Yuvavahini

ಘಟಕಗಳು

ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 10-08-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಇವರ ಸಹಯೋಗದಲ್ಲಿ ನೆರವೇರಿತು. ಹರಿನಾಮ ಸ್ಮರಣೆಯ ಭಕ್ತಿ ಭಾವ ತುಂಬಿದ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ […]

Read More

ಗುರು ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಯುವವಾಹಿನಿಯ ಪಾತ್ರ ಶ್ಲಾಘನೀಯ : ಯಾದವ ಸುವರ್ಣ

ಬಜಪೆ, ಆಗಸ್ಟ್ 10: ಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಯುವವಾಹಿನಿ (ರಿ.) ಕೈಗೊಂಡಿರುವ ಮನೆ ಮನೆ ಭಜನಾ ಸಂಕೀರ್ತನೆಯ ಕಾರ್ಯ ಶ್ಲಾಘನೀಯ ಎಂದು ಹಿರಿಯ ಭಜಕ ಯಾದವ ಸುವರ್ಣ ಹೇಳಿದರು. ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಆಯೋಜಿಸಲಾದ ಮನೆ ಮನೆ ಭಜನಾ ಸಂಕೀರ್ತನೆಯು ಆ.10ರಂದು ಸಂಜೆ 6.30ರಿಂದ 7.30ರವರೆಗೆ ಸುಂಕದಕಟ್ಟೆ, ಬಜಪೆಯ ನಾರಾಯಣ ಸುವರ್ಣ ಅವರ ‘ಪ್ರಕೃತಿ ನಿಲಯ’ದಲ್ಲಿ ಭಕ್ತಿ ಹಾಗೂ ಶ್ರದ್ಧೆಯಿಂದ ನಡೆಯಿತು. ಭಜನಾ ಸಂಕೀರ್ತನೆಯ ಬಳಿಕ […]

Read More

ಯುವವಾಹಿನಿ ಮೂಲಕ ಯುವ ಸಮುದಾಯ ಸಮಾಜದ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳಲಿ : ಡಾ. ಮಮತಾ ಪಿ. ಶೆಟ್ಟಿ

ಕೂಳೂರು, ಆಗಸ್ಟ್ 09: ಯುವವಾಹಿನಿ (ರಿ.) ಮೂಲಕ ಯುವ ಸಮುದಾಯ ಸಮಾಜದ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳಬೇಕು. ಇಂತಹ ಯುವಕರನ್ನು ರೂಪಿಸುವ ಯುವವಾಹಿನಿಯ ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರಿದು ಅಜರಾಮರವಾಗಲಿ ಎಂದು ‘ಅಭಿಮತ’ ಸುದ್ದಿ ವಾಹಿನಿಯ ನಿರ್ದೇಶಕಿ ಡಾ. ಮಮತಾ ಪಿ. ಶೆಟ್ಟಿ ಆಶಿಸಿದರು. ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಕೂಳೂರಿನ ಫಲ್ಗುಣಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಆಟಿದ ಪೊರ್ಲು–2026’ ಕಾರ್ಯಕ್ರಮವನ್ನು ತುಳಸಿ ಕಟ್ಟೆಯ ತುಳಸಿ ಗಿಡಕ್ಕೆ ನೀರು ಹಾಕಿ, ದೀಪ ಬೆಳಗಿಸುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ […]

Read More

ಯುವಕರ ಒಗ್ಗಟ್ಟು ಯುವವಾಹಿನಿಯ ಶಕ್ತಿ : ಉಷಾ ಅಂಚನ್

ಕಡಬ, ಆಗಸ್ಟ್ 09: ಯುವಕರ ಒಗ್ಗಟ್ಟು ಹಾಗೂ ಸಂಘಟಿತ ಪ್ರಯತ್ನವೇ ಯುವವಾಹಿನಿಯ ಶಕ್ತಿ. ಯುವಜನತೆ ಸಮಾಜಮುಖಿ ಚಿಂತನೆಯೊಂದಿಗೆ ಒಗ್ಗಟ್ಟಾಗಿ ಮುನ್ನಡೆದಾಗ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲು ಸಾಧ್ಯ ಎಂದು ಶ್ರೀ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಹೇಳಿದರು. ಅವರು ದಿನಾಂಕ 09.08.2026ರಂದು ಯುವವಾಹಿನಿ (ರಿ.) ಕಡಬ ಘಟಕದ ಆಶ್ರಯದಲ್ಲಿ, ಬಿಲ್ಲವ ಸಂಘ ಕಡಬ ತಾಲೂಕು ಹಾಗೂ ಬಿಲ್ಲವ ಮಹಿಳಾ ವೇದಿಕೆಯ ಸಹಕಾರದೊಂದಿಗೆ ಅಲಂಕಾರು–ಪೆರಾಬೆ ಗ್ರಾಮದ ಶ್ರೀ ರಕ್ತೇಶ್ವರಿ ದೈವಸ್ಥಾನ ಮಾಯಿಲ್ಗದ ಮುಂಭಾಗದ […]

