ಸಂಘಟನೆಯ ಸಂಕ್ಷಿಪ್ತ ಪರಿಚಯ

ಸಂಸ್ಥೆಯ ಹೆಸರು : ಯುವವಾಹಿನಿ (ರಿ), ಮಂಗಳೂರು
ಸ್ಥಾಪನೆ : ಅಕ್ಟೋಬರ್ 1987
ನೋಂದಾವಣೆ : ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಪ್ರಕಾರ ದ.ಕ. ಜಿಲ್ಲಾ ಸಂಘಗಳ ವಿಲೇಖನಾಧಿಕಾರಿ (Registrar)ಯವರ ಕಚೇರಿಯಲ್ಲಿ ನೋಂದಾವಣೆಗೊಂಡಿರುತ್ತದೆ. ನೋಂದಣಿ ಸಂಖ್ಯೆ: 30:89:90

ಪ್ರಸಕ್ತ ವಿಳಾಸ : ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್, ಕೊಟ್ಟಾರ ಚೌಕಿ,
ಮಂಗಳೂರು-575 006
ಧ್ಯೇಯಗಳು : ವಿದ್ಯೆ, ಉದ್ಯೋಗ ಹಾಗೂ ಸಂಪರ್ಕ

ಸಂಸ್ಥೆಯ ಉದ್ದೇಶಗಳು :
• ನಮ್ಮ ಜನಾಂಗದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಯುವಜನಾಂಗವನ್ನು ಸಂಘಟಿಸುವುದು.

• ಹಿಂದುಳಿದ ಸಮಾಜದ ಸಂಘಟನೆಗೆ ಪ್ರೇರಕ ಶಕ್ತಿಯಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಹಾಗೂ ಅವರ ಭೋದನೆಗಳ ಸಾರವನ್ನು ಪ್ರಚುತಪಡಿಸುವುದು.

• ಯುವಜನರಲ್ಲಿ ನಾಯಕತ್ವ ಗುಣ ಮತ್ತು ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದರ ಮೂಲಕ ಸಂಸತ್, ಶಾಸನ ಸಭೆ, ಸ್ಥಳೀಯ ಆಡಳಿತಗಳಲ್ಲಿ ಸಮಾಜ ಬಾಂಧವರನ್ನು ಪ್ರತಿನಿಧಿಸುವಲ್ಲಿ ಯುವಜನಾಂಗವನ್ನು ಪ್ರೇರೇಪಿಸುವುದು.

• ಸಮಾಜದ ಯುವಜನರಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈದ್ಯಕೀಯ, ಸಾಹಿತ್ಯಿಕ, ಕ್ರೀಡ ಸಂಬಂಧಿ ವಿಚಾರಗಳ ಬಗ್ಗೆ ಅರಿವು ಮೂಡಿಸುವುದು.

• ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಸಮಾಜದ ಬಾಂಧವರನ್ನು ಗುರುತಿಸಿ ಗೌರವಿಸುವುದು ಹಾಗೂ ಪ್ರತಿಭಾವಂತ ಯುವಜನರನ್ನು ಗುರುತಿಸಿ ಪುರಸ್ಕರಿಸುವುದು.

• ಯುವಜನರ ಪ್ರತಿಭಾ ವಿಕಸನಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

• ಸಮಾಜದ ಅರ್ಹ, ವಿದ್ಯಾವಂತ ಯುವಜನರಿಗೆ ಸರಕಾರಿ ಯಾ ಖಾಸಗಿ ಸಂಸ್ಥೆಗಳಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡುವುದು, ಸ್ಪರ್ಧಾತ್ಮಕ ಹಾಗೂ ಆಡಳಿತಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ತರಬೇತಿ, ಮಾರ್ಗದರ್ಶನ, ಬೆಂಬಲ ನೀಡುವುದು.

• ಸಮಾಜದ ಯುವಜನರಿಗೆ ಸ್ವ-ಉದ್ಯೋಗದ ಬಗ್ಗೆ ಮಾಹಿತಿ, ತರಬೇತಿ ನೀಡಿ ಪ್ರೋತ್ಸಾಹಿಸುವುದು.

