13-07-2019, 8:26 AM
ಕೂಳೂರು : ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 13.07.19 ರಂದು ಐ. ಎ. ಎಸ್, ಕೆ. ಎ. ಎಸ್ ಪ್ರೇರಣಾ ಶಿಬಿರ ಕಾರ್ಯಕ್ರಮವು ಸರ್ಕಾರಿ ಪದವಿ ಪೂರ್ವ ಕಾಲೇಜು, ಕಾವೂರು ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಡೆಸಿಕೊಡಲು ಸರ್ವಜ್ಞ ಐ. ಎ. ಎಸ್ ಅಕಾಡೆಮಿಯ ತರಬೇತುದಾರರಾದ ಸುರೇಶ್.ಎಮ್.ಎಸ್ ರವರು ಆಗಮಿಸಿದ್ದರು. ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ತಾರಾ. ಯು. ರಾವ್ ರವರು ಮಾತನಾಡಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಶಿಸಿದರು. […]
Read More
07-07-2019, 3:27 AM
ಕೂಳೂರು : ಮಾನವನ ದೇಹದಲ್ಲಿ ಸಮತೋಲನ ಎಷ್ಟು ಮುಖ್ಯವೋ ಅದೇ ರೀತಿ ಭೂಮಿಯ ಸಮತೋಲನವೂ ತುಂಬಾ ಮುಖ್ಯ ಎಂದು ಮಂಗಳೂರು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಪ್ರೊಫೆಸರ್ ರಾಧಾಕೃಷ್ಣ ತಿಳಿಸಿದರು ಇವರು ದಿನಾಂಕ 07.07.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ ಗಿಡ ಬೆಳೆಸಿ ಮರ ಉಳಿಸೋಣ-ವನಮಹೋತ್ಸವ ನಾಡಿನ ಜೀವೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಅತಿಥಿಗಳು ಸೇರಿ ಗಿಡಗಳಿಗೆ […]
Read More
23-06-2019, 1:58 PM
ಕೂಳೂರು : ಒಳ್ಳೆಯ ಆರಂಭ, ಒಳ್ಳೆಯ ಅಂತ್ಯ, ನಡುವೆ ಹೂರಣ ಅದೇ ಭಾಷಣ. ಎಂದು ಅಂತರರಾಷ್ಟ್ರೀಯ ಮಟ್ಟದ ಜೆಸಿಎ ತರಬೇತುದಾರರಾದ ಸುಧಾಕರ್ ಕಾರ್ಕಳ ತಿಳಿಸಿದರು. ಅವರು ದಿನಾಂಕ 23.06.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ ನಡೆದ ಯುವಚೈತನ್ಯ- 2019-20 ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಬಿಲ್ಲವ ಸಮುದಾಯದ ಉದ್ಧಾರಕ್ಕಾಗಿ ತಾನು ಇಂತಹ ತರಬೇತಿ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದಾಗಿಯೂ, ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದವರೂ ಉತ್ತಮ ತರಬೇತುದಾರರಾಗಬೇಕು ಎಂದು ಆಶಿಸಿದರು. ಇವರ ಜೊತೆ ಇನ್ನೋರ್ವ ಜೆಸಿಎ ತರಬೇತುದಾರರಾದ […]
Read More
13-06-2019, 2:39 PM
ಕೂಳೂರು : ಯುವವಾಹಿನಿ ಕೂಳೂರು ಘಟಕದ ವತಿಯಿಂದ ಕಿಟ್ಟೆಲ್ ಪ್ರೌಢಶಾಲೆ ಗೋರಿಗುಡ್ಡೆ ಇಲ್ಲಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ದಿನಾಂಕ 13.06.19 ರಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಶಾಲೆಯಲ್ಲಿ ನಡೆಯಿತು. ಶಾಲಾ ಪ್ರಾಂಶುಪಾಲರು ವಿಠ್ಠಲ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ ಯುವವಾಹಿನಿ ಎಂಬುದು ಅತ್ಯುತ್ತಮ ಸಂಘಟನೆಯಾಗಿದ್ದು, ಅತ್ಯುತ್ತಮ ಸಮಾಜಮುಖಿ ಕಾರ್ಯಗಳ ಮೂಲಕ ಯುವಜನತೆಯಲ್ಲಿ ಸ್ಪೂರ್ತಿ ನೀಡಿದೆ. ಹಾಗೂ ಶಾಲಾ ಮಕ್ಕಳಿಗೆ ಮಾದರಿಯಾಗಿದೆ ಎಂದರು.ಮುಂದಿನ ದಿನಗಳಲ್ಲಿ ಯುವವಾಹಿನಿ ಕೂಳೂರು ಘಟಕವು ಸಾಧನೆಯ […]
Read More
09-06-2019, 1:43 PM
ಕೂಳೂರು ; ಯುವವಾಹಿನಿ ಕೂಳೂರು ಘಟಕದ ವತಿಯಿಂದ 11ನೇ ಸ್ವಚ್ಛತಾ ಅಭಿಯಾನ ದಿನಾಂಕ 09.06.2019 ರಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಕೂಳೂರು ರುದ್ರಭೂಮಿಯಲ್ಲಿ ನಡೆಯಿತು. ಘಟಕದ ಮಾರ್ಗದರ್ಶಕರಾದ ಗಿರಿಧರ್ ಸನಿಲ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 20 ಸದಸ್ಯರನ್ನು ಒಳಗೊಂಡ ತಂಡವು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯ ತನಕ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಅಭಿಯಾನದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಅಮೀನ್, […]
