ಯುವಸಾಧನಾ ಪುರಸ್ಕಾರ

ಯುವವಾಹಿನಿ ಯುವಸಾಧನಾ ಪುರಸ್ಕಾರ ಪ್ರದಾನ

ಬಂಟ್ವಾಳ : ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ಸಂಘಟನಾ ಕ್ಷೇತ್ರದ ಸಾಧಕ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಧಾರ್ಮಿಕ ಕ್ಷೇತ್ರದ ಸಾಧಕ ಮನೋಜ್ ಕಟ್ಟೆಮಾರ್, ಸಾಂಸ್ಕೃತಿಕ ಕ್ಷೇತ್ರದ ಸಾಧಕಿ ಅಕ್ಷತಾ ಇವರಿಗೆ ಯುವವಾಹಿನಿ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಟನಾ ಕ್ಷೇತ್ರದ ಸಾಧಕರು  ಶ್ರೀನಿವಾಸ ಪೂಜಾರಿ ಮೆಲ್ಕಾರ್ ಗುರುಜ್ಯೋತಿ ಶಾಮಿಯಾನ ಸಂಸ್ಥೆಯನ್ನು ಹುಟ್ಟಿ ಹಾಕಿ ಸತತ 25 ವರ್ಷಗಳಿಂದ ಮುನ್ನಡೆಸಿಕೊಂಡು ಬರುವುದರ ಜೊತೆಗೆ ಬಂಟ್ವಾಳ ಯುವಸಂಗಮದ ಸ್ಥಾಪಕ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ವಿವಿಧ ಹುದ್ದೆ ಅಲಂಕರಿಸಿ ಸರ್ಕಾರಿ ಶಾಲಾಮಕ್ಕಳಿಗೆ […]

Read More

ಯುವವಾಹಿನಿ ಯುವ ಸಾಧನಾ ಪುರಸ್ಕಾರ ಪ್ರದಾನ

ಮುಲ್ಕಿ:- ದಿನಾಂಕ 25 ಡಿಸೆಂಬರ್ 2022 ರಂದು ಮುಲ್ಕಿಯ ವಿಜಯಾ ಕಾಲೇಜಿನ, ಅರ್ಪಣ ತೆರೆದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶದಲ್ಲಿ ಯುವ ಸಾಧನಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು. ಈ ಸಾಲಿನ ಯುವ ಸಾಧನಾ ಪುರಸ್ಕಾರವನ್ನು ಏಕಲವ್ಯ ಪ್ರಶಸ್ತಿ ಪುರಸ್ಕೃತರು, ಅಂತರಾಷ್ಟ್ರೀಯ ಕ್ರೀಡಾಪಟು ನಿತಿನ್ ಪೂಜಾರಿ ವಿಟ್ಲ , ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಪದಕ ವಿಜೇತರಾದ ಕು| ರಶ್ಮಿ ಜಿ. ಅಂಚನ್ ಕುಳಾಯಿ ಮತ್ತು ಚರ್ಮ ಶಾಸ್ತ್ರ […]

Read More

ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ, ಸಾಧನಾ ಶ್ರೇಷ್ಟ ಪ್ರಶಸ್ತಿ, ಜೀವಮಾನ ಸಾಧಕ ಪುರಸ್ಕಾರ, ಯುವ ಸಾಧನಾ ಪುರಸ್ಕಾರ ಪ್ರದಾನ

ಪುತ್ತೂರು : ದಿನಾಂಕ 11.08.2019 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ವಿಶಾಲ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ ಸಂಸ್ಥೆಯ 32ನೇ ವಾರ್ಷಿಕ ಸಮಾವೇಶದಲ್ಲಿ ಯುವವಾಹಿನಿ ಸಾಧನಾಶ್ರೀ ಪ್ರಶಸ್ತಿ, ಸಾಧನಾ ಶ್ರೇಷ್ಟ ಪ್ರಶಸ್ತಿ, ಜೀವಮಾನ ಸಾಧಕ ಪುರಸ್ಕಾರ, ಯುವ ಸಾಧನಾ ಪುರಸ್ಕಾರ ಪ್ರದಾನ ಮಾಡಲಾಯಿತು. ಔದ್ಯೋಗಿಕ ಸಾಧಕರಾದ ಮಣಿಪಾಲ ಉದಯ ಸಮೂಹ ಸಂಸ್ಥೆಗಳ ರಮೇಶ್ ಎ.ಬಂಗೇರರವರಿಗೆ ಯುವವಾಹಿನಿ ಸಾಧನಾಶ್ರೀ ಪ್ರಶಸ್ತಿಯನ್ನು, ಬೆಳ್ತಂಗಡಿ ಶ್ರೀ ಗುರುದೇವಾ ವಿವಿಧೋದ್ಧೇಶ ಸಹಕಾರಿ ಸಂಘಕ್ಕೆ ಯುವವಾಹಿನಿ ಸಾಧನಾ […]

