15-03-2024, 5:40 PM
ಕೂಳೂರು: ವಾಮಾಂಜೂರು ಕೆತ್ತಿಕಲ್ ನಿವಾಸಿ ಲಕ್ಷ್ಮೀ, 85 ವರ್ಷ ಇವರು ತುಂಬಾ ಅನಾರೋಗ್ಯದಿಂದ ಇದ್ದು, ಅವರ ಗಂಡು ಮಕ್ಕಳು ತೀರಿ ಹೋಗಿದ್ದಾರೆ. ಒಬ್ಬ ಹೆಣ್ಣು ಮಗಳು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಕುಟುಂಬ ತುಂಬಾ ಕಷ್ಟದಲ್ಲಿ ಇದ್ದು, ನಮ್ಮ ಘಟಕದ ನೆರವು ಕೋರಿದ್ದರು. ಅವರಿಗೆ ನಮ್ಮ ಯುವವಾಹಿನಿ (ರಿ.) ಕೂಳೂರು ಘಟಕದ ಸೇವಾನಿಧಿ ಯೋಜನೆಯಡಿಯಲ್ಲಿ 10,000/- ಸಹಾಯಧನವನ್ನು ನೀಡಲಾಯಿತು. ಮೂಡುಶೆಡ್ಡೆ ನಿವಾಸಿ ಯಶ್ವಿರಾಜ್ ಇವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, A.J ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರು. ಇವರ […]
Read More
12-03-2024, 7:43 AM
ಭಜನೆಗಳು ಆರಾಧನೆಯ ಶ್ರೇಷ್ಠ ರೂಪ. ಭಜನೆಗಳು ನಮ್ಮ ಕೃತಜ್ಞತೆ ಮತ್ತು ದೇವರ ಮೇಲಿನ ಪ್ರೀತಿಯನ್ನು ತೋರಿಸಲು ಹಾಡುವ ಹಾಡುಗಳಾಗಿವೆ. ಭಕ್ತಿಗೀತೆಗಳನ್ನು ಹಾಡುವುದು ಅಥವಾ ಕೇಳುವುದು ಒಬ್ಬರ ಮನಸ್ಸಿನಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ ಮತ್ತು ಒಬ್ಬರ ಹೃದಯದಲ್ಲಿ ಸಂತೋಷ, ಶಾಂತಿ ಮತ್ತು ಸಂತೃಪ್ತಿಯನ್ನು ತುಂಬುತ್ತದೆ. ಯುವವಾಹಿನಿ (ರಿ.) ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನೆ […]
Read More
25-02-2024, 4:45 PM
ಕೂಳೂರು: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 27ನೇ ಸ್ವಚ್ಛತಾ ಅಭಿಯಾನವು ಸಂಘಟನಾ ಕಾರ್ಯದರ್ಶಿ ಮುಕೇಶ್ ರವರ ಸಂಚಾಲಕತ್ವದಲ್ಲಿ ಕೂಳೂರು ಪರಿಸರದಲ್ಲಿ ದಿನಾಂಕ 25/02/2024 ಭಾನುವಾರದಂದು ಹಮ್ಮಿಕೊಂಡಿದ್ದರು. ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ , ಭಾಸ್ಕರ್ ಕೋಟ್ಯಾನ್, ನಯನ ರಮೇಶ್ , ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಂಘಟನಾ ಕಾರ್ಯದರ್ಶಿ ಮುಕೇಶ್, ಕಾರ್ಯದರ್ಶಿ ನೈನಾ ಕೋಟ್ಯಾನ್ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
14-02-2024, 7:01 PM
ಮಂಗಳೂರು :ಉರ್ವ ಮಾರಿಗುಡಿ ಕ್ಷೇತ್ರ ಇದರ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಸಂದರ್ಭ ದಿನಾಂಕ 14/02/2024 ಬುಧವಾರದಂದು ಮಧ್ಯಾಹ್ನ 12.00 ರಿಂದ 3.00 ಗಂಟೆಯವರೆಗೆ ಯುವವಾಹಿನಿ (ರಿ.) ಕೂಳೂರು ಘಟಕದ ಸದಸ್ಯರು ಅನ್ನದಾನ ಸೇವೆಯಲ್ಲಿ ಭಾಗಿಯಾದರು. ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಪದಾಧಿಕಾರಿಗಳು ಮತ್ತು ಸುಮಾರು 30 ಸದಸ್ಯರು ಅನ್ನ […]
Read More
11-02-2024, 3:33 PM
ಯುವವಾಹಿನಿ (ರಿ.) ಕೂಳೂರು ಘಟಕದ ಮೂರು ಧ್ಯೇಯಗಳಲ್ಲಿ ಒಂದಾದ ಸಂಪರ್ಕ ಇದರ ನೆಲೆಯಲ್ಲಿ ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿನಾಂಕ 11-02-2024 ಆದಿತ್ಯವಾರದಂದು ಸ್ನೇಹ ಸಮ್ಮಿಲನ 2024 ಕಾರ್ಯಕ್ರಮವನ್ನು Relax leisure park ಬ್ರಹ್ಮಾವರದಲ್ಲಿ ಆಯೋಜಿಸಲಾಗಿತ್ತು. ಬೆಳಿಗ್ಗೆ 7.45 ಗಂಟೆಗೆ ಸರಿಯಾಗಿ ನಮ್ಮ ಬಸ್ಸಿನ ಸಾರಥಿ ನಮ್ಮನ್ನೆಲ್ಲ ಕೂರಿಸಿಕೊಂಡು ಕೂಳೂರಿನಿಂದ ಹೊರಟು 9.30 ಗೆ ರೆಸಾರ್ಟ್ ತಲುಪಿದೆವು. ಅಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಅಲ್ಲಿಂದ ಬೋಟ್ ಮೂಲಕ island ತಲುಪಿದೆವು. ಬೋಟ್ ನಲ್ಲಿ […]
Read More
21-01-2024, 1:18 PM
