24-10-2019, 2:19 AM
ದಿನಾಂಕ 24.10.19 ರಂದು ಸಂಜೆ 5.30 ಕ್ಕೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ದೀಪಾವಳಿ ಪ್ರಯುಕ್ತ 5 ಕಡು ಬಡವ ಕುಟುಂಬಕ್ಕೆ ದೀಪಾವಳಿ ಆಚರಿಸಲು ಹಾಗೂ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಮೊದಲಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ 20 ಜನ ಸದಸ್ಯರೊಂದಿಗೆ ಪದ್ಮನಾಭ ಕುಲಾಲ್, ದಿ. ಗೋಪಾಲ ಪೂಜಾರಿ, ಅಪ್ಪು ಆಚಾರಿ, ಗುರುವಪ್ಪ ಪೂಜಾರಿ ಒಟ್ಟು 5 ಮನೆಗಳಿಗೆ ವಿತರಿಸಲಾಯಿತು. […]
Read More
22-10-2019, 4:28 AM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 18 ರಿಂದ 21 ರವರೆಗೆ ಕಮಲಶಿಲೆ, ಹಂಪಿ, ಮಂತ್ರಾಲಯ ಪ್ರವಾಸ ಹಮ್ಮಿಕೊಂಡಿತು. ಘಟಕದ ಉಪಾಧ್ಯಕ್ಷರಾದ ಪವಿತ್ರ ಅಮೀನ್ ರವರ ಸಂಚಾಲಕತ್ವದಲ್ಲಿ 40 ಜನರ ತಂಡ ದಿನಾಂಕ 18.10.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಹೊರಟು ಕಮಲಶಿಲೆ ದೇವರ ದರ್ಶನ ಪಡೆದು, ಪ್ರಯಾಣ ಮುಂದುವರೆಸಿ 19.10.19 ರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಹೊಸಪೇಟೆ ತಲುಪಿ ಅಲ್ಲಿ ಉಪಹಾರದ ನಂತರ ಹಂಪಿ ತಲುಪಿದೆವು. […]
Read More
02-10-2019, 8:38 AM
ದಿನಾಂಕ 2.10.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ 150 ನೇ ಗಾಂಧಿ ಜಯಂತಿ ಪ್ರಯುಕ್ತ ಭಾರತಿ ಪದವಿಪೂರ್ವ ಕಾಲೇಜು, ನಂತೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತಿ ಸಮೂಹ ಸಂಸ್ಥೆಯ ಸೇವಾ ಸಮಿತಿಯ ಕಾರ್ಯದರ್ಶಿ ಕೃಷ್ಣ ನೀರಮೂಲೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ) ಕೂಳೂರು ಘಟಕದ ಉಪಾಧ್ಯಕ್ಷರಾದ ಪವಿತ್ರ. ಯು. ಅಮೀನ್ ರವರು ದೀಪ ಬೆಳಗಿಸುವುದರ ಮೂಲಕ ಮಾಡಿದರು. ನಂತರ ಮಾತನಾಡಿದ ಇವರು ಸ್ವಚ್ಛತೆ ಎಂಬುದು ನಮ್ಮ ಮನೆಯಲ್ಲಿ ಪ್ರಾರಂಭವಾಗಿ […]
Read More
23-09-2019, 9:33 AM
ಯುವವಾಹಿನಿ ಕೂಳೂರು ಘಟಕವು ಕ್ರಿಯಾಶೀಲತೆಗೆ ಹೆಸರುವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವವಾಹಿನಿಯ ಇತಿಹಾಸದಲ್ಲೇ ವಿಭಿನ್ನತೆ ತಂದುಕೊಟ್ಟಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ಹೇಳಿದರು. ಅವರು ದಿನಾಂಕ 22.09.19 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ನಡೆದ ಯುವಜನತೆಯ ಪ್ರೇರೇಪಣೆಗಾಗಿ ಯೂತ್ ಫೆಸ್ಟ್ 2019 ನಮ್ಮ ಚಿತ್ತ ಪ್ರತಿಭೆಗಳ ಅನಾವರಣದತ್ತ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಮಂಗಳೂರು ನಗರ ಪೂರ್ವ ಪೋಲಿಸ್ ಠಾಣೆಯ ನಿರೀಕ್ಷಕರಾದ ಶಾಂತರಾಮ್ ಕುಂದಾರ್ ಕಾರ್ಯಕ್ರಮದ ಸ್ಪರ್ಧೆಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ […]
Read More
13-09-2019, 8:54 AM
ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಕೂಳೂರು ಘಟಕದ ವತಿಯಿಂದ *ಚಿರಂತನ ವೃದ್ಧಾಶ್ರಮ* ಸುರತ್ಕಲ್ ಇಲ್ಲಿಗೆ ಭೇಟಿ ನೀಡಿ, ಅಲ್ಲಿನ ಹಿರಿಯ ಚೇತನರಿಗೆ ಸಂಜೆಯ ಉಪಹಾರದ ವ್ಯವಸ್ಥೆಯನ್ನು ಮಾಡಿದೆವು. ನಂತರ ಹಿರಿಯ ಚೇತನರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಸದಸ್ಯರೆಲ್ಲರೂ ಸುಮಾರು 2 ಗಂಟೆಗಳ ಕಾಲ ಅವರೊಂದಿಗೆ ಬೆರೆತು, ಕುಣಿದಾಡಿ ಸಂತಸಪಟ್ಟೆವು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಅಮೀನ್,ಕಾರ್ಯದರ್ಶಿ ಮಧುಶ್ರೀ […]
Read More
08-09-2019, 5:07 PM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 08.09.19 ರಂದು ಹಳ್ಳಿಡೊಂಜಿ ದಿನ ಕಾರ್ಯಕ್ರಮವು ಘಟಕದ ಸದಸ್ಯರಾದ *ಪ್ರಸಾದ್ ಈದು ಬಟ್ಟೇಣಿ ಇವರ ಊರು ಈದು ಬಟ್ಟೇಣಿ, ಕಾರ್ಕಳ* ಇಲ್ಲಿ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಘಟಕದ 50 ಸದಸ್ಯರು ಕೂಳೂರಿನಿಂದ ಹೊರಟು 10.30 ಕ್ಕೆ ಶಿರ್ತಾಡಿ ತಲುಪಿ ಘಟಕದ ಸದಸ್ಯರಾದ *ಜಯ ಬಂಗೇರ* ಅವರ ಮನೆಯಲ್ಲಿ ಉಪಹಾರ ಮುಗಿಸಿ ನಂತರ ಅಲ್ಲಿಂದ ಹೊಸ್ಮಾರು ಆಶ್ರಮಕ್ಕೆ ಭೇಟಿ ನೀಡಿ, *ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರ ದರ್ಶನ […]
Read More
04-09-2019, 5:34 PM
ಯುವವಾಹಿನಿ ಕೂಳೂರು ಘಟಕದ ಸೇವಾ ನಿಧಿ ಯೋಜನೆಯ 2ನೇ ಸಹಾಯ ಹಸ್ತ ಅಶೋಕ್ ಪೂಜಾರಿ ಗಂಜಿಮಠ ಇವರು ಕೆಲಸ ಮಾಡುವ ಸಂದರ್ಭದಲ್ಲಿ ದೊಡ್ಡ ರೀಲ್ ಇರ ಕಾಲಿನ ಮೇಲೆ ಬಿದ್ದು ತೀವ್ರ ಗಾಯಗೊಂಡು ಕೊನೆಗೆ ಅವರ ಒಂದು ಕಾಲನ್ನೇ ಕತ್ತರಿಸಿ ತೆಗೆಯಲಾಗಿದೆ. ಇವರ ಕುಟುಂಬಕ್ಕೆ ಇವರೇ ಆಧಾರಸ್ತಂಭ ಆಗಿದ್ದರು. ಈಗ ಇವರಿಗೆ ಹೀಗಾಗಿದ್ದು ಇವರ ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ. ಇವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ರೂ. 10,000 ದ ಚೆಕ್ ನ್ನು ದಿನಾಂಕ 04.09.19 ರ ಸಂಜೆ […]
