
ಅಭಿನಂದನೆಗಳು
21-04-2025, 7:49 AM
06-04-2025, 1:44 PM
ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ ನಾಗೇಶ್ ಅಮೀನ್ ಮುಲ್ಲಕಾಡು, ಅಧ್ಯಕ್ಷೀಯ ಭಾಷಣದಲ್ಲಿ ನನ್ನ ಒಂದು ವರ್ಷದ ಅವಧಿಯಲ್ಲಿ ಅಧ್ಯಕ್ಷನಾಗಿ ಯಶಸ್ಸು ಪಡೆಯಲು ಮೂಲ ಕಾರಣವೇ ಭಜನೆ ಹಾಗೂ ವೈಯಕ್ತಿಕನಲ್ಲಿ ಬದುಕಿನಲ್ಲಿ ಮಾಡಿದ ಹೊಂದಾಣಿಕೆ ಎಂದರು. ಭಜನೆ ನನ್ನ ಜೀವನದ ಅವಿಭಾಜ್ಯ […]
28-01-2025, 4:36 PM
ವಿಶ್ವ ಬಿಲ್ಲವ ಸಮುದಾಯದ ಯುವಶಕ್ತಿಯ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಬೆಳೆದು ನಿಂತಿರುವ ಯುವವಾಹಿನಿ ಸಂಘಟನೆ, ದೇಶದ ಯಾವುದೇ ಸಾಮುದಾಯಿಕ ಚೌಕಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳಲ್ಲೇ ಮುಂಚೂಣಿಯಲ್ಲಿರುವ ಬಲಿಷ್ಠ ಮತ್ತು ಶಿಸ್ತುಬದ್ಧ ಸಂಸ್ಥೆಯೆಂಬ ಕೀರ್ತಿಗೆ ಭಾಜನವಾಗಿದೆ. ವಿದ್ಯೆ – ಉದ್ಯೋಗ- ಸಂಪರ್ಕ ಎಂಬ ಉದಾತ್ತ ಧ್ಯೇಯವಾಕ್ಯವನ್ನಿಟ್ಟುಕೊಂಡು ನಮ್ಮ ಹಿರಿಯರು 1987 ರಲ್ಲಿ ಸ್ಥಾಪಿಸಿದ ಯುವ ವಾಹಿನಿ ಪ್ರಸ್ತುತ 35 ಶಾಖೆಗಳ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲೂ ಹಬ್ಬಿ ನಿಂತಿದೆ. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕೀರ್ತಿ ಶಿಖರವಾಗಿ ಬೆಳಗುತ್ತಿರುವ ಯುವವಾಹಿನಿ […]
24-08-2024, 3:32 AM
ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥವನ್ನು ದಿನಾಂಕ 24-08-2024ನೇ ಶನಿವಾರ ಕುದ್ರೋಳಿ ಶ್ರೀ ಗ್ರಂಥ ಗೋಕರ್ಣನಾಥ ಕ್ಷೇತ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು. ಜಗತ್ತಿಗೆ ಮಾನವೀಯತೆಯ ಸಂದೇಶ ನೀಡಿದವರಲ್ಲಿ ಬುದ್ಧ ಮತ್ತು ಬಸವಣ್ಣರ ಬಳಿಕದ ಸ್ಥಾನ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದು ಗ್ರಂಥ […]
16-06-2024, 4:43 PM
ಮಂಗಳೂರು: ಭಾನುವಾರ ದಿನಾಂಕ 16-06-2024 ರಂದು ಯುವವಾಹಿನಿ(ರಿ.) ಮಂಗಳೂರು ಘಟಕ, ಯುವವಾಹಿನಿ(ರಿ.) ಮಹಿಳಾ ಘಟಕ, ಪ್ರಗತಿ ಮಹಿಳಾ ಮಂಡಲ, ಬ್ರಹ್ಮ ಕುಮಾರಿ ಮಂಗಳೂರು, ಹಾಗೂ ಆತ್ಮಶಕ್ತಿ ಸಹಕಾರಿ ಸಂಘ. ಎಲ್ಲರ ಸಂಯೋಜನೆಯೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಸಾಮಾನ್ಯ ವೈದ್ಯಕೀಯ ಶಿಬಿರ, ಉರ್ವಸ್ಟೋರ್ ನ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಪ್ರಗತಿ ಮಹಿಳಾ ಮಂಡಲದಲ್ಲಿ ನಡೆಯಿತು. ಬ್ರಹ್ಮ ಕುಮಾರಿ ಜಯಶ್ರೀ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಪ್ರಸ್ತುತ ಸಮಯದಲ್ಲಿ ಆರೋಗ್ಯ ಶಿಬಿರದ ಮಹತ್ವವನ್ನು ತಿಳಿಸಿದರು. ಆತ್ಮಶಕ್ತಿ ಸಹಕಾರಿ ಸಂಘದ […]
01-06-2024, 2:25 PM
ಮಂಗಳೂರು: 01-06-2024 ರಂದು ಘಟಕದ ಸಭಾಂಗಣದಲ್ಲಿ ನಡೆದ ಟೆರೇಸಿ ಗಾರ್ಡನಿಂಗ್ ಉಚಿತ ಮಾಹಿತಿ ಕಾರ್ಯಾಗಾರವನ್ನು ಮಂಗಳೂರು ಮಹಿಳಾ ಘಟಕದ ಸದಸ್ಯೆಯವರಾದ ಶ್ರೀಮತಿ ವಿದ್ಯಾ ರಾಕೇಶ್ ಮತ್ತು ಅವರ ತಂಡ ಬಹಳ ಮಹತ್ವಪೂರ್ಣವಾಗಿ ನಡೆಸಿಕೊಟ್ಟರು. ಸಸಿ ನೆಡುವ ಹಾಗೂ ಕಸಿ ಕಟ್ಟುವ ವಿಧಾನದ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಬಾಗವಹಿಸಿದ ಅರವತ್ತಕ್ಕೂ ಹೆಚ್ಚು ಮಂದಿಗೆ ಔಷದೀಯ ಗಿಡ, ಪಲಪುಷ್ಪದ ಗಿಡಗಳನ್ನು ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಕೇಂದ್ರ […]
