17-08-2017, 3:42 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 17.08.2017 ರಂದು ಪರಪಾದೆ ಸರಕಾರಿ ಶಾಲೆಯಲ್ಲಿ ಆವರಣದಲ್ಲಿ ಔಷಧೀಯ ಸಸ್ಯ ಹಾಗೂ ಇತರ ಉಪಯುಕ್ತ ಸಸ್ಯಗಳನ್ನು ನೀಡಲಾಯಿತು. ಅರಣ್ಯ ಇಲಾಖೆಯ ರೇಂಜರ್ ಶ್ರೀಧರ್ ಇವರು ಈ ಕಾರ್ಯಕ್ರಮಕ್ಜೆ ಸಹಕಾರ ನೀಡಿದರು. ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ, ಕಾರ್ಯದರ್ಶಿ ಸುನೀತಾ ಮತ್ತಿತರರು ಉಪಸ್ಥಿತರಿದ್ದರು.
Read More
15-08-2017, 1:35 PM
ಯುವವಾಹಿನಿ (ರಿ) ಮುಲ್ಕಿ ಘಟಕ ಇದರ ವತಿಯಿಂದ ಯೂನಿಯನ್ ಕ್ಲಬ್ ಮುಲ್ಕಿಯಲ್ಲಿ 71ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬಿಲ್ಲವ ಸಮಾಜ ಸೇವಾ ಸಂಘ (ರಿ) ಮುಲ್ಕಿ ಇದರ ಉಪಾಧ್ಯಕ್ಷರಾದ ಶ್ರೀ ರಮೇಶ್ ಅಮೀನ್ ಕೊಕ್ಕರ್ಕಲ್ ಧ್ವಜಾರೋಹಣ ನೆರವೇರಿಸಿದರು.ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಕುಬೆವೂರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಸತೀಶ್ ಕಿಲ್ಪಾಡಿ ಧನ್ಯವಾದ ನೀಡಿದರು. ತದನಂತರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಮುಲ್ಕಿಯಲ್ಲಿ, ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರಾದ […]
Read More
15-08-2017, 1:28 PM
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದಿನಾಂಕ 15.08.2017ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ,ರೋಟರಿ ಕ್ಲಬ್ ಸುಳ್ಯ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ ರೋಟರಿ ಸಮುದಾಯ ಭವನ ರಥಬೀದಿ ಸುಳ್ಯದಲ್ಲಿ ಜರುಗಿತು.ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ ಮೆಡಿಕಲ್ ಆಫೀಸರ್ ಡಾ|ರಾಮಚಂದ್ರ ಭಟ್ ರಕ್ತದಾನ ದ ಮಹತ್ವ ವಿವರಿಸಿದರು. ಯುವವಾಹಿನಿ ಸುಳ್ಯ ಘಟಕ ಸದಸ್ಯರು ಇದರಲ್ಲಿ ಪಾಲ್ಗೊಂಡು ಹೆಚ್ಚಿನ ಸಂಖ್ಯೆ ಯಲ್ಲಿ ರಕ್ತದಾನ ಮಾಡಿದರು.
