ಮಂಗಳೂರು

ಜನ ಮನ ಗೆದ್ದ ಉಚಿತ ಶರಬತ್ತು ವಿತರಣೆ

ಮಂಗಳೂರು :- ವಿಶ್ವ ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಶಾರದಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಯುವವಾಹಿನಿ (ರಿ.) ಮಂಗಳೂರು ಘಟಕವು ಉಚಿತ ಶರಬತ್ತು ಸೇವೆಯನ್ನು ನೀಡುವುದರೊಂದಿಗೆ ಜನಮನ ಗೆದ್ದಿತು. ಮಂಗಳೂರು ದಸರಾ ಮಹೋತ್ಸವದ ಶೋಭಾ ಯಾತ್ರೆಯ ದಿನವಾದ 05 ಅಕ್ಟೋಬರ್ 2022ರ ಬೆಳಿಗ್ಗೆಯಿಂದಲೇ ಶರಬತ್ತು ಸೇವೆಗೆ ಪೂರ್ವ ತಯಾರಿ ಕಾರ್ಯಕ್ರಮಗಳು ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿಯಿರುವ ಎಸ್. ಎಲ್. ಡೈಮಂಡ್ ಮಳಿಗೆಯ ಅಂಗಣದಲ್ಲಿ ಘಟಕದ ಅಜೀವ ಸದಸ್ಯರಾದ ಬಾಲಕೃಷ್ಣ […]

Read More

ಅಭಿಯಂತರರ (ಇಂಜಿನಿಯರ್) ದಿನ ಆಚರಣೆ

ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ದಿನಾಂಕ 20 ಸೆಪ್ಟೆಂಬರ್ 2022ರಂದು (ಅಭಿಯಂತರರ)ಇಂಜಿನಿಯರ್ ದಿನವನ್ನು ಯುವವಾಹಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಸಭೆಗೆ ಮೊದಲು ಭಜನೆಯೊಂದಿಗೆ ಗುರುಪೂಜೆ ಮಾಡಿ ಎಲ್ಲಾ ಸದಸ್ಯರಿಗೆ ಪ್ರಸಾದ ನೀಡಲಾಯಿತು. ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಬಂದಂತಹ ಎಲ್ಲಾ ಮಾಜಿ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು, ಸದಸ್ಯರನ್ನು ಹಾಗೂ ಚಾರುಧಾಮ ಯಾತ್ರೆಯ ಯಾತ್ರಾರ್ಥಿಗಳನ್ನು ಆತ್ಮೀಯವಾಗಿ ಸಭೆಗೆ ಸ್ವಾಗತಿಸಿದರು. ಸಭೆಯಲ್ಲಿ ವಿಶ್ವ ವಿಖ್ಯಾತ ಮಂಗಳೂರು ದಸರಾ ಮಹೋತ್ಸವದಲ್ಲಿ ಘಟಕವು ಹಮ್ಮಿಕೊಂಡಿದ್ದ, ಕೌಂಟರ್ ಸೇವೆ, ಉಚಿತ […]

Read More

ಗುರು ಜಯಂತಿ, ಶಿಕ್ಷಕರ ದಿನಾಚರಣೆ ಮತ್ತು ಸಾಹಿತ್ಯ ಸೌರಭ

ಮಂಗಳೂರು:- ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ, ದುಶ್ಚಟಗಳಿಂದ ವಿಮುಖರಾಗಿ ಸತ್ಪ್ರಜೆಗಳಾಗಿ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ತಿಳಿಯ ಪಡಿಸಿದ ಅಸೋಸಿಯೇಟ್ ಪ್ರೊಫೆಸರ್ ವಿನೀತ ರೈ ಅವರು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ನಾರಾಯಣ ಗುರುಗಳ ತತ್ವದೇಶಗಳನ್ನು ಘೋಷಿಸುವುದರ ಮೂಲಕ ನಾವೆಲ್ಲರೂ ಒಂದೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ನಡೆದ ಗುರು ಜಯಂತಿ, ಶಿಕ್ಷಕರ ದಿನಾಚರಣೆ ಮತ್ತು ಸಾಹಿತ್ಯ ಸೌರಭ ಬಹುಮಾನ ವಿತರಣಾ ಕಾರ್ಯಕ್ರಮವನ್ನು […]

