ಸಿಂಚನ ವಿಶೇಷಾಂಕ : 2017

ಆ ನಾಲ್ಕು ಜನ ಯಾರು?

ನರೇಶ್ ಕುಮಾರ್ ಸಸಿಹಿತ್ಲು

ಅಮ್ಮ ನನಗೆ ಕೈತುತ್ತು ಕೊಡುವುದನ್ನು ಬಿಟ್ಟಾಗಿನಿಂದ ನಾನು ಇವರನ್ನು ಹುಡುಕುತ್ತಿದ್ದೇನೆ. ಆದರೆ ಅವರಿನ್ನೂ ನನಗೆ ಸಿಗಲೇ ಇಲ್ಲ!. ಅವರು ನನ್ನ ಹಿಂದೆ ಮುಂದೆ ಎಲ್ಲೋ ಸುತ್ತಾಡುತ್ತಿದ್ದಾರೆ. ಗಬಕ್ಕೆನೇ ಹಿಡಿಯೋಣ ಎಂದರೆ ಆ ನಾಲ್ಕು ಜನ ನನ್ನ ಕಣ್ಣಿಗೆ ಕಾಣಲ್ಲ, ಆ ನಾಲ್ಕು ಜನ ನನ್ನ ಭ್ರಮೆ ಎಂದುಕೊಳ್ಳುತ್ತೇನೆ, ಆದರೆ ಎಲ್ಲರೂ ಆ ನಾಲ್ಕು ಜನರ ಬಗ್ಗೆ ಮಾತಾಡುತ್ತನೇ ಇರುತ್ತಾರೆ. ಸಮಾಜದ ಒಟ್ಟು ಜನ ಸಂಖ್ಯೆಯ 1ರಷ್ಟು ಜನವಾದರೂ ಈ ನಾಲ್ಕು ಜನರ ಬಗ್ಗೆ ದಿನದಲ್ಲಿ ಒಮ್ಮೆಯಾದರೂ ಪ್ರಸ್ತಾಪಿಸುತ್ತಾರೆ. ಎಲ್ಲಾ ಕಡೆ ಇರುವ ಅವರು ನನಗಂತೂ ಸಿಗಲ್ಲ. ಹಾಗಾದ್ರೆ ಅವರ ಬಗ್ಗೆ ಹೇಳುವವರ ಬಳಿಯೇ ಕೇಳೋಣ ಎಂದರೆ ಅವರದೊಂದು ಸಿದ್ದ ಉತ್ತರ ‘ಅವರು ಯಾರೆಂದು ನಿನಗೆ ಗೊತ್ತಿಲ್ಲವೇ ನಾವು ಮತ್ತೆ ಬಿಡಿಸಿ ಹೇಳಬೇಕಾ’ ಅರೆ ಎಲ್ಲರಿಗೂ ಕಾಣುವ ಆ ನಾಲ್ಕು ಮಂದಿ ನನಗ್ಯಾಕೆ ಕಾಣಲ್ಲ!.
ಈಗ ನೀವು ತಲೆ ಕೆಡಿಸಿಕೊಳ್ಳುತ್ತಿದ್ದಿರಾ? ಯಾರಾಗಿರಬಹುದು ಆ ನಾಲ್ಕು ಜನ? ನಿಮಗೊಂದು ಸತ್ಯಗೊತ್ತಾ? ನಿಮಗೂ ಈ ನಾಲ್ಕು ಜನರ ಬಗ್ಗೆ ಎಲ್ಲರೂ ಹೇಳಿದ್ದಾರೆ. ಆದರೆ ಆ ನಾಲ್ಕು ಜನ ಮಾತ್ರ ನಿಮಗೂ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ನೀವು ಯೋಚಿಸುವ ಗೊಡವೆಗೂ ಹೋಗಿಲ್ಲ. ಹೌದಲ್ವ ಅಂದ್ಕೋತಿದ್ದೀರಾ ಗೊತ್ತಾಯ್ತು ನನ್ನ ಹಾಗೇ ನಿಮ್ಮ ತಲೆಗೂ ಈಗ ಹುಳು ಹೋಯಿತಲ್ವಾ? ಒಂದೇ ಒಂದು ನಿಮಿಷದಲಿ ್ಲಓದಿದಾಗ ನಿಮಗೆ ಇಷ್ಟು ಟೆನ್ಶನ್ ಆಗ ಬೇಕಾದರೆ ಇನ್ನು ಒಂದು ಮೂರು ದಶಕದಿಂದ ಹುಡುಕುತ್ತಿರುವ ನನಗೆ ಎಷ್ಟು ಟೆನ್ಶನ್ ಆಗಿರಬೇಡಾ?
