01-04-2018, 3:34 PM
ಅಡ್ವೆ : ಸ್ವ-ಉದ್ಯೋಗದ ಮೂಲಕ ತಾನು ಬೆಳೆಯುವುದರೊಂದಿಗೆ ಇತರರ ಬೆಳವಣಿಗೆಗೆ ಸಹಕಾರಿಯಾಗಿದೆ.ಸ್ವ ಉದ್ಯೋಗದಿಂದ ಸಮಾಜದ ಹಿತ ಅಡಗಿದೆ ಸಾವಿರಾರು ಉದ್ಯೋಗದ ಸ್ರಷ್ಟಿಯಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಜಯಂತ ನಡುಬೈಲು ತಿಳಿಸಿದರು ಅವರು ದಿನಾಂಕ 01.04.2018 ರಂದು ಯುವವಾಹಿನಿ(ರಿ) ಅಡ್ವೆ ಘಟಕದ ಆಶ್ರಯದಲ್ಲಿ ಅಡ್ವೆಆನಂದಿ ಸಭಾಭವನದಲ್ಲಿ ಜರುಗಿದ ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು . ಯುವವಾಹಿನಿ ಸದಸ್ಯರು ಸ್ವಾವಲಂಬಿಯಾಗಿ ಬದುಕಲು ಕಲಿಯಿರಿ, ಅದಕ್ಕೆ ಬೇಕಾದ […]
Read More
25-02-2018, 3:12 PM
ಪುತ್ತೂರು: ವಿಜಯ ಕರ್ನಾಟಕ ದಿನ ಪತ್ರಿಕೆ ಮತ್ತು ಪುತ್ತೂರು ಯುವವಾಹಿನಿ (ರಿ.) ಇವರ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ – ಸಂವಾದ ಕಾರ್ಯಕ್ರಮ ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ವಿಜಯೀಭವ ಹೆಸರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ರಾಜ್ಯದಾದ್ಯಂತ ಇಂಥ ಕಾರ್ಯಕ್ರಮ ನಡೆಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿತ್ತು. ಯುವವಾಹಿನಿ ಪುತ್ತೂರು ಘಟಕವು ಪೂರ್ಣ ಸಹಯೋಗ ನೀಡುವ ಮೂಲಕ ಕಾರ್ಯುಕ್ರಮದಲ್ಲಿ ಸಂಪೂರ್ಣ ಪಾಲು ಪಡೆಯಿತು. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಯುವವಾಹಿನಿಯ […]
Read More
18-02-2018, 3:20 PM
ನಾಗರಿಕಾ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ ಶಿಸ್ತು, ಶ್ರದ್ಧೆ, ಗುರಿ, ಆಳ ಅಧ್ಯಯನ, ಜತೆಗೆ ದೃಢವಾದ ಆತ್ಮವಿಶ್ವಾಸ ಇದ್ದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು. ಮಂಗಳೂರು ಬಲ್ಮಠದ ಬೆಸೆಂಟ್ ಜತ್ತನ್ನ ಸಭಾಂಗಣದಲ್ಲಿ ದಿನಾಂಕ 18.02.2018 ರಂದು ಜರುಗಿದ ಯುವವಾಹಿನಿ (ರಿ) ಮಂಗಳೂರು ಘಟಕ, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ, ಕರ್ನಾಡಕ ಕ್ರಿಶ್ಚಿಯನ್ ಅಸೋಸಿಯೇಷನ್ ಸಿಸೈಟಿ, ಹಾಗೂ ಸರ್ವಜ್ಞ ಐಎಎಸ್ ಅಕಾಡೆಮಿ ವತಿಯಿಂದ ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ […]
Read More
18-02-2018, 2:17 PM
