22-04-2017, 12:03 PM
ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ದಿನಾಂಕ 22.04.2017 ನೇ ಶನಿವಾರ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಭಾಭವನದಲ್ಲಿ ರಕ್ತದಾನ ಶಿಬಿರ ಜರುಗಿತು. ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದ ಅದ್ಯಕ್ಷರಾದ ಜಯಂತ ನಡುಬೈಲು ಶಿಬಿರ ಉದ್ಘಾಟಿಸಿ ಮಾತನಾಡಿ ಮನುಷ್ಯನ ಶರೀರದಲ್ಲಿ ಹರಿಯುವ ರಕ್ತ ಒಂದೇ, ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರುತ್ತದೆ ಎಂದು ತಿಳಿಸಿದರು. ಯುವವಾಹಿನಿ […]
Read More
22-04-2017, 9:28 AM
ಯುವವಾಹಿನಿ ಸುರತ್ಕಲ್ ಹಾಗೂ ಯುವವಾಹಿನಿ ಸಸಿಹಿತ್ಲು ಘಟಕಗಳ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಇದರ ಸಹಯೋಗದೊಂದಿಗೆ ದಿನಾಂಕ 22.04.2017ನೇ ಶನಿವಾರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ,ಸಸಿಹಿತ್ಲು ಇಲ್ಲಿ ಸಂಚಾರಿ ನಿಯಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಜರುಗಿತು ಟ್ರಾಫಿಕ್ ಇನ್ಸ್‌ಪೆಕ್ಟರ್ ಮಂಜುನಾಥ್ ನಾಯಕ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಸಂಚಾರಿ ನಿಯಮಗಳು, ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸುರತ್ಕಲ್ […]
Read More
21-04-2017, 3:30 PM
ಯುವವಾಹಿನಿ ಪಣಂಬೂರು ಘಟಕದ ಸದಸ್ಯರು ದಿನಾಂಕ 22.04.2017 ರಿಂದ. 24.04.2017 ರ ವರಗೆ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು 50 ಸದಸ್ಯರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು
Read More
18-04-2017, 2:17 PM
ಯುವವಾಹಿನಿ (ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಮಹಿಳೆಯರಿಗಾಗಿ ವೈವಿಧ್ಯಮಯ ಹಾಗೂ ವಿಶಿಷ್ಟ ವಿನ್ಯಾಸದ ಕೇಶ ವಿನ್ಯಾಸ ಕಾರ್ಯಾಗಾರ ದಿನಾಂಕ 18.04.2017 ರಂದು ಜರುಗಿತು. ಯುವವಾಹಿನಿ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಹಾಗೂ ಬ್ಯುಟಿಷೀಯನ್ ಶ್ರೀಮತಿ ವಿದ್ಯಾ ರಾಕೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಹಾಗೂ ಈ ಸಂದರ್ಭದಲ್ಲಿ ಸರಳ ವಿಧಾನಗಳ ಮೂಲಕ ಮಹಿಳೆಯರ ಸೌಂದರ್ಯ ಹೆಚ್ಚಿಸುವ ಮೇಕಪ್ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರಿನ ಗೋರಿಗುಡ್ಡದಲ್ಲಿ ಜರುಗಿದ ಈ ಕಾರ್ಯಾಗಾರದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು […]
Read More
16-04-2017, 12:35 PM
ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ಯುವ ಜನಾಂಗದಲ್ಲಿ ಹೊಸ ಹುರುಪು ಮೂಡಿಸುವ ಕಾರ್ಯ ಮಾಡುತ್ತಿರುವ ಬಜಪೆ ಯುವವಾಹಿನಿಯು ಉತ್ತಮ ದಾರಿಯಲ್ಲಿ ಮುನ್ನಡೆಯುತ್ತಿದೆ ಎಂದು ರೋಟರಿ ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಾಲ್ಯಾನ್ ತಿಳಿಸಿದರು. ಅವರು ಯುವವಾಹಿನಿ(ರಿ) ಬಜಪೆ ಘಟಕದ ಆಶ್ರಯದಲ್ಲಿ ದಿನಾಂಕ 16.04.2017 ನೇ ಆದಿತ್ಯವಾರ ಬೆಳಗ್ಗೆ ಬಜಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಜರುಗಿದ ಬಿಸು […]
Read More
16-04-2017, 12:35 PM
ಮಹಿಳೆಯರು ಪುರುಷರಿಗಿಂತ ಮಾನಸಿಕವಾಗಿ ದೈಹಿಕವಾಗಿ ಬಲಾಡ್ಯರು ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಮಾನವ ಧನಾತ್ಮಕ ಮತ್ತು ಋಣಾತ್ಮಕವೂ ಆದ ಚಿಂತನೆ ಮತ್ತು ಗುಣಗಳ ವಿಭಿನ್ನ ರೀತಿಯ ಸಂಕೇತ ತನ್ನಲ್ಲಿರುವ ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಗೌರವ ಪಡೆದುಕೊಳ್ಳುತ್ತಾರೆ. ಇಂತಹ ಗುಣವಂತರನ್ನು ಸಮಾಜ ಅರಸಿಕೊಂಡು ಬರುತ್ತದೆ, ಆದ್ದರಿಂದ ಮನಸ್ಸು ಮನಸ್ಸುಗಳ ಮಧ್ಯೆ ಸೇತುವೆ ನಿರ್ಮಾಣದ ಕಾರ್ಯ ನಾವು ಮಾಡಬೇಕಾಗಿದೆ ಎಂದು ಬೆಳ್ತಂಗಡಿ DKRDS ಯೋಜನಾಧಿಕಾರಿ ಶೈಲು ಬಿರ್ವ ಅಗತ್ತಾಡಿ ಅಭಿಪ್ರಾಯಪಟ್ಟರು. ಅವರು 16.04.2017 […]
