
ಅಭಿನಂದನೆಗಳು
21-04-2025, 8:43 AM
16-09-2024, 1:03 PM
ಮಂಗಳೂರು : ಶ್ರೀ ನಾರಾಯಣ ಗುರುಗಳ ಸಂದೇಶಗಳು ಇಂದಿನ ಕಾಲಘಟ್ಟಕ್ಕೆ ಪೂರಕವಾಗಿದ್ದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಇಂದಿನ ಜನತೆ ಮುಂದಾಗಬೇಕು. ನಾವು ಕಷ್ಟದಲ್ಲಿರುವಾಗ ನಮಗೆ ಯಾರೂ ಸಹಾಯ ಮಾಡಲಾರರು ಎನ್ನುವುದನ್ನು ಅರಿತು ಸ್ವಾವಲಂಬಿಯಾಗಿ ಬದುಕಬೇಕು ಎಂದು ಚಲನಚಿತ್ರ ನಿರ್ದೇಶಕ, ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸ್ಮಿತೇಶ್ ಎಸ್.ಬಾರ್ಯ ತಿಳಿಸಿದರು. ಅವರು 16-09-2024 ರವಿವಾರದಂದು ಯುವವಾಹಿನಿ (ರಿ) ಕಂಕನಾಡಿ ಘಟಕ ಆಯೋಜಿಸಿದ್ದ ಗುರು ಸ್ಮರಣೆ – ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು. […]
12-09-2024, 12:56 PM
ಕಂಕನಾಡಿ: ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ದಿನಾಂಕ 12-09-2024 ರಂದು ಘಟಕದ ಕಛೇರಿಯಲ್ಲಿ ಸಂಜೆ ಗಂಟೆ 6:30ಕ್ಕೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನ ಕಾರ್ಯಕ್ರಮ ಆಚರಿಸಲಾಯಿತು. ಅಧ್ಯಕ್ಷರಾದ ರಾಹುಲ್ ಸನಿಲ್ ಇವರು ಸಭೆಗೆ ಬಂದ ಎಲ್ಲಾ ಸದಸ್ಯರನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಿದರು. ಘಟಕದ ಮತ್ತು ಪರಿಸರದ 3 ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗುರುವಂದನೆಯನ್ನು ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶ್ರೀಮತಿ ಶೀಲಾ ಟೀಚರ್ ರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಪಡಿಸಿದರು. ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ […]
08-09-2024, 5:07 AM
ಮಂಗಳೂರು : ಯುವವಾಹಿನಿ (ರಿ) ಕಂಕನಾಡಿ ಘಟಕದ ಸಹಯೋಗದಲ್ಲಿ ದಿನಾಂಕ 08-09-2024 ಗರೋಡಿ ಸಮೃದ್ಧಿ ಸಭಾಭವನದಲ್ಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಲೋಕೇಶ್ ಪೂಜಾರಿ, ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಕಂಕನಾಡಿ ಘಟಕವು ಹಮ್ಮಿಕೊಂಡಿರುವ ಸಮಾಜಮುಖಿ ಹತ್ತು ಹಲವು ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು, ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದು ನುಡಿದರು. ಯುವವಾಹಿನಿ (ರಿ) ಕಂಕನಾಡಿ ಘಟಕ ಅಧ್ಯಕ್ಷ ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿ, […]
04-08-2024, 12:52 PM
ಮಂಗಳೂರು : ಕಂಕನಾಡಿ ಘಟಕದ ಸದಸ್ಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 04-08-2024ನೇ ಆದಿತ್ಯವಾರ ಬೆಂಕಿ ರಹಿತ ಅಡುಗೆ ಸ್ಪರ್ಧೆಯನ್ನು ಘಟಕದ ಕಚೇರಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಮಾನ್ಯ ಸುಂದರ್ ಸುವರ್ಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಾರ್ಥನೆದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 14 ಜನ ಸದಸ್ಯರು ಏಳು ತಂಡವಾಗಿ ಭಾಗವಹಿಸಿದ್ದರು ಹಾಗೂ ತೀರ್ಪುಗಾರರಾಗಿ ಕೊಡಿಯಲ್ ಬೈಲ್ ಶಾರದ ವಿದ್ಯಾಲಯದ ಶಿಕ್ಷಕಿ ಉಜ್ವಲ್ ಹಾಗೂ ಅಂಚನ್ ಕ್ಯಾಟರಿಂಗ್ […]
02-06-2024, 2:32 PM