Read More
15-08-2017, 9:24 AM
ಉಡುಪಿಯ ಶ್ರೀ ಕಿಶೋರ್ ಮತ್ತು ಶ್ರೀಮತಿ ಪ್ರೇಮಲತಾ ದಂಪತಿಗಳ ಸುಪುತ್ರಿ. ಕಲ್ಯಾಣಪುರ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಪ್ರತೀಕ್ಷಾ ಕೆ. ಇವರು ವಾಲಿಬಾಲ್ ಕ್ರೀಡೆಯಲ್ಲಿ ಮಿಂಚುತ್ತಿರುವ ಧ್ರುವತಾರೆ. ಓರ್ವ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಂಡಿರುವ ಸಾಧಕಿ ಇವರು 2014ರಲ್ಲಿ ನಡೆದ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ, 2015 ರಲ್ಲಿ ಬೆಂಗಳೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ದ್ವಿತೀಯ, 2016ರಲ್ಲಿ ಮಂಗಳೂರಿನಲ್ಲಿ […]
Read More
15-08-2017, 8:44 AM
ಯುವವಾಹಿನಿ (ರಿ) ಯಡ್ತಾಡಿ ಘಟಕದ ಆಶ್ರಯದಲ್ಲಿ 71 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದಿನಾಂಕ 15.08.2017 ರಂದು ವನಮಹೋತ್ಸವ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತುಯಡ್ತಾಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ವೈ ವಿಠಲ ಹೆಗ್ಡೆಯವರು ಕಾರ್ಯಕ್ರಮ ಉದ್ಘಾಟಿಸಿದರು.ಯಡ್ತಾಡಿ ಪಟ್ಟಣದ ಪರಿಸರ ಹಾಗೂ ಸ್ಥಳೀಯ ರುದ್ರ ಭೂಮಿ ಯನ್ನು ಸ್ವಚ್ಚ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷರಾದ ಶಂಕರ ಪೂಜಾರಿ, ಕಾರ್ಯದರ್ಶಿ ಮಂಜುನಾಥ ಪೂಜಾರಿ, ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಪೂಜಾರಿ, ಪ್ರಕಾಶ್ ಪೂಜಾರಿ […]
Read More
13-08-2017, 1:15 PM
ಕಲಿಯಲು ಮನಸ್ಸಿದ್ದರೂ ಬಡತನವು ಬಿಡುವುದಿಲ್ಲ. ಎಲ್ಲಾ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಕಾಣಬಹುದು. ಈ ಸಂದರ್ಭದಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಂದ ಅಥವಾ ಸರಕಾರದಿಂದ ಕೊಡಲ್ಪಡುವ ಸವಲತ್ತುಗಳನ್ನು ಪಡೆಯಲು ವಿದ್ಯಾರ್ಥಿಗಳು ಹಿಂಜರಿಯದೆ ಮುಂದೆ ಬಂದು ವಿದ್ಯಾಭ್ಯಾಸವನ್ನು ಮುಂದುವರೆಸಿ ಸಮಾಜದ ಉತ್ತಮ ಸ್ಥಾನದಲ್ಲಿ ನಿಲ್ಲುವಂತಾಗಬೇಕು ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಹೇಳಿದರು. ದಿನಾಂಕ:13.08.2017 ರಂದು ಯುವವಾಹಿನಿ(ರಿ) ಪುತ್ತೂರು ಘಟಕದ ಆಶ್ರಯದಲ್ಲಿಬೆಳಿಗ್ಗೆ ಬಪ್ಪಳಿಗೆ-ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಶೈಕ್ಷಣಿಕ ಸವಲತ್ತುಗಳ […]
Read More
13-08-2017, 7:34 AM
ತುಳುನಾಡಿನಾದ್ಯಂತ ನಡೆಯುತ್ತಿರುವ ಆಟಿಡೊಂಜಿ ದಿನ,ಕೆಸರ್ ಡ್ ಒಂಜಿ ದಿನ ಮುಂತಾದ ಕಾರ್ಯಕ್ರಮಗಳನ್ನು ಸಡಗರ, ಸಂಭ್ರಮದಿಂದ ಮಾಡುತ್ತಿದ್ದೇವೆ.. ಈ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಿರದೆ, ನಮ್ಮ ವಿರಾಮದ ವೇಳೆಯಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ. ಕೃಷಿ ಚಟುವಟಿಕೆಗಳಿಗೆ ನಾವು ಮೈಯೊಡ್ಡಿದರೆ, ನಮ್ಮ ಆರೋಗ್ಯವೃದ್ಧಿಯಾಗುವುದು.ಕೃಷಿಕರಾಗಿ ಬದುಕಿದ ನಮ್ಮ ಗುರುಹಿರಿಯರ ಆರೋಗ್ಯದ ಗುಟ್ಟು ಇದೇ ಎಂದು ಅಡ್ವೆ ರವೀಂದ್ರ ಪೂಜಾರಿಯವರು ತಿಳಿಸಿದರು. ಅವರು ದಿನಾಂಕ 13-08-2017 ಆದಿತ್ಯವಾರದಂದು ಅಡ್ವೆ ಆನಂದಿ ಸಭಾಭವನದಲ್ಲಿ ಯುವವಾಹಿನಿ(ರಿ.) ಅಡ್ವೆ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ […]
Read More
12-08-2017, 1:42 PM
ಶೈಕ್ಷಣಿಕ ದತ್ತು ಸ್ವೀಕಾರ ನಿಧಿ ಯ ವತಿಯಿಂದ ದಿನಾಂಕ 12-08-2017ರಂದು ಅಪರಾಹ್ನ 3.00 ಗಂಟೆಗೆ ಯುವವಾಹಿನಿ ಸಭಾಂಗಣದಲ್ಲಿ ದತ್ತು ವಿದ್ಯಾರ್ಥಿಗಳ ಪ್ರೇರಣಾ ಶಿಬಿರ ಮತ್ತು ಶೈಕ್ಷಣಿಕ ವೆಚ್ಚ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೇರಣಾ ಶಿಬಿರವನ್ನು ಘಟಕದ ಮಾಜಿ ಕಾರ್ಯದರ್ಶಿ, ಯೋಗ ಬಂಧು ಶ್ರೀ. ಲಕ್ಷ್ಮೀನಾರಾಯಣ ಮತ್ತು ಮಂಗಳೂರು ರಥಬೀದಿಯಲ್ಲಿರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ರಾಧಕೃಷ್ಣ ರವರು ದೀಪ ಬೆಳಗಿಸಿ ಉದ್ಘಾಟಿಸಿದರು ವಿದ್ಯಾರ್ಥಿಗಳು ಜಾಗೃತರಾಗಿ ಸಿದ್ದತೆಯೊಂದಿಗೆ ಬದ್ದತೆಯಿಂದ ವಿದ್ಯಾಬ್ಯಾಸದಲ್ಲಿ ತೊಡಗಿಕೊಂಡರೆ ಯಶಸ್ಸು ಖಂಡಿತ […]
Read More
12-08-2017, 1:33 PM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದಿಂದ ವನಮಹೋತ್ಸವ ಕಾರ್ಯಕ್ರಮವು ದಿನಾಂಕ 12.08.2017 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಪಾದೆಯಲ್ಲಿ ನಡೆಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ವಲಯ ಆರಣ್ಯಧಿಕಾರಿ ಶ್ರೀ ಪಿ ಶ್ರೀಧರ್ ಮಾತನಾಡಿ ಅರಣ್ಯ ಸಂಪತ್ತಿನ ಮಹತ್ವ ಅರಿತು ಬಾಳೋಣ, ನೀರಿಗಾಗಿ ಆರಣ್ಯ ಎಂಬ ಘೋಷಣೆಯ ಮೂಲಕ ವನಮಹೋತ್ಸವ ಆಚರಣೆ ಅರ್ಥಪೂರ್ಣವಾಗಿದೆ ಹಾಗೂ ಜಾಗವನ್ನು ಒದಗಿಸಿಕೊಟ್ಟಲ್ಲಿ 50 ಗಿಡಗಳನ್ನು ನೆಟ್ಟು ಸುತ್ತ ಬೇಲಿ ಹಾಕಿ ಕೊಡುವ ಸರಕಾರದ ಉಚಿತ ಯೋಜನೆಯ ಸದುಪಯೋಗ ಪಡೆಯುವಂತೆ ವಿನಂತಿಸಿದರು.. ಕಾರ್ಯಕ್ರಮದಲ್ಲಿ ಕೇOದ್ರ […]
Read More
12-08-2017, 10:30 AM
ಅವಕಾಶಗಳು ಎಳವೆಯಲ್ಲಿಯೇ ಸಿಕ್ಕಾಗ ಮಕ್ಕಳ ಪ್ರತಿಭಾ ವಿಕಸನವು ಅತ್ಯಂತ ವೇಗದಿಂದ ಸಾಗುತ್ತದೆ. ಮಕ್ಕಳ ಪ್ರಾಯಕ್ಕೆಅನುಗುಣವಾದ ಸಾಮಥ್ರ್ಯಗಳು ಪ್ರತಿಯೊಬ್ಬರಲ್ಲೂ ಇದೆ ಅದನ್ನು ಗುರುತಿಸಿಕೊಳ್ಳುವ ಕೆಲಸವನ್ನು ಹೆತ್ತವರು ಮಾಡಬೇಕಿದೆ, ಇಂತಹ ಅವಕಾಶಗಳಲ್ಲಿ ಇಂದಿನ ಕಾರ್ಯಕ್ರಮವೂ ಹೆಚ್ಚು ಪ್ರಸ್ತುತ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್‍ಕುಮಾರ್ ಬಿಎನ್ ತಿಳಿಸಿದರು. ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯುವವಾಹಿನಿ(ರಿ) ಸಸಿಹಿತ್ಲು ಘಟಕದ ವತಿಯಿಂದ ನಡೆದ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು […]
Read More