ಉಡುಪಿ: ಪ್ರಸ್ತುತ ಇರುವ ಸ್ಥಿತಿಯಿಂದ ಉತ್ತಮ ಸ್ಥಿತಿಯತ್ತ ಕೊಂಡೋಯ್ಯುವುದೇ ಸಂಸ್ಕಾರ, ಮಾನವ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಮಾಧವನಾಗುತ್ತಾನೆ, ಇದಕ್ಕೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಇಂತಹ ಕಾರ್ಯಾಗಾರವನ್ನು ನಿರಂತರ ನಡೆಸುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಉಡುಪಿ ಬಲೈಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಬಹು […]
Read More
07-01-2018, 2:46 PM
ವಿಶ್ವವಿದ್ಯಾಲಯ ಪರೀಕ್ಷೆಗಳಿಗಿಂತ ಜೀವನ ಪರೀಕ್ಷೆ ಮುಖ್ಯವಾದವು, ಈ ಪರೀಕ್ಷೆಯಲ್ಲಿ ಯಶಸ್ವೀಯಾಗುವುದರ ಮೂಲಕ ವಿದ್ಯಾರ್ಥಿ ಜೀವನ ಸಾರ್ಥಕತೆ ಪಡೆಯಬೇಕು. ಜೀವನದಲ್ಲಿ ಮಾತಿಗಿಂತ ಸಾಧನೆ ಮುಖ್ಯ, ಯಾವತ್ತೂ ಮಾತೇ ಸಾಧನೆಯಾಗಬಾರದು ಎಂದು ಕೇಂದ್ರ ಸಮಿತಿಯು ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 07.01.2017 ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಸ್ಟೂಡೆಂಟ್ ವಿಂಗ್ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರರಾದ […]
Read More
25-12-2017, 3:08 PM
ವಿದ್ಯೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಪೂರಕವಾದುದು. ಶಿಕ್ಷಣ ದ ಬಗೆಗಿನ ಕಾಳಜಿಯು ಅಗತ್ಯವಾದುದು. ಯಾವುದೇ ಪ್ರತಿಷ್ಠೆ, ಸ್ಥಾನಮಾನಕ್ಕಾಗಿ ನಮ್ಮ ಕೆಲಸ ಕಾರ್ಯಗಳು ಇರಕೂಡದು. ನಿಸ್ವಾರ್ಥ ವಾದ ಮನಸ್ಸಿನ ಸೇವೆಯನ್ನು ಸಮಾಜ ಗುರುತಿಸುತ್ತದೆ. ಸಾಮಾಜಿಕ ಸೇವೆಯಿಂದ ದೊರೆಯುವ ತೃಪ್ತಿ ಎಲ್ಲಾ ಬಗೆಯ ಸನ್ಮಾನ ಪ್ರಶಂಸೆಗಳನ್ನು ಮೀರಿದುದು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಕೂಡದು ಎನ್ನುವ ಮಹತ್ವಾಕಾಂಕ್ಷೆ ಯಿಂದ ಎಲ್ ಸಿ ಆರ್ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಈ ವಿದ್ಯಾಸಂಸ್ಥೆಯಲ್ಲಿ ಪಡೆಯುತ್ತಿದ್ದಾರೆ. ಇದು […]
Read More
25-12-2017, 10:09 AM
ಬಂಟ್ವಾಳ : ಮನುಷ್ಯ ಪರಿಸರದ ಕೂಸು. ಪ್ರತಿಭೆಗೆ ಯಾವುದೇ ಜಾತಿಯ ಹಂಗಿಲ್ಲ. ನಮ್ಮೊಳಗಿನ ಕೀಳರಿಮೆಯನ್ನು ಮೊದಲು ಕಸದ ಬುಟ್ಟಿಗೆ ಹಾಕಿ ನಮ್ಮ ದೃಷ್ಟಿ ಗುರಿಯ ಸಾಧನೆಯ ಕಡೆಗೆ ಇರಬೇಕು. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇಲ್ಲ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುತ್ತೆ, ಯಾರು ಕೂಡ ಒಮ್ಮೆಲೆ ನಾಯಕರಾಗಿ ರೂಪುಗೊಳ್ಳೊದಿಲ್ಲ. ಯಾವುದಾದರೊಂದು ಹೋರಾಟದ ಕಾರಣವಾಗಿ ನಾಯಕರುಗಳು ರೂಪುಗೊಳ್ಳುತ್ತಾರೆ. ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು. ಸಮಾಜದ ಎಲ್ಲಾ ಬಗೆಯ ಸಮಸ್ಯೆಗಳಿಗೆ ಶಿಕ್ಷಣವು ಚಿಕಿತ್ಸೆ ಯಾಗುತ್ತೆ ಎಂಬ ನಂಬಿಕೆ […]
