
ಮಂಗಳೂರು ಮಹಿಳಾ ಘಟಕದ ಶಿವಗಿರಿ ಯಾತ್ರೆ
04-02-2017, 6:25 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ದಿನಾಂಕ 04.02.2017 ರಂದು ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು.
04-02-2017, 6:25 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ದಿನಾಂಕ 04.02.2017 ರಂದು ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು.
22-01-2017, 11:40 AM
ದಿನಾಂಕ 21-01-2017 ರಂದು ಮಂಗಳೂರು ಮಹಿಳಾ ಘಟಕದ ವತಿಯಿಂದ ಕೆಪಿಟಿ ಬಳಿಯ ಸರಕಾರಿ ಮಹಿಳಾ ತರಬೇತಿ ಕೇಂದ್ರದಲ್ಲಿ ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಇವರಿಂದ ಅಣುಕು ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಡಿಸ್ಟ್ರಿಕ್ಟ್ ಫೈಯರ್ ಆಫೀಸರ್ ಪರಮೇಶ್ವರ್, ಡೆಪ್ಯುಟಿ ಕಮಾಡೆಂಟ್ ಆಫ್ ಹೋಂಗಾರ್ಡ್ ಹಾಗೂ ಐ.ಟಿ.ಐ.ನ ಪ್ರೊಫೆಸರ್ ಎ. ಬಾಲಕೃಷ್ಣ ಇವರುಗಳು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಉಪಾಧ್ಯಕ್ಷ ಯಶವಂತ ಪೂಜಾರಿ, ಘಟಕದ ಸಲಹೆಗಾರ ಅಶೋಕ್‌ಕುಮಾರ್, ಮಂಗಳೂರು ಘಟಕದ ಮಾಜಿ ಅಧ್ಯಕ್ಷ […]
18-12-2016, 11:32 AM
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಟ್ಟಿಗೆ ಅಪೂರ್ವವಾದ, ಬಿಲ್ಲವ ಸಮಾಜದ ’ವಧೂವರರ ಸಮಾವೇಶ’ ಬಿಲ್ಲವ ಸಮಾಜ ಬಾಂಧವರ ಅಭೂತಪೂರ್ವ ಸ್ಪಂದನೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಮಹಿಳಾ ಘಟಕದ ಸಾಮಾಜಿಕ ಕಳಕಳಿಯ ವೈಶಿಷ್ಟ್ಯಪೂರ್ಣ ಪರಿಕಲ್ಪನೆಯೊಂದಿಗೆ ಯುವವಾಹಿನಿ (ರಿ) ಕೇಂದ್ರ ಸಮಿತಿ ಮತ್ತು ಇತರ ಘಟಕಗಳ ಸಹಕಾರದೊಂದಿಗೆ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದಿನಾಂಕ 18-12-2016 ರಂದು ಜರಗಿದ ಸಮಾವೇಶವು ಯುವವಾಹಿನಿಯ ಚಟುವಟಿಕೆಗಳಲ್ಲಿ ಒಂದು ಮೈಲುಗಲ್ಲಾಗಿ ಇತಿಹಾಸ ನಿರ್ಮಿಸಿತು. ಒಂದು ಮಹತ್ವಪೂರ್ಣ ಯೋಚನೆ, ಯೋಜನೆಯೊಂದಿಗೆ ಬಹಳಷ್ಟು […]
20-11-2016, 9:18 AM
ಯುವವಾಹಿನಿಯ ವರ್ಷದ ಪ್ರತಿಷ್ಠಿತ ಕಾರ್ಯಕ್ರಮ ಯುವವಾಹಿನಿ ಅಂತರ ಘಟಕ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ 20 ನವಂಬರ್ 2016 ನೇ ಆದಿತ್ಯವಾರ ಜರಗಿತು. ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಜರಗಿದ ಸಾಂಸ್ಕೃತಿಕ ಕಲಾ ರೂಪಕ ಸರ್ವರ ಪ್ರಶಂಸೆಗೆ ಪಾತ್ರವಾಯಿತು.
18-09-2016, 5:19 AM
ತಾ. 3-9-2016 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಸದಸ್ಯರಿಗೆ ಫಿನಾಯಿಲ್ ಹಾಗೂ ಲಿಕ್ವಿಡ್ ಸೋಪ್ ತಯಾರಿಸುವುದರ ಬಗ್ಗೆ ಜರಗಿದ ಮಾಹಿತಿ ಶಿಬಿರ. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ಲೇಡಿಹಿಲ್ ವೃತ್ತದಿಂದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದವರೆಗೆ ಜರಗಿದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ವೆನ್‌ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೆ (ಮನೆಯವರಿಗೆ) ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕದಿಂದ ಏರ್ಪಡಿಸಲಾಗಿತ್ತು. […]
21-08-2016, 5:49 AM
ದಿನಾಂಕ 21-08-2016ರಂದು ಮಂಗಳೂರು ಮಹಿಳಾ ಘಟಕದ ವತಿಯಿಂದ ಮಂಗಳೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ‘ಕರಾವಳಿ ಸಭಾಭವನ’ದಲ್ಲಿ ‘ಸೋಣ ಸಂಭ್ರಮ’ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಸಂತ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯರಾದ ಡಾ| ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಚಿತಾ ನಂದಗೋಪಾಲ್, ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಘಟಕದ ಸಲಹೆಗಾರರಾದ ಅಶೋಕ್ ಕುಮಾರ್ ಮತ್ತು ಸಾಧು ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಘಟಕದ ಅಧ್ಯಕ್ಷೆ […]
30-07-2016, 5:42 AM
ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 30-07-2016 ರಂದು ಬಲ್ಮಠದ ಶ್ರದ್ಧಾನಂದ ಆಶ್ರಮದ ಮಕ್ಕಳಿಗೆ ಕ್ಷೌರ ಸೇವೆಯನ್ನು (hair cutting) ಘಟಕದ ಕೆಲವು ಸೌಂದರ್ಯ ತಜ್ಞೆಯರಿಂದ ನಡೆಸಿಕೊಡಲಾಯಿತು. ಮಕ್ಕಳಿಗೆ ಸ್ವೀಟ್, ಬಿಸ್ಕೆಟ್, ಪೆನ್, ಪೆನ್ಸಿಲ್‌ಗಳನ್ನು ನೀಡಲಾಯಿತು. ಸುಮಾರು 35 ಮಕ್ಕಳು ಇವುಗಳ ಪ್ರಯೋಜನ ಪಡೆದರು.
18-07-2016, 8:18 AM
ಘಟಕದ ವತಿಯಿಂದ ತಾ. 16-7-2016 ರಂದು ಕೋಡಿಕಲ್ ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಸಸಿ ವಿತರಣೆ ಹಾಗೂ ಶಾಲೆಯ 30 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿರುತ್ತದೆ. ಕಾರ್ಯಕ್ರಮವನ್ನು ಕೋಡಿಕಲ್ ಬಿಲ್ಲವ ಸಂಘ ಇದರ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ದೇವೇಂದ್ರ ಕೋಟ್ಯಾನ್‌ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯ ಜಯಪ್ಪ ಅದ್ಯಪಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೀಣಾ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್, ಘಟಕದ ಸಲಹೆಗಾರರ ಸಾಧು ಪೂಜಾರಿ ಹಾಗೂ […]