Yuvavahini

APR 10, 2017 3.54 AM IST

ಯುವಸಿಂಚನ - ಏಪ್ರಿಲ್ -2017

ನಾವು ನೀವೆಲ್ಲರೂ ಮಾನವರಾಗೋಣ

ಆಶಯ 

ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯ ಹೆಚ್ಚು ಹೆಚ್ಚು ಬುದ್ಧಿವಂತನಾಗುತ್ತಿರುವಂತೆಯೇ ವ್ಯವಹಾರಿಕ ಪ್ರಪಂಚದಲ್ಲೂ ಲೀನನಾಗಿರುತ್ತಾನೆ. ಯಾಂತ್ರಿಕ ಬದುಕಿನ ಜೀವ-ಭಾವರಹಿತ ಮುಖವಾಡವೇ ಆಗುತ್ತಿದ್ದಾನೆ. ಮಹಾನ್ ಗುರು ಬುದ್ದನಂದಂತೆ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೊಡುವ ಕೊಡುಗೆಯೆಂದರೆ-ಹಣ, ಒಡವೆ, ಆಸ್ತಿ, ಅಂತಸ್ಥಲ್ಲ. ಒಂದು ಪರಿಶುದ್ಧವಾದ ನಗೆ. ನೊಂದ ಹೃದಯಕ್ಕೆ ನುಡಿಯುವ ಸಾಂತ್ವನದ ಮಾತು ಆದರೆ ಮನುಷ್ಯ ಇಂದು ಇದನ್ನೇ ಮರೆತಿದ್ದಾನೆ. ಕಾರಣ ಇಂದಿನ ವಿದ್ಯೆ ಎಲ್ಲಾ ಕ್ಷೇತ್ರಗಳಲ್ಲೂ ಬಹುಬಗೆಯ ಅಗಾಧವಾದ ಜ್ಞಾನವನ್ನು ನೀಡಿದರೂ ನೈತಿಕ ಮತ್ತು ಸುಸಂಸ್ಕೃತಿಯ ಮೌಲ್ಯ ನೀಡುವಲ್ಲಿ ಮತ್ತು ಪರಸ್ಪರರ ಭಾವನೆಗಳನ್ನು ಅರ್ಥೈಸುವ ಅರಿವು ನೀಡುವಲ್ಲಿ ವಿಫಲವಾಗಿದೆ.

ಮಗುವಿಗೆ ಎಳವೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿ ಪ್ರೀತಿ ತೋರಿ ಬೆಳೆಸಿದರೂ ಮುಂದೆ ಅದೇ ಮಕ್ಕಳು – ತಾವು ಎಳವೆಯಲ್ಲಿಟ್ಟಿರುವ ಪ್ರೀತಿ, ವಿಶ್ವಾಸ ಭಾವನೆಗಳನ್ನು ದೊಡ್ಡವರಾದ ಮೇಲೆ ಹಿರಿಯರಲ್ಲಿ ಏಕೆ ಇಟ್ಟಿರುವುದಿಲ್ಲ? ಆದ್ದರಿಂದಲೇ ಅನೇಕ ತಾಯಿ ತಂದೆಯವರು ಮಕ್ಕಳ ಪ್ರೀತಿ ಪ್ರೇಮಗಳಿಂದ ವಂಚಿತರಾಗಿ, ಅನಾಥಾಶ್ರಮದಲ್ಲೋ ಅಭಯಾಶ್ರಮದಲ್ಲೋ ಬಾಳುತ್ತಾರೆ. ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಮದ್ಯವ್ಯಸನಿಗಳೋ, ಮಾದಕ ವ್ಯಸನಿಗೋ ಬಲಿಯಾಗುತ್ತಾರೆ. ಮಾನಸಿಕ ವ್ಯಸನಿಗಳಾಗುತ್ತಾರೆ. ಯಾರದ್ದೋ ಮನೆಗಳಲ್ಲಿ ಅಥವಾ ಬೀದಿ ಬದಿಗಳಲ್ಲಿ ಅನಾಥರಾಗಿ ಬೇಡಿಕೊಂಡು ಬದುಕುತ್ತಾರೆ. ಇದರಿಂದಾಗಿ ಹಿರಿಯರು, ತಂದೆ, ತಾಯಿಯವರು ಅದೆಷ್ಟು ಅವಮಾನಿತರಾಗುತ್ತಾರೆ? ದಮನಕ್ಕೊಳಗಾಗುತ್ತಾರೆ? ಕೊರಗುತ್ತಾರೆ? ಅನ್ನುವುದನ್ನೇ ಅರ್ಥೈಸಲಾಗದ ಕಟುಕ ಹೃದಯಗೊಳಾಗುತ್ತಾರೆ ಇಂದಿನ ಯುವ ಹೃದಯಿಗಳು.

