18-07-2024, 5:03 PM
ಮೂಡುಬಿದ್ರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಮೂಡುಬಿದ್ರೆ ಘಟಕದ ವತಿಯಿಂದ ದಿ 18-07-2024ರಂದು ಮೂಡಬಿದ್ರೆಯ ಸರಕಾರಿ ಮೈನ್ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ಟೇಬಲನ್ನು ಸದಸ್ಯರಾದ ಉಮೇಶ್ ಕೋಟ್ಯಾನ್ ಇವರ ಆರ್ಥಿಕ ನೆರವಿನ ಮುಖಾಂತರ ಅಧ್ಯಕ್ಷರಾದ ಶಂಕರ್ ಎ. ಕೋಟ್ಯಾನ್ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಮಾಜಿ ಅಧ್ಯಕ್ಷರಾದ ಸುಶಾಂತ್ ಕರ್ಕೇರ, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್, ಸದಸ್ಯರಾದ ಉಮೇಶ್ ಕೋಟ್ಯಾನ್, ಹಾಗೂ ಬಿಲ್ಲವ ಸಂಘ ಮೂಡಬಿದ್ರೆಯ ಆಡಳಿತ ಕಮಿಟಿ […]
Read More
18-07-2024, 5:03 PM
ಮೂಡುಬಿದ್ರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ವತಿಯಿಂದ ಮೂಡುಮಾರ್ನಾಡು ಅಂಗನವಾಡಿ ಶಾಲೆಯ 15 ಪುಟಾಣಿಗಳಿಗೆ ಉಚಿತ ಸಮವಸ್ತ್ರ ವಿತರಣೆಯ ಕಾರ್ಯಕ್ರಮವನ್ನು ಸದಸ್ಯರಾದ ಉಮೇಶ್ ಕೋಟ್ಯಾನ್ ಇವರ ಆರ್ಥಿಕ ನೆರವಿನ ಮುಖಾಂತರ ಅಧ್ಯಕ್ಷರಾದ ಶಂಕರ್ ಎ. ಕೋಟ್ಯಾನ್ ಇವರು ವಿತರಿಸಿ ಪುಟಾಣಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್, ಸದಸ್ಯರಾದ ಉಮೇಶ್ ಕೋಟ್ಯಾನ್ ಹಾಗೂ ಅಂಗನವಾಡಿಯ ಶಿಕ್ಷಕರು, ಮತ್ತು ಮಕ್ಕಳ ಪೋಷಕರು ಹಾಜರಿದ್ದರು.
Read More
10-07-2024, 4:59 PM
ಮೂಡುಬಿದ್ರೆ : ವಿದ್ಯೆ ಉದ್ಯೋಗ ಸಂಪರ್ಕ ಎಂಬ ಧ್ಯೇಯ ಉದ್ದೇಶವನ್ನು ಮುಂದಿಟ್ಟುಕೊಂಡು ಸಮಾಜಮುಖಿ ಸೇವಾಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ ದಿ 10-07-2024 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜ್ಯೋತಿನಗರ, ಮೂಡುಬಿದಿರೆ ಇಲ್ಲಿಗೆ ಕಲಿಕೆಗೆ ಅಗತ್ಯವಾಗಿರುವ ಎರಡು ಕಂಪ್ಯೂಟರ್ ಟೇಬಲ್ ನ್ನು ಹಸ್ತಾಂತರಿಸುವ ಕಾರ್ಯಕ್ರಮವು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯನಿ ಅಪೋಲಿನ್ ಮೊನಿಶ್ ಇವರು ಘಟಕದ ಅಧ್ಯಕ್ಷರಾದ ಶಂಕರ್ ಎ. ಕೋಟ್ಯಾನ್, ಉಪಾಧ್ಯಕ್ಷರಾದ ಮುರಳೀಧರ್ ಕೋಟ್ಯಾನ್ ಹಾಗೂ ಪ್ರಭಾಕರ್ ಚಾಮುಂಡಿಬೆಟ್ಟ, ಕೋಶಾಧಿಕಾರಿ ಪ್ರತಿಭಾ ಸುರೇಶ್, ಕಾರ್ಯದರ್ಶಿ […]
Read More
06-07-2024, 4:09 AM