Read More
25-12-2017, 8:30 AM
ಬಂಟ್ವಾಳ: ಯಾವುದೇ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯಲು ಶಿಕ್ಷಣವು ಅಗತ್ಯ. ಶಿಕ್ಷಣದಿಂದ ಅವಕಾಶವಂಚಿತ ವಿದ್ಯಾರ್ಥಿಗಳನ್ನು ಗುರುತಿಸಿ ಯೋಗ್ಯ ರೀತಿಯ ಶಿಕ್ಷಣವನ್ನು ಒದಗಿಸುವ ಕೆಲಸವನ್ನು ಯುವವಾಹಿನಿ ಸಂಸ್ಥೆ ಮಾಡುತ್ತಿದೆ. ಶಿಕ್ಷಣವು ಮಾನವನನ್ನು ವಿದ್ಯಾವಂತನನ್ನಾಗಿ ಮಾಡುವುದು ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡುವ ಮಹತ್ವಪೂರ್ಣ ಕೆಲಸವನ್ನೂ ನಿರ್ವಹಿಸುತ್ತದೆ. ಯುವ ಮನಸ್ಸುಗಳಿಗೆ ಸೂಕ್ತ ರೀತಿಯ ತರಬೇತಿ ನೀಡುವ ಮೂಲಕ ಸಮರ್ಥ ರಾಷ್ಟ್ರವನ್ನು ಕಟ್ಟಬಹುದು ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘ ಸಜೀಪ ಮೂಡದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಭಿಪ್ರಾಯ […]
Read More
23-12-2017, 2:26 AM
ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಘಟಕ ಇದರ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯುವಜನ ಜಾಗೃತಿ ಪ್ರಗತಿ ಉಪನ್ಯಾಸ, ಸಂವಾದ, ಸಮನ್ವಯ ಕಾರ್ಯಾಗಾರವು ದಿನಾಂಕ ೨೩-೧೨-೨೦೧೭ ರಂದು ಗೋಕರ್ಣನಾಥೇಶ್ವರ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ವಿದ್ಯಾರ್ಥಿಗಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರವು ಅವಶ್ಯಕವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾರ್ಯಾಗಾರವನ್ನು ಉಧ್ಘಾಟಿಸಿದ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ರೇಣುಕಾ ಕೆ ತಿಳಿಸಿದರು . ಉದ್ಯಮಿ ಶ್ರೀ ದತ್ತೇಶ್ ಪೂಜಾರಿ , ಪ್ರಿಯಾ ವುಡ್ ವರ್ಕ್ಸ್ […]
Read More
17-12-2017, 2:35 PM
ಯುವವಾಹಿನಿ ನಾಯಕರನ್ನು ಸ್ರಷ್ಟಿಸುವ ಕಾರ್ಖಾನೆಯಾಗಿದೆ , ಕಳೆದ ಮೂವತ್ತ್ತು ವರ್ಷಗಳ ಸಾರ್ಥಕ್ಯ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಯುವವಾಹಿನಿ ಯುವ ಜನಾಂಗಕ್ಕೆ ವ್ಯಕ್ತಿತ್ವ ವಿಕಸನ , ಸಭಾ ನಡಾವಳಿ ಕಾರ್ಯಾಗಾರದ ಮೂಲಕ ವಿಕಸನದ ನಾಂದಿಯಾಗಿದೆ , ವಿದ್ಯಾರ್ಥಿಗಳಿಗೆ ಚತುರ್ಮುಖ, ಅನ್ವೇಷಣಾ ಕಾರ್ಯಾಗಾರದ ಮೂಲಕ ಸ್ರಜನಶೀಲತೆ ಸ್ರಷ್ಟಿಸಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕೆರ್ ಸುವರ್ಣ ತಿಳಿಸಿದರು . ಅವರು ದಿನಾಂಕ 17.12.2017 ರಂದು ಯುವವಾಹಿನಿ (ರಿ) ಬೆಳುವಾಯಿ ಘಟಕದ ಆಶ್ರಯದಲ್ಲಿ ಜರುಗಿದ ವ್ಯಕ್ತಿತ್ವ […]
Read More