Read More
31-05-2019, 2:12 PM
ಕೂಳೂರು : ಸದಸ್ಯರ ಮನೆ ಮನದಲ್ಲಿ ದೇವರ ಮೇಲಿನ ಭಕ್ತಿ ಪಸರಿಸಲಿ ಎಂಬ ಉದ್ದೇಶದೊಂದಿಗೆ ಯುವವಾಹಿನಿ ಕೂಳೂರು ಘಟಕವು ಮನೆ ಮನೆ ಭಜನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ತಿಂಗಳ ಒಂದು ಶುಕ್ರವಾರ ಒಬ್ಬ ಸದಸ್ಯರ ಮನೆಯಲ್ಲಿ ಭಜನೆ ಮಾಡಲಾಗುವುದು. ಈ ತಿಂಗಳ ಮೊದಲ ಭಜನೆಯನ್ನು ದಿನಾಂಕ 31-05-19 ನೇ ಶುಕ್ರವಾರದಂದು ಘಟಕದ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಭಜನೆಯನ್ನು 7.15 ಕ್ಕೆ ಸರಿಯಾಗಿ ಪ್ರಾರಂಭಿಸಿ 8.30 ಗೆ ಮಂಗಳಗೊಳಿಸಲಾಯಿತು. […]
Read More
12-05-2019, 7:49 AM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ಸ್ವಚ್ಛತಾ ಅಭಿಯಾನದ 10ನೇ ಕಾರ್ಯಕ್ರಮವು ದಿನಾಂಕ 12.05.2019 ರಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪಂಜಿಮೊಗರಿನಿಂದ ಉರುಂದಾಡಿ ಸಂಪರ್ಕಿಸುವ ರಸ್ತೆಯಿಂದ ಪ್ರಾರಂಭಗೊಂಡು ಗೋಪಾಲಕೃಷ್ಣ ಭಜನಾ ಮಂದಿರದ ವರೆಗೆ ನಡೆಯಿತು. ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಅಭಿಯಾನದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಯು. ಅಮೀನ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ನಿಶಿತ್ ಹಾಗೂ ಘಟಕದ […]
Read More
05-05-2019, 5:06 PM
ಕೂಳೂರು : ಯುವವಾಹಿನಿ ಎಂಬ ಐದು ಅಕ್ಷರದಲ್ಲಿ ಒಂದು ಆಕರ್ಷಣೆ ಇದೆ, ಶಕ್ತಿ ಇದೆ, ಭರವಸೆ ಇದೆ. ಆರೋಗ್ಯಕರವಾದ ಸಂಪರ್ಕವೇ ಸಂಘಟನೆಯ ಸಾಧನ. ವಾಹಿನಿ ಅಂದರೆ ನಿರಂತರವಾದ ಹರಿವು, ಯುವವಾಹಿನಿಯ ನಿಸ್ವಾರ್ಥವಾದ ಸಮಾಜಮುಖಿ ಕಾಳಜಿಯಿಂದ ಕೂಡಿದ ಈ ಹರಿವಿನ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯುವವಾಹಿನಿ ಯುವಜನತೆಯ ಭರವಸೆಯ ಬೆಳಕಾಗಿದೆ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದರು. ದಿನಾಂಕ 05.05.2019 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ಜರುಗಿದ ಯುವವಾಹಿನಿ (ರಿ) […]
Read More
05-05-2019, 7:01 AM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ 2019-20 ನೇ ಸಾಲಿನ ಅಧ್ಯಕ್ಷರಾಗಿ ಭಾಸ್ಕರ್ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾಗಿ ಮಧುಶ್ರೀ ಪ್ರಶಾಂತ್ ಆಯ್ಕೆಯಾಗಿದ್ದಾರೆ
Read More
22-04-2019, 3:24 AM
ಕೂಳೂರು : ದಿನಾಂಕ 22/04/2019 ಸೋಮವಾರ ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ(ರಿ) ಮೂಡಬಿದ್ರಿ ಘಟಕದ ಸದಸ್ಯರಾದ ಅಶ್ವಿನಿ ಇವರ ಪತಿ ರಾಜೇಶ್ ಪೂಜಾರಿ ಇವರ 2 ಕಿಡ್ನಿಗಳು ವಿಫಲವಾಗಿ ಚಿಕಿತ್ಸೆಗಾಗಿ ನೆರವು ಕೋರಿದ್ದ ಸಲುವಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಸದಸ್ಯರು ವೈಯಕ್ತಿವಾಗಿ 15 ಸಾವಿರ ರೂಪಾಯಿ ಮೊತ್ತ ಹಾಗೂ ಕೂಳೂರು ನಾರಾಯಣ ಗುರು ಮoದಿರದ ಸದಸ್ಯರೆಲ್ಲರು ಸೇರಿ ಒಟ್ಟಾಗಿ 40 ಸಾವಿರ ರೂಪಾಯಿಯನ್ನು ಅವರ ತಾಯಿ ಉಮಾವತಿ ಇವರಿಗೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಕೂಳೂರು ಘಟಕದ […]
Read More