Read More
16-04-2017, 4:16 AM
ವಿದ್ಯೆ ಉದ್ಯೋಗ ಸಂಪರ್ಕ ಎಂಬ ಮೂರು ಮುಖ್ಯ ಉದ್ದೇಶಗಳೊಂದಿಗೆ ಹಳೆಯಂಗಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾದುದು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ತಿಳಿಸಿದರು. ಅವರು ದಿನಾಂಕ 16.04.2017 ನೇ ಆದಿತ್ಯವಾರ ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಜರುಗಿದ ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2017-18 ನೇ ಸಾಲಿನ ನೂತನ ಪದಾದಿಕಾರಿಗಳ ಪದಪ್ರಧಾನ ನೆರವೇರಿಸಿ ಮಾತನಾಡಿದರು. ಕಟೀಲು ಮೇಳದ ಸುಪ್ರಸಿದ್ಧ ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ ಇವರು ಯಕ್ಷಗಾನ ತರಬೇತಿ ತರಗತಿಯನ್ನು ಉದ್ಘಾಟಿಸಿ, ಜಿಲ್ಲೆಯ […]
Read More
09-04-2017, 10:09 AM
ಉಪ್ಪಿನಂಗಡಿ ಯುವವಾಹಿನಿಯ ಮಾಸಿಕ ಸಭೆಯು ದಿನಾಂಕ 09-04-2017 ರಂದು ಉಪ್ಪಿನಂಗಡಿಯ ಸಹಸ್ರ ಕೋಚಿಂಗ್ ಸೆಂಟರ್‌ನಲ್ಲಿ ನಡೆಯಿತು. ಸಭೆಯಲ್ಲಿ ಯುವವಾಹಿನಿಯ ಧ್ಯೇಯೋದ್ದೇಶ ಮತ್ತು ಸಂಘಟನೆ ಹಾಗೂ ನಾಯಕತ್ವ ಈ ವಿಚಾರಗಳ ಕುರಿತು ಮಾಹಿತಿ ಕಾರ್ಯಾಗಾರ ಜರುಗಿತು . ಯುವವಾಹಿನಿಯ ದ್ಯೇಯ ಉದ್ದೇಶಗಳು ಹಾಗೂ ನೀತಿ ನಿಬಂಧನೆಗಳ ಕುರಿತು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ ಮಾಹಿತಿ ನೀಡಿದರು. ಸಂಘಟನೆಯ ಮತ್ತು ನಾಯಕತ್ವದ ಬಗ್ಗೆ ಡಾ.ರಾಜರಾಮ್ ತರಬೇತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಯುವವಾಹಿನಿಯ ಅಧ್ಯಕ್ಷರಾದ ಅಶೋಕ್ […]
Read More
09-04-2017, 6:32 AM
ಸಂಘಟನೆಯ ಮೂಲಕ ಸಮಾಜವನ್ನು ಕಟ್ಟಿ ಯುವಕರನ್ನು ಒಗ್ಗೂಡಿಸುವ ಶ್ರೇಷ್ಠ ಕಾರ್ಯ ಯುವವಾಹಿನಿ ಮಾಡುತ್ತಿದೆ. ಕ್ರೀಡಾಕೂಟದ ಮೂಲಕ ಯುವ ಮನಸ್ಸುಗಳನ್ನು ಬೆಸೆದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕಾರ್ಯವನ್ನು ಯುವವಾಹಿನಿಯಂತಹ ಯುವಕರ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೂಲ್ಕಿ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ಹೇಳಿದರು. ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ. 09.04.2017 ನೇ ಆದಿತ್ಯವಾರ ವೇಣೂರು ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬಿಲ್ಲವ ಸಮಾಜ ಭಾಂದವರಿಗಾಗಿ ಜರುಗಿದ ಕ್ರಿಕೆಟ್ ಪಂದ್ಯ ಯುವವಾಹಿನಿ […]
Read More
04-04-2017, 4:39 AM
ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 25.04.2017 ನೇ ಮಂಗಳವಾರದಂದು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಕಛೇರಿಯಲ್ಲಿ ಸಂಚಾರಿ ನಿಯಮಗಳ ಮಾಹಿತಿ ಕಾರ್ಯಾಗಾರ ಜರುಗಿತು. ಮಂಗಳೂರು ಉತ್ತರ ವಲಯದ ಟ್ರಾಫಿಕ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು ಸಂಚಾರಿ ನಿಯಮಗಳ ಪಾಲನೆ,ಅನಾಹುತಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು ಯುವವಾಹಿನಿ ಮಂಗಳೂರು ಘಟಕದ ವಾರದ ಸಾಪ್ತಾಹಿಕ ಸಭೆಯಲ್ಲಿ ಜರುಗಿದ ಈ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 75ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ […]
Read More