧಾಟಿ ಬದುಕು ಕಟ್ಟಿಕೊಳ್ಳುವ ತುರ್ತು ವರ್ತಮಾನದ್ದಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರಿಯಾಶೀಲರಾಗಬೇಕು. ಅದಕ್ಕೆ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಅಭಿಪ್ರಾಯಪಟ್ಟರು. ಅವರು ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ […]
Read More
25-12-2016, 11:39 AM
ಶಿಕ್ಷಣವು ಮಾನವನನ್ನು ಪರಿಪೂರ್ಣ ಮಾನವೀಯ ಪ್ರಜ್ಞೆಯ ನಾಗರಿಕನನ್ನಾಗಿಸುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಚಟುವಟಿಕೆಯ ಜೊತೆಗೆ ಜೀವನ ಮೌಲ್ಯ, ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳುವ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣದ ಅಗತ್ಯತೆಯೂ ಇದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯುವ ಹಂತದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಬೇಕು. ನಿರಂತರ ಪರಿಶ್ರಮದ ಮೂಲಕ ಗುರಿಯನ್ನು ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಅನ್ವೇಷಣಾ-2016 ನಂತಹ ಕಾರ್ಯಾಗಾರಗಳ ಅಗತ್ಯತೆ ಇದೆ ಎಂದು ಕಕ್ಯಪದವು ಎಲ್.ಸಿ.ಆರ್. ವಿದ್ಯಾಸಂಸ್ಥೆಯ ಸಂಸ್ಥಾಪಕ ರೋಹಿನಾಥ ಪಾದೆ ಅಭಿಪ್ರಾಯಪಟ್ಟರು. ಅವರು ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ […]
Read More
25-12-2016, 11:18 AM
ದಿನಾಂಕ 25-12-2016 ರಂದು ಸಾಬರ ಕಟ್ಟೆಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಯಡ್ತಾಡಿ ಘಟಕದ ವತಿಯಿಂದ ಜರಗಿದ ಕೋಟ ಹೋಬಳಿ ಮಟ್ಟದ ಬಿಲ್ಲವರ 6ನೇ ಸಾಹಿತ್ಯಿಕ-ಸಾಂಸ್ಕೃತಿಕ ಸಮ್ಮೇಳನ ’ದೀವಿಗೆ-2016’ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿಯವರು ಭಾಷಣ ಮಾಡುತ್ತಿರುವುದು.
Read More
19-12-2016, 11:37 AM
ಯುವವಾಹಿನಿ (ರಿ) ಮೂಲ್ಕಿ ಘಟಕದ ವತಿಯಿಂದ ದಿನಾಂಕ 19-12-2016 ರಂದು ಸರಕಾರಿ ಪ್ರೌಢಶಾಲೆ ಸದಾಶಿವ ನಗರ ಇಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆ ಮತ್ತು ತರಬೇತಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕರಾದ ಅಶೋಕ್ ಜಂಬಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಕ್ರೀಡಾಪಟು ಕಾರ್ತಿಕ್ ಎಸ್. ಕಟೀಲ್‌ರವರು ಸುಮಾರು ಒಂದೂವರೆ ಗಂಟೆಗಳ ಕಾಲ ಶಾಲಾ ವಿದ್ಯಾರ್ಥಿನಿಯರಿಗೆ ಪ್ರಾತ್ಯಕ್ಷತೆಯ ಮೂಲಕ ಉತ್ತಮ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಚೇತನ್ ಕುಮಾರ್‌ರವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ […]
Read More
18-12-2016, 11:32 AM
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಅಪೂರ್ವವಾದ, ಬಿಲ್ಲವ ಸಮಾಜದ ’ವಧೂವರರ ಸಮಾವೇಶ’ ಬಿಲ್ಲವ ಸಮಾಜ ಬಾಂಧವರ ಅಭೂತಪೂರ್ವ ಸ್ಪಂದನೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಮಹಿಳಾ ಘಟಕದ ಸಾಮಾಜಿಕ ಕಳಕಳಿಯ ವೈಶಿಷ್ಟ್ಯಪೂರ್ಣ ಪರಿಕಲ್ಪನೆಯೊಂದಿಗೆ ಯುವವಾಹಿನಿ (ರಿ) ಕೇಂದ್ರ ಸಮಿತಿ ಮತ್ತು ಇತರ ಘಟಕಗಳ ಸಹಕಾರದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದಿನಾಂಕ 18-12-2016 ರಂದು ಜರಗಿದ ಸಮಾವೇಶವು ಯುವವಾಹಿನಿಯ ಚಟುವಟಿಕೆಗಳಲ್ಲಿ ಒಂದು ಮೈಲುಗಲ್ಲಾಗಿ ಇತಿಹಾಸ ನಿರ್ಮಿಸಿತು. ಒಂದು ಮಹತ್ವಪೂರ್ಣ ಯೋಚನೆ, ಯೋಜನೆಯೊಂದಿಗೆ ಬಹಳಷ್ಟು […]
Read More