15-03-2017, 5:36 AM
ಕಾಂತಬಾರೆ ಬೂದಬಾರೆ ಜನ್ಮಕ್ಷೇತ್ರ ಕೊಲ್ಲೂರು ಇದರ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪ್ರಯುಕ್ತ ಒಂಬತ್ತು ಮಾಗಣೆಯ ಭಕ್ತಾಧಿಗಳಿಂದ ದಿನಾಂಕ 15-03-2017ರಂದು ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂಧರ್ಭದಲ್ಲಿ ಮೂಲ್ಕಿ ಯುವವಾಹಿನಿಯ ವತಿಯಿಂದ ಹೊರೆಕಾಣಿಕೆಯನ್ನು ಸಮರ್ಪಿಸಿ ಶ್ರೀ ಕ್ಷೇತ್ರದಲ್ಲಿ ಮೂಲ್ಕಿ ಯುವವಾಹಿನಿ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Read More
12-03-2017, 12:34 PM
ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿದ ಯುವವಾಹಿನಿ(ರಿ) ಮಂಗಳೂರು ಘಟಕದ 2017-18ನೇ ಪದಗ್ರಹಣ ಸಮಾರಂಭ ಜರುಗಿತು. 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ಅದ್ಯಕ್ಷ : ರವೀಶ್ ಕುಮಾರ್ ಉಪಾಧ್ಯಕ್ಷ : ನವೀನ್ ಚಂದ್ರ ಕಾರ್ಯದರ್ಶಿ : ಪ್ರವೀಣ್ ಕುಮಾರ್ ಕಿರೋಡಿ ಜತೆ ಕಾರ್ಯದರ್ಶಿ : ಯತೀಶ್ ಬಳಂಜ ಕೋಶಾಧಿಕಾರಿ : ಸದಾನಂದ ಕುಳಾಯಿ ಸಂಘಟನಾ ಕಾರ್ಯದರ್ಶಿ : ಜೈ ಕುಮಾರ್ ನಿರ್ದೇಶಕರು ನಾರಾಯಣಗುರು ತತ್ವ ಪ್ರಚಾರ : […]
Read More
12-03-2017, 12:31 PM
ಮಂಗಳೂರು ಯುವವಾಹಿನಿಯ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಮೆ. ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿತು. ಈ ಶುಭ ಸಂದರ್ಭದಲ್ಲಿ ಮಂಗಳೂರು ಯುವವಾಹಿನಿ ಸದಸ್ಯರಾದ ಸಮಾಜ ಸೇವಕ ಸಂಘಟಕರು ದೇವೇಂದ್ರ ಕೋಟ್ಯಾನ್, ಉದ್ಯಮಿ ಸಂಘಟಕರು ಸಾಧಕ ಉಮಾನಾಥ, ನಿಸ್ವಾರ್ಥ ಸೇವಕ ಶ್ರೀಕಾಂತ್ ಇವರುಗಳ ಸಾಧನೆಯನ್ನು ಗುರುತಿಸಿ ಗೌರವಿಸಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅದ್ಯಕ್ಷ ಪ್ರಭಾಕರ್ ಎಸ್. ಪೂಜಾರಿ, […]
Read More
12-03-2017, 12:28 PM
ಕಣ್ಣು ಸರಿಯಾಗಿದ್ದಲ್ಲಿ ಜಗತ್ತನ್ನು ಪ್ರೀತಿಸಬಹುದು, ಆದರೆ ನಾಲಿಗೆ ಸರಿಯಾಗಿದ್ದಲ್ಲಿ ಜಗತ್ತು ನಮ್ಮನ್ನು ಪ್ರೀತಿಸುತ್ತದೆ. ದುಶ್ಚಟಗಳನ್ನು ತೊರೆದು ಜ್ಞಾನದ ಮಾರ್ಗದಲ್ಲಿ ನಡೆದಾಗ ಮನೆ ಮನೆಯಲ್ಲೂ ದೇವಸ್ಥಾನದ ನಿರ್ಮಾಣ ಸಾಧ್ಯ. ಅವಮಾನಗಳ ಹಿಂದಿರುವ ನೋವಿನಿಂದ ನಮ್ಮ ಹಿರಿಯರು ಸಂಘಟನೆಗಳ ರಚನೆ ಮಾಡಿದರು. ಮನಸ್ಸು ಮನಸ್ಸುಗಳನ್ನು ಬೆಸೆಯುವ ಆದರ್ಶ, ಸಂವಿಧಾನ ಬದ್ದ ಸಂಘಟನೆ ಯುವವಾಹಿನಿ ಎಂದು ಮಂಗಳೂರು ಸಂತ ಎಲೋಶಿಯಸ್ ಕಾಲೇಜ್ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು. ಅವರು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ […]
