ಕೇಂದ್ರ ಸಮಿತಿ

ರಕ್ಷಿತ್ ಆರ್. ಕೋಟ್ಯಾನ್ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ – 2016

ಕಟಪಾಡಿ ಶ್ರೀ ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಆರ್. ಕೋಟ್ಯಾನ್ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ರಕ್ಷಿತ್ ಆರ್. ಕೋಟ್ಯಾನ್ ಓರ್ವ ಸತತ ಪರಿಶ್ರಮದ ಮೂಲಕ ದೇಹದಾರ್ಡ್ಯತೆಯ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಯುವಕ. ಶಿರ್ವದ ಸೈಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜು, ಮೂಡಬಿದ್ರಿಯಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿರುವ ರಕ್ಷಿತ್ ಶಿಕ್ಷಣದೊಂದಿಗೆ ಕ್ರೀಡಾ ಸಾಧನೆಯ ಮೇರು ಶಿಖರದತ್ತ ಧಾವಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. […]

Read More

ಸಮಾಜ ಕಾರ್ಯ ಕ್ಷೇತ್ರದ ಅಪೂರ್ವ ಸಾಧಕಿ ಡಾ| ಮಧುಮಾಲ

ಸಮಾಜ ಕಾರ್ಯ (Social work) ಕ್ಷೇತ್ರದ ವಿಷಯ ತಜ್ಞೆಯಾಗಿದ್ದು, ಅಧ್ಯಾಪನದೊಂದಿಗೆ ನಿರಂತರ ಅಧ್ಯಯನ, ಕ್ಷೇತ್ರ ಕಾರ್ಯ ಮಾಡುತ್ತಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಡಾ| ಮಧುಮಾಲ ಒರ್ವ ಅಪೂರ್ವ ಸಾಧಕಿ, ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗ (social work Dept.)ದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಜನರನ್ನು ಜಾಗೃತಿಗೊಳಿಸುವ ಲೇಖನಗಳಿಂದ ಪ್ರಸಿದ್ಧಿ ಪಡೆದ ಇವರ ಮಹಿಳಾ ಸಮಾಜ ಸಂಬಂಧಿತ ವಿಚಾರಧಾರೆಗಳು, ಭಾಷಣಗಳು ಚಿಂತನಶೀಲವಾಗಿದೆ. […]

Read More

ಅಕ್ಷತಾ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ – 2016

ಪ್ರತಿಭೆಗೆ ಸರಹದ್ದುಗಳಿಲ್ಲ-ಕಾರ್ಯಕ್ಷೇತ್ರಗಳೆಂಬ ಇತಿಮಿತಿ ಇರುವುದಿಲ್ಲ ಎಂಬ ಮಾತಿಗೆ ಸ್ಪಷ್ಟ ನಿದರ್ಶನ-ಬಜಪೆಯ ಶ್ರೀ ಪಿ.ಮೋಹನ್ ಕುಮಾರ್ ಹಾಗೂ ಕನಕಾ ಎಂ ದಂಪತಿಗಳ ಸುಪುತ್ರಿ ಕು| ಅಕ್ಷತಾ. ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ವಾಣಿಜ್ಯ ಕ್ಷೇತ್ರದತ್ತ ಮುಖ ಮಾಡಿದ ಈಕೆ ಬಿ.ಕಾಂ ಪದವಿಯನ್ನು ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ (ಮಾನವ ಸಂಪನ್ಮೂಲ) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕಲೆಯಲ್ಲಿ ದಿ| ವಿ.ಪಿ.ಕಾರಂತ, ಶ್ರೀ ಪಿ. ಮೋಹನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕರ್ನಾಟಕ ಸಂಗೀತದತ್ತ ಒಲವು […]

Read More

ಸ್ವಪ್ರಯತ್ನವೇ ಜೀವಾಳ – ಶಶಾಂತ್ ಬಿ.