• ಸಮಾಜ ಸಮಗ್ರ ಸಂಘಟನೆಗಾಗಿ ಹಾಗೂ ಯುವವಾಹಿನಿ ಸಂಘಟನೆಯ ಚಟುವಟಿಕೆಗಳ ವಿಸ್ತರಣೆಗಾಗಿ ಅಲ್ಲಲ್ಲಿ ಘಟಕಗಳನ್ನು ಸ್ಥಾಪಿಸುವುದು ಆ ಮೂಲಕ ಯುವಜನರಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವರೇ ಪ್ರೇರೇಪಣೆ, ಮಾರ್ಗದರ್ಶನ ನೀಡುವುದು.

• ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

• ಸಮಾಜದ ವಿದ್ಯಾರ್ಥಿ ಯುವಜನರಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು, ಲಭ್ಯವಿರುವ ಇತರ ಸಂಸ್ಥೆಗಳ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡುವುದು, ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವುದು, ಉನ್ನತ ವ್ಯಾಸಂಗದ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡುವುದು, ಸಹಕಾರಿ ಸಂಘಗಳ ಸ್ಥಾಪನೆ, ವೃತ್ತಿಪರ ಶಿಕ್ಷಣದ ಬಗ್ಗೆ ಮಾಹಿತಿ ಹಾಗೂ ವ್ಯವಸ್ಥೆ, ವಸತಿ ನಿಲಯ ಸ್ಥಾಪನೆ, ಸ್ವ-ಉದ್ಯೋಗ ಮಾಹಿತಿ ಕೇಂದ್ರ ಸ್ಥಾಪನೆ ಇತ್ಯಾದಿ.

• ಸಮಾಜದ ಪ್ರಸ್ತುತ ಆಗುಹೋಗುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವರೇ, ಪತ್ರಿಕೆಗಳನ್ನು ಹೊರಡಿಸುವುದು, ಸಮಾಜದ ಪ್ರತಿಭಾವಂತ ಬರಹಗಾರರನ್ನು ಗುರುತಿಸುವುದು ಮತ್ತು ಅವರ ಪ್ರತಿಭೆಗಳ ವಿಕಸನಕ್ಕೆ ಹಾಗೂ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವರೇ ತನ್ನದೇ ಪತ್ರಿಕೆಗಳ ಮೂಲಕ ಅವಕಾಶ ನೀಡುವುದು.

• ಸಮಾಜದ ಮಹಿಳೆಯರನ್ನು ಸಂಘಟಿಸಿ, ಮಹಿಳಾ ಘಟಕಗಳನ್ನು ಸ್ಥಾಪಿಸುವುದು ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದು, ವರದಕ್ಷಿಣಿ ರಹಿತ ಸರಳ ವಿವಾಹ, ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ವಧುವರರ ಸಮಾವೇಶಗಳಿಗೆ ವ್ಯವಸ್ಥೆಗೊಳಿಸುವುದು.

• ಸಮಾಜದ ಪ್ರತಿಯೊಬ್ಬರಲ್ಲಿಯೂ ಏಕತೆ, ಸಮಗ್ರತೆ ಹಾಗೂ ಸಹೋದರತಾ ಭಾವನೆಯನ್ನು ಬೆಳೆಸುವುದು.

• ಯುವಜನರಲ್ಲಿ ಜವಾಬ್ದಾರಿಯುತ ನಾಯಕತ್ವವನ್ನು ಬೆಳೆಸುವುದರ ಮೂಲಕ ಯುವಶಕ್ತಿಯನ್ನು ಸಮಾಜೋದ್ಧಾರ ಚಟುವಟಿಕೆಗಳಲ್ಲಿ ತೊಡಗಿಸುವುದು. ಆ ಮೂಲಕ ಸಂಘಟನೆಯನ್ನು ಸಾಧಿಸುವುದು.

• ಸಮಾಜದಲ್ಲಿ ಇತರರ ಹಕ್ಕುಗಳ ಬಗ್ಗೆ ಗೌರವವನ್ನು ಬೆಳೆಸುವುದು. ಸಮಾಜದ ಪ್ರತಿಯೊಬ್ಬರನ್ನೂ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸುವುದು ಮತ್ತು ಸಮಾಜದ ಎಲ್ಲಾ ಮತ, ಧರ್ಮ, ವರ್ಗಗಳಲ್ಲಿ ಬಾಂಧವ್ಯವನ್ನು ಬೆಳೆಸುವುದು.

• ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಂಪರ್ಕ ಬೆಳೆಸುವುದು ಹಾಗೂ ಅವುಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು.

