07-01-2018, 1:06 PM
ಮಂಗಳೂರು: ಅಭಿವೃದ್ಧಿ ಆಗಿದ್ದೇವೆ ಪರಿವರ್ತನೆ ಆಗಿದೆ ಎಂದು ನಾವೆಷ್ಟೇ ಅಂದುಕೊಂಡರೂ ಸಮಾಜದಲ್ಲಿ ಇಂದಿಗೂ ಸಮಸ್ಯೆಗಳು ಇವೆ, ಜನರ ಈ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿದಾಗ ಜನ ಸಂಘಟನೆಗೆ ಹತ್ತಿರವಾಗುತ್ತಾರೆ ಮತ್ತು ಗೌರವಿಸುತ್ತಾರೆ, ಯುವವಾಹಿನಿಯ ಈ ಸಾರ್ಥಕ ಕೆಲಸಗಳಿಂದಲೇ ಅದು ಜನ ಮಾನಸದಲ್ಲಿ ನೆಲೆ ಕಂಡುಕೊಂಡಿದೆ ಎಂದು ಉದ್ಯಮಿ ಸಂತೋಷ್ ಕುಮಾರ್ ಉಗ್ಗೆಲ್‍ಬೆಟ್ಟು ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಹಕಾರದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಬಿಲ್ಲವ ವಧುವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಮುಖ್ಯ […]
Read More
01-11-2017, 8:58 AM
ಯುವವಾಹಿನಿ ಸಂಸ್ಥೆಯ ಮೂವತ್ತು ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಪ್ರದಾನಿಸಿದರು. ಸಮಾಜದಲ್ಲಿ ತೀರಾ ಹಿಂದುಳಿದಿರುವ ೯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಚಿಮಣಿ ಬೆಳಕಿನ ಮನೆಗಳಿಗೆ ವಿದ್ಯುತ್ ಭಾಗ್ಯ, ಗ್ರಾಮಗ್ರಾಮಗಳಲ್ಲಿ ಆರೋಗ್ಯ ಶಿಬಿರ, ನೂರಕ್ಕೂ ಅಧಿಕ […]
Read More
30-09-2017, 3:15 AM
ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 21.09.2017 ರಿಂದ 30.09.2017 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಕಂಕನಾಡಿ, ಕುಳೂರು, ಕೊಲ್ಯ,ಸುಳ್ಯ, ಮಾಣಿ ಘಟಕಗಳು ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ […]
Read More
09-09-2017, 1:56 PM
ಕೃಷಿಕರಿಗೆ ಸೋಣ ತಿಂಗಳು ಸಂಭ್ರಮದ ತಿಂಗಳು ಆಗಿರುವುದರಿಂದ ಈ ಕಾರ್ಯಕ್ರಮದ ಶೀರ್ಷಿಕೆ ಅರ್ಥಪೂರ್ಣವಾಗಿದೆ.ತಂತ್ರಜ್ಞಾನದಿಂದ ಮನಸ್ಸಿನ ಬದಲಾವಣೆ ಆಗಬಹುದೇ ಹೊರತು ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಪಾಠವನ್ನು ಕಲಿಸುವುದಿಲ್ಲ ಹಾಗಾಗಿ ಸಂಸ್ಕಾರದ ಜತೆಗೆ ಜೀವನ ಮೌಲ್ಯವನ್ನು ಅಳವಡಿಸುವುದು ಇಂದು ತೀರಾ ಅಗತ್ಯವಾಗಿದೆ ಎಂದು ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಕೆ.ಎ.ರೋಹಿಣಿ ಅಭಿಪ್ರಾಯ ಪಟ್ಟರು.ಅವರು ದಿನಾಂಕ 09.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ಸೋಣ ಸಂಭ್ರಮ ಕಾರ್ಯಕ್ರಮದಲ್ಲಿ […]
Read More
06-09-2017, 12:43 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಬ್ರಹ್ಮಶ್ರೀ ನಾರಾಯಣಗುರುಗಳ 163 ನೇ ಜನ್ಮದಿನಾಚರಣೆ ಪ್ರಯುಕ್ತ ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ದಿನಾಂಕ 06.09.2017ರಂದು ಗುರುವಂದನೆ ಕಾರ್ಯಕ್ರಮ ಜರಗಿತು. ಮಂಗಳೂರಿನ ಬೆಸೆಂಟ್ ಮಹಿಳಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಪ್ಪಲತಾ ಹಾಗೂ ಸಿ.ಇ.ಒ ಪ್ರಭಾ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ, ಕಾರ್ಯದರ್ಶಿ ಸುನೀತಾ, ಉಪಾಧ್ಯಕ್ಷರಾದ ರಶ್ಮಿ ಚಂದ್ರಶೇಖರ್, ನಿಕಟ ಪೂರ್ವ ಅಧ್ಯಕ್ಷರಾದ ವಿದ್ಯಾ ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು ಅಂದು ಬೆಳಗ್ಗೆ […]
Read More
17-08-2017, 3:42 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 17.08.2017 ರಂದು ಪರಪಾದೆ ಸರಕಾರಿ ಶಾಲೆಯಲ್ಲಿ ಆವರಣದಲ್ಲಿ ಔಷಧೀಯ ಸಸ್ಯ ಹಾಗೂ ಇತರ ಉಪಯುಕ್ತ ಸಸ್ಯಗಳನ್ನು ನೀಡಲಾಯಿತು. ಅರಣ್ಯ ಇಲಾಖೆಯ ರೇಂಜರ್ ಶ್ರೀಧರ್ ಇವರು ಈ ಕಾರ್ಯಕ್ರಮಕ್ಜೆ ಸಹಕಾರ ನೀಡಿದರು. ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ, ಕಾರ್ಯದರ್ಶಿ ಸುನೀತಾ ಮತ್ತಿತರರು ಉಪಸ್ಥಿತರಿದ್ದರು.
