31-07-2016, 6:31 AM
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ. NITKಯಲ್ಲಿ ಇಲೆಕ್ಟ್ರಾನಿಕ್ ಹಾಗೂ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ-ಬಿಟ್ಸ್ ಪಿಲಾನಿ (ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ತಂತ್ರಜ್ಞಾನ ತಜ್ಞರನ್ನು ರೂಪಿಸುವ ಸುಪ್ರಸಿದ್ಧ ಸಂಸ್ಥೆ)ಯಲ್ಲಿ ಪ್ರೊಫೆಸರ್! ಎಲ್ಲಿಂದ ಎಲ್ಲಿಗೆ ಪಯಣ ಅತ್ಯಾಶ್ಚರ್ಯಕರ, ನಂಬಲಸಾಧ್ಯ. ಆದರೆ ಇದು ನಿಜ. ಮೈನವಿರೇಳಿಸುವ ಸಾಧನೆ!! ಕನ್ನಡ ಮಾಧ್ಯಮದಲ್ಲಿ ಕಲಿತವರು ಹಿಂದೆ ಬೀಳುತ್ತಾರೆ ಎಂಬ ಹೆಚ್ಚಿನ ಜನರ ಅಭಿಪ್ರಾಯವನ್ನು ಸಂಪೂರ್ಣ ನಿರಾಧಾರ ಎಂದು ನಿರೂಪಿಸಿದ ಜ್ವಲಂತ ನಿದರ್ಶನ ಡಾ| ಶಶಿಧರ ಎಂ.ಕೋಟ್ಯಾನ್. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಂಕದಕಟ್ಟೆ ನಿರಂಜನ ಸ್ವಾಮಿ […]
Read More
31-07-2016, 6:15 AM
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರು ದೈಯಡ್ಕ ಮನೆ, ತಿಮ್ಮಪ್ಪ ಪೂಜಾರಿ ಹಾಗೂ ಶ್ರೀಮತಿ ಪುಷ್ಪಾರವರ ಸುಪುತ್ರಿಯಾದ ರಮ್ಯ ಸುಜೀರ್‌ರವರು ತನ್ನ ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ತುಳು ಅಧ್ಯಯನ ವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಬಿ.ಎಡ್. ಪದವಿಯನ್ನು ಪಡೆದಿರುತ್ತಾರೆ. ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜು ಗಂಡಸಿ ಹಾಸನ ಇಲ್ಲಿ 1 ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ […]
Read More
31-07-2016, 6:13 AM
ದಿಕ್ಸೂಚಿ ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಕಾಣಿಸಲಾದ ತಲೆಮಾರುಗಳ ಅಂತರ ವಿಶ್ಲೇಷಣೆ: ’ಹಿಂದೆ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ತಲೆಮಾರುಗಳ ಭಿನ್ನತೆ-ವ್ಯತ್ಯಾಸ. ಆದರೆ ಈಗ? ಕೇವಲ ಒಂದು ವರ್ಷದ ಅಂತರದವರೊಳಗೂ ಜನರೇಶನ್ ಗ್ಯಾಪ್-ತಲೆಮಾರು ಅಂತರದ ಮಿಂಚು ಕಾಣಿಸುತ್ತಿದೆ ಎಂಬ ವಿಚಾರ. ಇದು ವಾಸ್ತವವೇ, ಅಸ್ವಾಭಾವಿಕವೇ ಎನ್ನುವುದು ತರ್ಕದ ಪ್ರಶ್ನೆ. ಇಂದಿನ ತಲೆಮಾರಿಗೂ ಹಿಂದಿನ ತಲೆಮಾರಿಗೂ ಸವಾಲುಗಳೇನು, ಇಂದಿನ ಸಾಮರ್ಥ್ಯಗಳೇನು? ನಮ್ಮ ಒಟ್ಟು ಬದುಕೇ ಆಧುನಿಕತೆಯ ಸ್ಥಿತ್ಯಂತರದೊಂದಿಗೆ ಸಾಗಿದೆ. ಬದುಕು ಸದಾ ಚಲಿಸುತ್ತಿರುವುದು ಸಹಜ ಪ್ರಕ್ರಿಯೆ. ಆದರೆ […]
Read More
31-07-2016, 6:05 AM
ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದ ಭಿಮಕಜಿರಿ ಶ್ರೀ ಚಂದಯ್ಯ ಪೂಜಾರಿ-ಇಂದಿರಾ ದಂಪತಿಗಳ ಸುಪುತ್ರ ಡಾ| ಪ್ರವೀಣ್ ಬಿ. ಕುದ್ಯಾಡಿ ಇವರು 2007 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ| ಪಿ. ಗುರುರಾಜ ಭಟ್ ಸ್ವರ್ಣ ಪದಕ ಸಹಿತ ಪ್ರಥಮ ರ್‍ಯಾಂಕ್‌ನೊಂದಿಗೆ ಎಂ.ಎ. ಪದವಿ (ಇತಿಹಾಸ) ಪಡೆದಿರುತ್ತಾರೆ. ಇಂತಹ ಸಾಧನೆಯ ಡಾ| ಕುದ್ಯಾಡಿಯವರು ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಶೋಧಕ ಪ್ರವೃತ್ತಿಯಿಂದ ಪ್ರೊ| ಹನುಮನಾಯಕರ ಮಾರ್ಗದರ್ಶನದೊಂದಿಗೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಇತಿಹಾಸ (ಕ್ರಿ.ಶ. 10ನೇ […]
Read More
31-07-2016, 6:03 AM
ಪ್ರವಾಸಾನುಭವ ’ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ತತ್ವವನ್ನಿರಿಸಿಕೊಂಡು ಹಲವು ಚಿಕ್ಕ-ದೊಡ್ಡ ಪ್ರವಾಸಗಳನ್ನು ಏರ್ಪಡಿಸುತ್ತ ಬಂದಿರುವ ಯುವವಾಹಿನಿ ಮಂಗಳೂರು ಘಟಕವು ಈ ಬಾರಿ ದಕ್ಷಿಣ ಭಾರತ ಪ್ರವಾಸವನ್ನು ಏರ್ಪಡಿಸಿತ್ತು. 2014 ರಲ್ಲಿ ಉತ್ತರ ಭಾರತ ಮತ್ತು ನೇಪಾಳದ 10 ದಿನಗಳ ಪ್ರವಾಸದಲ್ಲಿ ಭಾಗಿಯಾಗಿದ್ದ ನಾನು 2015 ರ ಉತ್ತರ ಭಾರತ ಪ್ರವಾಸ (ವಾರಣಾಸಿ, ಹೃಷಿಕೇಶ, ಹರಿದ್ವಾರ, ವೈಷ್ಣೋದೇವಿ, ದೆಹಲಿ, ಅಮೃತಸರ್, ವಾಘಾ ಬೋರ್ಡರ್ ಇತ್ಯಾದಿ ಸ್ಥಳಗಳಿಗೆ)ಕ್ಕೆ ಹೋಗಲಾಗಲಿಲ್ಲ. ಈ ಬಾರಿ ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದ ಆಯ್ದ […]
Read More
31-07-2016, 6:00 AM
ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕೂಡಾ ತನ್ನ ಆಸಕ್ತಿಯ ಕ್ಷೇತ್ರ ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 4 ಚಿನ್ನದ ಪದಕ ಸಹಿತ 7 ಪ್ರಶಸ್ತಿಗಳನ್ನು ಗಳಿಸಿ ಸಾಧನೆಗೆ ಇದಿರಿಲ್ಲ ಎಂಬಂತಹ ವಿಶೇಷ ಸ್ಥಾನಮಾನ ಗಳಿಸಿದ ಖ್ಯಾತ ಸಾಮಾಜಿಕ ಧುರೀಣ ಶ್ರೀ ಹರಿಕೃಷ್ಣ ಬಂಟ್ವಾಳ್, ಶಶಿಕಲಾ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ನಿತ್ಯಪ್ರಕಾಶ್ ಎಚ್. ಎಸ್. ಬಂಟ್ವಾಳ್‌ರವರನ್ನು ಯುವ ಸಾಧನಾ ಪುರಸ್ಕಾರಕ್ಕೆ ಆಯ್ಕೆ ಮಾಡಲು ಯುವವಾಹಿನಿ ಸಂಸ್ಥೆ ಅತ್ಯಂತ ಹೆಮ್ಮೆ ಪಡುತ್ತದೆ. ಓರ್ವ ಹವ್ಯಾಸಿ ವಿಶೇಷ ಛಾಯಾಗ್ರಹಣ ಕ್ಷೇತ್ರದಲ್ಲಿ […]
Read More
31-07-2016, 5:56 AM
ಅವಿಷ್ಕಾರಗಳ ಹಿಂದೆ ಹೋದ ಎಲ್ಲರೂ ಯಶಸ್ವಿ ವಿಜ್ಞಾನಿಗಳಾಗಲು ಅಸಾಧ್ಯ. ಇದಕ್ಕೆ ಇತ್ಯಾತ್ಮಕ ಮನೋಭಾವ, ಸಂಶೋಧನಾ ಪ್ರವೃತ್ತಿ, ಕಾರ್ಯ ಸಾಧನೆಯ ಛಲ, ಅಸಾಧಾರಣ ಮನೋಬಲ ಇವೆಲ್ಲಕ್ಕೂ ಮಿಗಿಲಾಗಿ ಕಠಿಣ ಪರಿಶ್ರಮ ಮನೋದೃಷ್ಟಿ ಅತಿ ಮುಖ್ಯ. ಇವೆಲ್ಲ ಗುಣಗಳನ್ನು ಎಳವೆಯಿಂದಲೇ ಮೈಗೂಡಿಸಿಕೊಂಡು ತನ್ನ ಬುದ್ಧಿಮತ್ತೆಯಿಂದ ಸಂಶೋಧನಾ ಕ್ಷೇತ್ರದ ಭೌತಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಗಳಿಸಿದ ಡಾ| ಪ್ರವೀಣ ಎಸ್.ಡಿ.ಯವರು ಎಲ್ಲರ ಗಮನ ಸೆಳೆದಿದ್ದಾರೆ. ಪ್ರಸ್ತುತ ಸುಳ್ಯದ ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಶ್ರೀಯುತರು ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ವಿಜ್ಞಾನ […]
