ಶ್ರೀ ಗೇರ್ತಿಲ ದೇವು ಪೂಜಾರಿ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರನಾಗಿ 28-05-1952 ರಂದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಕನ್ಯಾಲದಲ್ಲಿ ಜನಿಸಿದರು. ಬಿ.ಎ. ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಪಡೆದಿದ್ದಾರೆ.
ತನ್ನ ಶಾಲಾ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಚಾಂಪಿಯನ್ ಶಿಪ್ ಮತ್ತು ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ತನ್ನ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಸೇವೆ ಸಲ್ಲಿಸಿ ನಂತರ 1980 ರಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾಗಿ ಬೈಂದೂರು ವಿದ್ಯಾರ್ಥಿ ನಿಲಯದಲ್ಲಿ ಸೇವೆಗೆ ಸೇರಿ ನಂತರ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಹಾಗೂ ಬೆಂಗಳೂರು ಜಿಲ್ಲೆಯಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸಿ ಬಳಿಕ ಬಿ.ಸಿ.ಎಮ್. ಜಿಲ್ಲಾ ಕಛೇರಿಯಲ್ಲಿ ವ್ಯವಸ್ಥಾಪಕರಾಗಿ ನಿಷ್ಕಳಂಕ ಸೇವೆ ಸಲ್ಲಿಸಿ, 1992ರ ಮೇ 31ರಂದು ವಯೋನಿವೃತ್ತಿಯನ್ನು ಹೊಂದಿರುತ್ತಾರೆ. ತಾನು ಕಲಿತ ಎಲ್ಲಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘಗಳಲ್ಲಿ ಸಕ್ರಿಯ ಸದಸ್ಯರಾಗಿ, ಪುತ್ತೂರು ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸೇವಾ ಸಂಘ ಪುತ್ತೂರು ಇದರ ಸ್ಥಾಪಕ ಸದಸ್ಯರಾಗಿ, ಐತ್ತೂರು ಗ್ರಾಮದ ಯುವಕ ಸಂಘದ ಸ್ಥಾಪಕ ಕಾರ್‍ಯದರ್ಶಿಯಾಗಿ, ಜೂನಿಯರ್ ಛೇಂಬರ್ ಆಫ್ ಇಂಡಿಯಾ ಬೈಂದೂರು ಇದರಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾ ನೌಕರರ ಸಂಘದ ಸ್ಥಾಪಕ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತ್ತು ನಿವೃತ್ತಿಯವರೆಗೂ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮಂಗಳೂರು ಇದರ ಸದಸ್ಯರಾಗಿ ಎರಡು ಬಾರಿ ಉಪಾಧ್ಯಕ್ಷರಾಗಿ, ಸರಕಾರಿ ವಸತಿ ಗೃಹ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಉರ್ವಸ್ಟೋರ್ ಮಂಗಳೂರು ಇದರ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕ ಸದಸ್ಯರಾಗಿ, ಬಿಲ್ಲವ ಸಂಘ(ರಿ.) ಉರ್ವ, ಅಶೋಕನಗರ, ಮಂಗಳೂರು ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾಗಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಘ(ರಿ.) ಮಂಗಳೂರು ಇದರ ಉಪಶಾಖೆಯಾದ ರಾಧಕೃಷ್ಣ ಮಂದಿರದ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಅಧ್ಯಯನ ಮತ್ತು ಸಂಶೋಧನಾ ಸಮಿತಿಯಲ್ಲಿ ಸದಸ್ಯರಾಗಿ, ಲಯನ್ಸ್ ಕ್ಲಬ್ ಕುಡ್ಲ, ಮಂಗಳೂರು ಇದರ ಸ್ಥಾಪಕ ಸದಸ್ಯರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿ, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸೇವಾ ಸಮಿತಿಯ ಸದಸ್ಯರಾಗಿದ್ದು, ದೇವಸ್ಥಾನದ ನವೀಕರಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಉಗ್ರಾಣ ನಿರ್ವಹಣಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಮಂಗಳೂರಿನ ವೀಣಾಪಾಣಿ ಎಜುಕೇಶನ್ ಟ್ರಸ್ಟ್ (ರಿ.) ಕರ್ನಾಟಕ ಇದರ ಕಾರ್ಯದರ್ಶಿಯಾಗಿದ್ದಾರೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಕ್ಷಿಣ ಕನ್ನಡ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯರಾಗಿರು ಇವರು 1993-94 ರಲ್ಲಿ ಯುವವಾಹಿನಿಯ ಸದಸ್ಯರಾಗಿ ಸೇರಿ 1994-95 ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ 1995-96 ರಲ್ಲಿ ಉಪಾಧ್ಯಕ್ಷರಾಗಿ ಮತ್ತು 1996-97 ನೇ ಸಾಲಿನಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ದಶಮಾ ನೋತ್ಸವ ವರ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ.
