ಅಧ್ಯಕ್ಷರು

ತಾರಾನಾಥ್ ಎಚ್. ಬಿ. – ಅಧ್ಯಕ್ಷರು -2005-06

2005-06 ಯುವವಾಹಿನಿಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ವರ್ಷ. ಯುವವಾಹಿನಿ ಬಹುದಿನಗಳಿಂದ ಕಂಡ ಕನಸು ನನಸಾದ ಸಮಯ. ಬ್ರಹ್ಮಶ್ರೀ ನಾರಾಯಣ ಗುರುಗಳ 150 ನೇ ಜಯಂತಿಯ ವರ್ಷಾ ಚಾರಣೆಯ ಸಂಭ್ರಮದಲ್ಲಿ ಅವರ ಬದುಕನ್ನು ಸಾಕ್ಷ್ಯ ಚಿತ್ರದ ಮೂಲಕ ಸಮಾಜಕ್ಕರ್ಪಿಸಿದ ವರ್ಷ. ದಿನಾಂಕ 4-9-2005 ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ದಿವ್ಯ ಸನ್ನಿಧಿಯಲ್ಲಿ, ಅಧ್ಯಕ್ಷ ಕೊರಗಪ್ಪ ಸಭಾಭವನದಲ್ಲಿ ಕನ್ನಡ ಚಲನ ಚಿತ್ರರಂಗದ ದಿಗ್ಗಜ ಶ್ರೀ ಗಿರೀಶ್ ಕಾಸರವಳ್ಳಿಯವರ ಅಮೃತ ಹಸ್ತದಲ್ಲಿ, ಶ್ರೀ ಜಯ ಸಿ.ಸುವರ್ಣರವರ ಅಧ್ಯಕ್ಷತೆಯಲ್ಲಿ ಖ್ಯಾತ ನಿರ್ದೇಶಕರಾದ ಶ್ರೀ ಸದಾನಂದ […]

Read More

ಜಿತೇಂದ್ರ ಜೆ. ಸುವರ್ಣ – ಅಧ್ಯಕ್ಷರು -2004-05

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ದಿನಾಂಕ 2-9-1971 ರಲ್ಲಿ ಜನಿಸಿದ ಜಿತೇಂದ್ರ ಜೆ.ಸುವರ್ಣರವರು ಬಿ.ಕಾಂ. ಪದವೀದರರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವರು. ಯುವವಾಹಿನಿಯ 2004-05 ರ ಸಾಲಿನ ಅಧ್ಯಕ್ಷರಾಗಿ ಎಲ್ಲಾ ಘಟಕದೊಂದಿಗೆ ನಿಕಟ ಸಂಪರ್ಕವಿರಿಸಿ ಘಟಕಗಳು ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಳ್ಳುವಲ್ಲಿ ಸಹಕರಿಸಿ ಸಂಸ್ಥೆಯನ್ನು ಮುನ್ನಡೆಸಿದವರು. ಉದ್ಯಮಿಯಾಗಿರುವ ಇವರು ಕೊಡುಗೈದಾನಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ಅನುಭವ ಹೊಂದಿದವರಾಗಿರುತ್ತಾರೆ. ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಮಾಜಿ ಉಪಾಧ್ಯಕ್ಷರಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಗ್ರಾಮ ಮಟ್ಟ, ಮಂಡಳಿ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ […]

Read More

ಲಕ್ಷ್ಮಣ್ ಸಾಲ್ಯಾನ್ – ಅಧ್ಯಕ್ಷರು -2003-04

2003-04 ನೇ ಸಾಲಿನಲ್ಲಿ ಯುವವಾಹಿನಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು 4-5-2003 ರಂದು ಜರಗಿದ ಜಂಟಿ ಸಭೆಯಲ್ಲಿ ಶ್ರೀ ಲಕ್ಷ್ಮಣ ಸಾಲಿಯಾನ್ ವಹಿಸಿಕೊಂಡರು. ವಿದ್ಯೆ: 2003-04ರ ಸಾಲಿನಲ್ಲಿ ಘಟಕಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಆಶಯದಲ್ಲಿ ಕೇಂದ್ರ ಸಮಿತಿಯು ಹೆಚ್ಚಿನ ಕಾರ್‍ಯಕ್ರಮಗಳನ್ನು ಈ ವರ್ಷ ಹಮ್ಮಿಕೊಳ್ಳಲಿಲ್ಲ. ತಾ. 14-12-2003 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 55 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಉಪ್ಪಿನಂಗಡಿ ಘಟಕದ ವತಿಯಿಂದ ಸುಮಾರು 180 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸುಮಾರು 60 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸುರತ್ಕಲ್ ಘಟಕದ ವತಿಯಿಂದ ಸುಮಾರು 66 ವಿದ್ಯಾರ್ಥಿಗಳಿಗೆ […]

