06-09-2017, 9:24 AM
ಯುವವಾಹಿನಿ (ರಿ) ಅಡ್ವೆ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಪ್ರಯುಕ್ತ ದಿನಾಂಕ 06.09.2017 ರಂದು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ತದನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರು ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬಹಳ ಹಿಂದಿನಿಂದಲೂ ಸೇವೆ ಮಾಡಿಕೊಂಡು ಬಂದಿರುವ ಶ್ರೀ ಸಂಕಪ್ಪ ಪೂಜಾರಿಯವರನ್ನು ಗೌರವಿಸಲಾಯಿತು.
Read More
05-09-2017, 10:51 AM
ದೇಶದ ಸುಭದ್ರ ಭವಿಷ್ಯ ಮತ್ತು ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಿನಾಥ್ ಪಡಂಗ ತಿಳಿಸಿದರು ಅವರು ದಿನಾಂಕ 05.09.2017ರಂದು ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಮುಲ್ಕಿ ರುಕ್ಕುರಾಮ್ ಸಭಾಗೃಹದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹಿರಿಯ ಶಿಕ್ಷಕರಾದ ಗಂಗಾಧರ್ ಪೂಜಾರಿ ಹಾಗೂ ವೀಣಾ ಸಿ.ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ […]
Read More
03-09-2017, 10:45 AM
ಯುವವಾಹಿನಿ (ರಿ) ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಬಡ ಕುಟುಂಬದ ಶ್ರೀಮತಿ ಸುಂದರಿ ಇವರಿಗೆ ಸುಮಾರು ನಾಲ್ಕುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ಸಮಾಜಮುಖಿ ಯೋಜನೆಗೆ ದಿನಾಂಕ 03.09.2017 ರಂದು ಶುಭ ಮುಹೂರ್ತ ನಡೆಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಪುತ್ತೂರು ಘಟಕದ ಅಧ್ಯಕ್ಷರಾದ ಉದಯ ಕೊಲಾಡಿ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ, ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಸೋಮಶೇಖರ್, […]
Read More
01-09-2017, 8:38 AM
ಯುವವಾಹಿನಿ (ರಿ) ಪಣಂಬೂರು ಘಟಕದ 2017-18ನೇ ಸಾಲಿನ ಅಧ್ಯಕ್ಷರಾಗಿ ಉದಯ ಆರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ : ನರೇಶ್ ಉಪಾಧ್ಯಕ್ಷರು : ಕೇಶವ ಕುಲಾಯಿ ಕೋಶಾಧಿಕಾರಿ : ರೇವತಿ ರವಿಚಂದ್ರ, ಜತೆ ಕಾರ್ಯದರ್ಶಿ : ಗಾಯತ್ರಿ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ರವಿ ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸುರೇಶ್ ಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರು : ನಿತಿನ್ ಮಹಿಳಾ ಸಂಘಟನಾ ನಿರ್ದೇಶಕರು […]
Read More
30-08-2017, 10:46 AM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ವಕೀಲರ ಸಂಘ ಬೆಳ್ತಂಗಡಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಬೆಳ್ತಂಗಡಿ,ಯುವವಾಹಿನಿ ಸಂಚಾಲನ ಸಮಿತಿ ವೇಣೂರು ಇದರ ಸಹಯೋಗದೊಂದಿಗೆ ದಿನಾಂಕ 30.08.2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ರಾಡಿಯಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ಬೆಳ್ತಂಗಡಿ JMFC ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸತೀಶ್ ಉದ್ಘಾಟಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಮಾಜಿ ನಿರ್ದೇಶಕ, ಕೊಕ್ರಾಡಿ SDMC ಅಧ್ಯಕ್ಷ ಸೂರ್ಯನಾರಾಯಣ ಡಿ.ಕೆ.ವಹಿಸಿ ಸತತ ಮೂರು ವರ್ಷಗಳಿಂದ ಕಾನೂನು […]
Read More
26-08-2017, 9:21 AM
