15-02-2024, 4:07 AM
ಮೂಡಬಿದಿರೆ: ಶ್ರೀ ಕ್ಷೇತ್ರ ಕಲ್ಲಬೆಟ್ಟು , ಶ್ರೀ ಮಹಮ್ಮಾಯಿ ದೇವಸ್ಥಾನ ಮೂಡಬಿದಿರೆ, ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದ ಪ್ರಯುಕ್ತ ದಿನಾಂಕ 15-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕ ದ ಸುಮಾರು 15 ಸದಸ್ಯರು, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ (ರಿ.) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
12-02-2024, 12:31 PM
ಮೂಡಬಿದಿರೆ: ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಇದರ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ ದಿನಾಂಕ 12-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 10 ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ(ರಿ.) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
10-02-2024, 3:43 AM
ಮೂಡಬಿದಿರೆ: ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನ, ಸ್ವರಾಜ್ಯ ಮೈದಾನ ಮೂಡಬಿದಿರೆ, ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದ ಪ್ರಯುಕ್ತ ದಿನಾಂಕ 10-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕ ದ ಸುಮಾರು 10 ಸದಸ್ಯರು, ಕ್ಯಾಶ್ ಕೌಂಟರ್ ನಲ್ಲಿ ಹಾಗೂ ದಿನಾಂಕ 11-02-2024 ರಂದು ಸುಮಾರು 20 ಸದಸ್ಯರು, ಅನ್ನ ಧಾನ ವಿಭಾಗ ದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ (ರಿ.) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
04-02-2024, 6:53 AM
ಮೂಡಬಿದರೆ: ಸಮಾಜಮುಖಿ ಕೆಲಸ ಮಾಡುವ ಯುವವಾಹಿನಿಯು ಸ್ವಚ್ಛ ಪರಿಕಲ್ಪನೆಯುಲ್ಲಿ ತನ್ನನ್ನು ತೊಡಗಿಸಿಕೊಂಡದ್ದು ಅನುಕರಣೀಯ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು 04/02/2024 ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನ, ಮಾರಿಗುಡಿ ದೇವಸ್ಥಾನ ಹಾಗೂ ರಿಂಗ್ ರೋಡ್ ಬಳಿ ನಡೆದಾಗ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಶಂಕರ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ತೋಡಾರು […]
Read More
21-01-2024, 1:29 PM
ಮೂಡಬಿದಿರೆ: ಶ್ರೀ ಕ್ಷೇತ್ರ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರ್ತಾಡಿ – ವಾಲ್ಪಾಡಿ, ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದ ಪ್ರಯುಕ್ತ ದಿನಾಂಕ 21-01-2024 ರಂದು ಯುವವಾಹಿನಿ(ರಿ) ಮೂಡುಬಿದಿರೆ ಘಟಕ ದ ಸುಮಾರು 20ಕ್ಕೂ ಹೆಚ್ಚು ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಿತಿ ಸೇವೆಯನ್ನು ಗುರುತಿಸಿ ಯುವವಾಹಿನಿ (ರಿ) ಮೂಡುಬಿದಿರೆ ತಂಡವನ್ನು ದೇವಳದ ವತಿಯಿಂದ ಗೌರವಿಸಿದರು.
