03-11-2012, 5:13 AM
ಅಧ್ಯಯನ ಪೀಠಿಕೆ: ಯಾವುದೆ ದೇಶದ ಸಂಪತ್ತು ನಿಷ್ಕರ್ಷೆಯಾಗುವುದು ಎರಡು ಮೂಲಗಳಿಂದ- ಒಂದು ಅಲ್ಲಿನ ನೈಸರ್ಗಿಕ ಸಂಪತ್ತಿನಿಂದ, ಎರಡು, ಆ ದೇಶದ ಮಾನವ ಸಂಪತ್ತಿನಿಂದ. ಮಾನವ ಸಂಪತ್ತು ಇತರೆಲ್ಲಾ ಸಂಪತ್ತಿಗಿಂತ ಶ್ರೇಷ್ಟವಾದುದು. ಆದರೆ, ಮಾನವ ಸಂಪತ್ತಿನ ಅಸಮರ್ಪಕ ಬೆಳವಣಿಗೆ ಇಡೀ ವ್ಯವಸ್ಥೆಯ ಮೇಲೆ ಎರಡೂ ನಿಟ್ಟಿನಲ್ಲಿ ಅಂದರೆ, ಗುಣಾತ್ಮಕವಾಗಿಯೂ, ಪರಿಮಾಣಾತ್ಮಕವಾಗಿಯೂ ಪ್ರಭಾವ ಬೀರುವುದು. ಆಹಾರ, ನೀರು, ಬಟ್ಟೆ, ನೆಲ, ವಸತಿ ಹಾಗೂ ಖನಿಜಗಳ ಕೊರತೆ ಉಂಟಾಗುವುದಲ್ಲದೆ, ಶಿಕ್ಷಣ, ಆರೋಗ್ಯ, ಹಾಗೂ ಸಂಪನ್ಮೂಲಗಳ ಮೇಲೆ ಪರಿಣಾಮ, ಅಲ್ಲದೆ ನಿರುದ್ಯೋಗ, ಬಡತನ […]
Read More
07-10-2011, 4:42 AM
ಪ್ರಕೃತಿಯು ಯಾರ ಸೊತ್ತೂ ಅಲ್ಲ. ಮನುಷ್ಯನ ನಿಜವಾದ ನೋವು ಪ್ರಕೃತಿಗೆ ತಿಳಿದಿರುತ್ತದೆ. ಇಂತಹ ಸಂದರ್ಭದಲ್ಲಿ ದೇವರು ಮಹಾ ಗುರು ಒಬ್ಬನನ್ನು ಅವತಾರ ಪುರುಷನನ್ನಾಗಿಯೋ, ಮಹಾತ್ನನನ್ನಾಗಿಯೋ ಭೂಮಿಗೆ ಕಳುಹಿಸುತ್ತಾನೆ. ಇಂತಹವರು ಧರ್ಮದ ಪರಿಪಾಲನೆಗಾಗಿ ಬಹಳ ಶ್ರಮಿಸುತ್ತಿರುವುದರಿಂದ ಮನುಷ್ಯನು ಸುಖವನ್ನು ಕಾಣುತ್ತಾನೆ. ತನ್ನಂತೆ ಎಲ್ಲಾ ಮಾನವ ಜೀವಿಗಳಲ್ಲಿ ಭಗವಂತನನ್ನು ಕಂಡು ಎಲ್ಲರಿಗೂ ಬದುಕುವ ದಾರಿಯನ್ನು ತೋರಿಸುತ್ತಾನೆ. ನೂರ ಐವತ್ತೇಳು ವರ್ಷಗಳ ಹಿಂದೆ ಅಸ್ಪೃಶ್ಯತೆಯ ಕರಿ ನೆರಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಿದಾಗ ದೇವರು ನಾರಾಯಣ ಗುರುಗಳನ್ನು ಅವತಾರ ಪುರುಷರನ್ನಾಗಿ […]
Read More
14-08-2011, 12:17 PM
ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ದಿನಾಂಕ 14.08.2011 ರಂದು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2011ನೇ ಸಾಲಿನ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಯನ್ನು ಯುವ ಸಾಹಿತಿ ಪತ್ರಕರ್ತ, ಕಾರ್ಯಕ್ರಮ ನಿರೂಪಕ, ರಂಗಭೂಮಿ ಕಲಾವಿದ, ನರೇಶ್ ಕುಮಾರ್ ಸಸಿಹಿತ್ಲು ಇವರಿಗೆ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ವಿಮರ್ಶಕ ಜನಾರ್ಧನ ಭಟ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅದ್ಯಕ್ಷ ಕುಂಬ್ಳೆ ಸುಂದರಗೊಳಿಸುವ ರಾವ್, ವಿಮರ್ಶಕ ಎ.ಈಶ್ವರಯ್ಯ. ಉಡುಪಿ ಜಿಲ್ಲಾ ಪಂಚಾಯತ್ ಅದ್ಯಕ್ಷ ಕಟಪಾಡಿ ಶಂಕರ ಪೂಜಾರಿ,ಹಿರಿಯ ಸಾಹಿತಿ ಶ್ರೀಮತಿ […]
