11-06-2017, 12:41 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ದಿನಾಂಕ 11.06.2017ರಂದು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲಾಯಿತು.ಮಂದಾರ್ತಿ ದುರ್ಗಾಪರಮೇಶ್ವರಿ, ಗುಡ್ಡೇಟ್ಟು ಗುಹಾಲಯ,ಉದ್ಭವ ಮಹಾಗಣಪತಿ ದೇವಸ್ಥಾನ, ಕಮಲಶಿಲೆಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂತಾದ ದೇವಸ್ಥಾನಗಳಿಗೆ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ಬೇಟಿನೀಡಿದರು. ಸಂಪರ್ಕದ ನೆಲೆಯಲ್ಲಿ ಈ ಪ್ರವಾಸ ಯಶಸ್ವಿಯಾಗಿದೆ ಎಂದು ಕ್ಷೇತ್ರ ದರ್ಶನ ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ವಸಂತಿ ಬಿ ಹಾಗೂ ಶಶಿಕಲಾ ಅರ್ ತಿಳಿಸಿದ್ದಾರೆ.
Read More
10-06-2017, 7:34 AM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಮಾಹಿತಿ ಕಾರ್ಯಾಗಾರ ದಿನಾಂಕ 10.06.2017 ರಂದು ಮಂಗಳೂರಿನ ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಬಗ್ಗೆ ಮಂಗಳೂರು ಉತ್ತರ ವಲಯದ ಪೋಲಿಸ್ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀ ಮಂಜುನಾಥ್ ಅವರು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಆರ್ಥಿಕ ವಾಗಿ ಹಿಂದುಳಿದ ಮೂರು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಲಹೆಗಾರರಾದ ಟಿ.ಶಂಕರ ಸುವರ್ಣ, […]
Read More
03-06-2017, 9:00 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಎಚ್ ಐ ವಿ ಜತೆ ಬದುಕುವ ಮಕ್ಕಳ ಆಶ್ರಯ ತಾಣ ಸಂವೇದನಾಗೆ 03.06.2017 ರಂದು ಭೇಟಿ ನೀಡಿದರು ಆಶ್ರಯತಾಣದ ಮಕ್ಕಳೊಂದಿಗೆ ಬೆರೆತು ಅವರ ಯೋಗ ಕ್ಷೇಮ ವಿಚಾರಿಸಿದರು. ಮಕ್ಕಳಿಗೆ ಉಪಹಾರ,ಸಿಹಿತಿಂಡಿ, ದಿನಸಿ ಸಾಮಗ್ರಿ ಹಾಗೂ ರೂ.2500/- ಮಹಿಳಾ ಘಟಕದ ವತಿಯಿಂದ ನೀಡಲಾಯಿತು. ಯುವವಾಹಿನಿ ಮಂಗಳೂರು ಮ ಹಿಳಾ ಘಟಕದ ಅಧ್ಯಕ್ಷೆ ಸುಪ್ರೀತ ಪೂಜಾರಿ, ಕಾರ್ಯದರ್ಶಿ ಸುನೀತಾ, ಉಪಾದ್ಯಕ್ಷೆ ರಶ್ಮಿ ಚಂದ್ರಶೇಖರ್ , ವಸಂತಿ ಬಿ,ಶುಭ ರಾಜೇಂದ್ರ, ಸುರೇಖ,ಕುಶಲಾಕ್ಷಿ ಯಶವಂತ್, ಶರ್ಮಿಳ […]
Read More
28-05-2017, 11:57 AM
ಮಂಗಳೂರು ತಾಲೂಕು ವ್ಯಾಪ್ತಿಯ ಯುವವಾಹಿನಿ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ ಯುವ ಕಲೋತ್ಸವ ದಿನಾಂಕ 28.05.2017 ನೇ ಆದಿತ್ಯವಾರ ಮಂಗಳೂರು ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. ಯುವವಾಹಿನಿಯ ನೂತನ ಸಭಾಂಗಣ ಹಾಗೂ ಕಛೇರಿಯ ಉದ್ಘಾಟನೆಯ ಸವಿನೆನಪಿಗಾಗಿ ಯುವ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆ ನಡೆಸಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ ಒಟ್ಟು 8 ಯುವವಾಹಿನಿ ಘಟಕಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ರಮೇಶ್ ಕಲ್ಮಾಡಿ,ಜಗನ್ ಪವಾರ್ ಬೇಕಲ್,ಶ್ರೀಮತಿ ರತ್ನಾವತಿ ಬೈಕಾಡಿ,ಶ್ರೀಮತಿ ಮಲ್ಲಿಕಾ ಸಿದ್ದಕಟ್ಟೆ ತೀರ್ಪುಗಾರರಾಗಿ ಸಹಕಾರ […]
Read More
13-05-2017, 12:39 PM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 10.05.2017 ರಿಂದ ದಿನಾಂಕ 13.05.2017 ರ ವರಗೆ ನಾಲ್ಕು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ಮಂಗಳೂರಿನ ಕೊಟ್ಟಾರದ ಯುವವಾಹಿನಿ ಕೇಂದ್ರ ಕಛೇರಿಯಲ್ಲಿ ಜರುಗಿತು. ಖ್ಯಾತ ಮರಳು ಶಿಲ್ಪಿ ಹಾಗೂ ಮಣ್ಣಿನ ಕಲಾಕೃತಿಯ ಕಲಾವಿದ ಹರೀಶ್ ಕೊಡಿಯಾಲಬೈಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮುಖವಾಡ ಹಾಗೂ ಮಣ್ಣಿನ ಕಲಾಕೃತಿ ರಚನೆಯ ಬಗ್ಗೆ ಮಕ್ಕಳಿಗೆ ತರಬೇತಿ ನೀಡಿದರು ಹಾಗೂ ಶ್ರೀಮತಿ ಶುಭಾ ರಾಜೇಂದ್ರ ಸಹಕಾರ ನೀಡಿದರು. ಮಂಗಳೂರು ಮಹಿಳಾ ಘಟಕದ ಸದಸ್ಯೆಯರಾದ […]
