30-04-2022, 3:58 AM
ದಿನಾಂಕ ಏಪ್ರಿಲ್ 30 ರಂದು ಯುವವಾಹಿನಿ (ರಿ.) ಪಡುಬಿದ್ರೆ ಘಟಕ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಜೀವನೋಪಾಯ ಇಲಾಖೆ ಸಿಡೋಕ್, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಶಿಬಿರ ಪಡುಬಿದ್ರಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿತು. ಶಿಬಿರದ ಉದ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ರವರು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆಯ ಜಂಟಿ ನಿರ್ದೇಶಕರಾದ ಅರವಿಂದ ಡಿ ಬಾಲೇರಿ ವಹಿಸಿದ್ದರು. ತರಬೇತುದಾರರಾಗಿ ಸಿಡೋಕ್ […]
Read More
26-04-2022, 3:30 PM
ಭಾರತ ಪುಣ್ಯಭೂಮಿ, ವಿಶ್ವ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ ಪಡೆದಕೊಂಡ ಈ ನಾಡಿನ ಅಂತರ್‌ಶಕ್ತಿ ವಿಶಿಷ್ಟವಾದುದು. ಇಂತಹ ಪುಣ್ಯ ಭೂಮಿಯಲ್ಲಿ ಮುಗ್ಧ ಮನಸ್ಸುಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಯುವವಾಹಿನಿ ಯಡ್ತಾಡಿ ಘಟಕ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜನೆ ಮೂಲಕ ಮಕ್ಕಳ ಭೌತಿಕ ವಿಕಸನದ ಮೂಲಕ ಸಂಸ್ಕಾರಯುತ ಶಿಕ್ಷಣಕ್ಕೆ ಅಡಿಪಾಯವಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನವಭಾರತ್ ಸಹಕಾರಿ ಸಂಘ ಮೈರ್ಕೊಮೆ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಹೇಳಿದರು.ಅವರು ಯುವವಾಹಿನಿ(ರಿ) ಯಡ್ತಾಡಿ ಘಟಕ ಸಾರಥ್ಯದಲ್ಲಿ ಸ.ಹಿ.ಪ್ರಾ.ಶಾಲೆ ಯಡ್ತಾಡಿ, […]
Read More
10-04-2022, 7:45 AM
ಮಾಣಿ : ಕಾರ್ಯಾಗಾರದಲ್ಲಿ ಭಾಗವಹಿಸಿದ ಸದಸ್ಯರ ಉತ್ಸಾಹ, ಶಿಸ್ತು, ಯುವವಾಹಿನಿಯ ಸಂಸ್ಥೆಯ ಮೇಲಿನ ಅತೀವ ಪ್ರೀತಿ ಕಾರ್ಯಾಗಾರದ ಯಶಸ್ಸಿನ ಮೂಲ ಎಂದು ರಾಷ್ಟ್ರೀಯ ತರಬೇತುದಾರರಾದ ಸದಾನಂದ ನಾವಡ ತಿಳಿಸಿದರು. ಅವರು ದಿನಾಂಕ 10.04.2022 ರಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ರಿ.ಮಾಣಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರಿಗೆ ಮಾಣಿ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಚೈತನ್ಯ-2022 ತರಬೇತಿ ಕಾರ್ಯಾಗಾರದ ಮುಖ್ಯ […]
Read More
10-04-2022, 7:42 AM
ಮಾಣಿ : ಚೈತನ್ಯ 2022 ತರಬೇತಿ ಕಾರ್ಯಾಗಾರವು ಯುವವಾಹಿನಿ ಸಂಘಟನೆಯು ಇನ್ನಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ ಹಾಗೂ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಯುವವಾಹಿನಿ ಮಾಣಿ ಘಟಕದ ಅಚ್ಚುಕಟ್ಟುತನದ ಆತಿಥ್ಯ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 10.04.2022 ರಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ರಿ.ಮಾಣಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಘಟಕಗಳ ಅಧ್ಯಕ್ಷರು, […]
Read More
03-04-2022, 3:12 PM
ಮಂಗಳೂರು : ದಿನಾಂಕ 03.04.2022 ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಸಾರಥ್ಯದಲ್ಲಿ ಯುವವಾಹಿನಿ(ರಿ.) ಕಂಕನಾಡಿ ಹಾಗೂ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಮಂಗಳೂರು ವುಡ್ ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ “ಹೊಂಬೆಳಕು – 2022″ಮಹಿಳಾ ಆರ್ಥಿಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಎಂಬ ಧ್ಯೇಯ ವಾಕ್ಯದೊಂದಿಗೆ (ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ) ಕಾರ್ಯಕ್ರಮ ಜರಗಿತು. ಲಯನ್ಸ್ ಜಿಲ್ಲಾ ಗವರ್ನರ್ ರವರ ಜಿಲ್ಲಾ ಸಂಯೋಜಕಿ ಲಯನ್ ಭಾರತಿ ಬಿ .ಎಮ್ . ಮಹಿಳಾ ದಿನಾಚರಣೆ ಪ್ರಯುಕ್ತ […]