Read More
14-08-2011, 11:24 AM
ಮಂಗಳೂರು ತಾಲೂಕಿನ ತಾಳಿಪಾಡಿ ಗ್ರಾಮದ ದಿ| ಸಂಜೀವ ಜಿ. ಅಮೀನ್ ಮತ್ತು ಶ್ರೀಮತಿ ಜಾನಕಿಯವರ ಸುಪುತ್ರರಾದ ಡಾ| ಸದಾನಂದ ಕುಂದರ್‌ರವರು ಸುಮಾರು 34 ವರ್ಷಗಳಿಂದ ನೆಲ್ಯಾಡಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಜಾದೂಗಾರರಾಗಿಯೂ ಖ್ಯಾತಿಯನ್ನು ಪಡೆದಿರುತ್ತಾರೆ. ಕಳೆದ 20 ವರ್ಷಗಳಿಂದ ಕರ್ನಾಟಕ, ಕೇರಳ, ಗೋವಾ ರಾಜ್ಯಗಳಲ್ಲಿ 900 ಕ್ಕೂ ಮಿಕ್ಕಿ ಜಾದೂ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆಯನ್ನು ಗಳಿಸಿರುತ್ತಾರೆ. ಆರೋಗ್ಯ ಮಾಹಿತಿಯಲ್ಲಿ ಜಾದೂ, ಜನಜಾಗೃತಿಗಾಗಿ ಜಾದೂ, ಬುದ್ಧಿಮಾಂದ್ಯರಿಗೆ ಜಾದೂ, ಗುಜರಾತ್ ಭೂಕಂಪ ಮತ್ತು ತ್ಸುನಾಮಿ ಸಂತ್ರಸ್ತರ ಪರಿಹಾರ ನಿಧಿಗಾಗಿ ಜಾದೂ ಹೀಗೆ ಹಲವು ಜನಹಿತ […]
Read More
08-08-2010, 11:14 AM
ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಮನೆತನಗಳಾದ ಕಾರಂದೂರು ಹಾಗೂ ಪಡುಪಾಲ್ಜಾಲು ಮನೆತನದ ಪಡುಪಾಲ್ಜಾಲು ಪದ್ಮ ಪೂಜಾರಿ ಮತ್ತು ಶ್ರೀಮತಿ ಲಕ್ಷ್ಮಿ ಪಿ. ಪೂಜಾರಿಯವರ ಸುಪುತ್ರರಾದ ಇವರು ಬಿ.ಎ. ಪದವೀಧರ. 7ನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. M.C.F. Ltd ಕಂಪೆನಿಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ, ಎರಡು ಬಾರಿ ಸಿಂಚನ ಜಾಹಿರಾತಿನ ಸಂಚಾಲಕರಾಗಿ ಯುವವಾಹಿನಿ ವಾರ್ಷಿಕ ಸಮಾವೇಶದ ಸಂಚಾಲಕರಾಗಿ, ಮಂಗಳೂರು ಶ್ರೀ ಗೋಕರ್ಣನಾಥ ಕೋ ಓಪರೇಟಿವ್ […]
Read More
21-02-2010, 10:23 AM
ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಇದರ ಅತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉಬಾರ ತುಡರ್ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಮುಗ್ಗ ಗುತ್ತು ಸೂರಪ್ಪ ಪೂಜಾರಿ ವೇದಿಕೆಯಲ್ಲಿ ಜರಗಿತು ಯುವವಾಹಿನಿ(ರಿ) ಮೂಲ್ಕಿ ಘಟಕ ಪ್ರಥಮ, ಯುವವಾಹಿನಿ(ರಿ) ಸಸಿಹಿತ್ಲು ಘಟಕ ದ್ವಿತೀಯ ಹಾಗೂ ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕ ತೃತೀಯ ಪ್ರಶಸ್ತಿ ಗಳಿಸಿತು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅದ್ಯಕ್ಷರಾದ ಜಯರಾಮ ಕಾರಂದೂರು ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು ಮಾಜಿ ಸಂಸದರಾದ […]
