ಅಗಲಿದ ಹಿರಿಯ ಚೇತನ,ಯುವವಾಹಿನಿಯ ಅನರ್ಘ್ಯ ರತ್ನ, ದಿ|ತಮ್ಮಯ್ಯ ರವರಿಗೆ ನಮ್ಮೆಲ್ಲರ ಏಕಾಗ್ರ ಚಿತ್ತದ ನುಡಿನಮನಗಳೊಂದಿಗೆ ಇಂದು ನಮ್ಮೊಂದಿಗಿಲ್ಲದ ಆ ಮಂದಹಾಸದ ಮುಗುಳ್ನಗೆಯೊಂದಿಗೆ ರಾರಾಜಿಪ, ಶಕ್ತಿಯೆಂಬ ವ್ಯಕ್ತಿಯ ಅಂದದ ಮುಕುಟದ ಭಾವಚಿತ್ರಕ್ಕೆ ಅರ್ಪಿತವಾಯಿತು ಭಾವಪೂರ್ಣ ಶ್ರಧ್ಧಾಂಜಲಿ
*ದಿನಾಂಕ 17-09-2019 ನೇ ಮಂಗಳವಾರ ಸಾಯಂಕಾಲ ಘಂಟೆ 5:30 ಕ್ಕೆ ಸರಿಯಾಗಿ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅಗಲಿದ ಹಿರಿಯರ ಭಾವಚಿತ್ರಕ್ಕೆ ಮಾಜಿ ಅಧ್ಯಕ್ಷರುಗಳು ದೀಪ ಬೆಳಗಿಸಿದರು. ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ರವರು ಸೇರಿದ ಸರ್ವರನ್ನು ಸ್ವಾಗತಿಸಿ, ಅಗಲಿದ ನಮ್ಮೆಲ್ಲರ ಹಿರಿಯ ಮುತ್ತು ದಿ| ತಮ್ಮಯ್ಯ ರವರ ಗುಣಗಾನ ಮಾಡಿ ಹೆಜ್ಜೆ ಹೆಜ್ಜೆಗೂ ಅವರು ಹಾಕಿಕೊಟ್ಟ ಮಾರ್ಗದರ್ಶನ ನಮಗೆ ಸ್ಪೂರ್ತಿ ಹಾಗೂ ಅವರು ಸದಾ ನಮಗೆ ನೀಡಿದ ಮೌಲ್ಯಯುತ ಮುತ್ತಿನಂತಹ ಮಾತುಗಳ ಸಲಹೆಗಳನ್ನು ನಾವು ಅನುಸರಿಸಿ ನಮ್ಮ ಈ ಸಂಸ್ಥೆಯಲ್ಲಿ ಅದನ್ನು ಅಳವಡಿಸುವುದರೊಂದಿಗೆ ನಾವು ಅವರನ್ನು ಸದಾ ಗೌರವಪೂರ್ವಕವಾಗಿ ನೆನೆಯೋಣ,ಅವರು ನಮಗೆ ಹೇಳಿದ ಕಿವಿಮಾತು ಒಬ್ಬರಿಗೊಬ್ಬರು ದ್ವೇಷಿಸದೆ ಸಹೋದರತೆಯ ಸಹಬಾಳ್ವೆಯಿಂದ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸಿ ಎಂಬ ನಾನ್ನುಡಿಯನ್ನು ಸ್ವತಃ ನಾವು ಅಳವಡಿಸಿಕೊಂಡಲ್ಲಿ ಮಾತ್ರ ನಮ್ಮಿಂದ ಅವರಿಗೆ ಅರ್ಪಿತವಾಗುವ ನಿಜವಾದ ಶ್ರಧ್ಧಾಂಜಲಿ ಎಂದು ಹೇಳಿ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು.ಮಾಜಿ ಅಧ್ಯಕ್ಷರುಗಳಾದ ಟಿ.ಶಂಕರ ಸುವರ್ಣ, ಸಾಧು ಪೂಜಾರಿ, ಜಯರಾಮ ಕಾರಂದೂರು,ರಾಜೀವ ಪೂಜಾರಿ ಯವರು ಸಭೆಯನ್ನುದ್ದೇಶಿಸಿ ನಮ್ಮನ್ನಗಲಿದ ಹಿರಿಯ ಜೀವ, ಯುವವಾಹಿನಿಯ ನಾಡಿ ಮಿಡಿತ ದಿ|ತಮ್ಮಯ್ಯ ರವರು ಯುವವಾಹಿನಿಯ ಪ್ರಥಮ ಸಮಾವೇಷದಿಂದ ಈ ವರೆಗೆ ಮೊನ್ನೆ ನೆರವೇರಿದ 32 ನೇ ಸಮಾವೇಷದ ವರೆಗೂ ಸಂಸ್ಥೆಯ ಮೇಲಿನ ಪ್ರೀತಿ,ಒಲವು ದನಿವರಿಯದ ಉತ್ಸಾಹ,ತನ್ನ ದೇಹದ ನೋವನ್ನು ಮರೆತು ಪ್ರತಿಯೊಂದಕ್ಕೂ ಸ್ವ ಇಚ್ಛೆಯಿಂದ ನಮ್ಮೊಂದಿಗೆ ಬಹಳ ಉಲ್ಲಾಸದಿಂದ ಸ್ಪಂದಿಸುತ್ತಾ ಇದ್ದು,ಕೇವಲ ಸಂಸ್ಥೆ ಮಾತ್ರವಲ್ಲದೆ ಇಡೀ ಸಮಾಜದ ಬಗ್ಗೆ ಅವರಲ್ಲಿದ್ದ ಕಾಳಜಿ ಅನನ್ಯವಾದುದು. ಯುವಕರಿಗೆ ಪ್ರೇರಕ ಶಕ್ತಿ, ನಮ್ಮೆಲ್ಲರ ಒಡನಾಡಿಯಾದ ಹಿರಿಯರ ಹೆಸರು ಅಜರಾಮರವಾಗಿಸೋಣ,ನಮ್ಮ ಮಧ್ಯೆ ಅವರು ಇಲ್ಲವಾದರೂ ನಮ್ಮೊಂದಿಗೆ ಇದ್ದ ಹಾಗೆ ಭಾಸವಾಗುತ್ತಿರುವ ಅವರ ಬಗ್ಗೆ ಎಷ್ಟು ನೆನೆದರೂ ಸಾಲದೆಂಬ ರೀತಿಯಲ್ಲಿ ಅವರ ಗುಣಗಾನ ಮಾಡಿ, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.ಸಿಂಚನ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕರಾದ ರಾಜೇಶ್ ಬಂಟ್ವಾಳ ರವರು ಮಾತನಾಡಿ ಹಿರಿಯರಾದ ತಮ್ಮಯ್ಯರವರಲ್ಲಿ ಯುವವಾಹಿನಿ ಯ ವೆಬ್‌ಸೈಟ್ ಅನುಷ್ಠಾನ ದ ಬಗೆಗೆ ಅವರಲ್ಲಿದ್ದ ಕಾಳಜಿ ಹಾಗೂ ಅವರ ಜೀವನೋತ್ಸಾಹ ಬಹಳ ಆಕರ್ಷಣೀಯ ಹಾಗೂ ಅವಿಸ್ಮರಣೀಯ ಎಂಬುದಾಗಿ ತಿಳಿಯಪಡಿಸಿದರು.ಹಾಗೂ ತಾರೀಕು 23-09-2019 ನೇ ಸೋಮವಾರ ದಂದು ಬಂಟವಾಳ ಬಂಟರ ಭವನದಲ್ಲಿ ನೆರವೇರಲಿರುವ ಮೃತರ ‘ಉತ್ತರಕ್ರಿಯೆ’ಯ ಕಾರ್ಯಕ್ಕೆ ಅವರ ಕುಟುಂಬದ ಮೂಲದಿಂದ ಯುವವಾಹಿನಿ ಯ ಸರ್ವಸದಸ್ಯರಿಗೂ ಬಂದ ಆಮಂತ್ರಣವನ್ನು ತಿಳಿಸಿದರು, ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಕುಟುಂಬದ ವತಿಯಿಂದ ಅದೇ ದಿನ ಬೆಳಿಗ್ಗೆ 11 ಘಂಟೆಯಿಂದ 12 ರ ವರೆಗೆ ಅದೇ ಸಭಾ ಭವನ ದಲ್ಲಿ ಸಾರ್ವಜನಿಕ ‘ಶ್ರಧ್ಧಾಂಜಲಿ ಸಭೆ’ ನಡೆಯಲಿರುವುದು ಎಂಬ ಮಾಹಿತಿ ನೀಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಪ್ರದೀಪ್ ಎಸ್.ಆರ್ ರವರು ಶ್ರಧ್ಧಾಂಜಲಿ ಕಾರ್ಯಕ್ರಮಕ್ಕೆ ಹಾಜರಿದ್ದ ಸರ್ವರಿಗೂ ವಂದಿಸಿದರು.ಬಳಿಕ ಭಾಗವಹಿಸಿದ ಪ್ರತಿಯೊಬ್ಬರೂ ದಿ|ತಮ್ಮಯ್ಯರವರ ಭಾವಚಿತ್ರಕ್ಕೆ ಭಕ್ತಿಯುತ ಪುಷ್ಪಾರ್ಚನೆಯನ್ನು ಅರ್ಪಿಸಿ ಕರಜೋಡಿಸಿ ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಶಿರಬಾಗಿ ನಮಿಸಿದರು.ಈಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಿದ ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆಗಳು.*