ಬಂಟ್ವಾಳ ಕಸ್ಬಾ ಗ್ರಾಮದ ಭೋಜ ಪೂಜಾರಿ ಮತ್ತು ವನಿತಾ ದಂಪತಿಗಳ ಸುಪುತ್ರ ಶಶಾಂತ್ ಬಿ. ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಗಣಿತ ಮತ್ತು ಸಂಸ್ಕೃತದಲ್ಲಿ 100 ಅಂಕಗಳನ್ನು ಪಡೆದು 625 ಕ್ಕೆ 614 (98.24%) ಅಂಕ ಗಳಿಸಿರುವುದು ಶ್ಲಾಘನೀಯ. ಬಿಡುವಿನ ವೇಳೆಯಲ್ಲಿ ತಾನೇ ದುಡಿದು ಶಾಲಾ ಶುಲ್ಕವನ್ನು ಭರಿಸಿ ಹೆತ್ತವರಿಗೆ ಹೊರೆಯಾಗದೆ ಎಲ್ಲರ ಪ್ರೀತಿ ಸಂಪಾದಿಸಿದ್ದಾರೆ. ತಾನೇ ನಾಟಕ ರಚಿಸಿ, ಅಭಿನಯಿಸಿದ ಉತ್ತಮ ರಂಗ ಕಲಾವಿದ. ಶಾಲಾ ದಿನಗಳಲ್ಲೇ ನಾಯಕತ್ವ ಗುಣ […]

Read More

ಕಲಿಕೆಯಲ್ಲಿ ನಿಧಿಯೇ ಸರಿ – ಕು| ನಿಧಿಶ್ರೀ ಯು. ಪೂಜಾರಿ

ಶ್ರೀಮತಿ ಭಾರತಿ ಹಾಗೂ ಶ್ರೀ ಉಮಾನಾಥ ದಂಪತಿಗಳಿಗೆ ಉತ್ತಮ ಹೆಮ್ಮೆ ಪಡತಕ್ಕೆ ಸಾಧನೆಯ ಕುವರಿ ನಿಧಿಶ್ರೀಯ ಬಗ್ಗೆ ಮತ್ತು ಅವಳ ಸಾಧನೆಯ ಬಗ್ಗೆ ಅರಿವಿರಲಿಕ್ಕಿಲ್ಲ ತಮ್ಮ ಜೀವನದ ಹಾದಿಯಲ್ಲಿ ತಮ್ಮ ಮಗಳು ಒಂದುದಿನ ಸ್ವಪ್ರತಿಭೆಯಿಂದ ಜನ ಮನ್ನಣೆಯನ್ನು ಗಳಿಸಿ ಕೊಡಲಿದ್ದಾಳೆ ಎಂಬ ಅರಿವಿರಲಿಕ್ಕಿಲ್ಲ. ಕಾರಣ ಅವರಿದ್ದದ್ದು 62 ತೋಕೂರು ಜೋಕಟ್ಟೆ ಎಂಬ ಸಣ್ಣ ಊರಿನಲ್ಲಿ. ಸಾಮಾನ್ಯವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಬದುಕಿನ ಸೂಕ್ಷತೆಗಳ ಅರಿವಿರುತ್ತದೆ. ಜೀವನದ ಕಷ್ಟ ಕಾರ್ಪಣ್ಯಗಳ ಸರಿಯಾದ ದೃಷ್ಟಿಕೋನ ಇರುತ್ತದೆ ಇವರ ಬಾಳಿನಲ್ಲೂ ನಡೆದದ್ದು […]

Read More

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು 2015-16ನೇ ಸಾಲಿನ ಕಾರ್ಯಕಾರಿ ಸಮಿತಿ

ಅಧ್ಯಕ್ಷರು : ಶ್ರೀ ಸಂತೋಷ್ ಕುಮಾರ್ ಉಡುಪಿ ಉಪಾಧ್ಯಕ್ಷರು : ಶ್ರೀ ಪದ್ಮನಾಭ ಮರೋಳಿ ಪಣಂಬೂರು ಪ್ರಧಾನ ಕಾರ್ಯದರ್ಶಿ : ಶ್ರೀ ಕೇಶವ ಎಸ್. ಸುವರ್ಣ ಪಣಂಬೂರು ಕೋಶಾಧಿಕಾರಿ : ಶ್ರೀ ಕಮಲಾಕ್ಷ ಎಂ. ಮಂಗಳೂರು         ನಿರ್ದೇಶಕರುಗಳು ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಶ್ರೀ ರಿತೇಶ್ ಕುಮಾರ್ ಸುರತ್ಕಲ್ ವ್ಯಕ್ತಿತ್ವ ವಿಕಸನ : ಶ್ರೀ ನಿತೇಶ್ ಜೆ. ಕರ್ಕೇರ ಅಡ್ವೆ ಸಮಾಜ ಸೇವೆ : ಶ್ರೀ ಬಿ. ಶ್ರೀಧರ್ ಅಮೀನ್ […]