Read More

ಮಾಣಿ ಪರಿಸರಕ್ಕೆ ಸೇವಾ ಸ್ಪರ್ಶ ನೀಡಿದ ಆಂಬ್ಯುಲೆನ್ಸ್ ಸೇವೆ

ಮಾಣಿ ಅಗಸ್ಟ್ 09: ಮಾಣಿ ಪರಿಸರದ ಜನರ ಬಹುಕಾಲದ ನಿರೀಕ್ಷೆಯಾಗಿದ್ದ ಆಂಬ್ಯುಲೆನ್ಸ್ ಸೇವೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮದ ವೇದಿಕೆಯಲ್ಲಿ ನೆರವೇರಿತು.ಜನರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಲಾಗುತ್ತಿರುವ ಈ ‘ಸೇವಾ ಸ್ಪರ್ಶ–ಆಂಬ್ಯುಲೆನ್ಸ್ ಸೇವೆ’ ಮಾಣಿ ಹಾಗೂ ಸುತ್ತಮುತ್ತಲಿನ ಜನರಿಗೆ ಮಹತ್ವದ ಆರೋಗ್ಯ ಸೇವಾ ಸೌಲಭ್ಯವಾಗಲಿದೆ. ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಮಾನವೀಯ ಕಾಳಜಿಯೊಂದಿಗೆ ಸಮಾಜಮುಖಿ ಹೆಜ್ಜೆ ಇಟ್ಟಿರುವ ಯುವವಾಹಿನಿ (ರಿ.) ಮಾಣಿ ಘಟಕದ […]

Read More

‘ಅಟಿಡೊಂಜಿ ದಿನ’

ಉಡುಪಿ, ಆಗಸ್ಟ್ 09: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ‘ಅಟಿಡೊಂಜಿ ದಿನ’ ಕಾರ್ಯಕ್ರಮವು ಘಟಕದ ಸಭಾಂಗಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಘಟಕದ ಮಾಜಿ ಅಧ್ಯಕ್ಷರುಗಳು ಒಗ್ಗೂಡಿ ಗುರುವಿಗೆ ದೀಪ ಬೆಳಗಿಸುವ ಮೂಲಕ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಬಳಿಕ ಚೆನ್ನಮನೆಯ ಆಟವಾಡಿ, ವಾಲೆಬೆಲ್ಲ ಹಂಚುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಯುವವಾಹಿನಿಯ ಸದಸ್ಯರು […]

Read More

ಯುವಕರ ಬೌದ್ಧಿಕ ಸಾಮರ್ಥ್ಯ, ಏಕಾಗ್ರತೆಗೆ ಚೆಸ್ ಸಹಕಾರಿ : ಉಮೇಶ್ ಪಿ.

ಕಾಪು, ಆಗಸ್ಟ್ 09: ಯುವಕರಲ್ಲಿ ಬೌದ್ಧಿಕ ಸಾಮರ್ಥ್ಯ, ಏಕಾಗ್ರತೆ ಹಾಗೂ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಚೆಸ್ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಂಗಳೂರು ಸಿಎಆರ್‌ನ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಉಮೇಶ್ ಪಿ. ಹೇಳಿದರು. ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಯುವವಾಹಿನಿ (ರಿ.) ಕಾಪು ಘಟಕದ ನೇತೃತ್ವದಲ್ಲಿ, ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾದ ‘ಯುವವಾಹಿನಿ ಟ್ರೋಫಿ–2026’ ಓಪನ್ ಹಾಗೂ ವಯೋಮಿತಿ ಚೆಸ್ ಪಂದ್ಯಾವಳಿಗೆ […]

Read More

ಸ್ನೇಹ, ಆತ್ಮೀಯತೆ ಹಾಗೂ ಒಗ್ಗಟ್ಟಿನ ಸಂಭ್ರಮಕ್ಕೆ ಸಾಕ್ಷಿಯಾದ ‘ಸ್ನೇಹ ಮಿಲನ’

ಮಂಗಳೂರು, ಆಗಸ್ಟ್ 08: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಆಯೋಜಿಸಲಾದ ‘ಸ್ನೇಹ ಮಿಲನ’ ಕಾರ್ಯಕ್ರಮವು ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ಸಂಭ್ರಮ ಹಾಗೂ ಆತ್ಮೀಯತೆಯಿಂದ ನಡೆಯಿತು. ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಅವರು ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ, ಗುರುಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷೆಯರು ಯುವವಾಹಿನಿ ಹಾಗೂ ಮಂಗಳೂರು ಮಹಿಳಾ ಘಟಕದೊಂದಿಗಿನ ತಮ್ಮ ಒಡನಾಟ ಮತ್ತು ಅನುಭವಗಳನ್ನು ಹಂಚಿಕೊಂಡರು. ಘಟಕದ ಬೆಳವಣಿಗೆ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು

ದಿನಾಂಕ :
ಸ್ಥಳ :

ದಿನಾಂಕ : 2026ನೇ ಸೆಪ್ಟೆಂಬರ್ 6 ಬೆಳಗ್ಗೆ 11 ಗಂಟೆಗೆ
ಸ್ಥಳ : ಮೂಡುಮಾರ್ನಾಡು, ಮೂಡುಬಿದಿರೆ

ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ

ದಿನಾಂಕ : 2026ನೇ ಅಗಸ್ಟ್16 ಬೆಳಗ್ಗೆ ಗಂಟೆ 09.30 ರಿಂದ
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬಿ.ಸಿ.ರೋಡ್

ಯುವವಾಹಿನಿ (ರಿ) ಬಂಟ್ವಾಳ ಘಟಕದ ನಿರೆಲ್‌ಡ್

ದಿನಾಂಕ : 2026ನೇ ಅಗಸ್ಟ್ 23
ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!