ದುಡಿದು ಸಂಪತ್ತಿಟ್ಟಿರುವವರು ಅಥವಾ ಪಿಂಚಣಿ ಪಡೆಯುವವರು ಕೆಲವರು ಸ್ವಾಭಿಮಾನದಿಂದ ಬಾಳಲೆತ್ನಿಸಿದರೂ, ಮಕ್ಕಳು ಸೊಸೆಯರಿಂದ ಕಿರುಕುಳಕ್ಕೊಳಗಾಗಿ ಅವರ ಮನೆ, ಸಂಪತ್ತೆಲ್ಲವನ್ನೂ ತಮ್ಮ ಹೆಸರಿಗೇ ಬರೆಸಿ ತಂದೆ ತಾಯಿಗಳನ್ನು ನಿರ್ಗತಿಕರನ್ನಾಗಿಸಿದ ಉದಾಹರಣೆಗಳಿವೆ. ಮುದಿಯರು, ಸೌಂದರ್ಯ ಮಾಸಿ, ದೇಹದಲ್ಲಿ ನೆರಿಗೆ ಸುಕ್ಕುಗಳು ಬಿದ್ದಾಗ ದುಡಿವ ಶಕ್ತಿಯಿಲ್ಲದಿದ್ದಾಗ, ಅಸಹ್ಯರಂತೆ ಕಾಣುವ ಯುವ ಸಮುದಾಯವೂ ಇದೆ. ದುಡಿಮೆಗೆ ಖರ್ಚು ಇಲ್ಲದಿದ್ದಾಗ ಖರ್ಚಿಗೆ ಆರ್ಥಿಕ ಮುಗ್ಗಟ್ಟುಂಟಾದಾಗ ಅವರ ಬೇನೆ ಬೇಸರಗಳನ್ನು ಕೇಳುವವರು ನೋಡುವವರೇ ಇಲ್ಲದಿದ್ದಾಗ ಖರ್ಚಿಗೆ ಆರ್ಥಿಕ ಮುಗ್ಗಟ್ಟುಂಟಾದಾಗ ಅವರ ಬೇನೆ ಬೇಸರಗಳನ್ನು ಕೇಳುವವರು ನೋಡುವವರೇ ಇಲ್ಲದಾದಾಗ ಅವರ ಮುಖವೇದನೆಗಳು ಅನೂಹ್ಯವಾಗಿರುತ್ತವೆ. ಸಾವೋ ಬದುಕೋ ಎಂದು ಡೋಲಾಯಮಾನವಾಗಿರುತ್ತದೆ.

