06-04-2024, 12:57 PM
ಮಂಗಳೂರು: ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಪೂರ್ಣ ಜೀವನಾಮೃತ ಸಾರವನ್ನು ಯಾತ್ರಾರ್ಥಿಗಳಿಗೆ ಉಣಬಡಿಸಿದ ಯುವವಾಹಿನಿ(ರಿ.) ಮಂಗಳೂರು ಘಟಕದ ಮಾಜಿ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರ ಪೂಜಾರಿಯವರ ಅನುಭವದ ಮೂಸೆಯಿಂದ ಸುಜಲ ಧಾರೆಯಂತೆ ಹರಿದ ಸುಲಲಿತ ವಿಚಾರಧಾರೆ. ಮರುತ್ವ ಮಲೆಯನ್ನು ಹತ್ತಿ ಇಳಿದು ಅವರ್ಣನೀಯ ಆನಂದವನ್ನು ಪಡೆದ ಯುವವಾಹಿನಿ ಬಂಧುಗಳು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಾರ್ವಕಾಲಿಕ ಸತ್ಯವನ್ನು ಈ ಜಗತ್ತಿಗೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಪರಮ ಪವಿತ್ರವಾದ ಕರ್ಮಭೂಮಿ ಶಿವಗಿರಿ ಕ್ಷೇತ್ರಕ್ಕೆ ತೀರ್ಥಯಾತ್ರೆಯನ್ನು […]
Read More
24-03-2024, 5:22 AM
ಮಂಗಳೂರು: ಸಮಾಜಮುಖಿ ಚಿಂತನೆಗಳೊಂದಿಗೆ ಸಮಾಜದ ಕಟ್ಟಕಡೆಯ ಕುಟುಂಬಗಳ ನಿರಂತರ ಭೇಟಿ, ಭವಿಷ್ಯದ ಸವಾಲುಗಳು ಹಾಗೂ ಅವರ ಮೂಲಭೂತ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವರಿಗೆ ಸ್ಪೂರ್ತಿಯಾಗಿ ಆರೋಗ್ಯ ಪೂರ್ಣ ಸಮಾಜ ಕಟ್ಟುವಲ್ಲಿ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದು ಈ ನಿಟ್ಟಿನಲ್ಲಿ ಯುವವಾಹಿನಿಯ ಪಾತ್ರ ಮಹತ್ತರವಾದುದು ಎಂದು ಅಳ್ವಾಸ್ ಪದವಿ ಕಾಲೇಜಿನ ಉಪನ್ಯಾಸಕರಾದ ಡಾ|ಯೋಗೀಶ್ ಕೈರೊಡಿ ತಿಳಿಸಿದರು. ಅವರು ದಿನಾಂಕ 24 ಮಾರ್ಚ್ 2024ರ ಭಾನುವಾರ ಯುವವಾಹಿನಿ ಸಭಾಂಗಣ ಉರ್ವಾಸ್ಟೋರ್ ಇಲ್ಲಿ ಜರಗಿದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ […]
Read More
03-03-2024, 5:32 PM
ಸಸಿಹಿತ್ಲು: ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ನಾಮನಿರ್ದೇಶಿತ ಸದಸ್ಯರಾದ ಚಂದ್ರಶೇಖರ್ ಸಸಿಹಿತ್ಲು ಇವರ ಮನೆ ಆಕಸ್ಮಿಕ ಅಗ್ನಿ ಅವಘಡಕ್ಕಿಡಾಗಿ, ಚಂದ್ರಶೇಖರ್ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿತ್ತು. ಸಂಕಷ್ಟಕ್ಕೆ ಒಳಗಾದ ಚಂದ್ರಶೇಖರ ಕುಟುಂಬಕ್ಕೆ ಯುವವಾಹಿನಿ ಕೇಂದ್ರ ಸಮಿತಿಯ ಸದಸ್ಯರಿಂದ ಸಂಗ್ರಹವಾದ ರೂ 50,000/- ಆರ್ಥಿಕ ಸಹಾಯ ಮಾಡಲಾಗಿದೆ. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಇವರು ₹50,000/ ಮೊತ್ತದ ಚೆಕ್‌ನ್ನು ಚಂದ್ರಶೇಖರ್ ಅವರ ಸಹೋದರಿ ಶ್ಯಾಮಲ ಅವರಿಗೆ ಹಸ್ತಾಂತರ ಮಾಡಿ, ಆರ್ಥಿಕ ಕ್ರೋಡೀಕರಣಕ್ಕಾಗಿ […]
Read More
08-01-2024, 6:00 PM
ಮಂಗಳೂರು : ಯುವವಾಹಿನಿಯ ಸಮಾಜಮುಖಿ ಕಾರ್ಯಗಳ ಪ್ರಚಾರದಲ್ಲಿ ಯುವಸಿಂಚನ ಹಾಗೂ ಯುವವಾಹಿನಿಯ ಸಾಮಾಜಿಕ ಜಾಲತಾಣವು ಮಹತ್ತರ ಪಾತ್ರ ವಹಿಸಿದೆ ಎಂದು ಯುವಸಿಂಚನ ಹಾಗೂ ಯುವವಾಹಿನಿ ಸಾಮಾಜಿಕ ಜಾಲತಾಣದ ಗೌರವ ಸಂಪಾದಕರಾದ ಹರೀಶ್ ಕೆ. ಪೂಜಾರಿ ತಿಳಿಸಿದರು ಅವರು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ದಿನಾಂಕ 08.01.2024 ರಂದು ಜರುಗಿದ ಯುವಸಿಂಚನ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕೀಯ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಪಾದಕೀಯ ಮಂಡಳಿಯ ಪಾತ್ರ ಹಾಗೂ ಜವಾಬ್ದಾರಿ ಬಗ್ಗೆ ಮಾಜಿ ಸಂಪಾದಕರಾದ ರಾಜೇಶ್ ಸುವರ್ಣ ಸಭೆಗೆ […]
Read More
24-12-2023, 5:25 PM
ಬಂಟ್ವಾಳ : ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ಸಂಘಟನಾ ಕ್ಷೇತ್ರದ ಸಾಧಕ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಧಾರ್ಮಿಕ ಕ್ಷೇತ್ರದ ಸಾಧಕ ಮನೋಜ್ ಕಟ್ಟೆಮಾರ್, ಸಾಂಸ್ಕೃತಿಕ ಕ್ಷೇತ್ರದ ಸಾಧಕಿ ಅಕ್ಷತಾ ಇವರಿಗೆ ಯುವವಾಹಿನಿ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಟನಾ ಕ್ಷೇತ್ರದ ಸಾಧಕರು ಶ್ರೀನಿವಾಸ ಪೂಜಾರಿ ಮೆಲ್ಕಾರ್ ಗುರುಜ್ಯೋತಿ ಶಾಮಿಯಾನ ಸಂಸ್ಥೆಯನ್ನು ಹುಟ್ಟಿ ಹಾಕಿ ಸತತ 25 ವರ್ಷಗಳಿಂದ ಮುನ್ನಡೆಸಿಕೊಂಡು ಬರುವುದರ ಜೊತೆಗೆ ಬಂಟ್ವಾಳ ಯುವಸಂಗಮದ ಸ್ಥಾಪಕ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ವಿವಿಧ ಹುದ್ದೆ ಅಲಂಕರಿಸಿ ಸರ್ಕಾರಿ ಶಾಲಾಮಕ್ಕಳಿಗೆ […]
Read More
24-12-2023, 5:22 PM
ಬಂಟ್ವಾಳ: ಬಂಟ್ವಾಳದ ಬೆಂಜನಪದವು ಶುಭಲಕ್ಷೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ ನಾರ್ದನ್ ಸ್ಕೈ ಪ್ರಾಪಟೀಸ್ ನಿರ್ದೇಶಕಿ ಕೃತಿನ್ ಅಮೀನ್ ಇವರು ಯುವಸಿಂಚನ ವಾರ್ಷಿಕ ವಿಶೇಷಾಂಕದ ಅನಾವರಣ ಮಾಡಿದರು. ಸಮಾವೇಶದ ಜನಸ್ತೋಮದ ನಡುವಣ ಬಂಟ್ವಾಳ ಅತಿಥ್ಯ ಘಟಕದ ಸಹಯೋಗದ ಸದಸ್ಯರ ಭವ್ಯ ಸ್ವಾಗತದೊಂದಿಗೆ ವಾದ್ಯ ಕೊಂಬುಗಳ ಅಬ್ಬರದ ನಿನಾದಗಳು, ಜ್ಯೋತಿ ರೂಪಕವಾಗಿ ಬೆಳಗುತ್ತಿದ್ದ ಜೋಡಿ ದೀಪಗಳು, ಪೂರ್ಣ ಕಳಸ ಹಾಗೇ ವಿವಿಧ ಹೂಗಳಿಂದ ತುಂಬಿದ್ದ ಬೃಹತ್ ಹರಿವಾಣದೊಳಗೆ ಸಜ್ಜಾಗಿದ್ದ ವರ್ಣಮಯ ಯುವಸಿಂಚನ ಹೊತ್ತಗೆಯನ್ನು ಸಮವಸ್ತ್ರಧಾರಿ ನಾರಿಮಣಿಗಳ […]
Read More
24-12-2023, 12:04 PM
ಬಂಟ್ವಾಳ : ದಿನಾಂಕ 24 ಡಿಸೆಂಬರ್ 2023 ರಂದು ಬೆಂಜನಪದವು ಶುಭಲಕ್ಷ್ಮೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಜಿಪ ಮುನ್ನೂರು ಮೂರ್ತೆದಾರ ಸೇವಾ ಸಹಕಾರಿ ಸಂಘಕ್ಕೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2023 ಮಡಿಲೇರಿಸುವ ಶುಭ ಘಳಿಗೆ ಓದಗಿಬಂತು. ಹಿಂದುಳಿದ ವರ್ಗಗಳ ಹಾಗೂ ಮೂರ್ತೆದಾರರ ಆರ್ಥಿಕ ಬೆಳವಣಿಗೆ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಅಶಕ್ತ ಕುಟುಂಬಗಳನ್ನು ಗುರುತಿಸಿ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ವಿದ್ಯಾ ನಿಧಿ ದತ್ತುಸ್ವೀಕಾರ, ಹೀಗೆ ಹತ್ತು ಹಲವು ಮಜಲುಗಳ […]