Read More

ತುಕಾರಾಮ್ ಎನ್. ಅಧ್ಯಕ್ಷರು – 2002-03

ತುಕಾರಾಮ ಎನ್. ಇವರು ಯುವವಾಹಿನಿ(ರಿ) ಕೇಂದ್ರ ಸಮಿತಿಯ 2002-03 ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. 2-5-1962 ರಲ್ಲಿ ಜನಿಸಿದ ಇವರು 1997-98 ರಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಬಳಿಕ ’ಸಿಂಚನ ಪತ್ರಿಕೆಯ ಸಂಪಾದಕರಾಗಿ, 2001-02 ರಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಶಾಲಿಯಾಗಿರುತ್ತಾರೆ. ಇವರು ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ’ಕೋಟಿ-ಚೆನ್ನಯ್ಯ’ ರಾಷ್ಟ್ರೀಯ ಕ್ರೀಡಾಕೂಟವನ್ನು ಬಿಲ್ಲವ ಮಹಾಮಂಡಲದ ಸಹಯೋಗದೊಂದಿಗೆ ದಿನಾಂಕ 12-5-2002 ರಂದು ನಡೆಸಲಾಗಿದ್ದು, ಹಲವಾರು ಯುವ ಪ್ರತಿಭೆಗಳು ಇದರಿಂದ ಬೆಳಕಿಗೆ ಬರುವಂತೆ ಆಗಿರುತ್ತದೆ. ನಮ್ಮ […]

Read More

ಟಿ. ಶಂಕರ ಸುವರ್ಣ – ಅಧ್ಯಕ್ಷರು -2001-02

2001-02 ನೇ ಸಾಲಿನಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಯುವವಾಹಿನಿಯನ್ನು ಮುನ್ನಡೆಸಿದವರು ಟಿ. ಶಂಕರ ಸುವರ್ಣರವರು. ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾಗಿ 1988 ರಲ್ಲಿ ಯುವವಾಹಿನಿಗೆ ಪಾದಾರ್ಪಣೆ ಮಾಡಿದ ಇವರು ಯುವವಾಹಿನಿ ಬಂಟ್ವಾಳ ಘಟಕದಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ, ಬಳಿಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಮಿತಿಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದ ಇವರು 2001-02ನೇ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿರುತ್ತಾರೆ. ಇವರ ಅಧ್ಯಕ್ಷೀಯ […]

Read More

ಸಾಧು ಪೂಜಾರಿ – ಅಧ್ಯಕ್ಷರು -2000-01

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಮುಡಾರು ಗ್ರಾಮದಲ್ಲಿ 08-05-1961 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಜೆಗೋಳಿ, ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು, ಕಾರ್ಕಳ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು ಹಾಗೂ ಡಿಪ್ಲೋಮ ಇನ್ ಕೆಮಿಕಲ್ ಇಂಜಿನೀಯರಿಂಗ್ ಶಿಕ್ಷಣವನ್ನು ಸರಕಾರಿ ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ ಪ್ರಥಮ ಶ್ರೇಣಿಯಲ್ಲಿ ಪಡೆದರು. 1983 ರಲ್ಲಿ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆಯಲ್ಲಿ ಉದ್ಯೋಗವನ್ನು ಪಡೆದು, ಇಲ್ಲಿ ಪ್ರಸಕ್ತ ಉತ್ಪಾದನಾ ವಿಭಾಗದಲ್ಲಿ ಶಿಪ್ಟ್ […]

Read More

ಕೆ. ರಾಜೀವ ಪೂಜಾರಿ – ಅಧ್ಯಕ್ಷರು -1999-2000

ಕೆ. ರಾಜೀವ ಪೂಜಾರಿ ಇವರು ಯುವವಾಹಿನಿ (ರಿ) ಕೇಂದ್ರ ಸಮಿತಿಯಲ್ಲಿ 1999-2000 ನೇ ಸಾಲಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವರು. ಇವರು ಅಧ್ಯಕ್ಷರಾಗಿದ್ದ ವರ್ಷದಲ್ಲಿ ಯುವವಾಹಿನಿಯ ನೂತನ ಘಟಕವು ಉಡುಪಿಯಲ್ಲಿ ಆರಂಭವಾಯಿತು. 1999 ರ ಆಗಸ್ಟ್ ತಿಂಗಳಲ್ಲಿ ಶ್ರೀ ಗುರು ಜಯಂತಿಯ ಪ್ರಯುಕ್ತ ಶ್ರೀ ಗುರು ಸಂದೇಶ ಯಾತ್ರೆಯನ್ನು ನಡೆಸಲಾಗಿತ್ತು. ಅವಿಭಜಿತ ದ.ಕ. ಜಿಲ್ಲೆಯಾದ್ಯಂತ 8 ಕಡೆಗಳಿಂದ ಹೊರಟು ಬಂದ ಗುರು ಸಂದೇಶ ಯಾತ್ರೆಯು ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಪ್ರದಿಪಾದಿಸಿದ ತತ್ವಾದರ್ಶಗಳನ್ನು ಸಮಾಜದಲ್ಲಿ ಬಿತ್ತರಿಸುತ್ತಾ ಬಂಟ್ವಾಳ-ಬಿ.ಸಿ.ರೋಡಿನಲ್ಲಿ ಒಟ್ಟು ಸೇರಿ ಬೃಹತ್ ಯಾತ್ರೆ ನಡೆಸಿ […]

