Yuvavahini

AUG 06, 2017 2.51 PM IST

ಸಿಂಚನ ವಿಶೇಷಾಂಕ : 2017

ಸಾಯಿಸುವವರು ಮತ್ತು ಸಾಯಬಯಸುವವರು!

ಪರಮಾನಂದ್ ವಿ. ಸಾಲ್ಯಾನ್

ಹಲವು ಸಮಯದಿಂದ ನನ್ನನ್ನು ಕಾಡುತ್ತಿರುವ ಎರಡು ಶಬ್ಧಗಳಿವು. ‘ಮರ್ಯಾದಾ ಹತ್ಯೆ ಮತ್ತು ದಯಾಮರಣ’ ನಂಬುವುದಿದ್ದರೆ ನಂಬಿ. ಮೊದಲನೆಯದರಲ್ಲಿ ಪ್ರೀತಿಯ ಹೆಸರಿನಲ್ಲಿ ಮಕ್ಕಳು ಸಾಯುತ್ತಾರೆ. ಎರಡನೆಯದರಲ್ಲಿ ಗುಣವಾಗದ ಕಾಯಿಲೆಯಿಂದ ಆಗುವ ಹಿಂಸೆಯ ಹೆಸರಿನಲ್ಲಿ ಜೀವಗಳು ಸಾಯಬಯಸುತ್ತವೆ. ಹುಟ್ಟಿದಂದಿನಿಂದ ತಮ್ಮ ಆಶ್ರಯದ ನೆರಳಿನಲ್ಲಿ ಬೆಳೆದು, ಯೌವನ ಅವಸ್ಥೆಗೆ ಬಂದಾಗ ತಮ್ಮ ಮಾತನ್ನು ಮೀರಿ ಅವನ/ಅವಳ ಪ್ರೀತಿಯಲ್ಲಿ ಬಿದ್ದು ತಮ್ಮ ಮಾತನ್ನು ದಿಕ್ಕರಿಸಿ ನಡೆಯುವ ಮಕ್ಕಳನ್ನು ಮರ್ಯಾದೆಯ ಹೆಸರಿನಲ್ಲಿ ಹೆತ್ತವರು ಕೊಲ್ಲುವುದು ಅದು ಮರ್ಯಾದಾ ಹತ್ಯೆಯಂತೆ. ಇಲ್ಲಿ ಮಗುವಾಗಿದ್ದಾಗ ಅದೇ ಮಕ್ಕಳನ್ನು ಮುದ್ದಾಡಿದ್ದು, ಪ್ರೀತಿಸಿದ್ದು ಗೌಣವಾಗುತ್ತದೆ. ಸಂಸಾರ, ಸಮಾಜದ ಎದುರಿನಲ್ಲಿ ತಮ್ಮ ಮರ್ಯಾದೆ ಹೋಯಿತೆಂಬ ಒಂದೇ ಕಾರಣ ಮಕ್ಕಳ ಬಗೆಗಿನ ತಮ್ಮ ನಿಲುವನ್ನು ಕೊಲ್ಲಿಸುವಷ್ಟು ಕಠೋರವಾಗುತ್ತದೆ.
ಈ ಮರ್ಯಾದಾ ಹತ್ಯೆ ಅಲ್ಲೊಂದು ಇಲ್ಲೊಂದು ಅಪರೂಪವಾಗಿ ನಡೆಯುತ್ತಿದೆಯಾದರೂ ಇದರ ಪರಿಣಾಮ ಮಾತ್ರ ಅತ್ಯಂತ ಭಯಂಕರ.