• ಪರಸ್ಪರ ವಿಚಾರ ವಿನಿಮಯ ನಡೆಸುವುದು, ಜಂಟಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇತ್ಯಾದಿ.

ಕಾರ್ಯವ್ಯಾಪ್ತಿ: ಯುವವಾಹಿನಿಯ ಘಟಕಗಳನ್ನು ಭಾರತದ ಯಾವ ಸ್ಥಳದಲ್ಲಿಯಾದರೂ ಕನಿಷ್ಟ 10 ಮಂದಿ ನಮ್ಮ ಜನಾಂಗದ ಯುವಜನರು ಸೇರಿ ಕೇಂದ್ರ ಸಮಿತಿಯ ಪೂರ್ವಾನುಮತಿಯನ್ನು ಪಡೆದು ಸ್ಥಾಪಿಸಬಹುದು. ಪ್ರಸಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ ಯುವವಾಹಿನಿಯ ಘಟಕಗಳು ಸಂಘಟನೆಗೊಂಡು ಕಾರ್ಯನಿರ್ವಹಿಸುತ್ತಿವೆ.

ಸದಸ್ಯತ್ವ: ನಮ್ಮ ಸಮಾಜದ ಯಾ ಸಮಾಜಕ್ಕೆ ಸಂಬಂಧಪಟ್ಟ ಯಾವುದೇ ಉಪಪಂಗಡಕ್ಕೆ ಸೇರಿದ ಸ್ವಜಾತಿ ಬಾಂಧವರಾಗಿದ್ದು ೧೮ ವರ್ಷಕ್ಕೆ ಮೇಲ್ಪಟ್ಟು ೫೦ ವರ್ಷದ ಒಳಗಿನವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಬಹುದು.

• ಯುವವಾಹಿನಿಯ ನಿಯಮ ನಿಬಂಧನೆಗಳನ್ನು ಒಪ್ಪಿಕೊಂಡು ಸದಸ್ಯತ್ವದ ಬಗ್ಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

ನೂತನ ಸಾಮಾನ್ಯ ಸದಸ್ಯತ್ವ ರೂ. 400/-, ವಾರ್ಷಿಕ ಸಾಮಾನ್ಯ ಸದಸ್ಯತ್ವ ನವೀಕರಣ ರೂ. 200/-;

ಅಜೀವ ಸಾಮಾನ್ಯ ಸದಸ್ಯತ್ವ ರೂ. 3,000/-;

ನೂತನ ಗೌರವ ಸದಸ್ಯತ್ವ ರೂ. 500/-, ವಾರ್ಷಿಕ ಗೌರವ ಸದಸ್ಯತ್ವ ನವೀಕರಣ ರೂ. 300/-;

ಅಜೀವ ಗೌರವ ಸದಸ್ಯತ್ವ ರೂ. 10,000/-;

50 ವರ್ಷಕ್ಕೆ ಮೇಲ್ಪಟ್ಟವರು ಗೌರವ ಸದಸ್ಯರಾಗಿ ಸೇರಿಕೊಳ್ಳಬಹುದು/ಮುಂದುವರಿಯಬಹುದು.

ಕಾರ್ಯನಿರ್ವಹಣೆ:
• ಸಂಘಟನೆಯ ಆಡಳಿತ ಮತ್ತು ಕಾರ್ಯನಿರ್ವಹಣೆಗಾಗಿ ಘಟಕಗಳಲ್ಲಿ ಕಾರ್ಯಕಾರೀ ಸಮಿತಿಗಳಿರುತ್ತವೆ. ಹಾಗೆಯೇ ಸಮಗ್ರ ಆಡಳಿತಕ್ಕಾಗಿ ವಿವಿಧ ಘಟಕಗಳಿಂದ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ರಚನೆಗೊಂಡ ಕೇಂದ್ರ ಸಮಿತಿ ಇರುತ್ತದೆ. ಸಂಘಟನೆಯ ಧ್ಯೇಯ-ಧೋರಣೆಗಳ ನಿರ್ಣಯ, ಅನುಷ್ಠಾನ ಹಾಗೂ ಘಟಕಗಳ ನಿಯಂತ್ರಣ ಕೇಂದ್ರ ಸಮಿತಿಯದ್ದಾಗಿರುತ್ತದೆ. ಕೇಂದ್ರ ಸಮಿತಿ ಹಾಗೂ ಘಟಕಗಳ ಕಾರ್ಯಕಾರೀ ಸಮಿತಿಯ ಅಧಿಕಾರಾವಧಿ ಒಂದು ವರ್ಷ ಮಾತ್ರವಾಗಿದ್ದು, ಯಾವನೇ ಸದಸ್ಯನು ನಿರ್ದಿಷ್ಟವಾದ ಹುದ್ದೆ ಒಂದರಲ್ಲಿ ನಿಯಮ ನಿಬಂಧನೆಯಲ್ಲಿ ನೀಡಲಾದ ಅವಕಾಶಗಳ ಹೊರತಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಮುಂದುವರಿಯಲು ಅವಕಾಶ ಇರುವುದಿಲ್ಲ.