ಮೂಡಬಿದ್ರೆ: ಹಳ್ಳಿ ಪ್ರದೇಶದಲ್ಲಿ ಬಡಜನರಿಗೆ ಆರೋಗ್ಯ ತಪಾಸಣಾ ಶಿಬಿರದಿಂದ ಬಹಳಷ್ಟು ಪ್ರಯೋಜನ ಸಿಗಲಿದ್ದು, ಯುವವಾಹಿನಿ ಹಾಗೂ ಇತರ ಸಂಸ್ಥೆಗಳು ಸೇರಿಕೊಂಡು ನಡೆಸುವ ಈ ಶಿಬಿರವು ಅತ್ಯುತ್ತಮ ಸಮಾಜಸೇವೆಯ ಭಾಗವಾಗಿದ್ದು, ಪ್ರತಿಯೊಬ್ಬರು ಇದರ ಪ್ರಯೋಜನ ಪಡೆಯಂತಾಗಲಿ ಎಂದು ಯುವವಾಹಿನಿ(ರಿ.) ಮೂಡಬಿದ್ರೆ ಘಟಕದ ವತಿಯಿಂದ ಹಾಗೂ ಶ್ರೀಶಾ ಸೌಹಾರ್ದ ಸಹಕಾರಿ ಸೊಸೈಟಿ ಮಂಗಳೂರು, ಜೆಸಿಐ ಭಾರ್ಗವ ಮುಂಡ್ಕೂರು, ಬಿಲ್ಲವ ಸಂಘ ಕಡಂದಲೆ – ಪಾಲಡ್ಕ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಡಂದಲೆ – ಪಾಲಡ್ಕ, ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ […]
Read More
23-06-2024, 3:05 PM
ಮೂಡಬಿದ್ರೆ: ಗುರುಗಳ ಹಿಂಬಾಲಕರಾಗಿ ಬದುಕಿದರೆ ಸಾಲದು, ಅದರೊಂದಿಗೆ ಗುರುಗಳ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುವುದನ್ನು ಅರಿವುದು ಮುಖ್ಯ ಎಂದು ರಾಜ್ಯ ಹೈಕೋರ್ಟಿನ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲು ತಾರನಾಥ ಪೂಜಾರಿ ರವರು ಹೇಳಿದ್ದಾರೆ. ಅರಿವು – 2024, ಸನ್ಮಾನ, ಯುವಸಿರಿ ಪ್ರಶಸ್ತಿ ಪುರಸ್ಕಾರ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಅನಿಸಿಕೆಯನ್ನು ನೀಡಿದರು. ವಿದ್ಯೆಯ ಮೇಲೆ ಹಿಡಿದ ಸಾಧಿಸಲು ಎಷ್ಟು ಬುದ್ಧಿವಂತರಾದರೂ ಪ್ರಯೋಜನವಿಲ್ಲ. ಅದಕ್ಕಿಂತ ಮುಖ್ಯವಾಗಿ ಪರಿಶ್ರಮ, ಶಿಸ್ತು , ಪ್ರಯತ್ನ ಅಗತ್ಯ […]
Read More
19-05-2024, 3:52 PM
ಮೂಡುಬಿದಿರೆ: ಯುವವಾಹಿನಿಯ ತತ್ವ, ಉದ್ದೇಶಗಳನ್ನು ಸರಿಯಾಗಿ ಅರಿತು ನಮ್ಮ ಘಟಕದಿಂದ ಶಿಕ್ಷಣ ಆರೋಗ್ಯ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಜನವರಿಯಿಂದ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ 13 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 83 ಹೊಸ ಸದಸ್ಯರು ಯುವವಾಹಿನಿಗೆ ಸೇರ್ಪಡೆಯಾಗಿದ್ಧಾರೆ ಎಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಮೂಡುಬಿದಿರೆ ಘಟಕದ ವತಿಯಿಂದ ಹಂಡೇಲು ದೇವಸ ಮನೆಯಲ್ಲಿ ತುಳುನಾಡ ಸಂಸ್ಕೃತಿಯ ಪುನಾರವಲೋಕನ ಧ್ಯೇಯದೊಂದಿಗೆ […]
Read More
07-05-2024, 4:02 PM