ಕಂಕನಾಡಿ: ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ನಲ್ಲಿ ಒಂದು ದಿನದ ಕಿರುಪ್ರವಾಸ ಕಾರ್ಯಕ್ರಮವನ್ನು ದಿನಾಂಕ 02-06-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರಾದ ಹರಿಣಿ ಹಾಗೂ ಬೇಬಿ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಅಮೀನ್, ಕಾರ್ಯದರ್ಶಿ ಮಮತಾ ತೇಜ್ ಪಾಲ್ ಇವರುಗಳ ಮುಂದಾಳತ್ವದಲ್ಲಿ ಸದಸ್ಯರು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 51 ಮಂದಿ ಪ್ರವಾಸಿಗರು ಬಸ್ಸಿನಲ್ಲಿ ಪ್ರಯಾಣ ಹೊರಟು ರೆಸಾರ್ಟ್ ತಲುಪಿ ಅಲ್ಲಿ ಉಪಾಹಾರವನ್ನು ಸೇವಿಸಿ ನಂತರ ಬೋಟಿನಲ್ಲಿ ಪ್ರಯಾಣಿಸಿ ಸುತ್ತಲೂ ನೀರಿನಿಂದ […]
26-04-2024, 2:46 PM
ಕಂಕನಾಡಿ: ಯುವವಾಹಿನಿ(ರಿ.) ಕಂಕನಾಡಿ ಘಟಕದ ಸದಸ್ಯರ ಮತ್ತು ಕುಟುಂಬ ಸದಸ್ಯರ ನಡುವೆ ಬಾಂಧವ್ಯ ವೃದ್ಧಿಗಾಗಿ ಪುಣ್ಯಕ್ಷೇತ್ರ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ದಿನಾಂಕ 26-04-2024 ಶುಕ್ರವಾರದಂದು ಹಮ್ಮಿಕೊಂಡಿದ್ದರು. ಮಂಗಳೂರು ರೈಲ್ವೆ ನಿಲ್ದಾಣದಿಂದ ರಾತ್ರಿ 9:00ಕ್ಕೆ ಹೊರಟು ಮರುದಿನ ತಾರೀಕು 27-04-2024 ಶನಿವಾರ ಸಾಯಂಕಾಲ 5:30 ಗಂಟೆಗೆ MANMAD ರೈಲ್ವೇ ಸ್ಟೇಷನ್ ತಲುಪಿ ಅಲ್ಲಿಂದ ಶಿರಡಿಯಲ್ಲಿ ವಸತಿ ಗೃಹಕ್ಕೆ ತೆರಳಿ, ಸ್ನಾನಾದಿ ಮುಗಿಸಿ ನಂತರ ರಾತ್ರಿ 9 ಗಂಟೆಗೆ ಶಿರಡಿ ಕ್ಷೇತ್ರ ದರ್ಶನ ಮಾಡಿ ವಿಶ್ರಾಂತಿ ಪಡೆದರು. 28-04-2024ನೇ ಆದಿತ್ಯವಾರ ಶನಿ […]
17-03-2024, 3:51 PM
ಮಂಗಳೂರು: ಸ್ತ್ರೀ.. ಸಹನೆ, ತಾಳ್ಮೆ, ಸಂಯಮದಿಂದ ಜೀವನದುದ್ದಕ್ಕೂ ಅದೆಷ್ಟೋ ಪಾತ್ರ ನಿರ್ವಹಿಸುವ ಯಶಸ್ವಿ ರಾಯಭಾರಿ. ಹೆಣ್ಣು ಅಗತ್ಯವಾಗಿ ಸ್ವಾವಲಂಬಿ.. ಶಿಕ್ಷಿತ.. ಉದ್ಯೋಗಸ್ಥ.. ಸಬಲೆ.. ಸಂಘಟಿತಳಾಗಿ ಸಂಸಾರದಲ್ಲಿ, ಸಮಾಜದಲ್ಲಿ ನಾನಾ ರೀತಿಯ ಸಂಬಂಧ ನಿಭಾಯಿಸಿಕೊಂಡು.. ಹೇಗೆ.. ಏಕೆ.. ಹೊಂದಾಣಿಕೆಯಿಂದ ಸಂಸಾರದ ಗುಟ್ಟು ಕಾಪಾಡಬೇಕು. ಪುರುಷ ಸಮಾಜವ ಜರಿಯದೆ.. ಅವರೊಟ್ಟಿಗೆ ಹೇಗೆ ಒಗ್ಗೂಡಬೇಕು.. ಪ್ರಸ್ತುತ ಸಮಾಜಕ್ಕೆ ಇದರ.. ಅಗತ್ಯತೆ ಏನು? ಕೂಡು ಕುಟುಂಬ, ಅವಿಭಕ್ತ ಕುಟುಂಬ ಎರಡಕ್ಕೂ ಸಮಾನತೆಯ ಅಗತ್ಯವಿದೆ.. ಮಹಿಳೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆಲ್ಲ ಒತ್ತು […]
24-02-2024, 11:17 AM
ಕಂಕನಾಡಿ: ಯುವವಾಹಿನಿ (ರಿ.) ಕಂಕನಾಡಿ ಘಟಕ ಹಾಗೂ ಭಾರತ ಸರ್ಕಾರ ದತ್ತೋಪಂಥ, ಠೇಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ದಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗ ಉಚಿತ ತರಬೇತಿ ಕಾರ್ಯಗಾರವು ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಸಭಾಂಗಣದಲ್ಲಿ ದಿನಾಂಕ 24-02-2024 ಶನಿವಾರದಂದು ನಡೆಯಿತು. ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಉಮಾನಾಥ್ ಕೋಟ್ಯಾನ್ ರವರು ದೀಪ ಪ್ರಜ್ವಲಿಸುವ ಮುಖೇನ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ರೇಖಾ ಗೋಪಾಲ್ […]
21-01-2024, 7:00 AM
ಕಂಕನಾಡಿ : ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ ಉಜ್ಜೋಡಿ ಕಂಕನಾಡಿ ಇದರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ದೈವಸ್ಥಾನ ಹಾಗೂ ಉಜ್ಜೋಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವು 2024 ನೇ ಜನವರಿ 21 ರಂದು ಬೆಳಗ್ಗೆ 7 ರಿಂದ 10ರ ವರೆಗೆ ಕಂಕನಾಡಿ ಘಟಕದ ಸದಸ್ಯರ ನೇತ್ರತ್ವದಲ್ಲಿ ಜರಗಿತು. ಈ ಸ್ವಚ್ಚತಾ ಅಭಿಯಾನದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು ಹಾಗೂ ಎಲ್ಲಾ ಸದಸ್ಯರು ಭಾಗವಹಿಸಿದ್ದರು.