• ಸಂಸ್ಥೆಯ ಮುಖ್ಯ ಧ್ಯೇಯವಾದ ವಿದ್ಯೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸಮಿತಿಯ ಉಪಸಮಿತಿಯಾಗಿ ’ವಿದ್ಯಾನಿಧಿ ಟ್ರಸ್ಟ್’ ಇರುತ್ತದೆ. ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಎಂಬುದಾಗಿ (ನೋಂದಾಯಿತ ಸಂಖ್ಯೆ 42/2016017  ದಿನಾಂಕ 30-05-2016-17 ದಿನಾಂಕ 30-05-2016) ನೋಂದಾಯಿಸಲ್ಪಟ್ಟಿದೆ. ಈ ಟ್ರಸ್ಟ್‌ನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಕೇಂದ್ರ ಸಮಿತಿಯ ನಿರ್ದೇಶನದಂತೆ ಇದು ಕಾರ್ಯನಿರ್ವಹಿಸುತ್ತದೆ.

• ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಸದಸ್ಯರಿಗೆ, ಸಮಾಜದ ಗಣ್ಯರಿಗೆ ಹಾಗೂ ಸಂಘಟನೆಯ ಅಭಿಮಾನಿಗಳಿಗೆ ತಿಳಿಯಪಡಿಸುವ ಉದ್ದೇಶಕ್ಕಾಗಿ, ಸಂಪರ್ಕ ಸಾಧನವಾಗಿ ಯುವಾಹಿನಿಯ ಮುಖವಾಣಿ ’ಯುವ ಸಿಂಚನ’ ಮಾಸಿಕ ಪತ್ರಿಕೆಯಿರುತ್ತದೆ. ಸಂಘಟನೆಯ ಆಶೋತ್ತರಗಳಿಗೆ ಪೂರಕವಾಗಿ ಪತ್ರಿಕೆಯನ್ನು ನಡೆಸಲು ಸಂಪಾದಕ ಮಂಡಳಿಯಿರುತ್ತದೆ. ಕೇಂದ್ರ ಸಮಿತಿಯ ಅಧ್ಯಕ್ಷರು ಇದರ ಗೌರವ ಸಂಪಾದಕರಾಗಿರುತ್ತಾರೆ. ಪತ್ರಿಕೆಯ ಮೂಲಕ ಸಮಾಜದ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ.

• ಸಂಸ್ಥೆಯ ಸಾಹಿತ್ಯಿಕ ಚಟುವಟಿಕೆಗಳಿಗಾಗಿ ಹಾಗೂ ’ವಿಶುಕುಮಾರ್ ಪ್ರಶಸ್ತಿ’ಯ ನಿರ್ವಹಣೆಗಾಗಿ ’ವಿಶುಕುಮಾರ್ ದತ್ತಿ ನಿಧಿ’ ಇರುತ್ತದೆ. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರು ದತ್ತಿನಿಧಿಯ ಅಧ್ಯಕ್ಷರಾಗಿರುತ್ತಾರೆ.

