24-09-2017, 3:03 AM
ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ದೇಹದ ಸಮತೋಲನದಿಂದ ದಿನಪೂರ್ತಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಸೂಕ್ತ ವೈದ್ಯರಲ್ಲಿ ನಡೆಸಿಕೊಂಡು ರೋಗ ಬರುವ ಮೊದಲೇ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿರಿ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಸಮಿತಿಯ ಅಧಿಕಾರಿ ರಮೇಶ್ ಬಂಗೇರ ಹೇಳಿದರು. ಅವರು ದಿನಾಂಕ 24.09.2017 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಯುವವಾಹಿನಿ ಹಳೆಯಂಗಡಿ ಘಟಕದ ಆಶ್ರಯದಲ್ಲಿ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ,ಲಯನ್ಸ್, ಲಿಯೋ ಮತ್ತು ಪೂಜಾ ಫ಼್ರೆಂಡ್ಸ್‌ನ ಹಾಗೂ ಮುಕ್ಕದ […]
Read More
21-09-2017, 5:02 PM
ಆಧುನೀಕರಣ ಪ್ರಭಾವದಿಂದ ತಂತ್ರಜ್ಞಾನದ ಒಳಿತುಗಳಂತೆ ಕೆಡುಕುಗಳು ಉಂಟಾಗಿ ಯುವ ಸಮುದಾಯದ ಮೇಲೆ ಅದರ ಪರಿಣಾಮ ಪ್ರಖರವಾಗಿದೆ. ಹೆತ್ತವರು ಉತ್ತಮವಾಗಿ ಶಿಶು ಆರೈಕೆಯೊಂದಿಗೆ ಮಕ್ಕಳ ಮೇಲೆ ಯಾವುದೇ ಕೆಟ್ಟ ಪ್ರಭಾವ ಆಗದಂತೆ ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ನಾರಾಯಣಗುರುವರ್ಯರಂತ ಮಹನೀಯರ ತತ್ವಾದರ್ಶಗಳನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇಂಜ, ಕುತ್ಯಾರು ಬ್ರಹ್ಮಬೈದರ್ಕಳ ಗರಡಿಯ ಗಡಿ ಪ್ರಧಾನರಾದ ಬಗ್ಗ ಪೂಜಾರಿ ಉಮೇಶ್ ಕೋಟ್ಯಾನ್ ತಿಳಿಸಿದರು. ಅವರು ಪಡುಬಿದ್ರಿ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ […]
Read More
21-09-2017, 1:01 PM
ಯುವವಾಹಿನಿ (ರಿ) ಮುಲ್ಕಿ ಘಟಕದ ಸದಸ್ಯರು ದಿನಾಂಕ 21.09.2017ರಂದು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಥಮ ದಿನ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಯೋಗೀಶ್ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ,ನಿಕಟ ಪೂರ್ವ ಅಧ್ಯಕ್ಷರಾದ ಚೇತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು
Read More
17-09-2017, 3:27 PM
ಯುವವಾಹಿನಿ (ರಿ) ಕೊಲ್ಯ ಘಟಕದ ಕುಟುಂಬ ಸದಸ್ಯರ ಪುಣ್ಯ ಕ್ಷೇತ್ರಗಳ ಒಂದು ದಿನದ ಪ್ರವಾಸ ದಿನಾಂಕ 17.09.2017 ರಂದು ಜರುಗಿತು. 58 ಸದಸ್ಯರ ಯುವವಾಹಿನಿ ಕೊಲ್ಯ ಘಟಕದ ಕುಟುಂಬ ಸದಸ್ಯರು ಬಪ್ಪನಾಡು ಕ್ಷೇತ್ರ, ಹಲವು ಮಕ್ಕಳ ತಾಯಿ ದೇವಸ್ಥಾನ, ಹಟ್ಟಿಯಂಡಿ ಗಣಪತಿ, ಕೊಲ್ಲೂರು ಮೂಕಾಂಬಿಕಾ, ಮುರುಡೇಶ್ವರ ಮುಂತಾದ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡರು. ಈ ಪ್ರವಾಸದ ಕ್ಷಣ ಕ್ಷಣದ ಸವಿನೆನಪು ಎಲ್ಲರಲ್ಲೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.