ನಾನು ಇದೀಗ ಬರೆಯ ಹೊರಡುವ ಎರಡನೆಯ ಮರಣ ಅದು ದಯಾರೂಪದ್ದು ಅಥವಾ ಇಚ್ಚೆಗೆ ಸಂಬಂಧಿಸಿದ್ದು- ಅಲ್ಲೊಬ್ಬರಿಗೆ ಮಾರಣಾಂತಿಕ ಕಾಯಿಲೆ. ನೋವು ತಡೆಯಲಾಗುತ್ತಿಲ್ಲ. ಬದುಕು ದುರ್ಬರವಾಗುತ್ತಿದೆ. ಅತ್ತ ಸಾವೂ ಬರುತ್ತಿಲ್ಲ. ಬದುಕಿನ ಸಂವೇದನೆಗಳು, ಭಾವನೆಗಳು ಮೂಲೆ ಗುಂಪಾಗುತ್ತಿದೆ. ವೈರಾಗ್ಯ ಜೀವನವನ್ನು ಆವರಿಸಿದೆ. ಎಳವೆಯಲ್ಲಿ ಅಪ್ಪಿ ಮುದ್ದಾಡಿದ ಮಕ್ಕಳು ಜಾಗತೀಕರಣವೋ, ವೈಭವೀಕರಣವೋ ಅಂತೂ ವಿದೇಶ ಸೇರಿದ್ದಾರೆ. ಪ್ರಾಯದ ಪ್ರಭಾವ ದೇಹದ ಶಕ್ತಿಯನ್ನು ಕುಂದಿಸಿದೆ. ಬದುಕಿನ ಬಗೆಗಿನ ಭರವಸೆಗಳು, ಆಶಯಗಳಿಗೆ ಮಂಜು ಕವಿದಿದೆ. ಉಳಿದಿರುವುದು ಒಂದೇ ದಾರಿ ತಾನು ಸಾಯಬೇಕು, ಈ ನೋವಿನಿಂದ ಮುಕ್ತಿ ಪಡೆಯಬೇಕು. ಆದರೆ ಸಾವು ಇನ್ನೂ ಹತ್ತಿರ ಬರುತ್ತಿಲ್ಲ. ಏನು ಮಾಡಬೇಕೆಂಬ ಚಿಂತನೆ ಮನದಲ್ಲಿ ಮೂಡಿದಾಗ ಸಿಗುವ ಉತ್ತರ – ತಾನಾಗಿ ಸಾಯದ ಈ ಜಡದೇಹವನ್ನು ಸಾಯಿಸಿಕೊಳ್ಳಬೇಕು. ಅದು ಹೇಗೆಂದರೆ ಇತರರಿಂದ ನೋವಿಲ್ಲದೆ ತನ್ನನ್ನು ಸಾಯಿಸಿಕೊಳ್ಳಲು ಸಮಾಜ ಅರ್ಥಾತ್ ನ್ಯಾಯಾಂಗ ವ್ಯವಸ್ಥೆ ಅನುವು ಮಾಡಿಕೊಡಬೇಕು. ಅಂದರೆ ದಯಾಮರಣ ತಮ್ಮದಾಗಬೇಕು.

ಸ್ವಲ್ಪ ವಿಚಿತ್ರ ಎನಿಸುತ್ತದೆ ಈ ವ್ಯವಸ್ಥೆ. ಆದರೆ ಇದು ಮರ್ಯಾದಾ ಹತ್ಯೆಯಂತೆ ಕ್ರೂರಿ ಅಲ್ಲ. ಇಲ್ಲಿ ಕಠೋರತೆಗಳಿಲ್ಲ, ಸಂವೇದನಾರಹಿತ ಕ್ರಿಮಿನಲ್ ಮನಸ್ಸುಗಳಿಲ್ಲ. ಈ ವ್ಯವಸ್ಥೆ ಹೇಗಿರುತ್ತದೆಂದರೆ ಒಬ್ಬರು ಶಕ್ತಿ ಇಲ್ಲದ ಅಸಹಾಯಕತೆಯಿಂದ ದೈನ್ಯರಾಗಿ ಬೇಡುತ್ತಾರೆ. ಇನ್ನೊಬ್ಬರು ಮನಸೇ ಇಲ್ಲದ ಮನಸ್ಸಿನಿಂದ ನೋವೇ ಆಗದ ಸ್ಥಿತಿಯಲ್ಲಿ ಹತ್ಯೆಗೈಯುತ್ತಾರೆ. ಅಥವಾ ನರಳುವವರೇ ತಮನ್ನು ಸಾಯಿಸಿಕೊಳ್ಳಬಹುದು. ಕೊಂದವರು ಇಲ್ಲಿ ಕೊಲೆಗಡುಕರಾಗುವುದಿಲ್ಲ. ಏಕೆಂದರೆ ಸಾಯಲಾಗದೆ ತಡೆಯಲಾರದ ನೋವಿನಿಂದ ಚಡಪಡಿಸುವ ವ್ಯಕ್ತಿಯನ್ನು ಶಾಶ್ವತ ನಿದ್ರೆಗೆ ಒರಗಿಸಿದ ಆತ್ಮತೃಪ್ತಿಗಳು ಅಲ್ಲಿ ಇರಬಹುದೋ ಏನೋ?