1996-97 ನೇ ಸಾಲನ್ನು ಯುವವಾಹಿನಿ ’ಸಂಘಟನಾ ವರ್ಷ’ ಎಂದು ಘೋಷಣೆ. 2 ಹೊಸ ಘಟಕಗಳ ಪ್ರಾರಂಭ. ಐಎಎಸ್ ಐಪಿಎಸ್ ಪರೀಕ್ಷೆಗೆ ಹಾಜರಾಗುವ 6 ಮಂದಿ ವಿದ್ಯಾರ್ಥಿಗಳಿಗೆ ತರಬೇತಿ. ಜಿಲ್ಲೆಯ 8 ತಾಲೂಕಿನ ಗರಿಷ್ಠ ಅಂಕ ಪಡೆದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿರುವುದು. 10 ಮಂದಿಗೆ ಸರಕಾರಿ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಸಾರ್ಥಕ ಶ್ರಮಕ್ಕೆ ಫಲ. ಬಿಎಸ್.ಆರ್.ಬಿ. ಪರೀಕ್ಷಾ ತರಬೇತಿ, ಹೊಟೇಲ್ ಉದ್ಯಮದ ಬಗ್ಗೆ ಕಾರ್ಯಗಾರ. ಕಡಿಮೆ ಖರ್ಚಿನಲ್ಲಿ ಉತ್ತಮ ಮನೆ ನಿರ್ಮಾಣದ ಬಗ್ಗೆ ಕಾರ್ಯಾಗಾರ. ಉದ್ಯೋಗ ಮತ್ತು ಭವಿಷ್ಯ ನಿರ್ಮಾಣದ ಬಗ್ಗೆ ಮಾರ್ಗದರ್ಶನ. ಪ್ರಥಮ ಬಾರಿಗೆ ಮುಂಬಾಯಿಗೆ ಯುವವಾಹಿನಿಯ ಭೇಟಿ ಮತ್ತು ಬೆಂಗಳೂರು, ಮೈಸೂರಿಗೆ ಭೇಟಿ ನೀಡಿರುವುದು.
ಕುದ್ರೋಳಿ ಮತ್ತು ಉಪ್ಪಿನಂಗಡಿಯಲ್ಲಿ ಉದ್ಯೋಗಸ್ಥ ಸಮಾಜ ಬಾಂಧವರ ಸಮಾವೇಶ. ಜಿಲ್ಲಾ ಮಟ್ಟದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ ಏರ್ಪಾಡು. ರಕ್ತದಾನ ಶಿಬಿರ, ಸ್ವ ಉದ್ಯೋಗ ತರಬೇತಿ ಶಿಬಿರ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಗಳಿಗೆ ಎರಡೆರಡು ಬಾರಿ ಭೇಟಿ. ಅಂತರ್ ಘಟಕ ಕ್ರಿಕೆಟ್ ಸ್ಪರ್ಧೆ ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಜಿಲ್ಲಾ ಮಟ್ಟದ ರಂಗವಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಕುದ್ರೋಳಿಯಲ್ಲಿ ಯುವವಾಹಿನಿಯ ದಶಮಾನೋತ್ಸವವನ್ನು ’ಯುವಜನ ಸಮಾವೇಶ’ವಾಗಿ ಆಚರಿಸಲಾಗಿತ್ತು. ಸಮಾಜದ 10 ಮಂದಿ ಗಣ್ಯರಿಗೆ ಸನ್ಮಾನ, 10 ಮಂದಿಗೆ ಗೌರವಾಭಿನಂದನೆ ಮತ್ತು 8 ಮಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು.
ಶ್ರೀಮತಿ ಕುಸುಮ ಇವರುನ್ನು ವಿವಾಹವಾಗಿ ಪ್ರಶಾಂತ್ ಜಿ.ಪಿ. ಮತ್ತು ಪ್ರಣವ್ ಕುಮಾರ್ ಜಿ.ಪಿ. ಇಬ್ಬರು ಪುತ್ರರು ಇಂಜಿನಿಯರಿಂಗ್ ಪದವೀಧರರಾಗಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗಸ್ಥರಾಗಿದ್ದಾರೆ.
ವಿಳಾಸ : ಪ್ರಕೃತಿ ಡೋರ್ ನಂಬ್ರ1-ಎಸ್-25-2123-2, ಲಾಂಗ್‌ಲೇನ್, ಹೊಗೆಬೈಲು,
ಅಶೋಕನಗರ – ಮಂಗಳೂರು – 575 006 ದೂರವಾಣಿ : 0824 – 2459886.
ಮೊಬೈಲ್ : 09448309090 E-mail : poojarigp@gamil.com