Read More
03-09-2019, 2:42 AM
ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ಅಂಗನವಾಡಿ ಕೇಂದ್ರ ಮಂಜನಗುಡ್ಡೆ ಇಲ್ಲಿನ ಕಾರ್ಯಕರ್ತೆಯ ಮನವಿಯ ಮೇರೆಗೆ ಅಂಗನವಾಡಿಯ ಅಡುಗೆ ಕೋಣೆ ರಿಪೇರಿ ಕೆಲಸ ಮಾಡಿಕೊಡಲಾಯಿತು. ಇದರ ಹಸ್ತಾಂತರವನ್ನು ದಿನಾಂಕ 30.08.2019 ರಂದು ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಮಾಡಲಾಯಿತು. ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಮಾತನಾಡಿ ಅತಿ ಶೀಘ್ರದಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಕೆಲಸ ಮಾಡಿಕೊಟ್ಟ ಯುವವಾಹಿನಿ(ರಿ.) ಕೂಳೂರು ಘಟಕಕ್ಕೆ ತಮ್ಮ ಧನ್ಯವಾದ ಸಲ್ಲಿಸಿದರು. ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ಗೌರವ ಸಲಹೆಗಾರರಾದ ನೇಮಿರಾಜ್, ಉಪಾಧ್ಯಕ್ಷರಾದ […]
Read More
31-07-2019, 5:19 AM
ಕೂಳೂರು : ಯುವವಾಹಿನಿಯಂತಹ ಸಂಘಟನೆ ಇರುವುದರಿಂದ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರು ಅಮರರಾಗುತ್ತಾರೆ. ನಾನು ಸತ್ತರೆ ಸೈನಿಕನಾಗಿಯೇ ಸಾಯುತ್ತೇನೆ ಎಂದು ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯಸ್ ಸಿಕ್ವೇರ ಹೇಳಿದರು. ಅವರು ದಿನಾಂಕ 31.07.19 ರಂದು ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಇನ್ನೋರ್ವ ಅತಿಥಿ ಸುಬೇದಾರ್ ಜೋಧಾ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ […]
Read More
21-07-2019, 8:37 AM
ಕೂಳೂರು : ನಮ್ಮ ಪೂರ್ವಜರು ಆಟಿ ತಿಂಗಳಲ್ಲಿ ಬರುವ ರೋಗ ರುಜಿನಗಳನ್ನು ತಡೆಗಟ್ಟಲು ಹಲವಾರು ಆಚರಣೆಗಳನ್ನು ಕಾರ್ಯ ರೂಪಕ್ಕೆ ತಂದು ಅದನ್ನು ಆಚರಿಸುತ್ತಿದ್ದರು. ನಿಜವಾಗಿಯೂ ಆಟಿ ಆಚರಣೆಯು ಮೂಢನಂಬಿಕೆಯಲ್ಲ ಅದು ತುಳುವರ ಮೂಲನಂಬಿಕೆ ಎಂದು ಬೆಸೆಂಟ್ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ತಿಳಿಸಿದರು. ಅವರು ದಿನಾಂಕ 21.07.19 ರಂದು ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ನಡೆದ ಆಟಿದ ಪೊರ್ಲು-2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವವಾಹಿನಿಯ ಮುಖ್ಯ ಧ್ಯೇಯ ಸಂಪರ್ಕದ ನೆಲೆಯಲ್ಲಿ ಕಾರ್ಯಕ್ರಮವು ಘಟಕದ ಸದಸ್ಯರಾದ […]
Read More