ಮಂಗಳೂರಿನ ಸೋಮೇಶ್ವರ ಗ್ರಾಮದ ದಿವಂಗತ ಪುರುಷೋತ್ತಮ ಮತ್ತು ಪ್ರಮೀಳಾ ದಂಪತಿಯ ದ್ವಿತೀಯ ಪುತ್ರ ವೇಗದ ಓಟದ ಸರದಾರನಾಗಿ ಮೂಡಿಬರುತ್ತಿರುವ ಪ್ರತಿಭೆ ಸ್ವಸ್ತಿಕ್ ಕೆ. ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಸಂದೀಪ್‍ರವರ ಮಾರ್ಗದರ್ಶನದಲ್ಲಿ ಸಾಧನೆಯ ಸರದಾರ. ಸ್ವಸ್ತಿಕ್ ಕೆ. ಅವರು ಯುವ ಜಿಲ್ಲಾಮಟ್ಟದ 100 ಮೀಟರ್ ಓಟದಲ್ಲಿ ಪ್ರಥಮ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 16 ವರ್ಷ ವಯೋಮಾನದ 100 ಮೀಟರ್ ಸ್ಪರ್ಧೆಯಲ್ಲಿ 10.8 ಸೆಕೆಂಡಿನ ದಾಖಲೆಯೊಂದಿಗೆ ಪ್ರಥಮ ಸ್ಥಾನ, 2016-17ನೇ ಸಾಲಿನಲ್ಲಿ 19ರ ವಯೋಮಿತಿಯ ಸ್ಪರ್ಧೆಯಲ್ಲಿ […]
Read More
26-08-2017, 9:14 AM
ಮಂಗಳೂರಿನ ನಿವಾಸಿ ಶ್ರೀ ಡಿ. ಭಾಸ್ಕರ ಸನಿಲ್ ಮತ್ತು ಶ್ರೀಮತಿ ವಜ್ರ ಬಿ. ಸನಿಲ್ ದಂಪತಿಗಳ ಸುಪುತ್ರಿ ಕುಮಾರಿ ವಿಭಾ ಬಿ. ಇವರು ಕಲಿಕೆಯಲ್ಲಿ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ. ಇವರು 2017ರ ಪಿ.ಯು.ಸಿ ಪರೀಕ್ಷೆಯಲ್ಲಿ 600ರಲ್ಲಿ 583 ಅಂಕ ಗಳಿಸುವುದರೊಂದಿಗೆ PCMB ಯಲ್ಲಿ 97.16% ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮಂಗಳೂರಿನ ಮಹೇಶ್ ಪಿ.ಯು. ಕಾಲೇಜು ವಿದ್ಯಾರ್ಥಿನಿಯಾಗಿರುವ ಇವರು ಉತ್ತಮ ನಾಯಕತ್ವದ ಗುಣಗಳನ್ನು ಈಗಾಗಲೇ ಮೈಗೂಡಿಸಿಕೊಂಡಿದ್ದು, 2016-17ರಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ […]
Read More
26-08-2017, 9:06 AM
ಬೆಳ್ತಂಗಡಿ ತಾಲೂಕಿನ ಹಳೇಕೋಟೆ ಬಾರ್ಯ ನಿವಾಸಿ ಶ್ರೀಮತಿ ರತ್ನ ಹಾಗೂ ಶ್ರೀ ಸುಂದರ ಬಂಗೇರ ದಂಪತಿಗಳ ಹೆಮ್ಮೆಯ ಸುಪುತ್ರರಾದ ಸ್ಮಿತೇಶ್ ಎಸ್. ಬಾರ್ಯ ಇವರು ನಾಟಕರಂಗ ಮತ್ತು ಸಾಂಸ್ಕ್ರತಿಕ ರಂಗದಲ್ಲಿ ಸಾಧನೆಗೈದು ಎಲ್ಲರ ಗಮನ ಸೆಳೆದವರು.Msc. In Psychology ಪದವಿ ಗಳಿಸಿರುವ ಇವರು ಪ್ರಸ್ತುತ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಮನಃಶಾಸ್ತ್ರ ಉಪನ್ಯಾಸಕರಾಗಿದ್ದಾರೆ. 500ರಕ್ಕೂ ಮಿಕ್ಕಿ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. 25ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯ ಹಾಗೂ 20ಕ್ಕೂ ಮಿಕ್ಕಿ ನಾಟಕಗಳ ನಿರ್ದೇಶನ ಮಾಡಿರುವ ಇವರು […]
Read More
19-08-2017, 9:21 AM
ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಆಯೋಜಿಸಲ್ಪಟ್ಟ 6ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಂಕ 19-08-2017ರಂದು ಉಜ್ಜೋಡಿ ಗೋರಿಗುಡ್ಡೆಯಲ್ಲಿ ನಡೆಯಿತು. ಸಮಾರಂಭದ ಅದ್ಯಕ್ಷತೆಯನ್ನು ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷರಾದ ಗೋಪಾಲ.ಎಂ ಪೂಜಾರಿ ವಹಿಸಿದ್ದರು. ಕೆ.ಪಿ.ಟಿಯ Co-ordinator ಆದ ಗೀತಾಜೈನ್ ರವರು ಹಾಗೂ ಹೊಲಿಗೆ ತರಬೇತಿ ನೀಡಿದ ಶಿಕ್ಷಕಿಯಾದ ಶ್ರೀಮತಿ ಕಾಂತಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ತರಬೇತಿ ಪಡೆದ ಮಹಿಳಾ ಸದಸ್ಯರು ಹಾಗೂ ಘಟಕದ ಮಾಜಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕರು, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಾಹಿಸಿದರು. ಹೊಲಿಗೆ ತರಬೇತಿ ನಡೆನಲು, 6 […]
Read More
18-08-2017, 7:39 AM
ಯುವವಾಹಿನಿ(ರಿ) ಸುಳ್ಯ ಘಟಕ ವತಿಯಿಂದ ಸೊಳ್ಳೆ ಗಳಿಂದ ಹರಡುವ ರೋಗಗಳ ಮಾಹಿತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕರಪತ್ರಗಳ ಬಿಡುಗಡೆ ಕಾರ್ಯಕ್ರಮ ಸುಳ್ಯದ ಕಲ್ಕುಡ ದೈವಸ್ಥಾನದ ವಠಾರದಲ್ಲಿ ದಿನಾಂಕ 18-8-2017ರ ಶುಕ್ರವಾರ ನಡೆಯಿತು. ಸುಳ್ಯ ನಗರ ಪಂಚಾಯತ್ ನ ಆರೋಗ್ಯ ನಿರೀಕ್ಷಕರಾದ ರವಿ ಕೃಷ್ಣ .ಡಿ ರವರು ಕರ ಪತ್ರ ಬಿಡುಗಡೆಗೊಳಿಸಿದರು. ಯುವವಾಹಿನಿ(ರಿ) ಸುಳ್ಯ ಘಟಕದ ಅಧ್ಯಕ್ಷರಾದ ಶಿವಪ್ರಸಾದ್. ಕೆ.ವಿ ಸ್ವಾಗತಿಸಿದರು, ರವಿಕುಮಾರ್. ಎಚ್, ರವಿಕಿರಣ್ , ರಂಜಿತ್ ಪೂಜಾರಿ , ಭರತ್ ಶಾಂತಿನಗರ , ಸುಂದರ […]
Read More