Read More

ಕೇದಾರನಾಥದಲ್ಲಿ ರಾರಾಜಿಸಿದ ಯುವವಾಹಿನಿ ಮತ್ತು ತುಳುನಾಡ ಬಾವುಟ

ಮಂಗಳೂರು:- ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಸುಮಾರು 26 ಜನ ಯಾತ್ರಾರ್ಥಿಗಳು, 2 ಜನ ಟೂರ್ ಮ್ಯಾನೇಜರ್, 3 ಜನ ಬಾಣಸಿಗರನ್ನು ಒಳಗೊಂಡ 31 ಜನರ ತಂಡವು ಸಪ್ಟೆಂಬರ್ 8ರಿಂದ ಸೆಪ್ಟೆಂಬರ್ 19ರವರೆಗೆ 11 ದಿವಸಗಳ ಚಾರುಧಾಮ ಕೇದರನಾಥ ಯಾತ್ರೆ ಮಂಗಳೂರಿನಿಂದ ಹೊರಟಿತು. ದೆಹಲಿ, ಹರಿದ್ವಾರ, ಗಂಗಾ ಆರತಿ, ಯಮುನೋತ್ರಿ, ಉತ್ತರ ಕಾಶಿ ವಿಶ್ವನಾಥ ಮಂದಿರ, ಗಂಗಾ ನದಿ, ಸೀತಾಪುರ, ಕೇದಾರನಾಥ ದೇವಾಲಯ, ಬದರಿನಾಥ ದೇವಾಲಯ, ಭೀಮನ ಸೇತುವೆ, ಗಣೇಶ ಗುಹೆ, ವ್ಯಾಸ ಗುಹೆ, ಪಿಪಿಎಲ್ ಕೋಟು, […]

Read More

ಸಾಪ್ತಾಹಿಕ ಭಜನಾ ಸಂಕೀರ್ತನೆ

ಮಂಗಳೂರು:- ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 05.09.2022ರ ಸೋಮವಾರದಂದು ಸಾಪ್ತಾಹಿಕ ಭಜನಾ ಸರಣಿ ಸಂಕೀರ್ತನೆ ನಡೆಯಿತು. ಯುವವಾಹಿನಿ (ರಿ.) ಬಜ್ಪೆ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಬಹಳ ಸುಶ್ರಾವ್ಯವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಾನಿಧ್ಯದಲ್ಲಿ ಗುರುಪೂಜೆ ನಡೆಸಿ ಆಡಳಿತ ಮಂಡಳಿ ಮತ್ತು ಆರ್ಚಕರು ಸೇವಾರ್ಥಿಗಳಿಗೆ ಪ್ರಸಾದ ನೀಡಿದರು. ಭಜನಾ ಸಲಹೆಗಾರರಾದ ರಾಮಚಂದ್ರ ಪೂಜಾರಿ ದಂಪತಿಗಳು ಭಜನಾ ಸೇವಾರ್ಥಿಗಳಿಗೆ ಶಾಲು ಹೊದಿಸಿ, ಅನುಗ್ರಹ ಪತ್ರ ನೀಡಿ ಗೌರವಿಸಿದರು. […]

Read More

ಡಿ ದೇವರಾಜ್ ಅರಸು ಜನ್ಮದಿನಾಚರಣೆ

ಮಂಗಳೂರು :- ರಾಜ್ಯ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಹಿಂದುಳಿದ ವರ್ಗಗಳ ಸಮಾಜ ಸುಧಾರಕ ಡಿ. ದೇವರಾಜ್ ಅರಸುರವರ 107ನೇ ಜನ್ಮದಿನಾಚರಣೆಯನ್ನು ದಿನಾಂಕ 29 ಆಗಸ್ಟ್ 2022 ರ ಮಂಗಳವಾರ ಯುವವಾಹಿನಿ ಸಭಾಂಗಣದಲ್ಲಿ ಘಟಕದ ವತಿಯಿಂದ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಬಂದಂತಹ ಅತಿಥಿಗಳನ್ನು, ಮಾಜಿ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಸಭೆಗೆ ಆದರ ಪೂರ್ವಕವಾಗಿ ಸ್ವಾಗತಿಸಿದರು. ಗತ ಸಭೆಯ ವರದಿಯನ್ನು ಜೊತೆ ಕಾರ್ಯದರ್ಶಿಯವರಾದ ನಾರಾಯಣ ಕರ್ಕೆರರವರು ವಾಚಿಸಿ ಅನುಮೋದನೆ ಪಡಕೊಂಡರು. ಗುರು […]