Read More

ಯುವವಾಹಿನಿ ಯುವಸಾಧನಾ ಪುರಸ್ಕಾರ ಪ್ರದಾನ

ಮಂಗಳೂರು : ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಹಲವು ವಿಭಾಗದಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಸಂಘ, ಸಂಸ್ಥೆಗಳಿಗೆ ಗೌರವ ಅಭಿನಂದನೆ, ಯುವವಾಹಿನಿ ಸಾಧಕ ಪುರಸ್ಕಾರ, ಯುವ ಸಾಧನಾ ಪುರಸ್ಕಾರ, ಸಾಧನಾ ಶ್ರೀ ಪ್ರಶಸ್ತಿ, ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಂಸ್ಕೃತಿಕ ರಂಗದ ರಾಯಭಾರಿಯಾಗಿ, ಸಾಹಿತ್ಯ ಸೇತುವಾಗಿ, […]

Read More

ಯಕ್ಷಲೋಕದ ಗಾನ ಸುರಭಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ

ಯಕ್ಷಲೋಕದಲ್ಲಿ ಗಾನ ಸುರಭಿ ಎಂದೇ ಕರೆಸಿಕೊಂಡು ತನ್ನ ಕಂಠ ಮಾಧುರ್ಯಕ್ಕೆ ಅಸಂಖ್ಯಾತ ಅಭಿಮಾನಿ ಬಳಗವನ್ನು ಹುಟ್ಟು ಹಾಕಿಕೊಂಡಿರುವ ರವಿಚಂದ್ರ ಕನ್ನಡಿಕಟ್ಟೆ ಈ ನಾಡುಕಂಡ ಅಪ್ರತಿಮ ಭಾಗವತ.ತೆಂಕು ತಿಟ್ಟಿನ ಯಕ್ಷಲೋಕದಲ್ಲಿ ನಕ್ಷತ್ರಪುಂಜದಂತೆ ಮಿನುಗುವ ರವಿಚಂದ್ರ ಕನ್ನಡಿಕಟ್ಟೆ ಮೂಲತಃ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಪಜೆಮಾರು ನಿವಾಸಿ ಧರ್ಮಣ್ಣ ಪೂಜಾರಿ ಮತ್ತು ಸುಶೀಲಾ ದಂಪತಿಗಳ ಪುತ್ರ. 1980ನೇ ಇಸವಿಯ ಅಕ್ಟೋಬರ್ 10ರಂದು ಜನಿಸಿದ ಕನ್ನಡಿಕಟ್ಟೆ ಎಸ್‍ಎಸ್‍ಎಲ್‍ಸಿಗೆ ತನ್ನ ಶಿಕ್ಷಣ ಮೊಟಕುಗೊಳಿಸಿ ಬಳಿಕ ಯಕ್ಷರಂಗದತ್ತ ಮುಖ ಮಾಡಿ ಹೊರಟವರು. ಧರ್ಮಸ್ಥಳ ಮಂಜುನಾಥೇಶ್ವರ […]

Read More

ಶ್ರೀ ಧರಣೇಂದ್ರ ಕುಮಾರ್ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ -2017

    ಸಾಮಾಜಿಕ ಕ್ಷೇತ್ರದ ಸಾಧಕ ಶ್ರೀ ಧರಣೇಂದ್ರ ಕುಮಾರ್ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಜೆ ಮನೆತನದ ದಿ. ಬಾಬು ಪೂಜಾರಿ ಮತ್ತು ಶ್ರೀಮತಿ ಸಿರಿಯಮ್ಮ ದಂಪತಿಯರ ಸುಪುತ್ರನಾಗಿ ಜನನ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯಲ್ಲಿ ಹಾಗೂ ಪ್ರೌಢಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಕಾಲೇಜು ಸಿದ್ಧಕಟ್ಟೆಯಲ್ಲಿ ಮುಗಿಸಿ ವೃತ್ತಿ ಜೀವನವನ್ನು ಕೃಷಿಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಸೇವೆಯನ್ನು ಮೈಗೂಡಿಸಿಕೊಂಡು ಫ್ರೆಂಡ್ಸ್ ಕ್ಲಬ್ (ರಿ.) ಹೊಸಂಗಡಿ […]