ಮೂಡುಬಿದಿರೆ: ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಇವರು ಅಭಿನಯಿಸಿರುವ ವಿನೂತನ ಶೈಲಿಯ ಹಾಸ್ಯಮಯ ತುಳು ನಾಟಕ ಕಥೆ ಎಡ್ಡೆ ಉಂಡು ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 07-05-2024 ರಂದು ಸಂಜೆ 7 ಗಂಟೆಗೆ ಸರಿಯಾಗಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ರಾದ ಶಂಕರ್ ಎ. ಕೋಟ್ಯಾನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಗಮಿಸಿದ ಎಲ್ಲಾ ಅತಿಥಿಗಳನ್ನು ಮಾಜಿ ಅಧ್ಯಕ್ಷ ಜಗದೀಶಚಂದ್ರ ಡಿ.ಕೆ. ಇವರು ಸ್ವಾಗತಿಸಿದರು. ಶಂಕರ್ ಎ. ಕೋಟ್ಯಾನ್ ಪುಷ್ಪ […]
Read More
07-04-2024, 3:43 PM
ಮೂಡಬಿದರೆ: ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಹಾಗೂ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮಿಜಾರು ಮೂಡಬಿದ್ರೆ ಸಹಯೋಗದಲ್ಲಿ ಯುವವಾಹಿನಿ ಸ್ವಚ್ಛ ಪರಿಕಲ್ಪನೆ – 2024 ಎರಡನೇ ಹಂತದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಆರಂಭವು 07/04/2024 ನೇ ಆದಿತ್ಯವಾರ ಲಕ್ಷ್ಮಿ ಛಾಯಾ ನಿವಾಸ, ಬೆಟ್ಕೇರಿ ಮೂಡಬಿದ್ರೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಲಕ್ಷ್ಮಿಛಾಯಾ ನಿವಾಸದ ಮುಂಭಾಗದಲ್ಲಿ ಸಾಂಕೇತಿಕವಾಗಿ ಶ್ರೀಧರ್ ಆಚಾರ್ಯ ಹಿರಿಯ ಸ್ವರ್ಣ ಉದ್ಯಮಿ ಮೂಡುಬಿದ್ರೆ ಇವರು ಗಿಡ ನೆಡುವ ಮೂಲಕ ಉದ್ಘಾಟನೆಗೈದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. […]
Read More
14-03-2024, 12:04 PM
ಮೂಡುಬಿದಿರೆ: ಕಣ್ಣುಗಳು ನಾವು ಹೊಂದಿರುವ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿದೆ. ಹೆಚ್ಚಿದ ಪರದೆಯ ಸಮಯ, ಮಾಲಿನ್ಯ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಕಳಪೆ ಕಣ್ಣಿನ ಆರೋಗ್ಯವು ಸಾಮಾನ್ಯ ಸಮಸ್ಯೆಯಾಗಿದೆ. ದೃಷ್ಟಿಹೀನತೆ ಮೂಲಭೂತ ದೈನಂದಿನ ಕೆಲಸಗಳನ್ನು ಅಡ್ಡಿಪಡಿಸಬಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ತಿಳಿಸಿದರು. ಅವರು ದಿನಾಂಕ 14-03-2024 ನೇ ಗುರುವಾರದಂದು ಮೂಡುಬಿದಿರೆ ಆಳ್ವಾಸ್ ಆಯುರ್ವೇದ […]
Read More
25-02-2024, 5:18 PM
ಮೂಡುಬಿದಿರೆ: ಮುಂಡ್ಕೂರು ಕಜೆ-ಕುಕ್ಕುದಡಿ ಮಹಾಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ನಾಗಮಂಡಲೋತ್ಸವ ಪ್ರಯುಕ್ತ ದಿನಾಂಕ 25-02-2024 ರಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಸುಮಾರು 20 ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
Read More