ಇಡೀ ಸಮಾಜದಲ್ಲಿ ಎಲ್ಲರ ಮತ್ತು ಎಲ್ಲಾ ಒಳಿತು ಕೆಡುಕುಗಳನ್ನು ಜಡ್ಜ್‍ಮೆಂಟ್ ಮಾಡುವ ಆ ನಾಲ್ಕು ಮಂದಿ ನನಗೆ ಸಿಗಬೇಕು. ಆಮೇಲೆ ಇದೆ ಮಾರಿ ಹಬ್ಬ. ಒಮ್ಮೊಮ್ಮೆ ನಾನೂ ಅವರಿವರ ಬಳಿ ಹೇಳುತ್ತೇನೆ ಈ ನಾಲ್ಕು ಜನರ ಬಗ್ಗೆ, ಯಾರಿಗಾದ್ರೂ ಗೊತ್ತಿದ್ರೆ ತಿಳ್ಕೋಳ್ಳೋಣ ಅಂತ, ಬಟ್ ಏನ್ ಮಾಡೊದು ಹೇಳಿ ಎಲ್ಲರದ್ದು ಅದೇರಾಗ ಹೌದಪ್ಪ ಆ ನಾಲ್ಕು ಮಂದಿ!.
ಇನ್ನೂ ನಾನು ಹೇಳದೆ ಹೋದರೆ `ಸಯ್ಯಡ್ ಅಂಚಿ’ ಎಂದು ಗೊಣಗಿಕೊಂಡು ನೀವಂತೂ ಪುಟ ತಿರುವುದು ಗ್ಯಾರಂಟಿ, ಆಮೇಲೆ ಈ ಬಗ್ಗೆ ನನಗೆ ಹೇಳುವವರು ಯಾರು? ಸೋ ಹಾಗಾಗಿ ವಿಷಯಕ್ಕೆ ಬರ್ತೆನೆ.
ಹೇಳಿ ಕೇಳಿ ನಾನು ಸಾಮಾಜಿಕ ವ್ಯವಸ್ಥೆಯ ಒಳಗೆ ಇರುವವನು, ಪತ್ರಕರ್ತ ಬೇರೆ, ಸಮಯದ ಪರಿವೇ ಇರುವುದಿಲ್ಲ. ಒಂದೆರಡು ದಿನ ಫ್ರೀ ಇದ್ದರೂ ಯುವವಾಹಿನಿ, ಲಯನ್ಸ್, ನಾರಾಯಣಗುರು ಸಂಘ, ನಾಟಕ ಪ್ರಾಕ್ಟೀಸ್, ಪತ್ರಕರ್ತರ ಸಂಘ, ಟ್ರೈನಿಂಗ್ ಅದೂ ಇದೂಂತ ಬ್ಯುಸಿ. ಹೀಗಾಗಿ ಮನೆಗೆ ಬಂದಾಗ ಅಮ್ಮಂದು ಒಂದೇ ರಾಗ, `ಏಪಲಾ ಲೇಟ್ ಬಲ, ಏತ್ ಪಂಡಲಾ ಇಜ್ಜಿ, ನಡಿರ್‍ಗ್ ಇಲ್ಲ್ ಪೊಗ್ಗುವಾ, ಒಂಜಿ ನಾಲ್ ಜನನ್ ತೂದುಕಲ್ಪು, ಈ ಇಂಚೆನೆ ಮಲ್ಪು. ತೂಯಿನ ನಾಲ್ ಜನ ದಾದ ಪನ್ಪೆರ್ ಗೊತ್ತುಂಡಾ?’