Read More

ನಿತ್ಯಪ್ರಕಾಶ್ ಎಚ್. ಎಸ್. ಬಂಟ್ವಾಳ್ ಇವರಿಗೆ ಯುವವಾಹಿನಿ ಯುವಸಾಧನಾ ಪುರಸ್ಕಾರ – 2016

ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕೂಡಾ ತನ್ನ ಆಸಕ್ತಿಯ ಕ್ಷೇತ್ರ ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 4 ಚಿನ್ನದ ಪದಕ ಸಹಿತ 7 ಪ್ರಶಸ್ತಿಗಳನ್ನು ಗಳಿಸಿ ಸಾಧನೆಗೆ ಇದಿರಿಲ್ಲ ಎಂಬಂತಹ ವಿಶೇಷ ಸ್ಥಾನಮಾನ ಗಳಿಸಿದ ಖ್ಯಾತ ಸಾಮಾಜಿಕ ಧುರೀಣ ಶ್ರೀ ಹರಿಕೃಷ್ಣ ಬಂಟ್ವಾಳ್, ಶಶಿಕಲಾ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ನಿತ್ಯಪ್ರಕಾಶ್ ಎಚ್. ಎಸ್. ಬಂಟ್ವಾಳ್‌ರವರನ್ನು ಯುವ ಸಾಧನಾ ಪುರಸ್ಕಾರಕ್ಕೆ ಆಯ್ಕೆ ಮಾಡಲು ಯುವವಾಹಿನಿ ಸಂಸ್ಥೆ ಅತ್ಯಂತ ಹೆಮ್ಮೆ ಪಡುತ್ತದೆ. ಓರ್ವ ಹವ್ಯಾಸಿ ವಿಶೇಷ ಛಾಯಾಗ್ರಹಣ ಕ್ಷೇತ್ರದಲ್ಲಿ […]

Read More

ಮನಿಷಾ ಬಿ. ಪೂಜಾರಿ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ – 2016

ಬಿಲ್ಲವ ಸಮಾಜದ ಶೈಕ್ಷಣಿಕ ಪ್ರಗತಿಗೆ ಯುವವಾಹಿನಿಯು ಶ್ರಮಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಪ್ರತಿಭೆಯೊಂದು ಕಿರಿ ವಯಸ್ಸಿನಲ್ಲಿ ಹಿರಿಯರು ಮಾಡಲಾಗದ ಸಾಧನೆಗೈದಿದ್ದಾರೆ. ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ಬೇರಾರೂ ಅಲ್ಲ. ಪಿ.ಬಾಲಕೃಷ್ಣ ಪೂಜಾರಿ-ಮಲ್ಲಿಕಾ ಬಿ. ಪೂಜಾರಿ ದಂಪತಿಗಳ ಸುಪುತ್ರಿ ಮನಿಷಾ ಬಿ. ಪೂಜಾರಿ. ಕಾಲೇಜು ವಿದ್ಯಾಭ್ಯಾಸ ಹಂತದಿಂದ ಕಲಿಕೆಯ ಮುಂಚೂಣಿಯಲ್ಲಿದ್ದು ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿಗೆ ದ್ವಿತೀಯ ಶ್ರೇಷ್ಠರಾಗಿ ಸಾಧನೆಗೈದ ಇವರು ತನ್ನ ಕಲಿಕೆಯಾದ್ಯಂತ ಅತ್ಯುನ್ನತ ಶ್ರೇಣಿಯ ಗಳಿಕೆ ಸಾಧಿಸಿರುವುದು ಉಲ್ಲೇಖನೀಯ. ಬಿ.ಕಾಂ ಪದವಿಯಲ್ಲಿ MGM College ಉಡುಪಿಯ […]

Read More

ರಕ್ಷಿತ್ ಆರ್. ಕೋಟ್ಯಾನ್ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ – 2016

ಕಟಪಾಡಿ ಶ್ರೀ ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಆರ್. ಕೋಟ್ಯಾನ್ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ರಕ್ಷಿತ್ ಆರ್. ಕೋಟ್ಯಾನ್ ಓರ್ವ ಸತತ ಪರಿಶ್ರಮದ ಮೂಲಕ ದೇಹದಾರ್ಡ್ಯತೆಯ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಯುವಕ. ಶಿರ್ವದ ಸೈಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜು, ಮೂಡಬಿದ್ರಿಯಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿರುವ ರಕ್ಷಿತ್ ಶಿಕ್ಷಣದೊಂದಿಗೆ ಕ್ರೀಡಾ ಸಾಧನೆಯ ಮೇರು ಶಿಖರದತ್ತ ಧಾವಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. […]

Read More

ಅಕ್ಷತಾ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ – 2016

ಪ್ರತಿಭೆಗೆ ಸರಹದ್ದುಗಳಿಲ್ಲ-ಕಾರ್ಯಕ್ಷೇತ್ರಗಳೆಂಬ ಇತಿಮಿತಿ ಇರುವುದಿಲ್ಲ ಎಂಬ ಮಾತಿಗೆ ಸ್ಪಷ್ಟ ನಿದರ್ಶನ-ಬಜಪೆಯ ಶ್ರೀ ಪಿ.ಮೋಹನ್ ಕುಮಾರ್ ಹಾಗೂ ಕನಕಾ ಎಂ ದಂಪತಿಗಳ ಸುಪುತ್ರಿ ಕು| ಅಕ್ಷತಾ. ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ವಾಣಿಜ್ಯ ಕ್ಷೇತ್ರದತ್ತ ಮುಖ ಮಾಡಿದ ಈಕೆ ಬಿ.ಕಾಂ ಪದವಿಯನ್ನು ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ (ಮಾನವ ಸಂಪನ್ಮೂಲ) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕಲೆಯಲ್ಲಿ ದಿ| ವಿ.ಪಿ.ಕಾರಂತ, ಶ್ರೀ ಪಿ. ಮೋಹನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕರ್ನಾಟಕ ಸಂಗೀತದತ್ತ ಒಲವು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!