Read More
12-03-2017, 11:50 AM
ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಅಭಿವ್ಯಕ್ತಿ – ಅಭಿಪ್ರಾಯಗಳ ನಿರೂಪಣೆ ಕಾರ್ಯಕ್ರಮವು ದಿನಾಂಕ 12.03.2017 ನೇ ಆದಿತ್ಯವಾರ ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದಲ್ಲಿ ಜರುಗಿತು. ಅಭಿಪ್ರಾಯಗಳ ನಿರೂಪಣೆ ಮಾಡಿದ ಸಹನಾ ಕುಂದರ್ – ಈ ಜಗತ್ತು ಗಂಡು ಹೆಣ್ಣು ಇಬ್ಬರನ್ನೂ ಅವಲಂಬಿಸಿದೆ. ಟಿವಿ ಸೀರಿಯಲ್ಗಳ ಭ್ರಮೆಯಿಂದ ಮಹಿಳೆಯರು ಹೊರ ಬರಬೇಕು. ನಮ್ಮ ರಕ್ತದಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ನಾವು ಬಲಿಯಾಗಿದ್ದೇವೆ. ಮಹಿಳೆಯರು ಸಂಸ್ಕೃತಿ ಸಂಸ್ಕಾರದ ಬಗ್ಗೆ ಜಾಗೃತರಾದಾಗ […]
Read More
12-03-2017, 5:54 AM
ಬೆಳ್ತಂಗಡಿ ಯುವವಾಹಿನಿ ಆಶ್ರಯದಲ್ಲಿ ಮೂಡುಕೋಡಿಯಲ್ಲಿ ದಿನಾಂಕ 12.03.2017 ನೇ ಆದಿತ್ಯವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ. ಕೆ ವಸಂತ ಬಂಗೇರ ಮತ್ತು ಸುಜಿತಾ ವಿ ಬಂಗೇರ, ಗ್ರಾಮದ ಪ್ರಥಮ ಬಿಲ್ಲವ ಸಮಾಜದ ಪೊಲೀಸ್ ಕಾನ್ಸ್‌ಸ್ಟೇಬಲ್ ಶೈಲೇಂದ್ರ ಕೆ ಕೋಳಂಗಜೆಗುತ್ತು, ನ್ಯಾಯವಾದಿ ಹರೀಶ್ ಪಿ ಎನ್ ,ಝೀ ಟಿವಿ ಕಾಮಿಡಿ ಕಿಲಾಡಿ ಕಲಾವಿದ ಅನೀಶ್ ಅಮೀನ್, ಚರ್ಮವಾದ್ಯ ಪ್ರವೀಣ ಪ್ರಭಾಕರ್ ಪೂಜಾರಿ ಉರುಂಜಿಬೆಟ್ಟು, […]
Read More
12-03-2017, 5:43 AM
ಇಂದು ಬಡವರ ಮಕ್ಕಳು ಸಹ ಶಿಕ್ಷಣ ಪಡೆಯಲು ಅವಕಾಶ ಇದೆ. ಪೋಷಕರು ಇದನ್ನು ಮನಗಂಡು ಮಕ್ಕಳ ವಿದ್ಯೆಗೆ ಪ್ರಾಮುಖ್ಯ ನೀಡಬೇಕು ವಿದ್ಯಾರ್ಜನೆಯಿಂದ ವಂಚಿಸಿದರೆ ದೇವರ ಶಾಪಕ್ಕೆ ಗುರಿಯಾಗುವಿರಿ ಎಂದು ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ ವಸಂತ ಬಂಗೇರ ತಿಳಿಸಿದರು. ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮೂಡುಕೋಡಿ ಗ್ರಾಮದ ಬಿಲ್ಲವ ಭಾಂದವರಿಗೆ ನಾರಾಯಣಗುರು, ಕೋಟಿ ಚೆನ್ನಯ, ಕಿಮ್ಮಲೆ ನಾಗಬ್ರಹ್ಮರ ಉಚಿತ ಭಾವಚಿತ್ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ […]
Read More
