ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯ ದಿನಾಂಕ 24.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. 21 ಘಟಕಗಳ ಪದಾಧಿಕಾರಿಗಳು ಸೇರಿ ಒಟ್ಟು 98 ಸದಸ್ಯರು ಹಾಜರಿದ್ದರು. 2017-18 ನೇ ಸಾಲಿನ ವಾರ್ಷಿಕ ಮುಂಗಡ ಬಜೆಟನ್ನು ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದರು. ಯುವಸಿಂಚನ ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲರಿಗೂ ಸಂಪಾದಕರು ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಸದಸ್ಯರ ವಿವರದ ಜಾಲತಾಣದ ಬಗ್ಗೆ ಸುಜಿತ್ ಕುಮಾರ್ ವಿವರ ನೀಡಿದರು. ನವಂಬರ್ 5 ರಂದು ಯುವವಾಹಿನಿ ಸದಸ್ಯರಿಗೆ ನಾಯಕತ್ವ ತರಬೇತಿ ಶಿಬಿರ ನಡೆಸಲು ನಿರ್ಧರಿಸಲಾಯಿತು. ದಿನಾಂಕ 29.10.2017 ರಂದು ಅಕ್ಟೋಬರ್ ತಿಂಗಳ ಮಾಸಿಕ ಸಭೆಯು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿತು.23ಘಟಕಗಳ ಪದಾಧಿಕಾರಿಗಳು ಸೇರಿ 108 ಸದಸ್ಯರು ಹಾಜರಿದ್ದರು. ಕೊಡಗು ಜಿಲ್ಲೆಯಲ್ಲಿ ಯುವವಾಹಿನಿ ಘಟಕ ರಚಿಸುವ ಬಗ್ಗೆ ಮಹೇಶ್ಚಂದ್ರ ಬಿ.ಟಿ. ಪ್ರಸ್ತಾವನೆ ಮಾಡಿದರು. ಡಿಸೆಂಬರ್ 10 ರಂದು ಮೂಡಬಿದ್ರೆ ಘಟಕ ಉದ್ಘಾಟನೆ ಮಾಡಲಾಗುವುದು ಎಂದು ಮೂಡಬಿದ್ರೆ ತಾಲೂಕು ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ತಿಳಿಸಿದರು. ವೇಣೂರು ಮತ್ತು, ಅಳದಂಗಡಿ ಘಟಕ ರಚನೆಯ ಪ್ರಕ್ರಿಯೆ ಆರಂಭವಾಗಿದೆ ಎಂದು ಬೆಳ್ತಂಗಡಿ ತಾಲೂಕು ಸಂಘಟನಾ ಕಾರ್ಯದರ್ಶಿ ರಮಾನಂದ ಸಾಲ್ಯಾನ್ ತಿಳಿಸಿದರು. ವಿಟ್ಲ ಘಟಕ ರಚನೆಯ ಪ್ರಕ್ರಿಯೆ ಆರಂಭವಾಗಿದೆ ಎಂದು ಶಶಿಧರ ಕಿನ್ನಿಮಜಲು ಮಾಹಿತಿ ನೀಡಿದರು ನವಂಬರ್ 5ರಂದು ಮುಲ್ಕಿಯಲ್ಲಿ ಜರುಗುವ ನಾಯಕತ್ವ ತರಬೇತಿ ಶಿಬಿರ , ಡಿಸೆಂಬರ್ 24 ರಂದು ಪುತ್ತೂರಿನಲ್ಲಿ ಜರುಗುವ ಕೋಟಿ ಚೆನ್ನಯ ಕ್ರೀಡಾಕೂಟ ಹಾಗೂ ಡಿಸೆಂಬರ್ 25 ರಂದು ಬಂಟ್ವಾಳದಲ್ಲಿ ಜರುಗುವ ಅನ್ವೇಷಣಾ ಶಿಬಿರದ ಬಗ್ಗೆ ಮಾಹಿತಿ ನೀಡಲಾಯಿತು. samparka.yuvavahini.in ಸದಸ್ಯರ ವಿವರದ ಜಾಲತಾಣವನ್ನು ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಹಾಗೂ ತುಕರಾಮ್ ಎನ್ ಉದ್ಘಾಟಿಸಿದರು. ಯುವವಾಹಿನಿ ಸಮಾಜಮುಖಿ ಕಾರ್ಯಗಳ ಮಾಹಿತಿ ಪುಸ್ತಕವನ್ನು ಮಾಜಿ ಅಧ್ರಕ್ಷರಾದ ಸಾಧು ಪೂಜಾರಿ ಬಿಡುಗಡೆಗೊಳಿಸಿದರು.