Read More
31-07-2016, 5:56 AM
ಬಿಲ್ಲವ ಸಮಾಜದ ಶೈಕ್ಷಣಿಕ ಪ್ರಗತಿಗೆ ಯುವವಾಹಿನಿಯು ಶ್ರಮಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಪ್ರತಿಭೆಯೊಂದು ಕಿರಿ ವಯಸ್ಸಿನಲ್ಲಿ ಹಿರಿಯರು ಮಾಡಲಾಗದ ಸಾಧನೆಗೈದಿದ್ದಾರೆ. ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ಬೇರಾರೂ ಅಲ್ಲ. ಪಿ.ಬಾಲಕೃಷ್ಣ ಪೂಜಾರಿ-ಮಲ್ಲಿಕಾ ಬಿ. ಪೂಜಾರಿ ದಂಪತಿಗಳ ಸುಪುತ್ರಿ ಮನಿಷಾ ಬಿ. ಪೂಜಾರಿ. ಕಾಲೇಜು ವಿದ್ಯಾಭ್ಯಾಸ ಹಂತದಿಂದ ಕಲಿಕೆಯ ಮುಂಚೂಣಿಯಲ್ಲಿದ್ದು ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿಗೆ ದ್ವಿತೀಯ ಶ್ರೇಷ್ಠರಾಗಿ ಸಾಧನೆಗೈದ ಇವರು ತನ್ನ ಕಲಿಕೆಯಾದ್ಯಂತ ಅತ್ಯುನ್ನತ ಶ್ರೇಣಿಯ ಗಳಿಕೆ ಸಾಧಿಸಿರುವುದು ಉಲ್ಲೇಖನೀಯ. ಬಿ.ಕಾಂ ಪದವಿಯಲ್ಲಿ MGM College ಉಡುಪಿಯ […]
Read More
31-07-2016, 5:52 AM
ಕಟಪಾಡಿ ಶ್ರೀ ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಆರ್. ಕೋಟ್ಯಾನ್ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ರಕ್ಷಿತ್ ಆರ್. ಕೋಟ್ಯಾನ್ ಓರ್ವ ಸತತ ಪರಿಶ್ರಮದ ಮೂಲಕ ದೇಹದಾರ್ಡ್ಯತೆಯ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಯುವಕ. ಶಿರ್ವದ ಸೈಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜು, ಮೂಡಬಿದ್ರಿಯಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿರುವ ರಕ್ಷಿತ್ ಶಿಕ್ಷಣದೊಂದಿಗೆ ಕ್ರೀಡಾ ಸಾಧನೆಯ ಮೇರು ಶಿಖರದತ್ತ ಧಾವಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. […]
Read More
31-07-2016, 5:50 AM
ಸಮಾಜ ಕಾರ್ಯ (Social work) ಕ್ಷೇತ್ರದ ವಿಷಯ ತಜ್ಞೆಯಾಗಿದ್ದು, ಅಧ್ಯಾಪನದೊಂದಿಗೆ ನಿರಂತರ ಅಧ್ಯಯನ, ಕ್ಷೇತ್ರ ಕಾರ್ಯ ಮಾಡುತ್ತಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಡಾ| ಮಧುಮಾಲ ಒರ್ವ ಅಪೂರ್ವ ಸಾಧಕಿ, ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗ (social work Dept.)ದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಜನರನ್ನು ಜಾಗೃತಿಗೊಳಿಸುವ ಲೇಖನಗಳಿಂದ ಪ್ರಸಿದ್ಧಿ ಪಡೆದ ಇವರ ಮಹಿಳಾ ಸಮಾಜ ಸಂಬಂಧಿತ ವಿಚಾರಧಾರೆಗಳು, ಭಾಷಣಗಳು ಚಿಂತನಶೀಲವಾಗಿದೆ. […]
Read More