Read More

ಚೆನ್ನಕೇಶವ – ಅಧ್ಯಕ್ಷರು -1998-99

ಶ್ರೀಯುತರ ಅಧ್ಯಕ್ಷ ಅವಧಿಯಲ್ಲಿ ಕಾಸರಗೋಡಿನ ಚಿಪ್ಪಾರು ಘಟಕದಿಂದ ಶೀರೂರಿನ ಘಟಕದವರೆಗೆ ಘಟಕ ಭೇಟಿಯನ್ನು ಮಾಡಿದ ಸಾಧನೆ ಅವಿಸ್ಮರಣೀಯ. ಇವರ ಅಧಿಕಾರ ಅವಧಿಯಲ್ಲಿ ವಿದ್ಯಾನಿಧಿಯಿಂದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ನೀಡಲಾಗಿತ್ತು. ಪುತ್ತೂರಿನ ಓರ್ವ ವಿದ್ಯಾರ್ಥಿ ಶ್ರೀ ಪ್ರವೀಣ್ ಕುಮಾರ್ ಇವರ ಆಥ್ಲೆಟಿಕ್ಸ್‌ನ ತರಬೇತಿ ಸಮಯದಲ್ಲಿ ಪೌಷ್ಠಿಕ ಆಹಾರ ಅವಶ್ಯಕತೆಗೆ ಮಾಸಿಕ 150/-ರಂತೆ ಧನ ಸಹಾಯ ನೀಡಲಾಗಿತ್ತು. ಕು. ಪ್ರಮೀಳಾರ ಪಿಯುಸಿ ವ್ಯಾಸಂಗದ ಸಂಪೂರ್ಣ ಖರ್ಚಿನ ಜವಾಬ್ದಾರಿಯನ್ನು ತಮ್ಮ ಸಮಾಜದ ದಾನಿಯಾದ ಕೆ.ಎ. ಜಯಚಂದ್ರರವರಿಂದ ಭರಿಸುವಂತೆ ಸಹಕರಿಸಲಾಗಿತ್ತು. 11-10-98 ರಂದು […]

Read More

ಎಂ. ನೀಲಯ್ಯ ಅಗರಿ – ಅಧ್ಯಕ್ಷರು -1997-98

ಮಂಗಳೂರು ತಾಲೂಕು ಕುಪ್ಪೆಪದವಿನ ಪ್ರತಿಷ್ಠಿತ ಕುಟುಂಬದ ಗುರಿಕಾರ ಅಗರಿ ದಿ| ಮುಂಡಪ್ಪ ಪೂಜಾರಿ ಹಾಗೂ ಶ್ರೀಮತಿ ಮುತ್ತು ಇವರುಗಳ ಮಗನಾಗಿ 05-05-1959ರಲ್ಲಿ ಜನಿಸಿದರು. ಎಳವೆಯಲ್ಲೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಬಂದ ನೀಲಯ ಅಗರಿಯವರು ’ಅಗರಿ’ ಎಂದೇ ಜನಪ್ರಿಯರು. ಕುಟುಂಬದ ಹಿರಿಯರಿಂದ ಬಂದ ಕೃಷಿ ಭೂಮಿಯನ್ನು ಹಸನುಗೊಳಿಸಿ ಸ್ವತಃ ಕೃಷಿಕನಾಗಿ ಕಾಯಕ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಅಗರಿಯವರು ಎಲ್ಲಾ ರೈತಾಪಿ ಜನಗಳಿಗೆ ಮಾದರಿಯಾಗಿದ್ದಾರೆ. ಮಾಜಿ ವಿದ್ಯಾರ್ಥಿ ನಾಯಕನಾಗಿದ್ದ ಅಗರಿ ಬಿ.ಎ. ಪದವೀಧರ. ’ಬೆಳೆವ ಸಿರಿ ಮೊಳಕೆಯಲ್ಲಿ’ ಎಂಬ […]

Read More

ಜಿ. ಪರಮೇಶ್ವರ ಪೂಜಾರಿ – ಅಧ್ಯಕ್ಷರು -1996-97

ಶ್ರೀ ಗೇರ್ತಿಲ ದೇವು ಪೂಜಾರಿ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರನಾಗಿ 28-05-1952 ರಂದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಕನ್ಯಾಲದಲ್ಲಿ ಜನಿಸಿದರು. ಬಿ.ಎ. ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಪಡೆದಿದ್ದಾರೆ. ತನ್ನ ಶಾಲಾ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಚಾಂಪಿಯನ್ ಶಿಪ್ ಮತ್ತು ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ತನ್ನ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಸೇವೆ ಸಲ್ಲಿಸಿ ನಂತರ 1980 ರಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!