Read More
21-01-2024, 10:00 AM
ಮೂಡುಬಿದಿರೆ : ಯಾವ ವ್ಯಕ್ತಿಯಲ್ಲಿ ಸ್ವಾಭಿಮಾನದ ಜೊತೆಗೆ ಎಲ್ಲರನ್ನೂ ಗೌರವಿಸಿ ಮಾತನಾಡುವ ಗುಣವಿದೆಯೋ ಅಂಥವರು ಒಬ್ಬ ಉತ್ತಮ ನಾಯಕ ಎನಿಸಿಕೊಳ್ಳಲು ಅರ್ಹನಾಗಿರುತ್ತಾನೆ, ನಿನ್ನೊಳಗಿನ ನಾಯಕನ ಅನ್ವೇಷಣೆ ಕಾರ್ಯ ನಿರಂತರ ನಡೆಯಬೇಕಾಗಿದೆ, ಇದು ನಾಯಕತ್ವದ ಹೆಬ್ಬಾಗಿಲು ಎಂದು ಸಂಪನ್ಮೂಲ ವ್ಯಕ್ತಿ ನಿತೇಶ್ ಬಲ್ಲಾಳ್ ರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಅವರು ಯುವವಾಹಿನಿ (ರಿ.) ಮೂಡಬಿದರೆ ಘಟಕದ ವತಿಯಿಂದ 2024 ನೇ ಜನವರಿ 21 ರಂದು ನಡೆದ ವ್ಯಕ್ತಿತ್ವ ವಿಕಸನ ಶಿಬಿರ ನಿನ್ನೊಳಗಿನ ನಾಯಕ ಇದರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ […]
Read More
16-01-2024, 10:00 AM
ಮೂಡುಬಿದಿರೆ : ಎಸ್.ಎಸ್.ಎಲ್.ಸಿ ಪರೀಕ್ಷೆ ಬಹಳ ಮುಖ್ಯವಾದ ಘಟ್ಟ. ಪರೀಕ್ಷೆಯನ್ನು ಕಷ್ಟದಿಂದ ಎದುರಿಸಿದರೂ ಬಹಳ ಇಷ್ಟಪಟ್ಟು ಎದುರಿಸಿ. ಆತ್ಮ ವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಎಂತಹ ಕಷ್ಟ ಬಂದರೂ ಮೆಟ್ಟಿ ನಿಂತು ಗುರಿ ಮುಟ್ಟಬಲ್ಲೆ ಎಂಬ ಅಚಲ ನಿರ್ಧಾರ, ದೃಢವಿಶ್ವಾಸ ನಮ್ಮದಾಗಲಿ. ಉತ್ತಮವಾಗಿ ಪರೀಕ್ಷೆಯನ್ನು ಎದುರಿಸಿ ಉನ್ನತ ಮಟ್ಟದ ಅಂಕಗಳನ್ನು ಗಳಿಸುವಂತಾಗಲಿ. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಬಗ್ಗೆ ಸಂಪನ್ಮೂಲ ವ್ಯಕ್ತಿ ಮುನಿರಾಜ ರೆಂಜಾಳ ವಿದ್ಯಾರ್ಥಿಗಳಿಗೆ ತಿಳಿಸಿದರು. ಅವರು ಯುವವಾಹಿನಿ(ರಿ.) ಮೂಡಬಿದರೆ ಘಟಕ, […]
Read More
17-07-2022, 4:25 PM
ಕಾರ್ಕಳ:- ದಿನಾಂಕ 17 ಜುಲೈ 2022ನೇ ಆದಿತ್ಯವಾರ ಯುವವಾಹಿನಿ(ರಿ.) ಕಾರ್ಕಳ, ಮೂಡಬಿದ್ರಿ, ಉಡುಪಿ ಘಟಕಗಳ ಜಂಟಿ ಆಶ್ರಯದಲ್ಲಿ “ಯುವ ಸಮ್ಮಿಲನ ಕಾರ್ಯಕ್ರಮ ” ಆನೆಕೆರೆ ಶ್ರೀ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಉದ್ಯಮಿಗಳಾಗಿರುವ ಡಿ. ಆರ್. ರಾಜು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಕಳ ಘಟಕದ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು , […]
Read More
05-05-2022, 4:49 PM
ಯುವವಾಹಿನಿ (ರಿ.) ಮೂಡಬಿದ್ರೆ ಘಟಕ, ಬಿಲ್ಲವ ಸಂಘ (ರಿ.) ಶಿರ್ತಾಡಿ ಹಾಗೂ ಮಾಜಿ ಸೈನಿಕರ ವೇದಿಕೆ (ರಿ.) ಮೂಡಬಿದರೆ- ಕಾರ್ಕಳ ಇವರ ಸಹಭಾಗಿತ್ವದಲ್ಲಿ ದಿನಾಂಕ 28.05.2022 ಶನಿವಾರದಂದು ಎಸೆಸೆಲ್ಸಿ ನಂತರ ಮುಂದೇನು ಹಾಗೂ ಎಸೆಸೆಲ್ಸಿ ನಂತರ ಸರಕಾರ ಸಂಘ-ಸಂಸ್ಥೆಗಳಿಂದ ಸಿಗುವ ವಿದ್ಯಾರ್ಥಿವೇತನದ ಸಮಗ್ರ ಮಾಹಿತಿ ಶಿಬಿರವನ್ನು ಬಿಲ್ಲವ ಸಂಘ ಶಿರ್ತಾಡಿಯ ಸಭಾಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ನವಾನಂದರವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಮಾಹಿತಿ ಶಿಬಿರದ ಉದ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮಿನ್ […]
Read More