ಅಮ್ಮನ ಮಾತು ಅಷ್ಟಾಗಿ ಕಿವಿಗೆ ಹಾಕಿಕೊಳ್ಳದೆ ಮಲಗಿದರೆ, ಬೆಳಗ್ಗೆ ಮನೆಯಲ್ಲಿ ಸೇರಿದ ಹೆಂಗಸರ ಕೂಟದಿಂದ ಮತ್ತದೇ ಮಾತು, ಊರವರ ವಿಷಯ ತಂದು ಇಲ್ಲಿ ಮಾತುಕತೆಗೆ `ಅತ್ತ್ ಆಯೆ ದಾಯೆ ಅಂಚ ಮಲ್ಪೋಡು ಒಂಜಿ ನಾಲ್ ಜನಕ್ಲು ತೂಪೆರ್‍ಂದ್‍ಲಾ ಇಜ್ಜಾ’. ಇನ್ನೊಬ್ಬರ ಒಗ್ಗರಣೆ ಅದಕ್ಕೆ `ನಮ, ಒಂಜಿ ನಾಲ್‍ಜನ ಎಡ್ಡೆ ಪನ್ಪಿಲೆಕ್ಕ ಬೇಲೆ ಮಲ್ಪೋಡು’ ಅಬ್ಬಾಬ್ಬಾ ಒಬ್ಬರಿಗಿಂತ ಒಬ್ಬರು ಬಿಗು` ಅತ್ ನಾಲ್‍ಜನ ಇಪ್ಪುನಲ್ಪ ಎಂಚ ಇಪ್ಪೊಡುಂದು ಗೊತ್ತುಜ್ಜಾ’ ಅರೆ ನಾನು ಕೇಳುವುದು ಅಷ್ಟಕ್ಕೂ ಈ ನಾಲ್ಕು ಜನ ಯಾರು?
ಅಲ್ಲಾ ಈ ಉಸಾಬರಿ ಎಲ್ಲಾ ಈ ನಾಲ್ಕು ಜನರಿಗ್ಯಾಕೆ, ಪ್ರತಿಯೊಬ್ಬರ ಹಿಂದೆಯೂ ಸುತ್ತುವ ಇವರಿಗೆ ಬೇರೆ ಕೆಲಸ ಇಲ್ಲವೇ?