Read More
17-09-2017, 1:24 PM
ಸಮಾಜ ವನ್ನು ಕಟ್ಟಬೇಕಾಗಿರುವುದು ಹಣದಿಂದಲ್ಲ. ಬದಲಾಗಿ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ. ಈ ಮೂರರ ಬಂಧನ ಕಳಚಲಾಗದ್ದು. ಅಂತಹ ಬೆಸುಗೆಯನ್ನು ಯುವವಾಹಿನಿ ಬೆಸೆಯುತ್ತಿದೆ ಎಂದು ಚಿಂತಕ, ಯುವ ಸಂಘಟಕ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು ಅವರು ದಿನಾಂಕ 17.09.2017 ರಂದು ಬಂಟ್ವಾಳ ತಾಲೂಕಿನ ಮಾಣಿ ನಾರಾಯಣಗುರು ಸಮುದಾಯಭವನದಲ್ಲಿ ಜರುಗಿದ ಯುವವಾಹಿನಿಯ 26ನೇ ನೂತನ ಘಟಕ ಯುವವಾಹಿನಿ (ರಿ) ಮಾಣಿ ಘಟಕದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಸಂಪತ್ ಬಿ.ಸುವರ್ಣ […]
Read More
17-09-2017, 9:28 AM
ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ 26 ನೇ ಘಟಕವಾಗಿ ಅಸ್ತಿತ್ವಕ್ಕೆ ಬಂದ ಯುವವಾಹಿನಿ (ರಿ) ಮಾಣಿ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಬಾಬನಕಟ್ಟೆ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ವಿಜಯಕುಮಾರ್ ಎಸ್.ಕಡೇಶಿವಾಲಯ,ಕಾರ್ಯದರ್ಶಿಯಾಗಿ ಪ್ರಶಾಂತ್ ಅನಂತಾಡಿ ಜತೆಕಾರ್ಯದರ್ಶಿಯಾಗಿ ಪವನ್ ಅನಂತಾಡಿ,ಕೋಶಾಧಿಕಾರಿಯಾಗಿ ಅಮರನಾಥ್ ಮುಜಲ ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಸ್ವರ್ಣ ಜೋತ್ಸ್ನಮಾಣಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಶ್ರೀಮತಿ ತ್ರಿವೇಣಿ ರಮೇಶ್ ಮುಜಲ, ಸಮಾಜ ಸೇವೆ ನಿರ್ದೇಶಕರಾಗಿ ನೀಲಯ್ಯ ಪೂಜಾರಿ ಜೋಗಿಬೆಟ್ಟು ದರ್ಖಾಸು, […]
Read More
16-09-2017, 9:15 AM
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಮುಡಿಪಿನಡ್ಕ ಎಂಬಲ್ಲಿರುವ ದೇಯಿ ಬೈದೇತಿ ಔಷದಿ ವನದಲ್ಲಿ ಹಿಂದೂ ಸಮಾಜದ ವಿಶೇಷವಾಗಿ ಬಿಲ್ಲವ ಸಮಾಜದ ಆರಾಧ್ಯ ತಾಯಿ ದೇಯಿ ಬೈದೇತಿ ಮೂರ್ತಿಗೆ ಅಪಮಾನ ಮಾಡಿದ ಹೇಯ ಕೃತ್ಯದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವವಾಹಿನಿ ಪುತ್ತೂರು ಘಟಕ ಅಗ್ರಹಿಸಿದೆ. ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ ಪೋಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಯುವವಾಹಿನಿ ಪುತ್ತೂರು ಘಟಕವು ಅಭಿನಂದನೆ ಸಲ್ಲಿಸಿದೆ. ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ […]
Read More
13-09-2017, 12:37 PM
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸ್ಥಾಪಕ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಳಾ ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಬಿ.ತಮ್ಮಯ ಸಂಪಾದಕೀಯದ ತುಳು ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ದಿನಾಂಕ 13.09.2017 ರಂದು ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ, ಬಿ.ತಮ್ಮಯ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ […]
Read More
10-09-2017, 1:16 PM
ವಿಶಿಷ್ಟ ವಿನ್ಯಾಸದೊಂದಿಗೆ ವರ್ಣರಂಜಿತ ಪುಟಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಎಲ್ಲರ ಮನಸ್ಸು ಗೆಲ್ಲಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ತಿಳಿಸಿದರು ಅವರು ದಿನಾಂಕ 10.09.2017 ರಂದು ಯುವವಾಹಿನಿ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸಸಿಹಿತ್ಲು ವೈಶಾಲಿ ರೆಸಾರ್ಟ್ ಇಲ್ಲಿ ಜರುಗಿದ ಯುವವಾಹಿನಿಯ 26 ಘಟಕಗಳ ಸಮನ್ವಯತೆ ಸ್ನೇಹಾನುಬಂಧ ಕಾರ್ಯಕ್ರಮದಲ್ಲಿ ಯುವಸಿಂಚನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ ಹಾಗೂ ಸಹಕಾರದಿಂದ ಹೊಸ ವಿನ್ಯಾಸದಲ್ಲಿ ಯುವಸಿಂಚನ […]
Read More