17-05-2024, 4:51 PM
ಮಂಗಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ಈಶ ಫೌಂಡೇಶನ್ ಕೊಯಂಬತ್ತೂರು ಪ್ರವಾಸವನ್ನು ದಿನಾಂಕ 17-05-2024 ರಿಂದ 19-05-2024 ರವರೆಗೆ ಜೊತೆ ಕಾರ್ಯದರ್ಶಿ ಕೀರ್ತನಾ ಇವರ ಸಂಚಾಲಕತ್ವದಲ್ಲಿ ಹಾಗೂ ಸದಸ್ಯರಾದ ತುಳಸಿ ಸುಜೀರ್ ಇವರ ಸಹ ಸಂಚಾಲಕತ್ವದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 17-05-2024 ರಂದು ರಾತ್ರಿ 10.30 ರ ಸಮಯಕ್ಕೆ ಎಲ್ಲರೂ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬಂದು ಸೇರಿ ಅಲ್ಲಿಂದ 11.55 ರ ವೆಸ್ಟ್ ಕೋಸ್ಟ್ ರೈಲಿನಲ್ಲಿ 95 ಜನರ ತಂಡ ಈಶ ಫೌಂಡೇಶನ್ ಪ್ರವಾಸ ಹೊರಟರು. ರಾತ್ರಿ […]
18-03-2024, 9:06 AM
ಮಂಗಳೂರು: ಯುವವಾಹಿನಿ(ರಿ.) ಮಂಗಳೂರು ಘಟಕದ ವತಿಯಿಂದ ಪ್ರತಿ ಸೋಮವಾರ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿಯಲ್ಲಿ ನಡೆಸಿಕೊಂಡು ಬರುತ್ತಿರುವ ಭಜನಾ ಸಂಕೀರ್ತನೆಯ ಅಂಗವಾಗಿ ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ದಿನಾಂಕ 18-03-2024 ಸೋಮವಾರದಂದು ಯುವವಾಹಿನಿ(ರಿ.) ಕೂಳೂರು ಘಟಕದ ಸದಸ್ಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ಒಂದನೇ ಉಪಾಧ್ಯಕ್ಷರಾದ ಲತೀಶ್ ಪೂಜಾರಿ, ಎರಡನೇ ಉಪಾಧ್ಯಕ್ಷರಾದ ಗೀತಾ, ಮಾಜಿ ಅಧ್ಯಕ್ಷರಾದ ದೀಕ್ಷಿತ್ ಸಿ. ಎಸ್., ಮಾರ್ಗದರ್ಶಕರಾದ ಜಯಾನಂದ ಅಮೀನ್, ಚಂದಪ್ಪ ಸನಿಲ್, ನಾರಾಯಣ ಗುರು ತತ್ವ […]
20-02-2024, 12:11 PM
ಮಂಗಳೂರು : ಯುವವಾಹಿನಿ ಸಂಸ್ಥೆಯು ಯುವಕರ ಆಕರ್ಷಣೆಯ ಮೂಲಕ ಯುವಜನತೆಯಲ್ಲಿ ಹೊಸ ಸ್ಪೂರ್ತಿ ತುಂಬಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ.ಪೂಜಾರಿ ತಿಳಿಸಿದರು. ಅವರು 2024 ಫೆಬ್ರವರಿ 20 ರಂದು ಮಂಗಳೂರಿನ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ ಮಂಗಳೂರು ಘಟಕದ ಪದಗ್ರಹಣ ಸಮಾರಂಭದಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಶ್ರೀನಿವಾಸ್ ಬಲ್ಕ್ ಕ್ಯಾರಿಯರ್ ಇದರ ಮಾಲೀಕರಾದ ಲೋಕೇಶ್ ಆರ್ ಅಮೀನ್ ಇವರು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು, ಕೇಂದ್ರ […]
30-01-2024, 4:11 AM
ಮಂಗಳೂರು: ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಮಾಜಮುಖಿ ಕಾರ್ಯಕ್ಕೆ ಸಮಾಜದ ಸರ್ವರ ಬೆಂಬಲ ಅತ್ಯಂತ ಸಂತಸ ತಂದಿದೆ, ಆರ್ಥಿಕ ಕ್ರೋಡೀಕರಣಕ್ಕಾಗಿ ನಡೆದ ನಾಟಕ ಪ್ರದರ್ಶನದಲ್ಲಿ ಮಂಗಳೂರು ಪುರಭವನ ಜನಸ್ತೋಮದಿಂದ ತುಂಬಿರುವುದು ಮಹಿಳಾ ಘಟಕದ ಶ್ರಮಕ್ಕೆ ಸಂದ ಪ್ರತಿಫಲ ಎಂದು ಅಸಿಸ್ಟೆಂಟ್ ಕಮಿಷನರ್ ಅಫ್ ಪೋಲಿಸ್ ಮಹೇಶ್ ಕುಮಾರ್ ತಿಳಿಸಿದರು. ಅವರು ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಘಟಕದ ಆರ್ಥಿಕ ಬಲವರ್ಧನೆಗಾಗಿ ದಿನಾಂಕ 30-01-2024 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಕಥೆ ಎಡ್ಡೆಂಡು ನಾಟಕ ಪ್ರದರ್ಶನದಲ್ಲಿ ಜರುಗಿದ ಸಭಾ […]