ಎಳವೆಯಲ್ಲಿ ತಮ್ಮನ್ನು ಸಾಕಿ ಸಲಹಿ ಬಾಯಾರಿಕೆಗೆ ಹಸಿವೆಗೆ ಅನ್ನ, ನೀರು, ಹಾಲಿತ್ತು ಬೆಳಸಿದ, ಕೊಳೆಯಾದಾಗ ಸ್ನಾನ ಮಾಡಿಸಿ ಜೋಗುಳ ಹಾಡಿ ತೊಟ್ಟಿಲು ತೂಗಿ ಮಲಗಿಸಿದ, ಅಸೌಖ್ಯವಾದಾಗ ಹಗಲೂ ರಾತ್ರಿ ನೊಂದು ನಿದ್ದೆಗೆಟ್ಟು ಆರೈಕೆ ಮಾಡಿದ ನೆನಪುಗಳೆಲ್ಲ ಅದು ಹುಟ್ಟಿಸಿದವರ ಕರ್ತವ್ಯವೆಂದು ಹೇಳುವವರಿದ್ದಾರೆ. ಮುದಿ ಮಹಿಳೆಯಾದರೆ ಎಲ್ಲವನ್ನೂ ಸಹಿಸಿ ಹೇಗೋ ಮೌನಿಯಾಗಿ ಬಾಳುತ್ತಾರೆ. ಆದರೆ ಹೆಂಡತಿಯನ್ನು ಕಳೆದುಕೊಂಡ ಮುದಿ ವಿಧುರನಾದರಂತೂ ಕಥೆ ಮುಗಿದಂತೆಯೇ.

ಇದಕ್ಕೆಲ್ಲ ಕಾರಣ ಒಂದು ಕಾಲದಲ್ಲಿದ್ದ ಸಾಮಾಜಿಕ, ಕೌಟುಂಬಿಕ, ಸುಸಂಸ್ಕೃತಿ ಬಿಂಬಿತವಾದ ಗುರುಹಿರಿಯರನ್ನು ಗೌರವದಿಂದ ಕಾಣುವ ಶಿಕ್ಷಣ ಕ್ರಮ. ಹಿಂದೆ ಕೂಡು ಕುಟುಂಬದ, ಎಲ್ಲರ ಜೊತೆ ಸೇರಿಕೊಂಡು, ಹೊಂದಿಕೊಂಡು ಅವರೆಲ್ಲರನ್ನೂ ಪರಸ್ಪರರು ಪ್ರೀತಿಸಿ, ಗೌರವಿಸಿ, ಒಬ್ಬರಿಗೊಬ್ಬರು ಆಸರೆಯಾಗಿ, ಆಧಾರವಾಗಿ, ಪ್ರೇರಕರಾಗಿ, ಪೋಷಕರಾಗಿ, ಸುಖ ದುಃಖಗಳಿಗೆ ಸ್ಪಂದಿಸಿ ಬಾಳುತ್ತಿದ್ದರು. ತಪ್ಪು ಮಾಡಿದ್ದಲ್ಲಿ ಹಿರಿಯರು ಬುದ್ದಿ ಹೇಳಿ ತಿದ್ದಿ ತೀಡಿ ಒಪ್ಪನ್ನೇ ಅರುಹುತ್ತಿದ್ದರು. ಆದರೆ ಇಂದು ಒಂಟಿ ಮನೆಗಳಲ್ಲಿ ಒಂಟಿಯಾಗಿಯೋ, ಗಂಡ-ಹೆಂಡತಿ ಜಂಟಿಯಾಗಿಯೋ, ಜೊತೆ ಹಕ್ಕಿಗಳಾಗಿ ಗರಿಬಿಚ್ಚಿ ಹಾರಾಡುವ ಗೊತ್ತು ಗುರಿಯಿಲ್ಲದ ಹಕ್ಕಿಗಳಂತೆ ಬದುಕುತ್ತಿರುವ ಮನೋಭಾವನೇ ಈ ದುರಂತಕ್ಕೆ ಕಾರಣ.