Read More
24-12-2023, 11:27 AM
ಬಂಟ್ವಾಳ : ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನನ್ಯ ಸೇವೆ ಹಾಗೂ ಕಂಕನಾಡಿ ಗರಡಿ ಕ್ಷೇತ್ರ ಅಧ್ಯಕ್ಷರಾಗಿ ನಿಸ್ವಾರ್ಥವಾಗಿ ಸಲ್ಲಿಸಿದ ಸೇವೆಯು ಗರಡಿಯ ಮೂಲ ಬೆಳವಣಿಗೆಗೆ ಕಾರಿಣಿಕರ್ತರೆಂದು ಗುರುತಿಸಿ ಬಂಟ್ವಾಳದ ಬೆಂಜನಪದವು ಶುಭಲಕ್ಷೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದಲ್ಲಿ 2023 ನೇ ಸಾಲಿನ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾರಂಭದ ಉದ್ಘಾಟಕರಾದ ಪದ್ಮರಾಜ್.ಆರ್, ಕೇಂದ್ರ ಸಮಿತಿ ಅಧ್ಯಕ್ಷರು ರಾಜೇಶ್.ಬಿ, ನಾರ್ದನ್ ಸ್ಲೈ ನಿರ್ದೇಶಕರಾದ ಕೃತೀನ್ ಅಮೀನ್, ರಾಣಿ ಅಬ್ಬಕ್ಕ […]
Read More
24-12-2023, 11:20 AM
ಮಂಗಳೂರು :- ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾಗಿ ಹರೀಶ್ ಕೆ ಪೂಜಾರಿ ಆಯ್ಕೆಯಾಗಿದ್ದಾರೆ. ಒಂದನೇ ಉಪಾಧ್ಯಕ್ಷರಾಗಿ ಲೋಕೇಶ್ ಕೋಟ್ಯಾನ್ ಕುಳೂರು, ಎರಡನೇ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಚಂದ್ರ ಡಿ.ಕೆ, ಕೋಶಾಧಿಕಾರಿಯಾಗಿ ಹರೀಶ್.ವಿ ಪಚ್ಚನಾಡಿ ಜೊತೆ ಕಾರ್ಯದರ್ಶಿಯಾಗಿ ರೇಖಾ ಗೋಪಾಲ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ನಯನಾ ರಮೇಶ್, ಸಾಂಸ್ಕೃತಿಕ ನಿರ್ದೇಶಕರಾಗಿ ಹರೀಶ್ ಸುವರ್ಣ ಬೆಳ್ತಂಗಡಿ, ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾಗಿ ಮೋಹನ್ ಮಾಡೂರು, ಮಹಿಳಾ ಸಂಘಟನಾ ನಿರ್ದೇಶಕರಾಗಿ […]
Read More
24-12-2023, 10:08 AM
ಮೂರು ಸ್ತಂಭಗಳಂತೆ ಯುವವಾಹಿನಿಯ ಮೂಲ ಪರಿಕಲ್ಪನೆಯ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಸದೃಢಗೊಂಡ ಆತ್ಮವಿಶ್ವಾಸದ ಭರವಸೆಯ ಬೆಳಕಿನ ಮೂರು ಹಸ್ತಕೃತಿಗಳು ಪರಿಭ್ರಮಿಸುವ ವಿಶ್ವದ ಭೂಪಟದಲ್ಲಿ ಜಗದ ಅಂಧಕಾರ ತಮವನ್ನು ಕಳೆದು ಸುಜ್ಞಾನದ ದೀವಿಗೆ ಬೆಳಗಿ ಪಸರಿಸಿದ ವಿಶ್ವಗುರು ಪರಮಪೂಜ್ಯ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸರ್ವರು ಏಕತಾಭಾವದಿ ಒಗ್ಗಟ್ಟಾಗಿ ಸಮಾಜ ಶ್ರೇಯೋನ್ನಾತಿಗೆ ಶ್ರಮಿಸೋಣ ಎನ್ನುವ ತವಕದ ಹೆಬ್ಬಯಕೆಯ ಒಂದು ವಿಭಿನ್ನ ಕಲ್ಪನಾತೀತ ಫಲಶ್ರುತಿಗೆ. ನೈಜತೆಯ ದರ್ಶನ … ಯುವವಾಹಿನಿ ಪ್ರತಿರೂಪದ ಕೈಕನ್ನಡಿಯಂತಿರುವ ಧ್ಯೇಯವನ್ನು ಶಕ್ತಿಯುತವಾಗಿ ಕಟ್ಟಬೇಕೆಂದು […]
Read More