Read More

ಯುವವಾಹಿನಿ ಕೇಂದ್ರ ಸಮಿತಿ ಪದಗ್ರಹಣ-2015-16

ಯುವವಾಹಿನಿ ಕೇಂದ್ರ ಸಮಿತಿಯ 2015-16 ನೇ ಸಾಲಿನ ಪದಗ್ರಹಣ ಸಮಾರಂಭವು ಬಂಟ್ವಾಳ ಮೆಲ್ಕಾರಿನ ಬಿರ್ವ ಆಡಿಟೋರಿಯಂ ಇಲ್ಲಿ 09.08.2015 ರಂದು ಜರಗಿತು. ಚುನಾವಣಾಧಿಕಾರಿ ರವಿಚಂದ್ರ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ಅಧ್ಯಕ್ಷರಾಗಿ  ಸಂತೋಷ್ ಕುಮಾರ್ ಉಡುಪಿ ನೇತೃತ್ವದ ತಂಡವು ಪ್ರಮಾಣ ವಚನ ಸ್ವೀಕರಿಸಿತು.

Read More

ಬಿಲ್ಲವಾನ್ ದುಬೈಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಟ ಪ್ರಶಸ್ತಿ -2015

ಆಗಸ್ಟ್ 9, 2015 ರಂದು ಮೆಲ್ಕಾರ್ ಬಿರ್ವ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶದಲ್ಲಿ ಬಿಲ್ಲವಾನ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಸಂಸ್ಥೆಗೆ ಸಾಮಾಜಿಕ ಕ್ಷೇತ್ರದ ಸಮಗ್ರ ಸಾಧನೆಯನ್ನು ಗುರುತಿಸಿ ಯುವವಾಹಿನಿ ಸಾಧನಾ ಶ್ರೇಷ್ಟ ಪ್ರಶಸ್ತಿ – 2015 ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೋಟ್ಯಾನ್, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರಾದ ನಿತ್ಯಾನಂದ ಡಿ. ಕೊಟ್ಯಾನ್, ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ […]

Read More

ಜಯ ಸಿ. ಸುವರ್ಣಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ -2015

ಆಗಸ್ಟ್ 9, 2015 ರಂದು ಮೆಲ್ಕಾರ್ ಬಿರ್ವ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶದಲ್ಲಿ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಜಯ ಸಿ. ಸುವರ್ಣರ ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ-2015 ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೋಟ್ಯಾನ್, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರಾದ ನಿತ್ಯಾನಂದ ಡಿ. ಕೊಟ್ಯಾನ್, ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ ಕೆ.ಸಂಜೀವ ಪೂಜಾರಿ, ಆಳ್ವಾಸ್ […]

Read More

ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶ – ಸಂಪನ್ನ

ಕೈ ಒಂದು ಆದರೂ ಕೈ ಬೆರಳುಗಳು ಒಮದೇ ರಿತಿ ಆಗಿರುವುದಿಲ್ಲ. ಆದರೆ ಮುಷ್ಠಿ ಬಿಗಿದರೆ ಎಲ್ಲಾ ಬೆರಳು ಒಂದೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಸಂಘಟನೆಗಳು ಹತ್ತಾರು ಇದ್ದರೂ ಒಗ್ಗಟ್ಟಿನ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಇರಬೇಕು. ಯುವವಾಹಿನಿ ಸಮಾಜದಲ್ಲಿ ಶಿಸ್ತನ್ನು ಕಲಿಸುತ್ತದೆ. ಶಿಸ್ತು ಪ್ರತಿಯೊಬ್ಬರ ಮನೆಯಲ್ಲೂ ನೆಲೆಗೊಳ್ಳಬೇಕು ಎಂದು ಮುಂಬಾಯಿ ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೊಟ್ಯಾನ್ ತಿಳಿಸಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!