ಸರಿಯಾಗಿ ಯೋಚಿಸಿ ಬಂಧುಗಳೇ, ನಿಮಗೂ ನಿಮ್ಮ ಮನೆಯಲ್ಲಿ, ಸಮಾಜದಲಿ,್ಲ ಸ್ನೇಹಿತರ ವಲಯದಲ್ಲಿ ಈ ನಾಲ್ಕು ಜನರ ಬಗ್ಗೆ ಕೇಳಿರಬೇಕಲ್ಲವೇ? ಎಷ್ಟೋ ಮಂದಿ ನಿಮಗೂ ಈ ನಾಲ್ಕು ಮಂದಿಯ ಉದಾಹರಣೆ ನೀಡಿರಬೇಕಲ್ಲವೇ? ಹೌದು! ಎಂದಾದರೆ ನೀವ್ಯಾಕೆ ಈ ನಾಲ್ಕು ಜನರ ಬಗ್ಗೆ ಯೋಚಿಸಿಲ್ಲ ಹೇಳಿ? ಏಕೆಂದರೆ ನಾವು ಉದಾಹರಿಸುವಷ್ಟು ವೇಗದಲ್ಲಿ ವ್ಯವಹರಿಸುವುದಿಲ್ಲ. ವಿಮರ್ಶಿಸುವುದಿಲ್ಲ. ಎಲ್ಲವನ್ನೂ ನಾಲ್ಕು ಜನರ ತಲೆಗೆ ಕಟ್ಟಿ ಸುಮ್ಮನಾಗುತ್ತೇವೆ. ನೋಡುವವರು ಹಾಗಂದುಕೊಳ್ಳುತ್ತಾರೆ ಹೀಗೆಂದುಕೊಳ್ಳುತ್ತಾರೆ ಎನ್ನುತ್ತೇವೆ. ನೋಡುವವರಿಗೆ ನೋಡುವುದೇ ಕೆಲಸವಾದರೆ, ನಾವು ಮಾತ್ರ ಅವರ ದೃಷ್ಠಿಗೆ ಒಳ್ಳೆಯವರಂತೆ ಕಾಣಲು ಬಯಸುತ್ತೇವೆ. ನನ್ನ ಮನಸಿಗೆ ಸಮಾಧಾನವಾದರೆ ಅದು ನಿಜವಾದ ತೃಪ್ತಿ. ಏಕೆಂದರೆ ನೋಡುವವನನ್ನು ಆಡಿಕೊಳ್ಳುವವನನ್ನು ಸಮಾಧಾನಿಸಲು ಎಂದಿಗೂ ಸಾಧ್ಯವಿಲ್ಲ. ಕೊಂಕು ಬುದ್ದಿಗೆ ಎಂದಾದರೂ ತೃಪ್ತಿ ಎನ್ನುವುದು ಇದೆಯೇ? ಸೂರ್ಯ ನಮಸ್ಕಾರದ ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದ ಭಟ್ರು ತನ್ನ ತಂಬಿಗೆ ಅದಲು ಬದಲಾಗದಿರಲೆಂದು ತಂಬಿಗೆಯೊಳಗೆ ಮರಳು ಹಾಕಿ ಹೋದರಂತೆ, ಆದರೆ ಆ ಬಳಿಕ ಸಮುದ್ರ ತೀರಕ್ಕೆ ಬಂದ ಎಲ್ಲಾ ಭಟ್ರು ಇದೊಂದು ಶಾಸ್ತ್ರ ಎಂದು ತಮ್ಮ ತಂಬಿಗೆಗೂ ಮರಳೂ ತುಂಬಿ ಹೋದರು. ಎಂತಹ ಹಾಸ್ಯ ಅಲ್ಲವೇ? ನಮ್ಮ ಮನೆಯಲ್ಲಿ ಯಾರದ್ದಾದರು ಸೀಮಂತ ಆಗಿದ್ದರೆ ಗಮನಿಸಬಹುದು, ಸೀಮಂತದ ದಿನ ಬಸುರಿಗೆ ಬಡಿಸುವಾಗ ಅದರಲ್ಲಿ ಬೇಯಿಸಿದ ಕೋಳಿಯ ಲಿವರನ್ನು ಹಸಿ ಮಡಲಿನ ಕಡ್ಡಿಯಿಂದ ಕಟ್ಟಿ ಬಡಿಸುವಾಗ ಗರ್ಭಿಣಿಯ ಎಲೆ ಹಾಕುತ್ತಾರೆ. ಇದೊಂದು ಶಾಸ್ತ್ರ ಎನ್ನುತ್ತಾರೆ. ಈಗೀಗ ಕ್ಯಾಟರಿಂಗ್‍ನವರಿಗೆ ಆರ್ಡರ್ ಕೊಡುವಾಗಲೂ ಇದನ್ನು ಹಾಗೆಯೇ ತೆಂಗಿನ ಮರದ ಕಡ್ಡಿಯಿಂದ ಪೋಣಿಸಿ ಬೇಯಿಸಿ ತರಲು ಹೇಳುತ್ತಾರೆ. ಕಾರಣ ಕೇಳಿದರೆ ಅದೊಂದು ಶಾಸ್ತ್ರ ಎನ್ನುವ ಸಿದ್ಧ ಉತ್ತರ. ವಾಸ್ತವವಾಗಿ ಇದರ ಕಾರಣವೇ ಬೇರೆ ಇದೆ. ಹಿಂದಿನ ಕಾಲದಲ್ಲಿ ಯಾವುದೇ ಸಮಾರಂಭ ಆದರೂ ಎಲ್ಲಾ ಆಹಾರ ಪದಾರ್ಥವನ್ನು ಮನೆಯಲ್ಲಿಯೇ ಬೇಯಿಸುತ್ತಿದ್ದರು. ಎಷ್ಟೇ ಜನ ಬಂದರೂ ಅವರನ್ನು ಸುಧಾರಿಸುತ್ತಿದ್ದರು. ಇಂತಹ ಸಮಯದಲ್ಲಿ ನೂರಾರು ಜನರಿಗೆ ಅಡುಗೆ ಮಾಡುವಾಗ ಕೋಳಿ ಲಿವರನ್ನು ಪದಾರ್ಥದ ಕೋಳಿ ಜೊತೆಯೇ ಬೇಯಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಲಿವರ್ ಕೋಳಿ ಮಾಂಸದ ಜೊತೆ ಬೆಂದು ಹೋಗದಿರಲೆಂದು ಮತ್ತು ಕಟಾರದಲ್ಲಿ ಹುಡುಕಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಅದನ್ನು ಪೋಣಿಸುತ್ತಿದ್ದರು. ಇದು ತಿಳಿಯದೇ ಇಂದಿಗೂ ಪೋಣಿಸಿದ ಲಿವರ್ ಎಲ್ಲಾ ಬಯಕೆಯಲ್ಲೂ ಕಂಡು ಬರುತ್ತದೆ.
ಇದು ಒಂದೆರಡು ಉದಾಹರಣೆ ಮಾತ್ರ. ಇಂತಹ ನೂರಾರು ಉದಾಹರಣೆಗಳಿವೆ. ಹಿರಿಯರು ಕೆಲವೊಂದನ್ನು ಅನುಕೂಲ ಶಾಸ್ತ್ರದಲ್ಲಿ ಸೇರಿಸಿಕೊಂಡಿದ್ದಾರೆ. ಅದಕ್ಕೆ `ಗಟ್ಟಿಯಾಂಡ ರೊಟ್ಟಿ ತೆಲುವಾಂಡ್ ತೆಲ್ಲವು’ ಎನ್ನುವ ಮಾತು ಹುಟ್ಟಿಕೊಂಡಿದೆ.