Read More

ಯುವವಾಹಿನಿ (ರಿ.) ಮಂಗಳೂರು ಘಟಕ ಚಿಕ್ಕಮಗಳೂರು ಪ್ರವಾಸ

ಮಂಗಳೂರು:- ದಿನಾಂಕ 27 ಮತ್ತು 28ರ ಆಗಸ್ಟ್ 2022ರಂದು ಚಿಕ್ಕಮಗಳೂರಿಗೆ ಕಿರು ಪ್ರವಾಸವನ್ನು ಮಂಗಳೂರು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರವಾಸಿ ತಾಣಗಳಾದ ಕೊಟ್ಟಿಗೆಹಾರ, ಬಾಬಾಬುಡನಗಿರಿ, ದತ್ತಪೀಠ, ಝರಿ ವಾಟರ್ ಪಾಲ್ಸ್, ಮಾಣಿಕ್ಯಧಾರ, ಮುಳ್ಳಯ್ಯನ ಗಿರಿ ಬೆಟ್ಟ ಹಾಗೂ ಸುಂದರ ಪ್ರಕೃತಿಯ ಮಡಿಲಲ್ಲಿರುವ ಆಶ್ರಯ ತಾಣ ಜಪ್ಪದ್ ಕಲ್ಲು ರೆಸಾರ್ಟಿನಲ್ಲಿ ಕ್ಯಾಂಪ್ ಫ್ಯೆರ್, ರೋಪ್ ವೇ, ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ಮ್ಯಾಚ್, ಮ್ಯೂಸಿಕಲ್ ಡ್ಯಾನ್ಸ್ ಮುಂತಾದ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 40 ಜನ ಹಿರಿಯರು ಮತ್ತು ನಾಲ್ಕು ಮಂದಿ […]

Read More

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆ

ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಘಟಕದಿಂದ ರಾಷ್ಟ್ರದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆಯು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮತ್ತು ಯುವವಾಹಿನಿ ಸಭಾಂಗಣದ ವರಾಂಡದಲ್ಲಿ 15 ಆಗಸ್ಟ್ 2022 ರಂದು ಸ್ವಾತಂತ್ರೋತ್ಸವ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಹೂಹಾರ ಹಾಕಿ, ದೀಪ ಬೆಳಗಿಸಿ, ಗುರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಘಟಕದ ಹಿರಿಯರಾದ ಶ್ರೀರಾಮಚಂದ್ರ ಪೂಜಾರಿ ದೇರೆಬೈಲುರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಕೇಂದ್ರ […]

Read More

ಬೆನ್ನಿ ಬೇಸಾಯ – ಕೃಷಿಯಲ್ಲಿ ನಮ್ಮ ಭವಿಷ್ಯ

ಮಂಗಳೂರು :- ದಿನಾಂಕ 24 ಜುಲೈ 2022ರ ಭಾನುವಾರದಂದು ಮೇರು ಕೊಪ್ಪಳ ರಸ್ತೆ ಸಂಕು ಪೂಜಾರಿ ಇವರ ಹಡೀಲು ಬಿದ್ದಿರುವ ಗದ್ದೆಯ ಭೂಮಿಯಲ್ಲಿ ಯುವವಾಹಿನಿಯ ಸದಸ್ಯರಿಂದ ಬಿತ್ತನೆ ಬಿತ್ತಿ ಕೃಷಿ ಮಾಡುವ ಹಾಗೂ ಭತ್ತದ ನೇಜಿ ನೆಡುವ ಹೊಸ ಪ್ರಯತ್ನ ನಡೆಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟುರವರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಘಟಕದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷರಾದ […]

Read More

ಸಾಹಿತ್ಯ ಸೌರಭ

ಮಂಗಳೂರು :- ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿಯ ಅಂಗವಾಗಿ ಶಾಲಾ ಮಕ್ಕಳಿಗೆ ಮತ್ತು ಘಟಕದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಯುವವಾಹಿನಿ ಸಭಾಂಗಣದಲ್ಲಿ ಮಂಗಳೂರು ಘಟಕದ ವತಿಯಿಂದ ದಿನಾಂಕ 24 ಜುಲೈ 2022 ರಂದು ಭಾನುವಾರ ಶಾಲಾ ಕಾಲೇಜಿನ ಮಕ್ಕಳಿಗೆ ಮತ್ತು ಘಟಕದ ಸದಸ್ಯರಿಗೆ ನಾರಾಯಣಗುರುಗಳ ವಿಷಯದ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೇಂದ್ರ ಸಮಿತಿಯ ಸಾಹಿತ್ಯ ಸೌರಭದ ಅಂಗವಾಗಿ ಕಲೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡಿ ಗುರು ತತ್ವ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!