Read More
21-02-2010, 10:18 AM
ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕ ಇದರ ಅತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉಬಾರ ತುಡರ್ ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಮುಗ್ಗ ಗುತ್ತು ಸೂರಪ್ಪ ಪೂಜಾರಿ ವೇದಿಕೆಯಲ್ಲಿ ಜರಗಿತು. ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಮದನ ಪೂಜಾರಿ ಕುದ್ಮಾರು ದೀಪ ಬೆಳಗಿಸಿ ತೆಂಗಿನ ಪಿಂಗಾರ ಅರಳಿಸುವುದರ ಮೂಲಕ ಉಬಾರ ತುಡರ್ ಉದ್ಘಾಟಿಸಿದರು. ದಿನಾಂಕ 21.02.2010 ರಂದು ಆದಿತ್ಯವಾರ. ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ […]
Read More
14-08-2009, 6:44 AM
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಜರಗಿದ ತುಳು ಸಂಸ್ಕೃತಿ ಬಿಂಬಿಸುವ ಆಟಿದ ಒಂಜಿ ದಿನ ಕಾರ್ಯಕ್ರಮ ದಿನಾಂಕ 14.08.2009 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಬಿಲ್ಲವ ಮಹಾಮಂಡಲದ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಸದಾನಂದ ಶೆಟ್ಟಿ ರಂಗೋಲಿ, ಹಾಗೂ ಬಂಟ್ವಾಳ ಯುವವಾಹಿನಿಯ ಅದ್ಯಕ್ಷ […]
Read More
09-08-2009, 12:11 PM
ಯುವವಾಹಿನಿ ಬಂಟ್ವಾಳ ತಾಲೂಕು ಘಟಕವು 2008-09 ನೇ ಸಾಲಿನಲ್ಲಿ ಘಟಕದ ಅದ್ಯಕ್ಷ ಬಿ.ಶ್ರೀಧರ ಅಮೀನ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನಾದ್ಯಂತ 22 ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಹಲವು ಕಡೆಗಳಲ್ಲಿ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಮೂಲಕ ರಕ್ತದಾನ ಶಿಬಿರಗಳನ್ನು ನಡೆಸಿದ್ದಕ್ಕಾಗಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯು ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪತ್ರವನ್ನು ಬಂಟ್ವಾಳ ಕ್ಷೇತ್ರದ ಶಾಸಕರಾದ ಬಿ. ರಮಾನಾಥ ರೈ ಹಸ್ತಾಂತರಿಸಿದರು.
Read More