ಇದು ಆತ್ಮಹತ್ಯೆ ಎಂದು ವ್ಯಾಖ್ಯಾನಿಸಲ್ಪಡುವ ಆತ್ಮವನ್ನು ಹತ್ಯೆ ಮಾಡುವ ಪ್ರಕ್ರಿಯೆ ಅಲ್ಲ. ಈ ದಯಾ ಮರಣ ವ್ಯವಸ್ಥೆಯಲ್ಲಿ ಮರಣಗಳು ದಯಾ ರೂಪದಲ್ಲಿ ಸಂಭವಿಸಲ್ಪಡುತ್ತವೆ. ನಾವೆಲ್ಲಾ ಆಧುನಿಕ ಸಮಾಜದ ಸಂಬಂಧಗಳಿಲ್ಲದ ಬದುಕಿಗೆ ಅಂಟಿಕೊಂಡವರು. ಇಲ್ಲಿ ಭಾವನೆಗಳು, ಸಂವೇದನೆಗಳು ತೊಟ್ಟಿಲಿನಿಂದ ಹೊರಬರುವಷ್ಟರಲ್ಲಿ ಮರೆಯಾಗಿ ಬಿಡುತ್ತವೆ. ಇಲ್ಲಿ ಅವಿಭಕ್ತ ಕುಟುಂಬ ಕಲ್ಪನೆಗಳು ನೆನಪುಗಳ ಬುತ್ತಿಯಿಂದ ಕರಗಿ ಹೋಗುತ್ತಿದೆ. ಸಂಬಂಧಗಳ ಎಲ್ಲಾ ಮಜಲುಗಳು ಸವೆದು ಹೋಗಿ ಮಕ್ಕಳೆಂಬ ಸಾಕಬೇಕಾದ ವರ್ಗವೂ ತೆರೆಮರೆ ಸೇರುತ್ತದೆ. ಕಟ್ಟಕಡೆಗೆ ಉಳಿಯಬಹುದೆಂಬ ಪತಿ-ಪತ್ನಿ ವ್ಯವಸ್ಥೆಯೂ ಪ್ರತ್ಯೇಕವಾಗಿ ಕೊನೆಗೆ ಏಕಾಂಗಿ ಬದುಕು ಅಲ್ಲಿ ನಿರ್ಮಾಣವಾಗುತ್ತದೆ. ಹಣವಿದ್ದವರು ಈ ಒಂಟಿ ಬದುಕನ್ನು ಕೂಡಾ ಹೇಗೋ ಸಂಭಾಳಿಸಬಹುದೋ ಏನೋ? ಆದರೆ ನಾವು ಕಡುಬಡವರೆಂದು ಪ್ರತ್ಯೇಕಿಸಿದ ವರ್ಗ ಅಂತಿಮ ಗಳಿಗೆಯಲ್ಲಿ ಎಲ್ಲವನ್ನು ಕಳಕೊಂಡು ಬದುಕಿನ ಅಸಹಾಯಕತೆಯನ್ನು ಅರ್ಥಮಾಡುತ್ತದೆ. ಆಗ ಈ ದಯಾಮರಣ ಜಾಸ್ತಿ ಅರ್ಥ ತರಿಸುತ್ತದೆ.
ನಾವೆಲ್ಲಾ ಮಹಾಭಾರತದಲ್ಲಿ ಭೀಷ್ಮ ಇಚ್ಛಾಮರಣ ಪಡೆದ ಕಥೆ ಓದಿದ್ದೇವೆ. ಶಸ್ತ್ರ ತ್ಯಾಗ ಮಾಡಿ ಶರಶಯ್ಯೆಯಲ್ಲಿ ಮಲಗಿದ ಭೀಷ್ಮನನ್ನು ಕಂಡಾಗ ‘ಅಯ್ಯೋ ಹೀಗೂ ಉಂಟೇ’ ಎಂದು ನಮಗನ್ನಿಸಿದ್ದುಂಟು. ಆ ಕಾಲದಲ್ಲೆಲ್ಲಾ ಕಠೋರ ಮನಸ್ಸುಗಳಿಂದ ಇಂತದ್ದೆಲ್ಲ ನಡೆಯುತ್ತಿತ್ತು. ಹೀಗಿನಂತೆ ಕೋರ್ಟು, ಪೊಲೀಸ್ ಸ್ಟೇಷನ್ ಎಂಬ ಅಧಿಕೃತ ಶಾಸನಗಳು ಆ ಕಾಲದಲ್ಲಿ ಇರಲಿಲ್ಲ. ಆದರೆ ಈಗ ಅದೆಲ್ಲ ಆಗುವುದಿಲ್ಲ. ಎಷ್ಟು ನೋವಿನಿಂದ ಚಡಪಡಿಸಿದರೂ ಸಾಯಲು ನಾವು ಕಾನೂನಿನ ಅನುಮತಿ ಕಾಯಬೇಕು.
ನಿವೃತ್ತ ಶಿಕ್ಷಕಿ ದಾವಣಗೆರೆಯ ಕರಿಬಸಮ್ಮ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದು ಎಂದೋ ಮುಗಿದ ಅಧ್ಯಾಯ. ಬೆನ್ನುಹುರಿ ನೋವಿನಿಂದ ನರಳುತ್ತಿದ್ದ ಆಕೆ ಬದುಕಿನಿಂದ ಮುಕ್ತಿ ಬಯಸಿದಳು. ಆಕೆಯ ವೈದ್ಯಕೀಯ ತಪಾಸಣಾ ಪ್ರಮಾಣ ಪತ್ರ ಸಲಿಕೆಗೆ ಹೈಕೋರ್ಟು ನಿರ್ದೇಶನ ನೀಡಿತು.
ಹೌದು, ಕರಿಬಸಮ್ಮನಂತಹ ಸಾವಿರ ಮಂದಿ ನೋವಿನಿಂದ ನರಳುತ್ತಿದ್ದಾರೆ. ಇವರಿಗೆಲ್ಲಾ ಬೇಕಾಗಿರುವುದು ಒಂದೇ –
“ಸಾಯಿಸುವ ಅನುಕಂಪಗಳು”

 

One thought on “ಸಾಯಿಸುವವರು ಮತ್ತು ಸಾಯಬಯಸುವವರು!

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!