ಯುವವಾಹಿನಿಯ ಕಾರ್ಯ ಸಾಧನೆಗಳು :
‘ವಿದ್ಯೆ’ – ವಿದ್ಯೆಯ ಅಡಿಯಲ್ಲಿ ವಿದ್ಯಾನಿಧಿ ಟ್ರಸ್ಟ್ನ್ನು ಸ್ಥಾಪಿಸಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು, ದತ್ತು ಸ್ವೀಕರಿಸುವುದು, ಅವರಿಗೆ ತರಬೇತಿ ನೀಡುವುದು, ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆಸುವುದು, ಸಾಹಿತ್ಯಕ್ಕೆ ಒತ್ತು ನೀಡುವ ಶಿಬಿರ ನಡೆಸುವುದು, ಪುಸ್ತಕ ವಿತರಣೆ, ಬೇಸಿಗೆ ಶಿಬಿರ ನಡೆಸುವುದು, ವ್ಯಕ್ತಿತ್ವ ವಿಕಸನ, ಇಂಗ್ಲೀಷ್ ವ್ಯಾಕರಣ ತರಬೇತಿ ಶಿಬಿರ, ವಿದ್ಯಾರ್ಥಿ ಶಿಬಿರ ನಡೆಸುವುದು, ಪರೀಕ್ಷಾ ಪೂರ್ವ ತಯಾರಿ ಶಿಬಿರಗಳು ಇತ್ಯಾದಿ.

‘ಉದ್ಯೋಗ’ – ಉದ್ಯೋಗ ಮಾಹಿತಿ ನೀಡುವುದು, ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಇರುವ ಉದ್ಯೋಗದ ಅವಕಾಶದ ಬಗ್ಗೆ ಮಾಹಿತಿ ನೀಡುವುದು, ಸ್ವ-ಉದ್ಯೋಗದ ಬಗ್ಗೆ ಮಾಹಿತಿ ಶಿಬಿರ ನಡೆಸುವುದು, ಸ್ವ-ಉದ್ಯೋಗಕ್ಕೆ ಲಭ್ಯವಿರುವ ಆರ್ಥಿಕ ಮೂಲ ಸೌಕರ್ಯಗಳ ಬಗ್ಗೆ ತಿಳಿಸುವುದು, ವೃತ್ತಿ ಮಾರ್ಗದರ್ಶನ ಇತ್ಯಾದಿ.

‘ಸಂಪರ್ಕ’ – ಸಂಪರ್ಕ ಧ್ಯೇಯದಡಿಯಲ್ಲಿ ಯುವವಾಹಿನಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಕ್ರೀಡೆಗೆ ಸಂಬಂಧಪಟ್ಟ, ಸಮಾಜಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಬೇರೆ ಬೇರೆ ಘಟಕಗಳ ಮುಖೇನ ನಡೆಸುತ್ತಿದೆ. ಉದ್ಯೋಗಸ್ಥ ಸಮಾಜ ಬಾಂಧವರ ಸಮಾವೇಶ, ಉದ್ಯಮಿಗಳ ಸಮಾವೇಶ, ಮಹಿಳಾ ಸಮಾವೇಶ, ಶಿಕ್ಷಕರ ಸಮಾವೇಶ, ಶಾಂತಿಗಳ ಸಮಾವೇಶ, ವಕೀಲರು, ವೈದ್ಯರು, ಇಂಜಿನಿಯರುಗಳ ಸಮಾವೇಶ, ಬಿಲ್ಲವ ಸಮಾಜಕ್ಕೊಂದು ‘ಕಾಯಕಲ್ಪ’ ಮೊದಲಾದ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವಾದರ್ಶಗಳನ್ನು ಸಮಾಜದಲ್ಲಿ ಬಿತ್ತರಿಸುವ ಸದುದ್ದೇಶದಿಂದ “ಶ್ರೀ ಗುರು ಸಂದೇಶ ಯಾತ್ರೆ”ಯನ್ನು ಘಟಕದ ಮಟ್ಟದಲ್ಲಿಯೂ, ಕೇಂದ್ರ ಸಮಿತಿಯ ಮಟ್ಟದಲ್ಲಿಯೂ ಹಮ್ಮಿಕೊಂಡಿರುತ್ತದೆ.

ಸಮಾಜದ ಹಿರಿಯರ, ಗಣ್ಯರ, ಹಿತಚಿಂತಕರ ಜೊತೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿ ಸಮಾಜದ ಸಮಗ್ರ ಅಭಿವೃದ್ಧಿಗೆ ಬೇಕಾದ ಯೋಚನೆ-ಯೋಜನೆಗಳೊಂದಿಗೆ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಅನುಷ್ಠಾನಿಸುವುದು ಯುವವಾಹಿನಿಯ ಕಾರ್ಯವೈಖ್ಯರಿಯಾಗಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!