Read More
16-04-2017, 12:35 PM
ಮಹಿಳೆಯರು ಪುರುಷರಿಗಿಂತ ಮಾನಸಿಕವಾಗಿ ದೈಹಿಕವಾಗಿ ಬಲಾಡ್ಯರು ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಶಸ್ಸು ಗಳಿಸಲು ಸಾಧ್ಯವಾಗಿದೆ. ಮಾನವ ಧನಾತ್ಮಕ ಮತ್ತು ಋಣಾತ್ಮಕವೂ ಆದ ಚಿಂತನೆ ಮತ್ತು ಗುಣಗಳ ವಿಭಿನ್ನ ರೀತಿಯ ಸಂಕೇತ ತನ್ನಲ್ಲಿರುವ ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಗೌರವ ಪಡೆದುಕೊಳ್ಳುತ್ತಾರೆ. ಇಂತಹ ಗುಣವಂತರನ್ನು ಸಮಾಜ ಅರಸಿಕೊಂಡು ಬರುತ್ತದೆ, ಆದ್ದರಿಂದ ಮನಸ್ಸು ಮನಸ್ಸುಗಳ ಮಧ್ಯೆ ಸೇತುವೆ ನಿರ್ಮಾಣದ ಕಾರ್ಯ ನಾವು ಮಾಡಬೇಕಾಗಿದೆ ಎಂದು ಬೆಳ್ತಂಗಡಿ DKRDS ಯೋಜನಾಧಿಕಾರಿ ಶೈಲು ಬಿರ್ವ ಅಗತ್ತಾಡಿ ಅಭಿಪ್ರಾಯಪಟ್ಟರು. ಅವರು 16.04.2017 […]
Read More
01-04-2017, 1:10 PM
ಆಧುನಿಕ ವೈದ್ಯಕೀಯ ಕ್ಷೇತ್ರವು ತುಂಬಾ ಮುಂದುವರಿದಿದ್ದು ಆರಂಬಿಕ ಹಂತದಲ್ಲೇ ಗುರುತಿಸಿದರೆ ಕ್ಯಾನ್ಸರ್ ಸಂಪೂರ್ಣ ಗುಣಪಡಿಸಬಹುದು. ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಹಾಗೂ ಆರೋಗ್ಯದ ಮೇಲೆ ಇರುವ ನಿರ್ಲಕ್ಷತನದಿಂದ ಸ್ತನ ಕ್ಯಾನ್ಸರ್ ವ್ಯಾಪಕವಾಗಿ ಹಬ್ಬಿದೆ ಎಂದು ಡಾ.ವೆಂಕಟೇಶ ಸಂಜೀವ ಅಭಿಪ್ರಾಯ ಪಟ್ಟರು. ಅವರು ಮಂಗಳೂರು ರಥಬೀದಿಯ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಮಹಿಳಾ ವೇದಿಕೆ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 01.04.2017 ರಂದು ಜರುಗಿದ ಮಹಿಳಾ ಆರೋಗ್ಯ ಮತ್ತು ಸ್ತನ ರೋಗಗಳ […]
Read More
05-03-2017, 11:28 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ತಾ 5-3-2017 ನೇ ಆದಿತ್ಯವಾರ ಯುವವಾಹಿನಿ ಅಂತರ್ ಘಟಕ ಮಹಿಳಾ “ದೇಯಿ ಬೈದ್ಯೆದಿ ಕ್ರೀಡಾಕೂಟ” ಕುದ್ರೋಳಿ ಶ್ರೀ ನಾರಾಯಣಗುರು ಕಾಲೇಜು ಮೈದಾನದಲ್ಲಿ ನಡೆಯಿತು. ಕ್ರೀಡೆಯು ಮಾನವೀಯ ಸಂಬಂಧ ಬೆಸೆದು ಸಾಮರಸ್ಯ ಮೂಡಿಸುತ್ತದೆ. ಯುವವಾಹಿನಿ ಮಹಿಳಾ ಘಟಕವು ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯವಾದುದು ಎಂದು ಕುದ್ರೋಳಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಲತಾ ಎನ್. ಸುವರ್ಣರವರು ಕ್ರೀಡಾಕೂಟ ಉದ್ಘಾಟಿಸಿ ತಿಳಿಸಿದರು. ಯುವವಾಹಿನಿ ಕೆಂದ್ರಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಮಹಿಳಾ ಘಟಕದ […]
Read More
12-02-2017, 12:01 PM
ತಾ. 12-2-2017 ರಿಂದ 15-2-2017 ರವರೆಗೆ ಯುವವಾಹಿನಿ ಕೇಂದ್ರ ಸಮಿತಿಯ ಕಛೇರಿಯಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ವತಿಯಿಂದ ಭಾರತ ಸರಕಾರ ದತ್ತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಇದರ ಸಹಯೋಗದೊಂದಿಗೆ 4 ದಿನಗಳ ಅಸಂಘಟಿತ ಕಾರ್ಮಿಕರ ಕಾರ್ಯಾಗಾರ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಹಾಗೂ ಕೇರ್ಸ್ ಮಂಗಳೂರು ಇದರ ನಿರ್ದೇಶಕರಾಗಿರುವ ಸತೀಶ್ ಮಾಬೆನ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ […]
Read More
04-02-2017, 6:25 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ದಿನಾಂಕ 04.02.2017 ರಂದು ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು.
Read More