ಕೂಳೂರು : ವಿದ್ಯಾನಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು ಉದ್ಯೋಗ ಪಡೆದ ನಂತರ ವಿದ್ಯಾನಿಧಿ ನೀಡುವ ಮನೋಭಾವ ಬೆಳೆಸಿಕೊಂಡು, ಮುಂಬರುವ ದಿನಗಳಲ್ಲಿ ವಿದ್ಯಾ ನಿಧಿ ವಿತರಿಸುವಂತಾಗಲಿ ಎಂದು ಡಾ.ಉಜ್ವಲ್ ಯು.ಸುವರ್ಣ ಎಂದು ಹಾರೈಸಿದರು. ಅವರು ದಿನಾಂಕ 21-01-2024 ರಂದು ಕೂಳೂರು ಫಲ್ಗುಣಿ ಸಭಾಂಗಣ ನಡೆದ ಯುವವಾಹಿನಿ (ರಿ.) ಕೂಳೂರು ಘಟಕದ ಪದಗ್ರಹಣ ಹಾಗೂ ವಿದ್ಯಾನಿಧಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ) ಕೂಳೂರು ಘಟಕದ ಅಧ್ಯಕ್ಷರಾದ ಯಶವಂತ್ ಪೂಜಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ರವಿಶಂಕರ್ […]
Read More
03-12-2022, 3:10 PM
ಕೂಳೂರು :- ಸಮಾಜದಲ್ಲಿರುವ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಯುವವಾಹಿನಿ (ರಿ.) ಕೂಳೂರು ಘಟಕ ಕಳೆದ 7 ವರುಷಗಳಿಂದ ವಿದ್ಯಾನಿಧಿ ನೀಡುತ್ತಾ ಬಂದಿದೆ . ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉನ್ನತ ಅಂಕ ಗಳಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಕೂಳೂರಿನ ಪಂಪ್ ಹೌಸ್ ಬಳಿ ದಿನಾಂಕ 03 ಡಿಸೆಂಬರ್ 2022ರ ಶನಿವಾರದಂದು ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ನಡೆದ ವಿದ್ಯಾನಿಧಿ […]
Read More
14-11-2022, 2:48 PM
ಕೂಳೂರು :- ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಮಂಜೊಟ್ಟಿ ಅಂಗನವಾಡಿ ಕೇಂದ್ರ ಪಂಜಿಮೋಗರು ನಲ್ಲಿ ದಿನಾಂಕ 14 ನವೆಂಬರ್ 2022ರ ಸೋಮವಾರದಂದು ಬೆಳಗ್ಗೆ ಶಾಲಾ ಶಿಕ್ಷಕಿಯಾದ ಪ್ರಮೀಳರವರು ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಯಂತ್ ಸುವರ್ಣರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜವಹಾರ ಲಾಲ್ ನೆಹರು ರವರ ಜನ್ಮ ದಿನದ ಅಂಗವಾಗಿ ನೆಹರೂರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಅಂಗನವಾಡಿ […]
Read More
29-10-2022, 4:22 PM
ಕೂಳೂರು :- ದೀಪಾವಳಿಯ ಬೆಳಕು ಅಂತರಾತ್ಮವನ್ನು ಉದ್ದೀಪನಗೊಳಿಸಬೇಕು, ಪಟಾಕಿ ಸದ್ದು ನಿದ್ದೆಯಲ್ಲಿದ್ದವರನ್ನೂ ಬಡಿದೆಬ್ಬಿಸುವಂತೆ ದೀಪಾವಳಿ ಹಬ್ಬ ನಮ್ಮೊಳಗೆ ಅಂತರ್ಗತವಾಗಿರುವ ಅಂತಃಸತ್ವವನ್ನು ಬಡಿದೆಬ್ಬಿಸಬೇಕು ಮತ್ತು ಅಂಧಕಾರವನ್ನು ಹೋಗಲಾಡಿಸಬೇಕು ಎಂದು ಕುದ್ರೋಳಿ ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಿದರು. ಅವರು ಯುವವಾಹಿನಿ (ರಿ.) ಕೂಳೂರು ಘಟಕ ವತಿಯಿಂದ ದಿನಾಂಕ 29 ಅಕ್ಟೋಬರ್ 2022 ರಂದು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ರವರ ಮನೆ ಪಂಜಿಮೊಗರು ಶ್ರೀರಕ್ಷಾದಲ್ಲಿ ನಡೆದ -ನಮ್ಮ ಮನೆ ಹಬ್ಬ ದೀಪಾವಳಿ ಕಾರ್ಯಕ್ರಮದಲ್ಲಿ […]
Read More
02-10-2022, 2:06 PM
ಕೂಳೂರು :- ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ 25ನೇ ಸ್ವಚ್ಛತಾ ಅಭಿಯಾನವು ಗಾಂಧಿ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪರಪಾದೆ ಆಕಾಶಭವನ ಇಲ್ಲಿ ದಿನಾಂಕ 02 ಅಕ್ಟೋಬರ್ 2022 ಭಾನುವಾರದಂದು ನಡೆಯಿತು. ಸದಸ್ಯರಾದ ಜಯ ಬಂಗೇರರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ , ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಭಾಸ್ಕರ್ ಕೋಟ್ಯಾನ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಂಘಟನಾ ಕಾರ್ಯದರ್ಶಿ ಸಚಿನ್ ಪೂಜಾರಿ , ಮಹಿಮೂನಾ S.D.M.C.ಅಧ್ಯಕ್ಷರು, […]
Read More