ಬಹಳಷ್ಟು ಸಮಯದಲ್ಲಿ ಎರಡು ಘಟನೆಗಳು ನನ್ನನ್ನು ಕಾಡುತ್ತಲೇ ಇರುತ್ತದೆ. ಈ ಎರಡು ಘಟನೆಗಳು ನನ್ನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ. ಮಳೆ ಬೆಳೆ ಇಲ್ಲದೆ ಬರಪೀಡಿತವಾಗಿದ್ದ ಒಂದು ಊರಿನ ಜನ ಮಳೆಗಾಗಿ ದೇವರನ್ನು ಪ್ರಾರ್ಥಿಸಲು ದೇವಸ್ಥಾನದ ಮುಂದೆ ಸೇರಿದ್ದರು. ಆಗ ಅಲ್ಲಿಗೆ ಒಂದು ಪುಟ್ಟ ಮಗು ಛತ್ರಿ ಹಿಡಿದುಕೊಂಡು ಬರುತ್ತದೆ. ಯಾಕೆಂದರೆ ಪ್ರಾರ್ಥನೆಯ ಫಲವಾಗಿ ದೇವರು ಮಳೆ ಸುರಿಸುತ್ತಾನೆ ಎನ್ನುವ ನಂಬಿಕೆ. ಇನ್ನೊಂದು ಘಟನೆ ಎಸ್.ಎಂ.ಎಸ್. ರೂಪದಲ್ಲಿ ನನ್ನ ಮೊಬೈಲ್‍ಗೆ ಬಂದಿತ್ತು. ಸುನಾಮಿಯಲ್ಲಿ ತಂದೆ ತಾಯಿಯರನ್ನ ಕಳೆದುಕೊಂಡಿದ್ದ ಒಂದು ಪುಟ್ಟ ಮಗು ಸಮುದ್ರದ ಮುಂದೆ ನಿಂತು ತನ್ನ ಕಾಲನ್ನು ಸ್ಪರ್ಶಿಸಿ ಹೋಗುತ್ತಿದ್ದ ಸಮುದ್ರದ ಅಲೆಗಳನ್ನು ಕಂಡು ಹೇಳತ್ತೆ `ನೀನು ಎಷ್ಟು ಸಾರಿ ನನ್ನ ಕಾಲು ಮುಟ್ಟಿದರೂ ನಾ ನಿನ್ನನ್ನು ಕ್ಷಮಿಸಲ’್ಲ. ನೋಡಿ ಒಂದು ಘಟನೆ ಒಂದು ಮಗುವಿನ ಮೇಲೆ ಬೀರಿದ ಪರಿಣಾಮ ಮತ್ತು ಅದಕ್ಕೆ ಪ್ರತಿಯಾಗಿ ಆ ಮಗು ತೆಗೆದುಕೊಂಡ ದೃಢವಾದ ನಿಲುವು. ಇಂದು ನಮ್ಮಲ್ಲಿ ಎಷ್ಟು ಜನರಿಗಿದೆ. ನಾವು ಏನಿದ್ದರೂ ನಮ್ಮ ಮೇಲೆ ನಮಗೆ ನಂಬಿಕೆ ಇರದ ಕುಬ್ಜರು ಎಂದಣಿಸುತ್ತಿದೆ.
ಒಂದು ಮಗುವನ್ನು ನೀವು ಮೇಲಕ್ಕೆ ಎತ್ತಿ ಎಸೆಯಿರಿ. ಆ ಮಗು ಎಷ್ಟೇ ಮೇಲೆ ಹೋದರೂ ಜೋರಾಗಿ ನಗುತ್ತಿರತ್ತೇ ಯಾಕೆ ಗೊತ್ತಾ? ನನ್ನ ಎಷ್ಟೇ ಮೇಲೆ ಎಸೆದರೂ ಕೆಳಗಿನಿಂದ ನನ್ನನ್ನು ಹಿಡಿಯುತ್ತಾರೆ ಎನ್ನುವ ನಂಬಿಕೆ ಆ ಮಗುವಿಗೆ ಇರತ್ತೆ. ಆದರೆ ಒಂದು ಹೆಜ್ಜೆ ಎಡವಿದರೂ ಮತ್ತೇ ಎದ್ದು ನಡಿಯಬೇಕು, ಎಲ್ಲವನ್ನು ಮೆಟ್ಟಿ ನಿಂತು ಗೆಲ್ಲಬೇಕು ಎನ್ನುವ ಛಲ ಮಾತ್ರ ನಮ್ಮಲಿಲ್ಲ.