Read More
12-08-2017, 1:33 PM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದಿಂದ ವನಮಹೋತ್ಸವ ಕಾರ್ಯಕ್ರಮವು ದಿನಾಂಕ 12.08.2017 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಪಾದೆಯಲ್ಲಿ ನಡೆಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ವಲಯ ಆರಣ್ಯಧಿಕಾರಿ ಶ್ರೀ ಪಿ ಶ್ರೀಧರ್ ಮಾತನಾಡಿ ಅರಣ್ಯ ಸಂಪತ್ತಿನ ಮಹತ್ವ ಅರಿತು ಬಾಳೋಣ, ನೀರಿಗಾಗಿ ಆರಣ್ಯ ಎಂಬ ಘೋಷಣೆಯ ಮೂಲಕ ವನಮಹೋತ್ಸವ ಆಚರಣೆ ಅರ್ಥಪೂರ್ಣವಾಗಿದೆ ಹಾಗೂ ಜಾಗವನ್ನು ಒದಗಿಸಿಕೊಟ್ಟಲ್ಲಿ 50 ಗಿಡಗಳನ್ನು ನೆಟ್ಟು ಸುತ್ತ ಬೇಲಿ ಹಾಕಿ ಕೊಡುವ ಸರಕಾರದ ಉಚಿತ ಯೋಜನೆಯ ಸದುಪಯೋಗ ಪಡೆಯುವಂತೆ ವಿನಂತಿಸಿದರು.. ಕಾರ್ಯಕ್ರಮದಲ್ಲಿ ಕೇOದ್ರ […]
Read More
05-08-2017, 2:03 PM
ಹೆಣ್ಣು ಎಂದಿಗೂ ಅಶಕ್ತಳಲ್ಲ ಅವಳ ರಕ್ಷಣೆಯನ್ನು ಮಾಡುವ ಸಾಮರ್ಥ್ಯ ಆಕೆಗೆ ಇದೆ.ಆದರೆ ಈ ಬಗ್ಗೆ ಹೆಣ್ಣಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು. ಸ್ರೀ ದುರ್ಗಾ ಶಕ್ತಿಯ ಪ್ರತಿರೂಪ ಪ್ರತಿ ಮಹಿಳೆಯರಲ್ಲಿಯೂ ದುರ್ಗೆಯ ಶಕ್ತಿ ಅಡಕವಾಗಿದೆ,ಅದನ್ನು ಜಾಗೃಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ರಣರಾಗಿಣಿ ಮಹಿಳಾ ಶಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕಾರರಾದ ಶ್ರೀಮತಿ ಲಕ್ಷ್ಮೀ ಪೈ ತಿಳಿಸಿದರು. ಅವರು ದಿನಾಂಕ 05.08.2017 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿದ […]
Read More
16-07-2017, 8:13 AM
ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 16.07.2017 ರಂದು ಸೋಪ್, ಸೋಪ್ ವಾಟರ್, ಬಾತ್ ಸೋಪ್ ತಯಾರಿಸುವ ಬಗ್ಗೆ ತರಬೇತಿಯನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸುನೀತಾ ರವರು ಪ್ರಾತ್ಯಕ್ಷಿಕೆಯ ಮೂಲಕ ಈ ಕಾರ್ಯಾಗಾರ ನಡೆಸಿಕೊಟ್ಟರು. ಅಧ್ಯಕ್ಷರಾದ ಸುಪ್ರೀತಾ ಪೂಜಾರಿ ಹಾಗೂ ಸದಸ್ಯರು ಕಾರ್ಯಾಗಾರದ ಪ್ರಯೋಜನ ಪಡೆದರು.
Read More
18-06-2017, 12:42 PM
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 18.06.2017 ರಂದು ಅಮ್ರತಾನಂದಮಯಿ ಟ್ರಸ್ಟ್ ಇದರ ಸಹಯೋಗದೊಂದಿಗೆ ಮಂಗಳೂರಿನ ಉರ್ವಾಸ್ಟೊರ್, ಕೊಟ್ಟಾರ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ,ಕಾರ್ಯದರ್ಶಿ ಸುನೀತಾ,ಉಪಾಧ್ಯಕ್ಷರಾದ ರಶ್ಮಿ ಚಂದ್ರಶೇಖರ್,, ವಸಂತಿ, ಶರ್ಮಿಳಾ, ಕುಶಲಾ ಯಶವಂತ್, ಸುರೇಖಾ,ಶುಭಾ ರಾಜೇಂದ್ರ, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಉಮಾಶ್ರೀಕಾಂತ್ ಮತ್ತಿತರರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು
Read More