ಮುದುಕರೆಂದರೆ ದಂಡಪಿಂಡಗಳು, ಅರುಳುಮರುಳು, ನಿಷ್ಪ್ರಯೋಜಕರು. ಅವರ ಭಾವನೆಗಳು, ಚಿಂತನೆಗಳು, ಇಂದಿಗೆ ಅಪ್ರಸ್ತುತ. ouಣ ಜಚಿಣeಜ ತಮಗೆ ಎಲ್ಲಾ ಗೊತ್ತಿದೆ. ಕಾಲ ಬದಲಾಗಿದೆ. ಇದು ‘technology’ ಯುಗ ನಮ್ಮ ಬೆರಳ ತುದಿಯಲ್ಲೇ ಇಡೀ ಜಗತ್ತು ಅಡಗಿದೆ ಎಂಬ ಹಮ್ಮುಬಿಮ್ಮಿದೆ. ಹೆಂಡತಿಯ ಮಾತು ಕೇಳಿ ಹೆತ್ತು ಹೊತ್ತ ಅಪ್ಪ ಅಮ್ಮನನ್ನೇ ಮರೆತು ಬಾಳುವ heಟಿಠಿeಛಿಞeಜ ಗಂಡು ಮಕ್ಕಳು. ಹೆಂಡ್ತಿ ಗಂಡ ಅಥವಾ ಬಂದ ಸೊಸೆ ತನ್ನ ಮಗನ ಹೆಂಡತಿ ಮಗಳಿಗೆ ಸಮಾನ ಅನ್ನುವುದನ್ನೇ ಮರೆತು ಸೊಸೆ-ಮಗರಿಬ್ಬರೂ ತನ್ನ ಮಾತಿನಂತೆ ಬದುಕಬೇಕೆಂದು ಬಯಸುವ ಅಹಂಕಾರಿ ಹೆಂಗಸು. ಗಂಡ-ಗಂಡನ ತಾಯಿಗೆ ಅಡಿಯಾಳಾಗಿ ಬದುಕಲಾರೆನೆನ್ನುವ ಛಲದಿಂದ ದಿಕ್ಕರಿಸಿದಾಗ ಮುರಿದುಬೀಳುವ ಸಂಬಂಧ, ಅಥವಾ ಗಂಡನ ಅಕ್ಕ ತಂಗಿಯಿಂದ ಹಿಂಸೆ, ಅವಮಾನ, ಅಪಮಾನಗಳನ್ನು ಸಹಿಸಿಯೋ ಸಹಿಸದೆಯೋ ಬದುಕಲಾಗದೆ ಬದುಕಿ ಸೋತು ಸೊರಗಿದಾಗ, ಸಂಶಯದ ಪಿಶಾಚಿಗಳಾಗಿ ಒಬ್ಬರ ಮೇಲೆ ಇನ್ನೊಬ್ಬರು ತಪ್ಪಿನ ಅಪವಾದದ ಕೆಸರೆರಚಿಕೊಂಡು ಇರುವ ಸ್ಥಿತಿಯಿದೆ.

ಇವೆಲ್ಲವುಗಳು ದೂರವಾಗಲು ತೆರೆದ ನೋಟದ, ತೆರೆದ ವಿಶಾಲ ಹೃದಯದ, ತೆರೆದ ಪರಿಶುದ್ಧ ಭಾವದ, ನಡೆ ನುಡಿ, ಕಾರ್‍ಯಗಳಿರಬೇಕು. ಅದನ್ನೇ ಕುವೆಂಪು ಏನಾದರೂ ಆಗು ಮೊದಲು ಮಾನವನಾಗು ಅಂದಿದ್ದರು. ಆದ್ದರಿಂದ ನಾವೆಲ್ಲರೂ ಎಲ್ಲರನ್ನೂ ಗೌರವಿಸುವ ಅರಿತ ಮನಸ್ಸು, ಭಾವಗಳಿರುವವರಾಗೋಣ. ಮಾನವರಾಗೋಣ. ಹೆಜ್ಜೆ ಇಡುವ ಮೊದಲು ದಾರಿ ನೋಡೋಣ ಅನ್ನುವುದೇ ನಮ್ಮ ಆಶಯ.

ಪ್ರೊ. ಕೇಶವ ಎಚ್.
ಉಪಪ್ರಾಂಶುಪಾಲರು, ಬಿ.ಜಿ.ಎಸ್. ಪದವಿ ಕಾಲೇಜು, ಕಾವೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!