ಯುವವಾಹಿನಿ ಸದಸ್ಯರ ಸಂಪೂರ್ಣ ಮಾಹಿತಿಯನ್ನು ಒಳಗೊಂಡ samparka.yuvavahini.in ಜಾಲತಾಣವನ್ನು ದಿನಾಂಕ 29.10.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಹಾಗೂ ತುಕರಾಮ್ ಎನ್ ಅನಾವರಣಗೊಳಿಸಿದರು. ಪ್ರಸ್ತುತ ಯುವವಾಹಿನಿಯ 25 ಘಟಕಗಳ ಒಟ್ಟು 1532 ಸದಸ್ಯರ ಸಂಪೂರ್ಣ ವಿವರಗಳು ಈ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ. ಘಟಕಗಳ ಸಹಕಾರದಿಂದ ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಸಾಧನೆ ಸಾಧ್ಯವಾಯಿತು ಎಂದು ಯುವವಾಹಿನಿ ಜಾಲತಾಣ ಸಂಪಾದಕರಾದ ರಾಜೇಶ್ ಸುವರ್ಣ ತಿಳಿಸಿದರು. ಜಾಲತಾಣ ಸದಸ್ಯರಾದ ಸುಜಿತ್ ಕುಮಾರ್ ಪ್ರಾಯೋಗಿಕವಾಗಿ ಸದಸ್ಯರ ವಿವರಗಳ ಬಗ್ಗೆ ಮಾಹಿತಿ ನೀಡಿದರು. ವಿನೂತನ ಕ್ರಿಯಾಶೀಲ ಯೋಜನೆಗೆ ಸದಸ್ಯರು ಸಂತಸ ವ್ಯಕ್ತಪಡಿಸಿದರು. ಈ ಯೋಜನೆ ಕ್ಷಿಪ್ರವಾಗಿ ಕಾರ್ಯರೂಪಕ್ಕೆ ತರಲು ಸಹಕರಿಸಿದ ಘಟಕಗಳು ಹಾಗೂ ಯುವವಾಹಿನಿ ಜಾಲತಾಣ ಸಂಪಾದಕೀಯ ಮಂಡಳಿಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಅಭಿನಂದಿಸಿದರು.ಯುವವಾಹಿನಿಯ ಎಲ್ಲಾ ಸದಸ್ಯರ ವಿವರವೂ ಜಾಲತಾಣದಲ್ಲಿ ಲಭ್ಯವಿದ್ದು ಪ್ರತಿಯಿಬ್ಬ ಸದಸ್ಯರೂ ತಮ್ಮ ಮಾಹಿತಿಯನ್ನು ತಮ್ಮ ಮೊಬೈಲ್‍ನಲ್ಲಿಯೇ ಪಡೆದುಕೊಳ್ಳುವ ಅವಕಾಶ ಇಲ್ಲಿದ್ದು ಈ ವ್ಯವಸ್ಥೆ ಸಾಮಾಜಿಕ ಸಂಘಟನೆಗಳಲ್ಲಿಯೇ ಪ್ರಪ್ರಥಮ ಪ್ರಯೋಗ ಎನ್ನುವ ಪ್ರಶಂಸಗೆ ಪಾತ್ರವಾಗಿದೆ.
Well don good work sir..
Super Weldon Rajesh suvarna & yuvavahini website team record in our society