ಹೀಗಾಗಿಯೇ ಹದಿಹರೆಯದ ಆತ್ಮಹತ್ಯೆಗಳು, ಹೆಣ್ಮಕ್ಕಳ ಪರಾರಿ, ಮನೆ ಬಿಟ್ಟು ಓಡುತ್ತಿರುವ ಶಾಲಾ ವಿದ್ಯಾರ್ಥಿಗಳು, ಮೀಸೆ ಮೂಡುವ ಮುನ್ನವೇ ಲಾಂಗು, ತಲವಾರು ಝಳಪಿಸೋ ಯುವಕರು, ಇದೆಲ್ಲ ನಡೆಯುತ್ತಲೇ ಇದೆ. ಇದಕ್ಕೆಲ್ಲ ಯಾರು ಹೊಣೆ? ಎಂದು ನಾವು ಯಾರತ್ತಲೂ ಬೆರಳು ತೋರಿಸುವಂತೆಯೇ ಇಲ್ಲ. ಯಾಕೆಂದರೆ ಮಡಕೆಗೆ ಅಲಂಕಾರವನ್ನು ಅದು ಚಕ್ರದಲ್ಲಿ ಸುತ್ತುತ್ತಿರುವಾಗಲೇ ನೀಡ ಬೇಕೇ ಹೊರತು ಅದು ಒಣಗಿ ಗಟ್ಟಿಯಾದ ಮೇಲೆ ನೀಡುವಂತಿಲ್ಲ. ಇಂತಹ ಒಂದು ಸಶಕ್ತಿ ಇರುವುದು ಸಂಘÀಟನೆಗೆ ಮಾತ್ರವೇ ಹೊರತು… ಬೀಯರ್, ಬ್ರಾಂದಿ, ವಿಸ್ಕಿ, ರಮ್, ಲಾಂಗು, ಮಚ್ಚು, ಪಿಸ್ತೂಲಿಗಲ್ಲ.
ಥಾಮಸ್ ಆಲ್ವಾ ಎಡಿಸನ್ ಕಂಡು ಹಿಡಿದ ಮೊದಲ ಬಲ್ಬನ್ನು ಆತನ ಕೆಲಸದಾಳು ಕೆಳಗೆ ಹಾಕಿ ಒಡೆದು ಬಿಟ್ಟ, ಆದರೆ ಥಾಮಸ್ ಎರಡನೇ ಬಲ್ಬ್ ನಿರ್ಮಿಸಿದ, ಜಗತ್ತಿಗೆ ಬೆಳಕು ಕೊಟ್ಟ. ಆದರೆ ನಮ್ಮಲ್ಲಿ ಬದುಕೆಂಬ ಬಲ್ಬ್ ಇರುವುದು ಒಂದೇ ಅದನ್ನು ಯಾರ ಕೈಗೂ ಕೊಟ್ಟು ಒಡೆದು ಬಿಡಬೇಡಿ ಯಾಕೆಂದರೆ. ಅದನ್ನು ನಾವು ಮತ್ತೆಂದೂ ಕಟ್ಟಲಾರೆವು. ಆದರ್ಶವಾದಿಗಳಾಗಿ ಎನ್ನುವುದು ನನ್ನ ಬಯಕೆ ಅಲ್ಲ. ಆದರೆ ಅವಕಾಶವಾದಿಗಳಾಗಿ, ನಾವು ಮತ್ತೊಂದು ನಾರಾಯಣ ಗುರು ಆಗಲಾರೆವು. ಆದರೆ ಅವರ ತತ್ವ ಸಿದ್ದಾಂತ ಬೆಳೆಸಬಲ್ಲೆವು. ಅಲ್ಲವೇ ಹಾಗಾಗಿ ಇಲ್ಲದ ಆ ನಾಲ್ವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವಷ್ಟು ದಿನ ಸಮಾಜದಲ್ಲಿ ನಾಲ್ವರಿಗೆ ಒಳಿತು ಮಾಡಿದರೆ ಬದುಕಾದರೂ ಪಾವನವಾದಿತು.

ನರೇಶ್ ಕುಮಾರ್ ಸಸಿಹಿತ್ಲು 9449642165

One thought on “ಆ ನಾಲ್ಕು ಜನ ಯಾರು?

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!