Read More
12-03-2022, 4:46 AM
ಕಡಬ :- ದಿನಾಂಕ 12.03.2022 ರಂದು ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಭೇತಿ ಕಾರ್ಯಗಾರ “ವಿದ್ಯಾ ಸ್ಪೂರ್ತಿ” ಕಾರ್ಯಕ್ರಮವು ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ “ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ SSLC ಯ ಅಂಕಗಳು ಮಾನ ದಂಡವಾಗುತ್ತದೆ ಹಾಗೆಯೇ ಈ ಅದ್ಭುತ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕ […]
Read More
08-03-2022, 5:00 AM
ಮುಲ್ಕಿ :- ದಿನಾಂಕ 08.03.2022 ರಂದು ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಮುಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಶಾಲೆಯ ಸಭಾಂಗಣದಲ್ಲಿ ಜೇಸಿ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ರವರಿಂದ ಶೈಕ್ಷಣಿಕ ಮಾರ್ಗದರ್ಶನ ಶಿಬಿರವು ನಡೆಯಿತು. ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತಾನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ರಾದ ಉದಯ ಅಮೀನ್ ಮಟ್ಟು”ನನ್ನ ಮಾತೃ ಸಂಸ್ಥೆ ಯಾಗಿರುವ ಮುಲ್ಕಿ ಘಟಕವು ನಮ್ಮ ಸಂಸ್ಥೆಯ ಧೇಯೋದ್ದೇಶದಂತೆ ವಿದ್ಯೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾ […]
Read More
18-02-2022, 5:46 AM
ಅಳಿಯೂರು : ಸಿದ್ದತೆ ಮತ್ತು ಬದ್ಧತೆಯಿಂದ ಯಶಸ್ಸು ಸಾಧ್ಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕರು ಹಾಗೂ ಜೇಸೀ ರಾಷ್ಟ್ರೀಯ ತರಬೇತುದಾರರಾದ ಸುಧಾಕರ ಕಾರ್ಕಳ ಅಭಿಪ್ರಾಯ ಪಟ್ಟರು. ಅವರು ದಿನಾಂಕ 18.02.2022 ರಂದು ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ಅಳಿಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಜರುಗಿದ ಪರೀಕ್ಷಾಪೂರ್ವ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟು ಮಾತನಾಡಿದರು ಶಿಕ್ಷಣ ಸಂಯೋಜಕರಾದ ಸ್ಮಿತಾ ಮಿರಾಂದ ದೀಪ ಬೆಳಗುವುದರ ಮೂಲಕ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರದ ಸರಣಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ […]
Read More
06-02-2022, 2:53 PM
ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕದ ನೇತ್ರತ್ವದಲ್ಲಿ ಪುತ್ತೂರಿನ ಆಯ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ “ಯುವವಾಹಿನಿ ಶಿಕ್ಷಣ ಸ್ಪೂರ್ತಿ-2022′ ದಿನಾಂಕ 06.02.2022 ಕಾರ್ಯಕ್ರಮ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ. ಬಹಳ ಮುಖ್ಯವಾದ ಘಟ್ಟ. ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಪುತ್ತೂರು ಯುವವಾಹಿನಿ ಘಟಕ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯುತ್ತಮವಾದುದು. […]
Read More
23-11-2019, 2:53 PM
ದಿನಾಂಕ 20/11/2019ರಂದು ಶ್ರೀ ಗೋಕರ್ಣ ನಾಥ ಪಿ ಯು ಕಾಲೇಜಿನಲ್ಲಿ ಮಕ್ಕಳಿಗೆ IAS, KA S ಮಾಹಿತಿ ಶಿಬಿರವನ್ನು ಸರ್ವಜ್ಞ IAS KAS ಅಕಾಡಮಿಯ ನಿರ್ದೇಶಕರಾದ ಸುರೇಶ್ ಇವರು ನಡೆಸಿಕೊಟ್ಟರು.
Read More