05-03-2017, 11:28 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ತಾ 5-3-2017 ನೇ ಆದಿತ್ಯವಾರ ಯುವವಾಹಿನಿ ಅಂತರ್ ಘಟಕ ಮಹಿಳಾ “ದೇಯಿ ಬೈದ್ಯೆದಿ ಕ್ರೀಡಾಕೂಟ” ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜು ಮೈದಾನದಲ್ಲಿ ನಡೆಯಿತು. ಕ್ರೀಡೆಯು ಮಾನವೀಯ ಸಂಬಂಧ ಬೆಸೆದು ಸಾಮರಸ್ಯ ಮೂಡಿಸುತ್ತದೆ. ಯುವವಾಹಿನಿ ಮಹಿಳಾ ಘಟಕವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದು ಕುದ್ರೋಳಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಲತಾ ಎನ್. ಸುವರ್ಣರವರು ಕ್ರೀಡಾಕೂಟ ಉದ್ಘಾಟಿಸಿ ತಿಳಿಸಿದರು. ಯುವವಾಹಿನಿ ಕೆಂದ್ರಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಮಹಿಳಾ ಘಟಕದ […]
Read More
05-03-2017, 7:07 AM
ಸುರತ್ಕಲ್ ಯುವವಾಹಿನಿ ಕುಟುಂಬ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವು ದಿನಾಂಕ 05.03.2017 ನೇ ಆದಿತ್ಯವಾರ ಪ್ರಕೃತಿಯ ರಮಣೀಯ ಸ್ಥಳವಾದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಜರುಗಿತು. ಯುವವಾಹಿನಿ ಸುರತ್ಕಲ್ ಘಟಕದ ಅದ್ಯಕ್ಷ ರವೀಂದ್ರ ಕೋಟ್ಯಾನ್, ನಿಕಟಪೂರ್ವ ಅದ್ಯಕ್ಷ ಭಾಸ್ಕರ್ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ, ಉಪಾಧ್ಯಕ್ಷ ಯಶವಂತ ಪೂಜಾರಿ ಮತ್ತಿತರ ಗಣ್ಯರು ಸೇರಿದಂತೆ 60ಕ್ಕೂ ಹೆಚ್ಚು ಕುಟುಂಬ ಸದಸ್ಯರು ಭಾಗವಹಿಸಿದ್ದರು ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ಸಡೆಸಲಾಯುತು. ಸುರತ್ಕಲ್ ಯುವವಾಹಿನಿ ಕಾರ್ಯದರ್ಶಿ ರಿತೇಶ್ ಕುಮಾರ್ […]
Read More
03-03-2017, 5:00 AM
ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಸುಧಾರಣಾ ಅಭಿಯಾನ ನಡೆಸುತ್ತಿರುವ ಹಾಗೂ ಬಂಟ್ವಾಳ ದಡ್ಡಲಕಾಡು ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅದ್ಯಕ್ಷ ಶ್ರೀ ಪ್ರಕಾಶ್ ಅಂಚನ್ ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಗಣನೀಯ ಸಾಧನೆಯನ್ನು ಗುರುತಿಸಿ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ದಿನಾಂಕ 03.03.2017 ನೇ ಶುಕ್ರವಾರದಂದು ಜರುಗಿದ ಹುಟ್ಟೂರ ಅಭಿನಂದನಾ ಸಮಾರಂಭದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ […]
Read More